Wednesday, November 7, 2007

ಹೆಂಗಿದೆ ಐಡಿಯಾ?

ನಾನು ಆಫೀಸಿಗೆ ಬರುವ ಡೈಲಿ ಬಸ್ಸಲ್ಲಿ ತುಂಬಾ ಕಾಲೇಜ್ ಸ್ಟೂಡೆಂಟ್ಗಳು ಸಿಗ್ತಾರೆ. ಕ್ಲಾಸಿನ ಬಗ್ಗೆ, ಮೇಷ್ಟ್ರ ಬಗ್ಗೆ, ಕ್ಲಾಸಲ್ಲಿ ಚೀಟಿ ಪಾಸ್ ಮಾಡಿದ ಬಗ್ಗೆ, ನಿದ್ದೆ ಹೊಡ್ದ ಬಗ್ಗೆ...ಹೀಗೆ ಅವರುಗಳ ಸಂಭಾಷಣೆ ಆಗಾಗ ನನ್ ಕಿವಿಗೆ ಬೀಳುತ್ತಿರುತ್ತೆ. ಇಲ್ಲೊಂದು ಅಂಥ ತುಣುಕು ನಿಮಗಾಗಿ..ಇದು ಕಾಲೇಜ್ ಹುಡ್ಗ-ಹುಡ್ಗಿ ತನ್ನ ಫ್ರೆಂಡ್ ಒಬ್ನಿನಿಗೆ ತನ್ನ ಕ್ಲಾಸ್ಮೆಟನ್ನು ಮದುವೆ ಮಾಡಿಸುವ ಯೋಚನೆ..

ಹುಡ್ಗಿ: ಅಲ್ಲ ಕಣೋ ಅನಿತಾಂಗೆ ಇನ್ನೂ 18 ವರ್ಷ ಆಗಿಲ್ಲವಲ್ಲ.
ಹುಡ್ಗ: ವಯಸ್ಸು ಬಗ್ಗೆ ಜಾಸ್ತಿ ತಲೆ ಕೆಡಿಸ್ಕೋಬೇಡ.
ಹುಡ್ಗಿ: ಯಾಕೋ?
ಹುಡ್ಗ: ನಿಂಗೊತ್ತಿಲ್ಲ ಕಣೇ. ಹಣ ಕೊಟ್ರೆ ಡುಬ್ಲಿಕೇಟ್ ಏಜ್ ಸರ್ಟಿಫಿಕೇಟ್ ಸಿಗುತ್ತೆ.
ಹುಡ್ಗಿ: ಅಯ್ಯೋ, ಏನಂತೀಯಾ? ಸುಮ್ನೆ ಅದೆಲ್ಲ.
ಹುಡ್ಗ: ನಿಂಗೊತ್ತಿಲ್ಲ, ಅದ್ನೆಲ್ಲಾ ನವೀನ್ ಮಾಡಿ ತರ್ತಾನೆ
ಹುಡ್ಗಿ: ರೇಷನ್ ಕಾರ್ಡು ಕೂಡ ಬೇಕಂತೆ
ಹುಡ್ಗ: ಅದೂ ಡುಬ್ಲಿಕೇಟ್ ಆಗುತ್ತೆ ಅಂತೆ
ಹುಡ್ಗಿ: ಬೇಡ ನಾವು ಆ ತಂಟೆಗೆ ಹೋಗೋದು ಬೇಡ
ಹುಡ್ಗ:ಏನಾಯ್ತು?
ಹುಡ್ಗಿ: ಅಯ್ಯೋ ನಂಗೆ ಭಯಪ್ಪಾ..ಮತ್ತೆ ನಮ್ನ್ನ ಪೊಲೀಸ್ರು ನಮ್ನ ಜೈಲಿಗೆ ಹಾಕ್ತಾರೆ ಅಷ್ಟೇ.
ಹುಡ್ಗ: ಏನೇ ಆದ್ರೂ ನಾವು ಹೆಲ್ಫ್ ಮಾಡ್ಲೇಬೇಕು. ಇಲ್ಲಾಂದ್ರೆ ನವೀನಿಂದ ಏನೂ ಆಗಲ್ಲ.
ಹುಡ್ಗಿ: ಹಂಗಾದ್ರೇ ನಾವೂ ಜೈಲಿಗೆ ಹೋಗೋಣ ಅನ್ತಿಯಾ?
ಹುಡ್ಗ: ಅಲ್ಲ ಕಣೇ.ಪಾಪ! ನವೀನ್ ಒಂದು ವರ್ಷದಿಂದ ಅನಿತಾಳ ಲವ್ವ್ ಮಾಡ್ತಾ ಇದ್ದಾನೆ ಗೊತ್ತಾ? ಇನ್ನೂ ಲೇಟ್ ಆದ್ರೆ ಅನಿತಾನ ಅಪ್ಪ ಅವ್ಳಿಗೆ ಬೇರೆ ಮದುವೆ ಮಾಡ್ತಾರೆ.
ಹುಡ್ಗಿ: ಅದ್ಕೆ..ಓಡಿಹೋಗಲಿ ಅಂತೀಯಾ?
ಹುಡ್ಗ:ಹೂಂ.ಮತ್ತೆ. ರಿಜಿಸ್ಟ್ರ ಮ್ಯಾರೇಜ್ ಆಗಿ, ಸ್ವಲ್ಪ ದಿವ್ಸ ಇರ್ಲಿ. ಆಮೇಲೆ ಬಂದ್ರಾಯಿತು. ಮತ್ತೆ ಅವ್ರ ಅಪ್ಪ- ಅಮ್ಮ ಏನ್ ಮಾಡ್ತಾರೆ? ಒಪ್ಪದೆ ವಿಧಿಯಿಲ್ಲ.
ಹುಡ್ಗಿ: ಯಾಕೋ ಈ ಐಡಿಯಾ ತುಂಬಾ ಡೇಂಜರ್ ಅನಿಸುತ್ತೆ ಕಣೋ..
ಅಷ್ಟೋತ್ತಿಗೆ ನನ್ ಸ್ಟಾಪ್ ಬಂತು..ನಾನು ಇಳಿದು ಆಫೀಸ್ನತ್ತ ಹೆಜ್ಜೆ ಹಾಕಿದೆ...ಮನದಲ್ಲಿ ಮಾತ್ರ ಅವ್ರ ಮ್ಯಾರೇಜ್ ಐಡಿಯಾ ಗುಣುಗುಟ್ಟುತ್ತಿತ್ತು.
ಹೇಗಿದೆ ಈ ಐಡಿಯಾ?

2 comments:

Abhijatha said...

ಶರಧಿ,

ಇದೆಲ್ಲಾ ನಮ್ಮ ವ್ಯವಸ್ಥೆಯ ಪ್ರತಿಫಲ ಇದರೊಂದಿಗೆ ಸಿನಿಮಾ-ಧಾರಾವಾಹಿಯ ಪ್ರಭಾವ ಕೂಡ ಪೂರಕ.

ಕಾಲೇಜು ಹುಡುಗರ ಮನೋಭಾವನೆಗಳು ಹಿಂದೆಂದಿಗಿಂತಲೂ ವೇಗವಾಗಿ ಓಡುತ್ತವೆ. ಹಾಗಾಗಿ ಹಿಂದಿನದನ್ನೆಲ್ಲಾ ಹೋಲಿಸಿದ್ರೆ, ಅವರು ತುಂಬಾ ಮುಂದುವರಿದಿದ್ದಾರೆ ಅನ್ಸುತ್ತೆ.

ಕೆಟ್ಟದ್ದು ಮನಸ್ಸಿಗೆ ಬೇಗ ತಟ್ಟುತ್ತೆ ಎಂಬುದು ಸಣ್ಣ ಮಕ್ಕಳಿಂದ ಹಿಡಿದು ಎಲ್ಲರಿಗೂ ಅನ್ವಯವಾಗುತ್ತಲ್ವಾ?

Unknown said...

ನಮಸ್ಕಾರ,

ನಿಮ್ಮ "ಹೆಂಗಿದೆ ಐಡಿಯಾ?" ನೋಡಿದೆ. ತುಂಬಾ ಸೊಗಸಾಗಿ ಬರೆದಿದ್ದೀರಿ

ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು - ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

http://kannadahanigalu.com/

ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

ಧನ್ಯವಾದಗಳೊಂದಿಗೆ.....