Wednesday, November 28, 2007

ಹಣತೆ

ಅಲ್ಲಿ ಬರೇ ಕತ್ತಲು

ಸುತ್ತಲೂ ಮೌನ

ದೂರದಲ್ಲಿ ಪುಟ್ಟ ಹಣತೆ

ಉರಿಯುತ್ತಿತ್ತು.. ತನ್ನ ಪಾಡಿಗೆ

ಸುತ್ತಲೂ ಬೆಳಕು ಸೂಸುತ್ತಾ


ಆಕೆ ಕುಳಿತಿದ್ದಳು..ಒಂಟಿಯಾಗಿ

ಆಕೆಗೆ ವಯಸ್ಸು ಎಪ್ಪತ್ತು!

ಸುತ್ತಲ ಕತ್ತಲನ್ನೂ

ಕಣ್ತುಂಬ ತುಂಬಿಕೊಂಡು

ಆಕೆ ನಗುತ್ತಿದ್ದಳು

ತನ್ನ ಬಟ್ಟಲು ಕಣ್ಣುಗಳನ್ನು ಅರಳಿಸಿ,

ದೂರದಲ್ಲಿದ್ದ ಹಣತೆಯ ಕಂಡು

ಹಣತೆಯೂ ಕತ್ತಲ ಕಂಡು ಹೆದರಲಿಲ್ಲ

ತನ್ನ ಪಾಡಿಗೆ ತಾನು ಬೆಳಗುತ್ತಲೇ ಇತ್ತು.

2 comments:

ಹೆಸರು ರಾಜೇಶ್, said...

hanate prakashisuttide. innu prakashamanavagi belagali endu haraisuva nimma geleya.
rajesh

ಚಿತ್ರಾ ಸಂತೋಷ್ said...

ಆತ್ಮೀಯ ಸ್ನೇಹಿತ ರಾಜೇಶ್,
ಕೃತಜ್ಞತೆಗಳು. ಆಗಾಗ ಬರುತ್ತಿರಿ ನನ್ನ ಬ್ಲಾಗ್ ಗೆ.