ನಿಮಗೆ ತಿಳಿದಿದೆಯೋ ಇಲ್ಲವೋ. ಇದೊಂದು ಸುದ್ದಿಯಷ್ಟೇ. ಬರೆಯೋಣ ಅನಿಸ್ತು..ಬರೆದೆ. ಇತ್ತೀಚೆಗೆ(ಜುಲೈ 26-2008) ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೈದರಾಬಾದ್ಗೆ ಭೇಟಿ ನೀಡಿದ್ದರು. ಹೋದಲೆಲ್ಲಾ ರೋಡ್ ಶೋ, ವಿದ್ಯಾರ್ಥಿಗಳು, ಯುವಕರ ಜೊತೆ ಸಂವಾದ ನಡೆಸುವ ಈ ಯುವ ರಾಜಕಾರಣಿ ಇಲ್ಲೂ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದರು. ಇದು ನಡೆದಿದ್ದು ಇಲ್ಲಿನ ರವೀಂದ್ರ ಭಾರತೀಯಲ್ಲಿ ನಡೆದ ಸಂವಾದದಲ್ಲಿ. ಪ್ರಮುಖವಾಗಿ ಅಣುಒಪ್ಪಂದದ ಬಗ್ಗೆಯೇ ಮಾತಾಡಿದ್ದರು. "ಮುಂದಿನ ಚುನಾವಣೆಯಲ್ಲಿ ನಾವು ಗೆಲ್ಲುವುದು/ಸೋಲುವುದು ಮುಖ್ಯವಲ್ಲ. ಮಧ್ಯಮ ವರ್ಗ ಮತ್ತು ದೇಶದ ಪ್ರಗತಿಗೆ ಅಣು ಒಪ್ಪಂದ ಸಹಕಾರಿ. ಆದ್ದರಿಂದ ಅಣುಒಪ್ಪಂದವನ್ನು ನಾನು ಬೆಂಬಲಿಸುತ್ತೇನೆ" ಎಂದರು ರಾಹುಲ್. ಇದೇ ಮಾತನ್ನು ಮುಂದುರೆಸಿ, ಇದರಿಂದ ದೇಶದ ಜನತೆಗೆ ನೌಕರಿ ಸಿಗುತ್ತದೆ, ಬಡವರ ಮನೆಯಲ್ಲಿ ಬೆಳಕು ಸಿಗುತ್ತೆ, ವಿದ್ಯುತ್ ಉತ್ಪಾದನೆ ಹೆಚ್ಚಲಿದೆ..ಹೀಗೇ ತನ್ನ ಭಾಷಣ ಮುಂದುವರೆಸಿದರು.
ಹೀಗೇ ಮಾತು ಮುಂದುವರೆಯುತ್ತಿದ್ದಂತೆ, ಒಬ್ಬ ವಿದ್ಯಾರ್ಥಿನಿ ಐಎಇಎ(ಅಂತರ್ ರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ) ಪೂರ್ಣರೂಪ ಏನು ಸರ್? ಎಂದಾಗ ರಾಹುಲ್ ಕಕ್ಕಾಬಿಕ್ಕಿ! 'ಕ್ಷಮಿಸಿ ನನಗೆ ಗೊತ್ತಿಲ್ಲ' ಎಂದುಬಿಟ್ಟರು.
ಈ ಸುದ್ದಿ ಇಂಗ್ಲೀಷ್ ಚಾನೆಲ್ ಒಂದರಲ್ಲಿ ಪ್ರಸಾರವಾಯಿತು. ಕನ್ನಡದ ಚಾನೆಲ್ ನಲ್ಲಿ ಪ್ರಸಾರವಾಗಿಲ್ಲ. ಕನ್ನಡದ ಒಂದು ಪತ್ರಿಕೆ ಇದೇ ಸುದ್ದಿಯನ್ನು ಪ್ರಕಟಿಸಿದೆ,,ಇದು ನಾನು ತಿಳಿದ ಮಾಹಿತಿ. ಇಂಥ ಸುದ್ದಿಯನ್ನು ಮುಲಾಜಿಯಿಲ್ಲದೆ ಪ್ರಕಟಿಸಿದರೆ, ನಮ್ಮ ಜನನಾಯಕರ ಹಣೆಬರಹ ತಿಳಿಯುತ್ತದೆ. ಜಾಣರು ಜಾರಿ ಬೀಳುವುದು ಇಂಥ ವಿಚಾರದಲ್ಲಿಯೇ. ಏನೂ ಗೊತ್ತಿಲ್ಲದೆಯೇ ವೇದಿಕೆ ಮೇಲೆ ನಿಂತು ಚಪ್ಪಾಳೆ ಗಿಟ್ಟಿಸಲು ತೋರಿಗಷ್ಟೇ ಪುಂಖಾನುಪುಂಖವಾಗಿ ಮಾತಾಡುವ ಇಂಥ 'ಬುದ್ಧಿವಂತ'ರಿಂದ ದೇಶ ಎಷ್ಟರಮಟ್ಟಿಗೆ ಉದ್ಧಾರ ಆದೀತು? ರಾಹುಲ್ ಒಂದು ಪುಟ್ಟ ನಿದರ್ಶನ ಅಷ್ಟೇ.
Thursday, August 7, 2008
Subscribe to:
Post Comments (Atom)
3 comments:
ಸಿಕ್ಕಿಬಿದ್ದ ಕಳ್ಳ!
ಇಂತವ್ರೆಲ್ಲಾ ನಾಯಕರು! ಛೆ.
ಈ ಚಾನೆಲ್ಲುಗಳು, ನ್ಯೂಸ್ ಪೇಪರ್ ಗಳು ಎಲ್ಲಾ ಇಷ್ಟೇ. Media controls minds of the masses.
ವಿಕಾಸ್, ಪ್ರಮೋದ್..ತುಂಬಾ ತುಂಬಾ ಥ್ಯಾಂಕ್ಸ್
-ಚಿತ್ರಾ
Post a Comment