
ಜಗತ್ತಿನಲ್ಲಿ ಪ್ರೀತಿಗೆ ಅಗ್ರಸ್ಥಾನ. ಮನುಷ್ಯ ಸಂಬಂಧಗಳ ಮೂಲಕ್ಕೆ ಪ್ರೀತಿಯೇ ಕಾರಣ. ಪ್ರೀತಿಗೆ ಹಲವಾರು ಮುಖಗಳಿರಬಹುದು. ಆದರೆ ಪ್ರೀತಿಸುವ ಹೃದಯ, ಮನಸ್ಸು ಒಂದೇ. ಇಂತಹ ಅಮೂಲ್ಯ ಪ್ರೀತಿಯಲ್ಲಿ ಅಣ್ಣ-ತಂಗಿಯರ ಪ್ರೀತಿಯೂ ಒಂದು. ಬಾಲ್ಯದಿಂದಲೂ ಜೊತೆ-ಜೊತೆಯಾಗಿ ಬೆಳೆದು, ಬದುಕಿಗೆ ಪ್ರೀತಿಯ ಸ್ಪರ್ಶ ನೀಡುವ ಸಹೋದರ-ಸಹೋದರಿಯರಲ್ಲಿ ಮೊಗೆದಷ್ಟು ಬತ್ತದ ಪ್ರೀತಿಯಿರುತ್ತದೆ. ತಂಗಿಯನ್ನು ತುಂಬಾ ಪ್ರೀತಿಸುವ ಅಣ್ಣ, ಅಣ್ಣನನ್ನು ತುಂಬಾ ಪ್ರೀತಿಸುವ, ಗೌರವಿಸುವ ತಂಗಿಯಿದ್ದರೆ ಬದುಕೆಷ್ಟು ಚೆನ್ನ.
ಅಣ್ಣನೋರ್ವ ಒಳ್ಳೆಯ ಸ್ನೇಹಿತನಾಗಬಲ್ಲ. ಪ್ರೀತಿಯಿಂದ ಜೋಗುಳ ಹಾಡುವ ಅಮ್ಮನಾಗಬಲ್ಲ..ಬದುಕಿಗೆ ಕೈಗನ್ನಡಿಯಾಗಬಲ್ಲ. ಅಣ್ಣನ ಪ್ರೀತಿಯೆಂದರೆ ಅಮ್ಮನ ಮಮತೆ..ಅಣ್ಣನ ಮಡಿಲೆಂದರೆ ಅಮ್ಮನ ಒಡಲು..ಪ್ರೀತಿಯ ಕಡಲು. ಇಂಥ ಬಾಂಧವ್ಯ ಸದಾ ಚಿರಾಯು. ಭಾವನೆಗಳು ಮಣ್ಣಾಗುತ್ತಿರುವ ಈಗಿನ ಪ್ರಾಪಂಚಿಕ ಸನ್ನಿವೇಶದಲ್ಲಿ ರಾಖಿ ಹಬ್ಬದಂಥ ವಿಶೇಷ ದಿನಗಳು ಬಾಂಧವ್ಯ, ಭಾವನೆಗಳ ಬೆಸುಗೆಗೆ ಮುನ್ನುಡಿಯಾಗಬೇಕು. ಪ್ರೀತಿಯ ಅಣ್ಣಂದಿರಿಗೆ ರಾಖಿ ಹಬ್ಬದ ಶುಭಾಶಯಗಳು.
4 comments:
ರಾಖಿ ಹಬ್ಬದ ಶುಭಾಶಯ...
ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಸಹೋದರ-ಸಹೋದರಿಯರ ನಿರ್ಮಲ ಪ್ರೀತಿಯ ರಕ್ಷಾಬಂಧನ ಹಬ್ಬದ ಶುಭಾಶಯಗಳು. ಪ್ರೀತಿಯ ಅಣ್ಣ ತಮ್ಮಂದಿರ ಪ್ರೀತಿ ಮತ್ತು ರಕ್ಷೆ ಸದಾ ನಿಮ್ಮ ಜತೆಯಿರಲಿ.
ಒಲವಿನಿಂದ
ಬಾನಾಡಿ
ಎಲ್ಲರೂ ಬರೀ ಪ್ರೀತಿ ಪ್ರೇಮದ ಸಂಬಂಧಗಳ ಕಾಗೆ ಗೂಬೆ ಕತೆಗಳನ್ನೇ ಬರೀತಾರೆ. ನೀವು ಅಣ್ಣ -ತಂಗಿ ಸಂಬಂಧಗಳನ್ನು ಹಿಡಿದಿಟ್ಟಿದ್ದೀರ. ಗುಡ್. ರಾಖಿ ಶುಭಾಶಯಗಳು :)
ಪುಣ್ಚಪ್ಪಾಡಿ, ನಾನಾಡಿ,ವಿಕಾಸ್ ..
ವಂದನೆಗಳು
-ಚಿತ್ರಾ
Post a Comment