
ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ಮುಖ ಹಾಕದೆ. ಕೆಲವೊಂದು ಕಾರಣಗಳಿಂದ ನನಗೆ ಬ್ಲಾಗ್ ಬರೆಯಲಾಗಲಿಲ್ಲ. ಇದೀಗ ಮದುವೆ ಕರೆಯೋಲೆಯೊಂದಿಗೆ ಮತ್ತೆ ಮರಳಿ ಬಂದಿದ್ದೇನೆ. ನಮ್ಮ ಮದುವೆಗೆ ನೀವು ಬಂದರೇನೇ ಚೆಂದ. ಖಂಡಿತಾ ಬರಬೇಕು.
ಬದುಕಿನ ಹೊತ್ತಗೆಯಲ್ಲಿ
ಒಲವಿನ ಕುಂಚ ಹಿಡಿದು
ದಾಂಪತ್ಯ ಕಾವ್ಯಕಲೆ ರೂಪಿಸಲು ಹೊರಟಿದ್ದೇವೆ.
ಈ ಶುಭಗಳಿಗೆಗೆ
ಹೊಸೆದ ಭಾವ ಕನಸುಗಳಿಗೆ
ನಿಮ್ಮ ಪ್ರೀತಿಯ ಹಾರೈಕೆ ಬೇಕು.
ನಮ್ಮ ಮದುವೆ: ಮಾರ್ಚ್ 07, 2010; ವಸಂತ ಮಹಲ್, ಶ್ರೀ ಕ್ಷೇತ್ರ ಧರ್ಮಸ್ಥಳ
ಆರತಕ್ಷತೆ: ಮಾರ್ಚ್ 10, 2010; ನಂ.125/126, 9ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಆರ್ಎಂವಿ ಬಡಾವಣೆ, ಸದಾಶಿವನಗರ, ಬೆಂಗಳೂರು-80.
ಪ್ರೀತಿಯಿಂದ
ಸಂತೋಷ್-ಚಿತ್ರಾ
19 comments:
ಮದುವೆಯ ಖುಷಿಯಲ್ಲಿ ಇದ್ದೀಯ ಪರವಾಗಿಲ್ಲ ಸ್ವಲ್ಪದಿನಗಳು ಆರಾಮಗಿ ಇದ್ದು, ಆನಂತರ ನಿನ್ನ ಹೊಸ ಜೀವನದ ಖುಷಿಯನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಲಿರು.
ಹೊಸ ಜೀವನದ ಹೊಸ್ತಿಲಿಗೆ ಕಾಲಿಡುತ್ತಲಿದ್ದೀಯ ನಿನಗೆ ಹಾಗೂ ನಿನ್ನವರಿಗೆ ಒಳ್ಳೆಯದನ್ನು ಮಾಡಲಿ ಸದಾ ಹಚ್ಚ ಹಸಿರಿನಂತೆ ಜೀವನ ಸಾಗಲಿ.
ಶುಭಾಷಯಗಳು.
ಅಭಿನಂದನೆಗಳು ಚಿತ್ರಾ :)
ಚಿತ್ರಾ...
ನೀನು
ಬಿಡಿಸಿದ..
ನಿನ್ನ.
ಇಷ್ಟದ..
"ಸಂತೋಷ".."ಚಿತ್ರ"
ಸೊಗಸಾಗಿದೆ..
ಎರಡು ಕೇಜಿ ಊಟ ಜಾಸ್ತಿ ಮಾಡಿಸು..
ನಾನು..
ನಮ್ಮನೆಯವರೆಲ್ಲ ಖಂಡಿತ ಬರುತ್ತೇವೆ...
ಹೃದಯಪೂರ್ವಕ..
ಶುಭಾಶೀರ್ವಾದಗಳು...
ನೋಡ-ನೋಡುತ್ತಿದ್ದಂತೆ ಬಂದಿದೆ ಆ ದಿನ
ಶುಭ ದಿನ ತರಲಿ ನಿಮ್ಮಿಬ್ಬರಿಗೆ ಅನುದಿನ
ಹಾಲು-ಜೇನಂತೆ ಬೆರೆತು ಬಾಳುವ ಮನ
ಸಾಗಲಿ ಸುಖ ನೆಮ್ಮದಿಯಿಂದ ವೈವಾಹಿಕ ಜೀವನ
ನಿಮ್ಮ ಹಾಗು ಸಂತೋಷ ಅವರ ಬಾಳಿನಲ್ಲಿ ಸದಾ ಆನಂದ ತುಂಬಿರಲಿ
ಅಶೋಕ ಉಚ್ಚಂಗಿ
Congratulations chitra madam :)
Wish u very happy marrieed life :)
ಚಿತ್ರಾ..
ಹೊಸ ಜೀವನವು, ನಿಮ್ಮಿಬ್ಬರಿಗೂ ಸಂತಸಮಯವಾಗಿರಲಿ:)
- ಪ್ರೀತಿಯ ಅಕ್ಕನ ಶುಭಾಶಯಗಳು ದೂರದ ಊರಿನಿಂದ..
ಮದುವೆಯ ಗೊಂದಲಗಳ ಮೋಡ ಕಳೆದು, ಪ್ರೀತಿಯ ಬೆಳಕು ಹರಿದು, ನಿಮ್ಮ ಬಾಳು ಬಂಗಾರವಾಗಲಿ.
ಶುಭಾಶಯಗಳೊಂದಿಗೆ
ಭಾಶೇ
ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ :)
ಚಿತ್ರಾ...
ಶುಭವಾಗಲಿ ಹೊಸಗಳಿಗೆಗಳೆಲ್ಲವು ಹೊಸ ಹೊಸ ಹೆಜ್ಜೆಗಳೊಂದಿಗೆ.
ಪ್ರೀತಿಯಿಂದ,
ಶಾಂತಲಾ ಭಂಡಿ.
ಚಿತ್ರಾ, ಮದುವೆಯೆನ್ನುವ ಬಾಳಿನ ಹೊಸ ಘಟ್ಟದಲ್ಲಿ ಹೆಜ್ಜೆಯಿಡುತ್ತಿರುವ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.ಮದುವೆಯ ಮುನ್ನಾ ದಿನಗಳ ಸವಿಯನ್ನು ಚೆನ್ನಾಗಿ ಸವಿಯಿರೆಂಬ ಹಾರೈಕೆ!
ಚಿತ್ರ ಮೇಡಂ,
ಖಂಡಿತ ಬರಲು ಪ್ರಯತ್ನಿಸುತ್ತೇವೆ......... ಹೊಸ ಜೀವನ, ಹರುಷ ತರಲಿ............ ಎಂದೆಂದಿಗೂ .......
ಚಿತ್ರಾ ,
ಹೊಸಹಾದಿಯ ಪ್ರತಿ ಹೆಜ್ಜೆಯೂ ಸಂತೋಷ ದಿಂದ ತುಂಬಿರಲಿ. ಮುಂಬರುವ ಸುಂದರ ಬೆಳಗಿನ ಪ್ರತಿ ಕಿರಣವೂ ಸುಂದರ ಚಿತ್ರವಾಗಿರಲಿ !
ದಾಂಪತ್ಯದ ಹಾದಿಯಲ್ಲ್ಲಿ ಸದಾ ಉಲ್ಲಾಸ, ಸಂತಸ, ನೆಮ್ಮದಿ ನಿಮ್ಮದಾಗಿರಲಿ !
ನಿಮ್ಮ ಜೀವನದ ಮಹತ್ವಪೂರ್ಣ ಗಳಿಗೆಗೆ ನನ್ನ ಮನಸ್ಪೂರ್ವಕ ಶುಭಾಶಯಗಳು !
ಚಿತ್ರಾ,
ಮದುವೆಯ ಹೊಸ ಅನುಬಂಧಕ್ಕೆ ಕಾಲಿಡುತ್ತಿರುವ ನಿನಗೇ ಹೃದಯಪೂರ್ವಕ ಶುಭ ಹಾರೈಕೆಗಳು.
Congratulations ...ನಿಮೆಲ್ಲ ಕನಸುಗಳು ನನಸಾಗಲಿ...
ನಿಮ್ಮವ,
ರಾಘು.
Chitra....
Happy married life... hosa jeevana harusha tharali....:)
ಮದುವೆಯ ಮಮತೆಯ ಕರೆಯೋಲೆ ಕಳುಹಿಸಿದ್ದಿರಿ. ಆದರೆ ಬರಲು ಆಗಲಿಲ್ಲ.
ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ,ನೂರಾರು ವರುಷ ಒಂದಾಗಿ ಬಾಳಿ.
Hi,
Can u please change the font style and colour, its nor readable. Please.
Congrats :)
Post a Comment