
ಮದುವೆ ಗಡಿಬಿಡಿ ಎಲ್ಲಾ ಮುಗಿದುಹೋಯ್ತು. ಎಲ್ಲವೂ ಚೆನ್ನಾಗೇ ನಡೆಯಿತು. ಹಳೆಯ ಬದುಕು ಏನೋ ಹೊಸ ರೂಪ ಪಡೆದಂತೆ. ಮನೆಯವರ ಜವಾಬ್ದಾರಿನೂ ಮುಗಿದುಹೋಯ್ತು. ಈಗ ಮಾಮೂಲಿ ಆಫೀಸ್. ಮತ್ತೆ ಕೆಲಸ, ಅದೇ ಪತ್ರಿಕೆ, ಅದೇ ಆಫೀಸು, ಅದೇ ಜನರು, ಅದೇ ಓಡಾಟ, ಮನಸ್ಸು ಎಲ್ಲದಕ್ಕೂ ಮತ್ತೆ ಹೊಂದಿಕೊಳ್ಳಬೇಕನಿಸುತ್ತೆ. ಆದರೂ ಏನೋ ಖುಷಿಯ ಗುಂಗು. ಮದುವೆಗೆ ಮೊದಲು ದೇವರನ್ನು ನೀನೆಕೆ ಕಲ್ಲಾಗಿಬಿಟ್ಟೆ ಅಂತ ಬೈದಿದ್ದೆ. ತವರು ಬಿಡಬೇಕೆ? ಎಂದು ನೂರಾರು ಪ್ರಶ್ನೆಗಳ ಮಳೆ ಸುರಿದಿದ್ದೆ. ಆದರೆ, ದೇವರೇ ನಿನಗೆ ಬೈದುಬಿಟ್ಟೆ ಅಲ್ವ? ಅಂತ ಸಾರಿ ಅಂತ ಕೇಳ್ತಾ ಇದ್ದೀನಿ.
ಮದುವೆ ಗುಂಗಿನಿಂದ ಆಫೀಸು ಕೆಲಸಗಳನ್ನಷ್ಟೇ ಮಾಡುತ್ತಿದ್ದೆ. ಬ್ಲಾಗ್ ಬರಹಗಳತ್ತ ತಿರುಗಿ ನೋಡಲು ಸಮಯವಿರಲಿಲ್ಲ. ಇನ್ನು ಮತ್ತೆ ಬ್ಲಾಗ್ ಮುಂದುವರಿಸಬೇಕು. ನಾವಿಬ್ಬರೂ ಬ್ಲಾಗ್ ಬರಿಯಬೇಕು. ಇನ್ನು ಚೆನ್ನಾಗಿ ಬರೀಬೇಕು ಅಂತ ನಮ್ಮಾಸೆ. ನನ್ನ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳು ನನ್ನ ಆತ್ಮೀಯು ಗೆಳತಿಯರು. ಇನ್ನು ಇವೆರಡನ್ನು ಚೆನ್ನಾಗಿ ಮುಂದುವರಿಸಬೇಕು. ಮತ್ತೆ ನಿಮ್ಮೆದುರಿಗೆ ಅದೇ ಪುಟ್ಟ ಪುಟ್ಟ ಬರಹಗಳೊಂದಿಗೆ ಕಾಣಿಸಿಕೊಳ್ಳುತ್ತೇವೆ. ಭಾವಗಳಿಗೆ ಬರವಿಲ್ಲ, ಅವುಗಳಿಗೇ ಅಕ್ಷರ ರೂಪ ತುಂಬುವಾಸೆ. ಎಲ್ಲೋ ಕಂಡ ಹಕ್ಕಿ, ಮುಗಿಲಲ್ಲಿ ತೇಲಾಡುವ ಮೋಡ, ನೆನಪಾಗುವ ಹುಟ್ಟೂರು, ಪ್ರೀತಿ ನೀಡಿದ ಒಡನಾಡಿಗಳು, ಗಂಡನ ಜೊತೆಗಿನ ಪುಟ್ಟ ಹುಸಿಮುನಿಸು, ಆಫೀಸ್ ನಲ್ಲಿನ ಕಿರಿಕಿರಿ, ಜಗತ್ತಿನಾಚೆಗಿನ ಭಾಷೆಯಿಲ್ಲದ ಭಾವಗಳು...ಎಲ್ಲವೂ ಅಕ್ಷರ ರೂಪ ಪಡೆಯಲಿವೆ. ಓದುತ್ತೀರಲ್ಲಾ...
ಪ್ರೀತಿಯಿಂದ
ಚಿತ್ರಾ ಸಂತೋಷ್
14 comments:
ತ೦ಗಿ ಚಿತ್ರಾ
ನೀನು ಸ೦ತೋಷವಾಗಿರಬೇಕೆ೦ಬುದೇ ನನ್ನ ಮನದಾಸೆ. ನಿನ್ನ ಬರಹ-ಭಾವ-ಅಭಿವ್ಯಕ್ತಿ ಗಳು ಇನ್ನು ಓತಪ್ರೋತವಾಗಿ ಬ್ಲಾಗ್ ಮೂಲಕ ಹರಿಯಲಿ, ಓದುವ ಖುಷಿ ನಮ್ಮದು.
ಬರೆಯುತ್ತಿರು, ಬರೆಯುತ್ತ ಬರೆಯುತ್ತ ಬೆಳೆಯುತ್ತಿರು, ಶುಭಾಷಯ, ಶುಭ ಹಾರೈಕೆ ನಿಮಗೀರ್ವರಿಗೂ.
ಚಿತ್ರಾ ಮೇಡಂ,
ಮದುವೆಗೆ ನನ್ನಾಕೆ ಸಮೇತ ಬರಲು ತಯಾರಿ ಮಾಡಿಕೊಂಡಿದ್ದೆವು...... ಹಾಗೆಯೇ ದರ್ಮಸ್ತಳ ದೇವರ ದರ್ಶನವೂ ಆಗುತ್ತದೆ ಎಂದು ಪ್ಲಾನ್ ಮಾಡಿದ್ದೆವು....... ಆದರೆ ನನ್ನ ಹೊಸ ಕಂಪನಿಯವರು ೮ ನೆ ತಾರೀಖಿಗೆ ಕೆಲಸ ಸೇರಲು ಹೇಳಿದ್ದರಿಂದ, ನಮ್ಮ ಪ್ಲಾನ್ ಎಲ್ಲಾ ಫ್ಲಾಪ್ ಆಯಿತು....... ನಮ್ಮೆಲ್ಲರ ಹಾರೈಕೆ ನಿಮ್ಮ ಜೊತೆಗಿದೆ...... ಸಂತೋಷವಾಗಿರಿ...... ಬ್ಲಾಗ್ ಮುಂದುವರೆಸಿ,........ ವೆಲ್ ಕಂಬ್ಯಾಕ್....
ಏನ್ರಿ ಮದುಮಗಳೇ.......
ಇನ್ನು ಮದುವೆಯ ಗುಂಗಿನಿಂದ ಹೊರಬರಲಿಲ್ವಾ?
ಬೇಡ ಬಿಡಿ.
ಹೊಸ ಜೀವನದ ಹೊಸ ಕನಸಿಗೆ ಇನ್ನಷ್ಟು ಮೆರುಗು ತುಂಬಲಿ.
ಆ ಹುರುಪಿನಲ್ಲೇ ಒಂದಷ್ಟು ಬಾವನೆಗಳು ಮೂಡಲಿ,
ಆ ಬಾವನೆಗಳು ಬರಹದ ರೂಪ ತಾಳಲಿ,
ಆ ಬರಹಗಳನ್ನು ಓದುವ ಭಾಗ್ಯ ನಮಗೇ ಬೇಗ ಸಿಗಲಿ...............
haapy maareid life to you
ಚಿತ್ರ ಮೇಡಂ ಇಬ್ಬರಿಗೂ Congratulation ... ವಿಷ್ ಮಾದೊದಿಕ್ಕು ಲೇಟ್ ಮಾಡಿದೆ ನೋಡಿ :) ....
ನಿಮ್ಮ ಕೆಲಸದ ಮಧ್ಯೆ ಭಾವಗಳಿಗೂ ರೂಪ ಕೊಡಿ .. ಓದುವ ಭಾವಗಳಗಿ ನಾವಿದ್ದೇವೆ ..
Happy married life :)
ಮದುಮಗ-ಮಗಳಿಗೆ ಅಣ್ಣನ ಕೀಟಲೆಭರಿತ ಶುಭಕಾಮನೆಗಳು...ಹಹಹ...
ಮೃದು ಮನಸು, ಮೆದು ಹಾಸು, ಬೆಚ್ಚಗೆ ಪಕ್ಕದಲಿ ಚಕ್ಕಂದದ ಸೊಗಸು ಎರಡೂ ಮನಗಳು ಒಂದೇ ಎನ್ನುವ ಸಮಯ...ಆಹ್ಹಾಹಾ..
ಅದರಿಂದ ಯಾರಿಗೆ ತಾನೇ ಹೊರಬರಲು ಮನಸ್ಸಗುತ್ತೆ ಚಿತ್ತು ಪುಟ್ಟಿ,,,,..ಸಾರಿ..ಸಂತೋಷ್...ಹಾಗೇ ನಾನು ಅವಳನ್ನ ಕರಿತಿದ್ದುದು..ನಿಮಗೆ ಆಕ್ಷೇಪ ಅನಿಸೊದಾದ್ರೆ...ಚಿತ್ರಾಸಂತೋಷರೇ ಅನ್ತೇನೆ..ಸರೀನಾ,,,,
ಮತ್ತೊಮ್ಮೆ ಶುಭಕಾಮನೆಗಳು ಇಬ್ಬರಿಗೂ
ಚಿತ್ರಾಜಿ,
ಗ್ರಹಸ್ಥಾಶ್ರಮವು ಸುಖಕರವಾಗಿರಲಿ.
ಮದುವೆಗೆ ಬರದಿರುವುದಕ್ಕೆ ಕ್ಷಮೆಯಾಚಿಸುತ್ತೇನೆ.
ಚಿರಕಾಲ ಬಾಳಲಿ ನಿಮ್ಮ ಸಂಬಂದ,
ತ್ರಾರೆಗಳಂತೆ ಎಂದಿಗೂ ಮಿನುಗಲಿ ನಿಮ್ಮ ಜೀವನ,
ಸಂಗಡಿಗನ ಜೊತೆ ಹಾರಾಡಲಿ ಹಕ್ಕಿಗಳಂತೆ,
ತೋರ್ಪದಿಸದಿರೆಲೆಂದು ಜೀವನದಲಿ ಜಿಗುಜ್ಜವ,
ಷರಾ ಹಾಕುವಷ್ಟು ದ್ರದತೆಯಿರಲಿ ಜೀವನದಲೆನ್ನುವ,
ಸ್ನೇಹಿ ನಾ.
ಚಿತ್ರ ಕರ್ಕೇರಾದಿಂದ ಚಿತ್ರ ಸಂತೋಷ್ ಆದಾಗ ತೋರ ಅದಂತೆ ಕಾಣುತ್ತೆ (ಜೋಕ್).
ಎಂದಿಗೂ ಸುಖಕರವಾಗಿರಲೆಂದು ಹಾರೈಸುವ ನಾ,
ಮೋಹನ್ ಹೆಗಡೆ.
ಶುಭವಾಗಲಿ ಚಿತ್ರಾ :) ಭಾವದೊಡಲು ಸದಾ ತುಂಬಿ ಹರಿಯಲಿ..
ನಿಮ್ಮ ಹೆಸರು ಚಿತ್ರಾ ಕರ್ಕೇರಾ ಅಲ್ವ
ಇಲ್ಲಿ ಚಿತ್ರಾ ಸಂತೋಷ್ ಅಂತ ಇದೆ
ಶುಭಾಶಯಗಳು ಚಿತ್ರ ಅವರೇ... ಒಲಿದವರ ಜೊತೆ 'ಸಂತೋಷದ' ಕ್ಷಣಗಳು ಎಂದಿಗೂ ನಿಮ್ಮದಾಗಲಿ!
ಶುಭಾಶಯಗಳು ಚಿತ್ರ & ಸಂತೋಷ್ ದಂಪತಿಗಳಿಗೆ
@ಪರಾಂಜಪೆಯಣ್ಣ...
ತುಂಬಾ ಥ್ಯಾಂಕ್ಸ್...ನಾನು ಖುಷಿಯಾಗೇ ಇದ್ದೀನಿ. ನನ್ನ ಬರಹಗಳು ಮತ್ತೆ ಶರಧಿಯಾಗಿ ಪ್ರವಹಿಸಲಿವೆ. ನಿಮ್ಮ ಪ್ರೋತ್ಸಾಹ ಪ್ರೀತಿ ಇದ್ರೆ ಸಾಕು\
@ದಿನಕರ ಸರ್...ಬಂದಿದ್ರೆ ಚೆನ್ನಾಗಿರ್ತಾ ಇತ್ತು. ಎಲ್ಲನೂ ಚೆನ್ನಾಗೇ ನಡೆಯಿತು. ಥ್ಯಾಂಕ್ಯೂ ಮತ್ತೆ ಬರೆಯುವೆ. ನಿಮ್ಮಾಕೆಗೆ ನನ್ನ ನೆನೆಕೆಗಳನ್ನು ತಿಳಿಸಿ.
@ಮನದಾಳದಿಂದ..ನಿಮ್ಮ ಮನದಾಳದ ಹಾರೈಕೆಗೆ ಧನ್ಯವಾದಗಳು
@ರಂಜಿತಾ ತುಂಬಾ ಥ್ಯಾಂಕ್ಸ್..ಬರ್ತಾ ಇರಿ. ಪರವಾಗಿಲ್ಲ ಲೇಟ್ ವಿಶ್ ಮಾಡಿದ್ರೂನು. ಮಾಡಿದ್ರಲ್ಲಾ ಅದೇ ಖುಷಿ...
@ಅಣ್ಣ ಆಜಾದ್..ಕೀಟಲೆಭರಿತ ಶುಭಾಶಯಗಳಿಗೆ ಕೀಟಲೆಯಾಗಿ ಉತ್ತರ ನೀಡಲಾಗುತ್ತಿಲ್ಲ. ನೀವು ಬಂದಾಗ ನೋಡ್ಕೋತೀನಿ ಬಿಡಿ. ಬರ್ತಾ ಇರಿ, ಬರೆಯುತ್ತಾ ಇರ್ತೀನಿ.
@ಮೋಹನ್ ಹೆಗಡೆ, ದಿವ್ಯಾ, ಸುಮನಕ್ಕ, ಲಕ್ಷ್ಮಣ್.. ಧನ್ಯವಾದಗಳು.
@ ಜಿ.ಎನ್. ಮೋಹನ್ ಸರ್...ಧನ್ಯವಾದಗಳು.
ಇನ್ನು ಮುಂದೆ ಚಿತ್ರಾ ಸಂತೋಷ್. ಗಂಡನಿಗೆ ಬೇಜಾರಾಗಬಾರದೆಂದು ಅವರ ಹೆಸರು ಸೇರಿಸಿಕೊಂಡಿದ್ದೇನೆ(:::)
-ಪ್ರೀತಿಯಿಂದ,
ಚಿತ್ರಾ ಸಂತೋಷ್
ಹೊಸ ಮದುಮಕ್ಕಳಿಗೆ ಶುಭಾಶಯಗಳ್ಯ್ ಮತ್ತು ತಾಮ್ಮ ದಾ೦ಪತ್ಯ ಜೀವನ ಸದಾ ಹಸಿರಾಗಿರಲೆ೦ದು ಹಾರೈಸುವೆ. ತಮ್ಮ ಬ್ಲೊಗ್-ಪ್ರಾರ೦ಭವಾಗಲಿ. ಓದಲು ನಾವೆಲ್ಲಾ ಕಾತುರರಾಗಿದ್ದೆವೆ.
ಪ್ರೀತಿಯ ಚಿತ್ರಾ,
ಮತ್ತೊಮ್ಮೆ ಮಗದೊಮ್ಮೆ ಹೊಸ ಬಾಳಿಗೆ ಹಾರ್ಧಿಕ ಶುಭಾಷಯಗಳು ನಿಮ್ಮಿಬ್ಬರಿಗು. ಅಕ್ಷರ ಪ್ರವಾಹ ಮತ್ತು ಪ್ರಳಯ ನಡೆದು ಬಿಡಲಿ ದಂಪತಿಗಳಿಂದ.
ರಾಜೇಶ್, ಸೀತಾರಾಮ ಸರ್...ಧನ್ಯವಾದಗಳು
-ಚಿತ್ರಾ ಸಂತೋಷ್
Post a Comment