ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ..
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ....
ಅಮೃತವರ್ಷಿಣಿ ಚಿತ್ರದ ಸುಂದರ ಗೀತೆ ಮನಸ್ಸನ್ನೇ ಉಯ್ಯಾಲೆಯಾಗಿಸಿತ್ತು. ಹಾಡು ಕೇಳ್ತಾ ಓದೋದು ನನ್ನ ಅಭ್ಯಾಸ..ನನ್ನ ಪುಟ್ಟ ಕೋಣೆಯೊಳಗೆ ಕುಳಿತರೆ ಪಕ್ಕದ ಮನೆಯವರ ಮಾತುಗಳು ಕಿವಿಗೆ ಬೀಳೋ ಸಾಧ್ಯತೆಗಳಿರುವುದರಿಂದ ಜೋರಾಗಿ ಹಾಡು ಹಾಕಿ ಓದ್ತಾ ಇದ್ದೆ. ಕಿಟಕಿ ಬಾಗಿಲು ತೆರದರೆ ಬೀಸೋ ಗಾಳಿ, ಚಲಿಸುವ ಮೋಡಗಳು, ನಿರಭ್ರ ಆಕಾಶ...ಎಲ್ಲವೂ ಮನಸ್ಸಿಗೆ ಮುದ ನೀಡುತ್ತೆ.
ಹಾಗೇ ಓದಲು ಕುಳಿತಿದ್ದರೆ ಪಕ್ಕದ್ಮನೆಯ ಇಬ್ಬರು ಪುಟ್ಟ ಮಕ್ಕಳು ಬಂದು, "ಅಕ್ಕಾ, ನಿಂಗೆ ಓದೋಕೆ ತೊಂದ್ರೆ ಆಯ್ತಾ?' ಅಂತ ಕೇಳಿದಾಗ, 'ಯಾಕೆ ಅಂತ ಕೇಳಿದರೆ?' , ನಮ್ಮ ಅಪ್ಪ-ಅಮ್ಮ ಜಗಳ ಆಡ್ತಾ ಇದ್ದಾರೆ..ನಿಮಗೆ ಕೇಳಿ ಡಿಸ್ಟರ್ಬ್ ಆಯ್ತಾ ಎಂದು ಕೇಳಿದಾಗ ನನಗೆ ಅಚ್ಚರಿ. ನಿಜವಾಗಲೂ ಹಾಡು ಜೋರಾಗಿ ಇಟ್ಟಿದ್ರಿಂದ ನಂಗೆ ಅವರ ಕಿತ್ತಾಟ ಕಿವಿಗೆ ಬೀಳಲಿಲ್ಲ. ಹಾಡು ಆಫ್ ಮಾಡಿದಾಗ...ಹೆಂಡತಿಯೇ ಗಂಡನಿಗೆ ಹೊಡೆಯಿತೋ/ ಅಥವಾ ಗಂಡನೇ ಹೆಂಡತಿಗೆ ಹೊಡೆಯಿತೋ..ಗೊತ್ತಿಲ್ಲ. ಜೋರು ಜಗಳ..ಬೊಬ್ಬೆ ಕೇಳಿಸ್ತಾ ಇತ್ತು. ತುಂಬಾ ಸರಳವಾಗಿರೋ/ ಹಿತ-ಮಿತ ಮಾತಾಡೋ ಪುಟ್ಟ ಕುಟುಂಬ ಅದು. ಮೂವರು ಹೆಣ್ಣು ಮಕ್ಕಳೇ..ದೊಡ್ಡವಳು ಮೊದಲ ಪಿಯುಸಿ. ಇನ್ನೊಬ್ಳು ಆರನೇ ಕ್ಲಾಸು..ಸಣ್ಣವಳು ಯುಕೆಜಿ.
ಯಾಕೋ ಓದೋದು ಬೇಡ ಅನಿಸ್ತು, ಹಾಡು ನಿಲ್ಲಿಸಿದೆ. ಸುಮ್ಮನಾಗಿ ನನ್ನಷ್ಟಕ್ಕೆ ಯೋಚನಾ ಲಹರಿಗಳು ತಲೆಯನ್ನು ಕೊರೆದವು..ಈ ಬದುಕು ಹೀಗ್ಯಾಕೆ?
ಆ ಪುಟ್ಟ ಮಗು..ಇನ್ನೂ ಯುಕೆಜಿ..ಬಾಯಿ ಅಗಲಿಸಿ ನಗೋಕೆ ಬರುತ್ತೆ..ನಿತ್ಯ ಬಂದು ಬೆಳ್ಳಂಬೆಳಿಗ್ಗೆನೇ ಬಂದು ಊಟ ಆಯ್ತಾ? ಎಂದು ಕೇಳಿದಾಗ ಎತ್ತಿ ಮುದ್ದು ಮಾಡಿಬಿಡ್ತೀನಿ..ಅದು ಮತ್ತು ಆರನೆಯ ಕ್ಲಾಸಿನ ಹುಡುಗಿ ಬಂದು ಅಕ್ಕಾ ನಿಂಗೆ ತೊಂದ್ರೆ ಆಯ್ತಾ? ಎಂದಾಗ ಕರುಳು ಚುರ್ರೆಂದಿತ್ತು. ದಿಟ್ಟಿಸಿ ನೋಡುತ್ತಿದ್ದ ಕಣ್ಣುಗಳು, ಕಣ್ಣಲ್ಲಿನ ಹೆದರಿಕೆ, ನಮ್ಮಪ್ಪ-ಅಮ್ಮನ ಜಗಳ ಹೊರಗಿನವರಿಗೆ ಗೊತ್ತಾಯ್ತು ಎಂದಾಗ ಉಂಟಾಗುವ ಮುಜುಗರ ಎಲ್ಲಾವೂ ಆ ಪುಟ್ಟ ಮಕ್ಕಳ ಕಂಗಳಲ್ಲಿ ಸ್ಪಷ್ಟವಾಗುತ್ತಿತ್ತು. ನಿಜವಾಗಲೂ ಆ ಮಕ್ಕಳ ಮುಖ ನೋಡದಾಗ ನನಗರಿವಿಲ್ಲದಂತೆ ಕಂಗಳು ಒದ್ದೆಯಾಗಿದ್ದವು.
ಮುಗ್ಧ, ಪ್ರಾಮಾಣಿಕತೆಯ ಪ್ರತೀಕದಂತಿದ್ದ ಆ ಮುದ್ದು ಕಂದಮ್ಮಗಳ ಜೊತೆ ನಾವೆಷ್ಟು ಸಣ್ಣವರಾಗಿ ವರ್ತಿಸ್ತೀವಿ. ಭವಿಷ್ಯದ ನಗುವಾಗಬೇಕಿದ್ದ ಮಕ್ಕಳ ಬದುಕಿನಲ್ಲಿ ನಗೆಬೆಳದಿಂಗಳು ಕಂಡೀತೇ? ಯಾಕೋ ಮನಸ್ಸಿಗೆ ತೀರ ನೋವಾಯಿತು.
Wednesday, May 27, 2009
Subscribe to:
Post Comments (Atom)
13 comments:
ತಮ್ಮ ಬದುಕೆ೦ಬ ನಿತ್ಯಸ೦ತೆಯ ಜಗಳ,ಕದನ, ಬಯ್ದಾಟಗಳು ಮಕ್ಕಳ ಮೇಲೆ೦ಥ ಪರಿಣಾಮ ಬೀರುತ್ತವೆ ಅನ್ನೋದನ್ನ ಅರ್ಥ ಮಾಡಿಕೊಳ್ಳದ ಪೋಷಕರು ಅದೆಷ್ಟೋ ಮ೦ದಿ ಇದ್ದಾರೆ. ಹೀಗೆ ಮಕ್ಕಳ ಇರುವಿಕೆಯ ನೆಪದಲ್ಲಿ ಜಗಳ ಮಾಡುವ ಉತ್ಕಟ ಮನಸ್ಸಿದ್ದರೂ ಅದುಮಿಟ್ಟು ಬಾಳುವ ಎಷ್ಟೋ ಕುಟು೦ಬಗಳಿವೆ. ಪುಟ್ಟ ಲೇಖನ ಮನಸ್ಸಿಗೆ ನಾಟಿತು.
ಚಿತ್ರಾ,
ಮಕ್ಕಳೊಂದಿಗೆ ಮಕ್ಕಳಾಗುವುದೆಂದರೆ ಅದರ ಆನಂದವೇ ಬೇರೆ. ತನ್ನ ಮನೆಯ ಅಪ್ಪ ಅಮ್ಮನ ಜಗಳದ ಜೊತೆಗೆ ಬೇರೆಯವರಿಗೆ ಅದರಿಂದ ತೊಂದರೆಯಾಗುತ್ತದೆ ಅಂತ ಕಾಳಜಿ ತೋರುವ, ಆದರೆ ಅವರೇನು ಮಾಡಲಾಗದೆ ಆಸಹಾಯಕತೆಯಿಂದಿರುವ ಮಕ್ಕಳು ಮುಂದೆ ಎಲ್ಲವನ್ನು ಅರಿತವರಾಗುತ್ತಾರೆ. ಜೀವನದಲ್ಲಿ ಮುಂದೆ ಬರುತ್ತಾರೆ...ಅವರಿಗೆ ನಿನ್ನ ಪ್ರೀತಿ ತೋರಿಸು..ಹೆಚ್ಚು ಹೊತ್ತು ಸಮಯವನ್ನು ಅವರ ಜೊತೆ ಇದ್ದುಬಿಡು. ಆಗ ಎಲ್ಲಾ ಮಕ್ಕಳ ಸಾಮ್ರಾಜ್ಯ[ನೀನು ಸೇರಿದಂತೆ]ಆಗಿಬಿಡುತ್ತೇ...
ಧನ್ಯವಾದಗಳು
ಚಿತ್ರಾ
ನಿನ್ನ ಬರಹ ಓದ್ತಾ ಓದ್ತಾ ನಾನು
ಅರ್ಧಕ್ಕೆ ನಿಲ್ಲಿಸಿಬಿಟ್ಟು ನೀನು
ವಿವರಿಸಿದ ಆ ಘಟನೆಯನ್ನು ಕಲ್ಪಿಸಿಕೊಂಡು
“ಆ ಕ್ಷಣದಲ್ಲಿ ನನಗೆ ಆ ಮಕ್ಕಳ ಮನಸಿನ ತುಮಲಗಳು
ಅಥವಾ ಅವರ ಮುಗ್ಧತೆಯೋ ಒಂದು ತಿಳಿಯದಾಯಿತು.”
ಆದರೆ ಅಂಥ ಮೃದು ಮನಸಿನ ಮಕ್ಕಳನ್ನ ಹೆತ್ತ ಆ ತಂದೆ ತಾಯಿಗಳಿಗೆ
ಅದ್ಯಾವ ಕಾರಣವಿತ್ತೋ ಜಗಳವಾಡಲು.
ಏಕೋ ಏನೋ ಮನಸ್ಸಿಗೆ ಒಂಥರಾ !
ನೀನು ಹೇಗೆ ಈ ಸೂಕ್ಷ್ಮಗಳನ್ನ ಗಮನಿಸ್ತಿಯಾ ಮಾರಾಯ್ತಿ
ಇಂತಿ
ಲಕ್ಷ್ಮಣ
ಚಿತ್ರಾ
ನಿನ್ನ ಬರಹ ಓದ್ತಾ ಓದ್ತಾ ನಾನು
ಅರ್ಧಕ್ಕೆ ನಿಲ್ಲಿಸಿಬಿಟ್ಟು ನೀನು
ವಿವರಿಸಿದ ಆ ಘಟನೆಯನ್ನು ಕಲ್ಪಿಸಿಕೊಂಡು
“ಆ ಕ್ಷಣದಲ್ಲಿ ನನಗೆ ಆ ಮಕ್ಕಳ ಮನಸಿನ ತುಮಲಗಳು
ಅಥವಾ ಅವರ ಮುಗ್ಧತೆಯೋ ಒಂದು ತಿಳಿಯದಾಯಿತು.”
ಆದರೆ ಅಂಥ ಮೃದು ಮನಸಿನ ಮಕ್ಕಳನ್ನ ಹೆತ್ತ ಆ ತಂದೆ ತಾಯಿಗಳಿಗೆ
ಅದ್ಯಾವ ಕಾರಣವಿತ್ತೋ ಜಗಳವಾಡಲು.
ಏಕೋ ಏನೋ ಮನಸ್ಸಿಗೆ ಒಂಥರಾ !
ನೀನು ಹೇಗೆ ಈ ಸೂಕ್ಷ್ಮಗಳನ್ನ ಗಮನಿಸ್ತಿಯಾ ಮಾರಾಯ್ತಿ
ಇಂತಿ
ಲಕ್ಷ್ಮಣ
Uffffffffff.... chikka makkalu.. nishkalmasha manassu.. ashte sensitive manassu..
ಮಕ್ಕಳ ಮುಂದೆ ದೊಡ್ಡವರು ಹೇಗೆ ಸಣ್ಣವರಾಗುತ್ತಾರೆ ಎನ್ನುವುದನ್ನು ಮಾರ್ಮಿಕವಾಗಿ ಬರೆದಿದ್ದೀರಿ. ಚೆನ್ನಾಗಿದೆ.
ಏನ್ ಪ್ರತಿಕ್ರಿಯೆ ಬರಿಬೇಕೋ ಗೊತ್ತಾಗ್ತಿಲ್ಲ.. :(
ಚಿತ್ರಾ,
ಇಬ್ಬರು ವ್ಯಕ್ತಿಗಳು ಜೊತೆಗಿರುವಾಗ ಅವರಲ್ಲಿ equation problem ಬರುತ್ತೆ. ಜೋರಾಗಿದ್ದವರು ಮೇಲೆ, ಮತ್ತೊಬ್ಬರು ಕೆಳಗೆ ಉಳಿಯಬೇಕು. ಇಬ್ಬರೂ ಅಷ್ಟೇ ಜೋರಾಗಿದ್ದರೆ ಅಥವಾ ಅಷ್ಟೇ weak ಆಗಿದ್ದರೆ, ಈ ಥರಾ
ನಿತ್ಯದ ಜಗಳಗಳು ಆಗುತ್ತಲೇ ಇರುತ್ತವೆ!
ಆ ಮಕ್ಕಳ ಸೂಕ್ಷ್ಮ ಮನಸ್ಸು ತು೦ಬಾ ಇಷ್ಟವಾಯಿತು ಚಿತ್ರಾ ಅವರೇ...
ಚಿತ್ರಾ..
ಅಪ್ಪ ಅಮ್ಮನ ಜಗಳ ನೋಡಿ ಆ ಪುಟ್ಟ ಮಗುವಿನ ಮನಸ್ಸಿನ ಮೇಲೆ ಆಗುವ ಪರಿಣಾಮ ನೆನೆದು ನೋವಾಯ್ತು. ನಿಮ್ಮ ಈ ಲೇಖನ ಮನಸ್ಸಿಗೆ ನಾಟುವಂತಿದೆ...
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. 'ಮಗು ನಾಳೆಯ ನಗು' ಅಂತಾರೆ, ಆದರೆ ಎಲ್ಲೋ ಒಂದೆಡೆ ತಂದೆ-ತಾಯಿಯ ಇಂಥ ವರ್ತನೆ ಅರಳೋ ಮೊಗ್ಗನ್ನು ಚಿವುಟಿದ ಹಾಗೆ ಅನಿಸುತ್ತೆ ಅಲ್ವಾ? ಮುಂದಿನ ಬರಹದಲ್ಲಿ ಮತ್ತೆ ಭೇಟಿಯಾಗುವೆ. ಪ್ರೋತ್ಸಾಹ ಸದಾ ಎನಗಿರಲಿ.
-ಚಿತ್ರಾ
ಸಣ್ಣವರ ದೊಡ್ಡತನ ಮತ್ತು ದೊಡ್ಡವರ ಸಣ್ಣತನಗಳ ನಡುವೆಯೇ ಬದುಕಿನ ಗಾಲಿಗಳು ಸಾಗುತ್ತವೆ ಅಲ್ವಾ ಚಿತ್ರಾ ?
ಶಮಾಕ್ಕ...ಥ್ಯಾಂಕ್ಯೂ. ನೀವಂದಿದ್ದು ನಿಜ.
-ಚಿತ್ರಾ
Post a Comment