
ಈಗಲೂ ನೆನಪಾಗುವವನು ಅವನೇ.
ನನ್ನನ್ನು ಅಕ್ಕರೆಯಿಂದ ಅಕ್ಕಾ ಎನ್ನೋನು. ಒಡಹುಟ್ಟಿಲ್ಲಾಂದ್ರೂ ಒಡನಾಡಿ ಆದೋನು. ಬೆಂಗಳೂರೆಂಬ ಬೆಂಗಾಡಿನಲ್ಲಿ ಒಬ್ಬಂಟಿಯಾಗಿ ಅಲೆದಾಗ ನನಗೆ ಆಸರೆಯಾದೋನು, ಕಳೆದ ಆರು ವರುಷಗಳಿಂದ ಜೊತೆ ಜೊತೆಗೆ ಹೆಜ್ಜೆ ಹಾಕಿ, ನನ್ನೆಲ್ಲಾ ಭಾವಗಳಿಗೆ ಜೀವ ತುಂಬಿದೋನು, ಬದುಕಿನಾಗಸದಲ್ಲಿ ಪುಟ್ಟ ನಕ್ಷತ್ರವಾದೋನು, ನನ್ನೆಲ್ಲಾ ಕೋಪ-ತಾಪಗಳ ಜೊತೆ ತಂಗಾಳಿಯಾಗಿ ಬೀಸಿದೋನು, ಸಣ್ಣ-ಸಣ್ಣ ವಿಷ್ಯಕ್ಕೆಲ್ಲಾ ತಲೆಕೆಡಿಸಿಕೊಂಡು ನಿತ್ಯ ನನ್ನ ಬಳಿ ಬೈಗುಳ ತಿಂದೋನು.
ನಾನು ಮದುವೆ ಆಗ್ತೀನಿ ಎಂದಾಗ ಖುಷಿಪಟ್ಟು ಪಾಯಸ ಮಾಡಿ ಸಿಹಿ ತಿನ್ನಿಸಿದೋನು, ಮದುವೆ ದಿನ ಬಾವನ ಕಾಲು ತೊಳೆಯೋದು ನಾನೇ ಎಂದು ಹಠ ಹಿಡಿದು ಕುಳಿತೋನು, ಮದುವೆಗೆ ಮುಂಚೆ ನನ್ನ ಜೊತೆಗಿದ್ದು ಅಕ್ಕಾ ನಿನ್ನ ಬಿಟ್ಟಿರೋಕೆ ಆಗೋಲ್ಲ ಎಂದು ಮಗುವಿನಂತೆ ಗಳ ಗಳನೆ ಅತ್ತೋನು, ಅತ್ತೆ ಮನೇಲಿ ಬೆಳಿಗೆದ್ದು ರಂಗೋಲಿ ಹಾಕಬೇಕೆಂದು ನನಗೆ ರಂಗೋಲಿ ಹಾಕೋಕೆ ಕಲಿಸಿಕೊಟ್ಟವನು, ನಾನು ಗಂಡನ ಮನೆಗೆ ಹೊರಟು ನಿಂತಾಗ ನನ್ನ ಕಣ್ಣೀರು ಒರೆಸಿ ನಕ್ಕು ನನ್ನ ಮರೀಬ್ಯಾಡ ಎಂದೋನು, ಈಗ್ಲೂ ಫೋನ್ ಮಾಡಿ ಅಕ್ಕಾ ನೀನಿಲ್ಲದ ಬೋರ್ ಎಂದು ಗೋಳಿಡುವವನು..
ಅವನು ನನ್ನ ಪ್ರೀತಿಯ ತಮ್ಮ, ಸಂದೇಶ. ನನ್ನ ಕೈಲಿ ಬೈಸಿಕೊಂಡ್ರೂ, ಉಗಿಸಿಕೊಂಡ್ರೂ, ಹೊಡೆಸಿಕೊಂಡ್ರೂ ಎಲ್ಲವನ್ನೂ ಸಹಿಸಿಕೊಳ್ತಾ ನನ್ನಳಗೊಂದು ನಗುವಿನ ಅಲೆ ಮೂಡಿಸಿದವನು ನನ್ನ ತಮ್ಮಾ...
ಏಪ್ರಿಲ್ 22 ಅವನ ಹುಟ್ಟುಹಬ್ಬ. ಶುಭವಾಗಲಿ ತಮ್ಮ ನಿನಗೆ...
-ಚಿತ್ರಾ ಸಂತೋಷ್
6 comments:
ಅಕ್ಕ-ತಮ್ಮರ ಅನುಭ೦ಧ ಕಡೆವರೆಗೆ ಅನ್ಯೋನ್ಯವಾಗಿರಲಿ. ನಮ್ಮ ಕಡೇಯಿ೦ದಲೂ ಸ೦ದೇಶನಿಗೆ ಹುತ್ತು ಹಬ್ಬದ ಹಾರ್ದಿಕ ಶುಭಾಶಯಗಳ ಸ೦ದೇಶ ತಿಳಿಸಿಬಿಡಿ.
Super......
ಇಂತಹ ತಮ್ಮನನ್ನು ಪಡೆಯೋದೂ ಒಂದು ಪುಣ್ಯವೇ. ಸಂದೇಶನ ಹುಟ್ಟುಹಬ್ಬಕ್ಕೆ ಶುಭಾಶಯಗಳು.
ತಮ್ಮನ ಹುಟ್ಟಿದ ಹಬ್ಬಕ್ಕ್ಕೆ ನಮ್ಮ ಶುಭಾಶಯಗಳು
nimma bhaandhavya kandu kushi aayithu :)
Happy birth day Sandhesh ge :)
Sandesh Happy Birthday to you
akkana akkareya jotege annandira shubhaashayagalu...
Post a Comment