Monday, November 16, 2009

ಭರವಸೆಯ ಭಾವಗಳು...!

ಎಷ್ಟು ಬಗೆದರೂ ತೀರದ
ತಾತ್ಸಾರ, ಸಿಟ್ಟು-ಸೆಡವುಗಳನ್ನು
ನಿರುಮ್ಮಳವಾಗಿ ಸ್ವಚ್ಛಗೊಳಿಸಿದ
ಪ್ರೀತಿಯ ಒದ್ದೆ ಕಣ್ಣುಗಳು,
ಎಷ್ಟೇ ಅಡಗಿಸಿಟ್ಟರೂ ಮತ್ತೆಲ್ಲೋ
ಗಕ್ಕನೆ ಎಲ್ಲವನ್ನೂ ಆವಾಹಿಸಿಕೊಂಡು
ಭಾವುಕತೆಗೊಡ್ಡಿ ಯಾವುದೋ
ಸಂಜೆಗಳಲ್ಲಿ ಆವರಿಸಿಬಿಡುವ ನಿನ್ನ ಮೌನ,
ಎಲ್ಲವನ್ನು ಮೌನದಲ್ಲಿ ಪಿಸುಗುಟ್ಟಿ...
ಮಗುವಿನಂತ ನಿಷ್ಕಲ್ಮಶ ನಗೆ ನಕ್ಕು,
ನನ್ನ ಕೆನೆಹಳದಿ ಹಾಳೆಯಲ್ಲಿ ಬರೆದ ಕವಿತೆ
ನೀ ಕೂಡಿಟ್ಟು ಹಸನುಗೊಳಿಸಿದ
ಭರವಸೆಯ ಭಾವಗಳೇ ...!!

14 comments:

PARAANJAPE K.N. said...

ಚಿತ್ರಾ - ಚೆನ್ನಾಗಿದೆ.
ಭರವಸೆಯ ಭಾವಗಳು ಹಸಿರಾಗಿರಲಿ, ಪ್ರೀತಿಯ ಒರತೆ ಬತ್ತದಿರಲಿ.

ಕ್ಷಣ... ಚಿಂತನೆ... said...

ಚಿತ್ರಾ ಅವರೆ,
ಕವನ ಭಾವುಕತೆಯಿಂದ ಕೂಡಿದ್ದು ಚೆನ್ನಾಗಿದೆ.

ಕನಸು said...

ಚಿತ್ರಾ
ಅವರೆ ನಿಮ್ಮ ಕವಿತೆ
ಚೆನ್ನಾಗಿದೆ ಆದರೂ ಕವಿತೆಗೆ ಇರಬೇಕಾದ
ಭಾವ ತೀವ್ರತೆ ಕಡಿಮೆಯಾಗಿದೆ

sunaath said...

ಭಲೇ ಚಿತ್ರಾ,
ಇದು ಸುಂದರವಾದ ಕವಿತೆ.

Guruprasad said...

ಚಿತ್ರ,,, ಹೇಗೆ ಇದ್ದೀಯ ..ತುಂಬ ದಿನ ಆಯಿತು, ನಿಮ್ಮ ಬ್ಲಾಗ್ ಕಡೆ ಬಂದು,, ಕವನ ತುಂಬ ಚೆನ್ನಾಗಿ ಇದೆ...

Unknown said...

ಭರವಸೆಯ ಭಾವಗಳು.........ಸದಾ ನಿಮ್ಮೊಂದಿಗಿರಲಿ..........ಭಾವಭವಗಳೆಲ್ಲವ ಮೀರಿ ಮೌನದಲ್ಲಡಗಿರುವ ಜೀವ ಚಿಲುಮೆ ಇನ್ನೆಂದಿಗೂ ಎಚ್ಚರ ಕಳೆದುಕೊೞದಿರಲಿ......

Unknown said...

ಭರವಸೆಯ ಭಾವಗಳು.........ಸದಾ ನಿಮ್ಮೊಂದಿಗಿರಲಿ..........ಭಾವಭವಗಳೆಲ್ಲವ ಮೀರಿ ಮೌನದಲ್ಲಡಗಿರುವ ಜೀವ ಚಿಲುಮೆ ಇನ್ನೆಂದಿಗೂ ಎಚ್ಚರ ಕಳೆದುಕೊೞದಿರಲಿ......

Dileep Hegde said...

ಚಿತ್ರಾ ಮೇಡಮ್
ಸುಂದರವಾದ ಕವನ..

ಹರೀಶ ಮಾಂಬಾಡಿ said...

ಏನೇನು ಭರವಸೆ ?
ಹಲವು ಒಳಾರ್ಥಗಳಿಂದ ಕೂಡಿದೆ! :)
ಚೆನ್ನಾಗಿದೆ. ಮತ್ತಷ್ಟು ಬರೆಯಿರಿ

ಆನಂದ said...

ಭಾವಗಳೇ ಪದಗಳಾಗಿ... ಕವಿತೆ ಚೆನ್ನಾಗಿ ಮೂಡಿದೆ

ಜಲನಯನ said...

ಅವನು ಕೊಟ್ಟ ಕೆನೆಹಳದಿ ಹಾಳೆಯಲಿ .....ಸಾಲುಗಳು...ನಿನ್ನ ಕವನಗಳು...ಈ ಪ್ರಯೋಗ ಇಷ್ಟವಾದವು ಚಿತ್ತು...ನೀನೂ ವೈನಾಗಿ ಕವನಿಸಬಲ್ಲೆ ಎಂದು ಹರಿಯಬಿಟ್ಟ ಸ್ಯಾಂಪಲ್ ವಾಹಿನಿ ಪಸಂದಾಗೇ ಹರಿದಿದೆ..ಮುಂದುವರೆಯಲಿ...ಹೂಂ...ಯಾಕೋ ಕಾವ್ಯಮಯವಾಗುತ್ತಿದೆ ಇತ್ತಿಚಿಗೆ ಜೀವನ ಅನಿಸುತ್ತಿದೆಯೇ..??!!!

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಮಾವ್ನದ ಶಕ್ತಿಯನ್ನು
ಅರಿಯೂದು ಮತ್ತು
ಕಟ್ಟಿ ಕೊಡುವದು
ಒಂದು ಸವಾಲು .
ಕವನ ಚೆನ್ನಾಗಿದೆ

shivu.k said...

ಕವನ ಚೆಂದವುಂಟು. ಆದ್ರೆ ನೀನು ಬರೆದಿದ್ದಲ್ಲ ಅಂತಲೂ ಗೊತ್ತುಂಟು...ನಿಜಹೇಳಿಬಿಡು...ಇಷ್ಟು ಚೆಂದದ ಪದ್ಯ ಗೀಜಿದ್ದು ಯಾರು?

Karthik Kamanna said...

ಗಟ್ಟಿ ಕವಿತೆ. ಚೆನ್ನಾಗಿದೆ.