Thursday, October 29, 2009

ಶರಧಿಗೆ ಎರಡು ವರ್ಷ. ನಿಮ್ಮ ಹಾರೈಕೆ ಹೀಗೇ ಇರಲಿ...


ಪ್ರೀತಿಯ ಸ್ನೇಹಿತರೇ,

ನಿಮಗಿದೋ ಪ್ರೀತಿಯ ನಮನಗಳು.

ನಿಮಗೊಂದು ಶುಭಸುದ್ದಿ ತಿಳಿಸಬೇಕಿದೆ. ನನಗೆ ಖುಷಿ, ಮನದಳೊಗೆ ಸಂಭ್ರಮ. ಏಕೆ ಗೊತ್ತೆ ನನ್ನ ಶರಧಿಗೆ ನವೆಂಬರ್ 3ನೇ ತಾರೀಕಿಗೆ ಭರ್ತಿ ಎರಡು ವರ್ಷ. ಶರಧಿ ಎರಡು ವರ್ಷ ನಿರಂತರವಾಗಿ ಹರಿದಿದ್ದಾಳೆ. ಇದೀಗ ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದಾಳೆ. ಅವಳು ದೊಡ್ಡವಳಾಗಿದ್ದಾಳೆ. ಜೊತೆಗೆ ನನ್ನನ್ನು ಸಾಕಷ್ಟು ಬೆಳೆಸಿದ್ದಾಳೆ. ಅಪಾರ ಸ್ನೇಹಿತರನ್ನು ನೀಡಿದ್ದಾಳೆ. ಬೆನ್ನು ತಟ್ಟೋರು, ತಪ್ಪಾಗ ತಿದ್ದಿ ತಿಡೋರು ಎಲ್ಲಾರೂ ಸಿಕ್ಕಿದ್ದಾರೆ. ನಂಗದು ಖುಷಿ. ಎರಡು ವರ್ಷದಲ್ಲಿ ಶರಧಿ ಕಂಡಿದ್ದು 146 ಬರಹಗಳನ್ನು. ಆಫೀಸ್ ಕೆಲಸ, ನಿತ್ಯ ಕಾಡುವ ಅನಗತ್ಯ ಕಿರಿಕಿರಿ ನಡುವೆ 200 ಬರಹಗಳನ್ನು ದಾಟುವ ಕನಸು ನನಸಾಗಲಿಲ್ಲ. ಆದರೂ ಬರಹಪ್ರೀತಿ ಕುಂದಿಲ್ಲ. ನನ್ನೊಳಗಿನ ಕನಸುಗಳು ಆಗಾಗ ಮೂರ್ತ ರೂಪ ಪಡೆಯುತ್ತಲೇ ಇವೆ.
ನನ್ನ ಪ್ರೋತ್ಸಾಹಿಸಿದ ಎಲ್ಲಾ ಸ್ನೇಹಿತರಿಗೂ ಕೃತಜ್ಞತೆಗಳು. ಇನ್ನು ಮುಂದೆಯೂ ನನ್ನ ಶರಧಿ ನಿರಂತರವಾಗಿ ಹರಿಯುತ್ತಾಳೆ ಅನ್ನೋ ಪುಟ್ಟ ನಂಬಿಕೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಇದ್ದೇ ಇರುತ್ತೆ ಅನ್ನೋ ಅಚಲ ನಂಬಿಕೆ ನನ್ನದು. ನಿಮ್ಮ ಪ್ರೋತ್ಸಾಹಕ್ಕೆ ನನ್ನ ಪ್ರೀತಿಯ ಸಲಾಂ.

ಈ ನಡುವೆ ಇನ್ನೊಂದು ಸತ್ಯ ಹೇಳಲೇಬೇಕಿದೆ. ಬಹುಶಃ ಬಹುತೇಕರಿಗೆ ಗೊತ್ತೇ ಇದೆ. ಕಳೆದ ಮಾರ್ಚ್ ನಲ್ಲಿ 'ಧರಿತ್ರಿ' ಅನ್ನೋ ಹೆಸರಲ್ಲಿ ಬ್ಲಾಗ್ ಆರಂಭಿಸಿದ್ದೆ. ಅದೇಕೆ ಅನಾಮಧೇಯ ಹೆಸರು? ಅಂದುಕೊಳ್ಳಬಹುದು. ವೃತ್ತಿಯಲ್ಲಿರುವಾಗ ಕೆಲವೊಂದು ನಿಯಮಗಳಿಗೆ ನಾವು ನಿಷ್ಠರಾಗಿರಬೇಕಾಗುತ್ತೆ. ಹಾಗಾಗಿ, ಅನಿವಾರ್ಯವಾಗಿ ಶರಧಿ ಜೊತೆಗೆ ಧರಿತ್ರಿಯನ್ನೂ ಆರಂಭಿಸಿದ್ದೆ. ಧರಿತ್ರಿನೂ 33 ಬರಹಗಳನ್ನು ಕಂಡಿದ್ದಾಳೆ. ಶರಧಿಯಂತೆ ಅವಳನ್ನೂ ಪ್ರೀತಿಯಿಂದ ಸಲಹುತ್ತಿದ್ದೇನೆ. ನೀವೆಲ್ಲರೂ ಪ್ರೋತ್ಸಾಹಿಸುತ್ತಲೇ ಇದ್ದೀರಿ. ಇದು ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ. ಇವತ್ತು ಈ ವಿಚಾರವನ್ನು ಅಧಿಕೃತವಾಗಿ ಹೇಳಿಬಿಟ್ಟಿದ್ದೀನಿ. ಇನ್ನು ಮುಂದೆನೂ ಧರಿತ್ರಿ ಧರಿತ್ರಿಯಾಗೇ, ಶರಧಿ ಶರಧಿಯಾಗೇ ಮುಂದುವರಿಯುತ್ತಿದ್ದಾರೆ. ಶರಧಿಗೆ ಅಣ್ಣ ರೋಹಿ ಚೆಂದದ ವಿನ್ಯಾಸ ಮಾಡಿಕೊಟ್ಟರೆ, ಧರಿತ್ರಿಗೆ ನನ್ನ ಸೀನಿಯರ್ ಹಾಗೂ ಗೆಳೆಯ ಲಕ್ಷ್ಮಿಕಾಂತ್ ವಿನ್ಯಾಸ ಮಾಡಿದ್ದಾರೆ. ಅವರಿಗೆ ತುಂಬಾ ಥ್ಯಾಂಕ್ಸ್. ಯಾರಿಗೂ ನೋವು ಕೊಡದ ರೀತಿಯಲ್ಲಿ ಭಾವನೆಗಳನ್ನು ಬಿಚ್ಚುತ್ತಾ ಹೋಗುವುದು ನನ್ನ ಇಷ್ಟ. ಎಲ್ಲೋ ನೋಡಿದ್ದು, ಹೃದಯವನ್ನು ತಟ್ಟಿದ್ದು ಎಲ್ಲವೂ ಬರಹಗಳಾಗಿವೆ. ಮುಂದೆಯೂ ಹೊಸ ಕೆಲಸದೊತ್ತಡ, ನಿತ್ಯ ಕಾಡುವ ಸಮಸ್ಯೆಗಳು, ಚಿಂತೆಗಳು ಅಥವಾ ಒಂಟಿಯಾಗಿದ್ದ ನಾನು ಜಂಟಿಯಾದರೂ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳನ್ನು ಅಷ್ಟೇ ಪ್ರೀತಿಯಿಂದ ಸಲಹುತ್ತೇನೆ. ನಿಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದುಕೊಂಡಿದ್ದೀನಿ. ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ನಾ ಋಣಿ.

ಪ್ರೀತಿಯಿಂದ,
ಚಿತ್ರಾ ಕರ್ಕೇರಾ

40 comments:

Santhosh Rao said...

ಚಿತ್ರ ಮೇಡಂ :)
ಅಭಿನಂದನೆಗಳು , ಆದಷ್ಟು ಬೇಕ ೨೦೦ ಬರಹ ದಾಟಲಿ, Quantity ಗಿಂತ quality ಮುಖ್ಯ ಆಗಿರಲಿ. ನಿಮ್ಮ ಬರಹಗಳಲ್ಲಿ ಆ ತರಹದ ಗುಣಮಟ್ಟ ಇದ್ದೆ ಇರುತ್ತೆ.

All the best.

PARAANJAPE K.N. said...

ತಂಗಿ ಚಿತ್ರ, ನಾನು ಬ್ಲಾಗಿಗನಾಗಲು ನಿನ್ನ ಬ್ಲಾಗೇ ನನಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದು. ನಿನ್ನ ಬರಹಗಳಲ್ಲಿರುವ ಆರ್ದ್ರತೆ ಮತ್ತು ಮಾನವೀಯ ಅನುಕ೦ಪ ಆಪ್ತವೆನಿಸುತ್ತವೆ. ನಿನ್ನ ಬ್ಲಾಗು ಎರಡು ವರ್ಷ ಪೂರೈಸಿದ್ದು ಅತ್ಯ೦ತ ಖುಷಿಯ ಸ೦ಗತಿ. ಎರಡು ಬ್ಲಾಗುಗಳ ಒಡತಿ ಚಿತ್ರಾ೦ಗದೆ - ಶುಭಮಸ್ತು, ಕಲ್ಯಾಣಮಸ್ತು

Prakash Shetty said...

ಶರಧಿಗೆ ಹುಟ್ಟು ಹಬ್ಬದ ಶುಭಾಷಯಗಳು.. ಬಾಲ್ಯ ಕಳೆದು ಪ್ರೌಡತೆಯತ್ತ ಶೀಘ್ರವಾಗಿ ಬೆಳೆಯಲಿ...

ಸಸ್ಪೆನ್ಸ್ ವಿಷಯವನ್ನು ಸ್ಪೇಟಕ ಸುದ್ದಿಯಾಗಿ ನಮಗೆ ನೀಡಿದ್ದೀರಿ ಧರಿತ್ರಿಗೂ ಉಜ್ವಲ ಭವಿಷ್ಯವನ್ನು ಕೋರುತ್ತೇವೆ..

ಮನಸ್ಸು ಮಾಡಿದರೆ 200 ರ ಗಡಿ ದಾಟಲು ಹೆಚ್ಚೇನೂ ದೂರವಿಲ್ಲ.. ದಿನವಿನ್ನೂ ಬಾಕಿಯಿದೆ...

ತೇಜಸ್ವಿನಿ ಹೆಗಡೆ said...

ಚಿತ್ರಾ,

ಪ್ರೀತಿಯ ಶರಧಿಯು ಸದಾ ಭಾವನೆಗಳ ತೆರೆಗಳಿಂದ ಉಕ್ಕೇರುತ್ತಿರಲೆಂದು ಹರೈಸುವೆ. ಶುಭವಾಗಲಿ.

ನನ್ ಮನೆ said...

ಅಭಿನಂದನೆಗಳು

sunaath said...

ಚಿತ್ರಾ,
ಶರಧಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವಳಿಗೆ ಹಾಗೂ ಅವಳ ತಂಗಿ ಧರಿತ್ರಿಗೆ ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ.

ಗಿರಿ said...

Dear Friend,

Congratulations Chitra for the successful completion of 2 years of Sharadi and thanks for the wonderful and Delicious articles, poems, stories given to us to have and to feel its in to the core, mean while.

It was a great work done by you and appreciate for the dedication.

Here by wish you a long live dreams will come true soon and have successful career as well as personal life.

God bless you Chitra.

Regards,
Giri

Sushrutha Dodderi said...

ಶುಭಾಶಯ ಕಣಮ್ಮಾ...

ಚಿತ್ರಾ ಸಂತೋಷ್ said...

@ಪ್ರೀತಿಯ ಸಂತೋಷ್..ನೀವು ಹೇಳಿದ್ದು ನಿಜ. ಧನ್ಯವಾದಗಳು.

@ಅಣ್ಣ ಪರಾಂಜಪೆ...ಅಯ್ಯೋ ನಾನೆಂಥ ಸ್ಫೂರ್ತಿ? ನಿಮ್ಮ ದೊಡ್ಡ ಮಾತಿಗೆ ನನ್ನ ನಮನ. ಬದುಕಿನ ಸುತ್ತ ಗಿರಕಿ ಹೊಡೆಯೋದೇ ನನ್ ಬರಹದ ಕೆಲಸ. ಇದು ಇಷ್ಟನೂ ಹೌದು.ನಿಮ್ಮ ಹಾರೈಕೆ ಎನ್ನ ಜೊತೆಗಿದ್ದರೆ ಶುಭಮಸ್ತು, ಕಲ್ಯಾಣಮಸ್ತು!! ಧನ್ಯವಾದ.

@ಪ್ರಕಾಶಣ್ಣ...ನಮಸ್ತೆ. ನಿಮಗೆ ಹಾರೈಕೆ ಸದಾ ಇರಲಿ. ದ್ವಿಶತಕ ಸದ್ಯದಲ್ಲಿಯೇ ದಾಟುತ್ತೇನೆ.ವಂದನೆಗಳು

@ಅಕ್ಕ ತೇಜಕ್ಕ..ನಿಮ್ಮ ಪ್ರೋತ್ಸಾಹ ಎನ್ನ ಬರಹಕ್ಕೆ ಟಾನಿಕ್.

@ನನ್ ಮನೆಗೂ ಧನ್ಯವಾದಗಳು

@ಸುನಾಥ್ ಅಂಕಲ್..ನಿಮ್ಮ ಆಶೀರ್ವಾದ ಸದಾ ಇರುತ್ತೆ ಅಲ್ವಾ? ಮತ್ತೆನು ಬೇಕು. ಅಕ್ಕ-ತಂಗಿ ಖುಷಿಯಾಗುತ್ತಾರೆ.

@ಗೆಳೆಯಾ ಗಿರಿ...
ಹಾರೈಕೆಗೆ ಧನ್ಯವಾದಗಳು. ಇದೇ ಪ್ರೋತ್ಸಾಹ ಪ್ರೀತಿ ಸದಾ ನಿಮ್ಮ ಕಡೆಯಿಂದ ನಿರೀಕ್ಷಿಸುವೆ.

-ಪ್ರೀತಿಯಿಂದ
ಚಿತ್ರಾ

ಸುಮ said...

ಶರಧಿಯ ಹುಟ್ಟುಹಬ್ಬದ ಶುಭಾಶಯಗಳು ಚಿತ್ರ. ನಿಮ್ಮ ಶರಧಿ ಸದಾ ಭಾವನೆಗಳ ಅಲೆಯಲ್ಲಿ ಉಕ್ಕೇರಲಿ.

ದಿನಕರ ಮೊಗೇರ said...

ಚಿತ್ರ ಮೇಡಂ,
ಎರಡು ವರ್ಷ ಪೂರೈಸಿದ್ದಕ್ಕೆ ಅಭನಂದನೆಗಳು.... ನಿಮ್ಮ ಲೇಖನಗಳೆಲ್ಲ ಉತ್ತಮವಾಗಿದೆ.... ಹೀಗೆ ನಿಮ್ಮ ಅಭಿಯಾನ ಐದು ವರ್ಷ ಮುಂದುವರೆಯಲಿ, ನಂತರ ಇನ್ನೊಂದು ಐದು...... ಇನ್ನೊಂದು ಐದು..... ಇನ್ನೊಂದು ಐದು... .. ಹೀಗೆ ಮುಂದುವರಿಯಲಿ.....

ಜಲನಯನ said...

ಪ್ರೀತಿಯ ಚಿತ್ತುಗೆ,
ನಿನ್ನ ಶರಧಿಗೆ ‘ಎರಡು‘ ತುಂಬಿದ ಸಂದರ್ಭದಲ್ಲಿ ಧರಿತ್ರಿ -ಶರಧಿ ಇಬ್ಬರನ್ನು ಸಲಹುತ್ತಿರುವ ಚಿತ್ತುಗೆ ಏನು ಹೇಳಲಿ...ಮೂವರಿಗೂ ಶುಭವಾಗಲಿ
ಧರಿತ್ರಿ ಹಿರಿಯಕ್ಕನಿಗೆ ಶುಭಕೋರಿ ಅಕ್ಕನಂತೆ ಧರಿತ್ರಿಯೂ ಶ್ರೇಯಕಾಣಲಿ (ನಾನು ಸ್ವಲ್ಪ ಪಕ್ಷಪಾತಿ..ನನಗೆ ಧರಿತ್ರಿ ಮೊದಲು ಪರಿಚಯ ಆಗಿದ್ದು ಅದಕ್ಕೆ...ಹಹಹ)...ನಿನ್ನಣ್ಣ-ಜಲನಯನ

ಚಿತ್ರಾ ಸಂತೋಷ್ said...

@ಸುಶ್ರುತಣ್ಣ..ಥ್ಯಾಂಕ್ಯೂ..ಬರ್ತಾ ಇರು, ವಿಶ್ ಮಾಡ್ತಾ ಇರು. ಆಯಿತಾ?

@ಸುಮ...ಧನ್ಯವಾದಗಳು. ಪ್ರೀತಿ, ಪ್ರೋತ್ಸಾಹ ಹೀಗೇ ಇರಲಿ

@ದಿನಕರ ಸರ್..ಥ್ಯಾಂಕ್ಯೂ. ಸದಾ ಬೆನ್ನುತಟ್ಟಿ..ಶರಧಿ ಹರೀತಾನೇ ಇರ್ತಾಳೆ

-ಪ್ರೀತಿಯಿಂದ,
ಚಿತ್ರಾ

ಚಿತ್ರಾ ಸಂತೋಷ್ said...

@ಅಣ್ಣ ಜಲನಯನ
ನಿಮ್ಮ ಪ್ರೀತಿಯ ಹಾರೈಕೆಗೆ ನಾ ಋಣಿ. ಆಯ್ತು ನಿಮ್ಮ ಪಕ್ಷಪಾತಿಯನ್ನು ಸಹಿಸಿಕೊಳ್ತೀನಿ. ಎಷ್ಟಾದ್ರೂ ಅಣ್ಣ ಹೇಳಿದ ಮಾತಲ್ಲವೇ? ಬರ್ತಾ ಇರಿ ಅಣ್ಣ
-ತಂಗಿ
ಚಿತ್ರಾ

ದಿವ್ಯಾ ಮಲ್ಯ ಕಾಮತ್ said...

ಶುಭ ಹಾರೈಕೆಗಳು ಚಿತ್ರಾ... ಬಯಸಿದ್ದೆಲ್ಲಾ ಸಾಧಿಸುವಂತಾಗಲಿ, ಸಿಗುವಂತಾಗಲಿ....

shridhar said...

ಚಿತ್ರಾ ಅವರೆ,
ನಿಮ್ಮ ಶರಧಿಗೆ ಹುಟ್ಟು ಹಬ್ಬದ ಶುಭಾಶಯಗಳು. ಧರಿತ್ರಿ ಕೂಡ ನಿಮ್ಮದೆ ಅಂತ ತಿಳಿದು ಬಹಳ ಸಂತೋಷವಾಯಿತು.
ಇನ್ನು ಹೆಚ್ಚಿನ ಬರಹಗಳ ನೀರಿಕ್ಷೆಯಲ್ಲಿ .......

ಶ್ರೀಧರ ಭಟ್ಟ.
http://spbhat-haratamane.blogspot.com

ಶಿವಪ್ರಕಾಶ್ said...

ಚಿತ್ರಾ ಅವರೇ,
ಶರಧಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು....
ಅಂತು ಇವತ್ತು ನಮಗೆ ' ಧರಿತ್ರಿ' ನಿಮ್ಮವಳೇ ಎಂದು ಟಾಪ್ ಸಿಕ್ರೆಟ್ ಹೇಳಿದ್ದಿರಿ... ಹ್ಹಾ ಹ್ಹಾ ಹ್ಹಾ
ಶರಧಿ ಹಾಗು ಧರಿತ್ರಿ ಹೀಗೆ ಚನ್ನಾಗಿ ಮೂಡಿಬರಲಿ..
ಅಭಿನಂದನೆಗಳು

ಹೆಸರು ರಾಜೇಶ್, said...

Dhanyavadagalu.
rajesh

ಚಿತ್ರಾ said...

ಚಿತ್ರಾ,
"ಶರಧಿ" ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.!
ನಿಮ್ಮ ಬರಹಗಳು ಬಹು ಆತ್ಮೀಯವಾಗಿರುತ್ತವೆ. ಎಲ್ಲಿಯೋ ಒಂದು ಕಡೆ ನಮ್ಮದೇ ಜೀವನದಲ್ಲಿ ನಡೆದ ಘಟನೆಯಂತೆನಿಸುತ್ತವೆ . ಇಂಥಾ ಸುಂದರ , ಮನ ಮುಟ್ಟುವ ಶೈಲಿಯ ಬರಹಗಳು ಹೀಗೆ ಮುಂದುವರಿಯಲಿ ,
ಶರಧಿ ಹಾಗೂ ಧರಿತ್ರಿ ಗಳಿಬ್ಬರೂ ಮೈತುಂಬಿ ನಳನಳಿಸಲಿ ಎಂದು ಹಾರೈಸುವೆ !

Guruprasad said...

ಶುಭ ಹಾರೈಕೆಗಳು ಧರಿತ್ರಿ...

ಕನಸು said...

ಹಾಯ್ ,
ಕಂಗ್ರಾಟ್ಸ್
ಕಿಪ್ ಇಟ್ ನೈಸ್ ಆರ್ಟಿಕಲ್ಸ್

ಅಂತರ್ವಾಣಿ said...

chitraa,

shubhaashayagaLu. mattaShTu oLLe lEkhanagaLu barali.

"barahagaLu" annuva badalu "alegaLu" andiddare.. "Sharadhi"ge sookthavaagiruttittu :)

Laxman (ಲಕ್ಷ್ಮಣ ಬಿರಾದಾರ) said...

ಚಿತ್ರಾ
ಅಭಿನಂದನೆಗಳು. ನಿಮ್ಮ ಬರಹಗಳು ಏಕತಾನತೆಯಿರದ ಹಾಗು ವಿಭಿನ್ನ ವಿಷಯಗಳನ್ನೊಳಂಡಿರುತ್ತವೆ. ಬೇರೆಯವರಿಗೂ ಪ್ರೋತ್ಸಾಹಿಸುತ್ತಾ ನೀವು ಬರೆಯುತ್ತಾ ಈ ಬ್ಲಾಗ ಲೋಕವನ್ನು ವಿಸ್ತಾರಗೊಳಿಸುತ್ತಿರುವ ನಿಮಗೆ ಶುಭ ಕೊರುವ
=ಲಕ್ಷ್ಮಣ

ಮಲ್ಲಿಕಾರ್ಜುನ.ಡಿ.ಜಿ. said...

ಚಿತ್ರಾ(ಶರಧಿ),
Happy Birthday. ಇನ್ನಷ್ಟು ಮತ್ತಷ್ಟು ಸುಂದರ ಬರಹಗಳು ಬರಲಿ. ಸವಿ ಹಾರೈಕೆಗಳು.

Rajesh Manjunath - ರಾಜೇಶ್ ಮಂಜುನಾಥ್ said...

ಚಿತ್ರಾ,
ಒಳ್ಳೆದಾಗಲಿ ಮಹರಾಯ್ತಿ... ಆಲ್ ದಿ ಬೆಸ್ಟು....

ಚಿತ್ರಾ ಸಂತೋಷ್ said...

@ಪ್ರೀತಿಯ ದಿವ್ಯಾ...
ವಂದನೆಗಳು ಕಣೇ. ಬರ್ತಾ ಇರು.

@ಶ್ರೀಧರ್ ಹಾಗೂ ಶಿವಪ್ರಕಾಶ್..ನಿಮಗೂ ಧನ್ಯವಾದ. ಪ್ರೋತ್ಸಾಹ ಸದಾ ಇರಲಿ

@ರಾಜೇಶ್, ರಾಜೇಶ್ ಮಂಜುನಾಥ್, ಕನಸು, ಗುರು, ಲಕ್ಷ್ಮಣ್, ಮಲ್ಲಿಯಣ್ಣ, ಜಯಶಂಕರ್, ..ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ. ಧನ್ಯವಾದಗಳು.
@ ಚಿತ್ರಾಕ್ಕ..ಧನ್ಯವಾದಗಳು. ಬರ್ತಾ ಇರಿ. ಬೆನ್ನುತಟ್ಟುತ್ತಾ ಇರಿ.

-ಪ್ರೀತಿಯಿಂದ,
ಚಿತ್ರಾ

Basavaraj.S.Pushpakanda said...

CONGRATULATIONS....
its been wonderful to know that a blog has entertained,refreshed,provoked,eyeopener ,...for these two years.may this continue with a huge enthusiasm for more years and gain its reader with much qualities they expect..
congratulations once more ..
we r with u ..
Basavaraj.S.Pushpakanda

ಬಿಸಿಲ ಹನಿ said...

congratulations! keep it up.

Ittigecement said...

ಅಭಿನಂದನೆಗಳು ಶರಧಿ...

ಶರಧಿಗೆ ಬಂದು... ನಕ್ಕಿದ್ದೇವೆ..
ಸಂತೋಷಿಸಿದ್ದೇವೆ...
ನಿಮ್ಮ ಶರಧಿಯ ಭಾವಗಳಲ್ಲಿ ನಾವೂ ಕೂಡ ತೇಲೆ ಹೋಗಿದ್ದೇವೆ..

ನಿಮ್ಮ ಚಂದದ ಬರಹಗಳಿಗೆ ತಲೆದೂಗಿದ್ದೇವೆ...

ಹುಟ್ಟುಹಬ್ಬದ ಶುಭಾಶಯಗಳು...

ದೀಪಸ್ಮಿತಾ said...

ಎರಡು ವರ್ಷ ಮುಗಿಸಿ ಮೂರನೆ ವರ್ಷಕ್ಕೆ ಅಂಬೆಗಾಲಿಡುತ್ತಿರುವ ಶರಧಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಷಯ. ಇನ್ನೂ ಅನೇಕ ಉತ್ತಮ ಲೇಖನ ಶರಧಿಯಲ್ಲಿ ಬರಲಿ ಎಂದು ಹಾರೈಸುತ್ತೇನೆ

Damodar said...

ಚಿತ್ರಾವರೇ,
ಶರಧಿಗೆ ಹುಟ್ಟುಹಬ್ಬದ ಶುಭಾಶಯಗಳು!!
ಇನ್ನು ಒಳ್ಳೆಯ ಮುದ್ದು ಮುದ್ದಾದ ಲೇಖನಗಳೊಂದಿಗೆ ಶರಧಿ ಬಲು ದೂರ ಹರಿಯಲಿ.
ಒಮ್ಮೊಮ್ಮೆ ನಗಿಸುತ ಇನ್ನೊಮ್ಮೆ ಕಣ್ಣೀರ ಹರಿಸುತ ನಮ್ಮೆಲ್ಲರನ್ನ ಭಾವನೆಗಳ ಲೋಕದಲ್ಲಿ ತೆಲಾಡಿಸಲಿ
ಧರಿತ್ರಿ ಯಲ್ಲೂ ನೀವೇ ಬರಿಯುತ್ತೀರ ಅಂತ ಹೇಳಿ ದೊಡ್ಡ ಶಾಕ್ ಕೊಟ್ಟಿದ್ದಿರಾ!!
ಹೀಗೆ ಬರೆಯುತ್ತಿರಿ.......ಎಲ್ಲರನ್ನು ಪ್ರೇರೇಪಿಸಿ..

Damodar said...

ಚಿತ್ರಾವರೇ,
ಶರಧಿಗೆ ಹುಟ್ಟುಹಬ್ಬದ ಶುಭಾಶಯಗಳು!!
ಇನ್ನು ಒಳ್ಳೆಯ ಮುದ್ದು ಮುದ್ದಾದ ಲೇಖನಗಳೊಂದಿಗೆ ಶರಧಿ ಬಲು ದೂರ ಹರಿಯಲಿ.
ಒಮ್ಮೊಮ್ಮೆ ನಗಿಸುತ ಇನ್ನೊಮ್ಮೆ ಕಣ್ಣೀರ ಹರಿಸುತ ನಮ್ಮೆಲ್ಲರನ್ನ ಭಾವನೆಗಳ ಲೋಕದಲ್ಲಿ ತೆಲಾಡಿಸಲಿ
ಧರಿತ್ರಿ ಯಲ್ಲೂ ನೀವೇ ಬರಿಯುತ್ತೀರ ಅಂತ ಹೇಳಿ ದೊಡ್ಡ ಶಾಕ್ ಕೊಟ್ಟಿದ್ದಿರಾ!!
ಹೀಗೆ ಬರೆಯುತ್ತಿರಿ.......ಎಲ್ಲರನ್ನು ಪ್ರೇರೇಪಿಸಿ..

ಚಿತ್ರಾ ಸಂತೋಷ್ said...

ಬಸವರಾಜ್, ಉದಯ್ ಸರ್, ದಾಮು, ಪ್ರಕಾಶ್ ಅಂಕಲ್, ದೀಪಸ್ಮಿತಾ....
ಎಲ್ಲರಿಗೂ ನನ್ನ ಕೃತಜ್ಞತೆಗಳು. ನಿಮ್ಮ ಪ್ರೋತ್ಸಾಹ, ಬರಹ ಪ್ರೀತಿ ಬತ್ತದಿರಲಿ. ನಿತ್ಯ ನನ್ನ ಅಕ್ಷರ ವಿಹಾರದಲ್ಲಿ ನಿಮ್ಮ ಸಾಥ್ ಇರಬೇಕೆಂಬುದು ಆಶಿಸುತ್ತೇನೆ.
ವಂದನೆಗಳೊಂದಿಗೆ
ಚಿತ್ರಾ

Mohan Hegade said...

hai chitraji,

Sorry for delay wishes.

Nimma sharadiya huttu habbakke tadavaagiyadaru shubakamane heluttene.
150ra gadiyalliddu 200rannu dati 500rannu miri 1000rakke eralendu haraisuttene.

shivu.k said...

ಚಿತ್ರಾ

ಶರಧಿಗೆ ಹುಟ್ಟುಹಬ್ಬದ ಶುಭಾಶಯಗಳು!!
ಇನ್ನು ಒಳ್ಳೆಯ ಇನ್ನೂ ಸೊಗಸಾದ ಲೇಖನಗಳೊಂದಿಗೆ ಶರಧಿ ಪಯಣಿಸಲಿ..

ಗೌತಮ್ ಹೆಗಡೆ said...

belated happy birthday:)

ಕ್ಷಣ... ಚಿಂತನೆ... said...

ಚಿತ್ರಾ ಅವರೆ, ಅಭಿನಂದನೆಗಳು.

ಬರಹಗಳಲ್ಲಿನ ಒಂದೆರಡು ಲೇಖನಗಳನ್ನು ಮಾತ್ರ ನಾನು ಓದಿದ್ದೆ. ಬರಹಗಳು ಸರಳವಾಗಿದ್ದು ಓದುಗರಿಗೆ ಒಂದು ರೀತಿಯ ಆಪ್ತತೆ ತರುವಲ್ಲಿನ ನಿಮ್ಮ ಶ್ರಮ ಸಾರ್ಥಕ.

ಈ-ಶರಧಿಯ ತುಂಬೆಲ್ಲಾ ಹೊಳೆಹೊಳೆವ ಬರಹಗಳೆಂಬ ಮುತ್ತುರತ್ನಗಳು ಮತ್ತಷ್ಟು ಪ್ರಕಾಶಿಸಲಿ.

Anonymous said...

ಶುಭಾಶಯಗಳು...

ವನಿತಾ / Vanitha said...

ನಿಮ್ಮ ಒಳ್ಳೆಯ ಲೇಖನಗಳ ಶರಧಿ ಮತ್ತು ಧರಿತ್ರಿಯ ಪಯಣಕ್ಕೆ ಶುಭ ಹಾರೈಕೆಗಳು..

Anveshi said...

ಹುಟ್ಟುಹಬ್ಬಕ್ಕೆ ತಡವಾಗಿ ಶುಭಾಶಯಗಳು... ಚೆನ್ನಾಗಿ ಬರೀತೀರಿ ಮತ್ತು ಬರೀತಿರಿ...