Tuesday, October 27, 2009

ಮೌನದಲ್ಲೇ ಮಾತಾಡ್ತೀನಿ, ಕವನ ಬರಿ...!

ಯಾಕೋ ಪತ್ರ ಬರೀಬೇಕು ಅನಿಸುತ್ತೆ ಕಣೋ..ಅದು ನಿನ್ನ ಪತ್ರ ನೋಡಿದ ಮೇಲೆ. ಇದೇ ಮೊದಲ ಪತ್ರ, ಬಹುಶಃ ಇದೇ ಕೊನೆಯ ಪತ್ರ ಆಗಿರಬಹುದು. ತುಂಬಾ ಜನ ಹೇಳ್ತಾರೆ ಪ್ರೀತಿಯ ಪತ್ರ ತುಂಬಾ ಮಾತಾಡುತ್ತೆ ಅಂತ. ಹೌದು ಕೂಡ, ನಿನ್ನ ಮಾತುಗಳಿಂದ ನೀ ಬರೆದ ಪತ್ರಾನೇ ಇಷ್ಟ ಆಯಿತು. ಆದರೆ, ನಿನ್ ಥರ ಚೆನ್ನಾಗಿ ಪತ್ರ ಬರೆಯೋಕೆ, ನಿನ್ ಥರ ಭಾವನೆಗಳನ್ನು ಪದಗಳಲ್ಲಿ ಪೋಣಿಸೋಕೆ, ನಿನ್ ಥರ ಸುಂದರ ಭಾವಗೀತೆಗಳನ್ನು ಬರೆಯೋಕೆ, ನಿನ್ ಥರ ಪ್ರಕೃತಿ ಮಧ್ಯೆ ಕುಳಿತು ಕತೆ-ಕವನ, ಲೇಖನ ಗೀಚೋಕೆ ಬರೊಲ್ಲ ಕಣೋ. ಅದಕ್ಕೆ ನೋಡು ನೀನು ಇಷ್ಟು ದಿನ ಬಚ್ಚಿಟ್ಟ ಪ್ರೀತಿ, ನೀ ಗೀಚಿದ ಕವನ, ನೀ ಮೂಡಿಸಿದ ಸುಂದರ ಕಲೆ..ಎಲ್ಲವನ್ನೂ ಮೌನವಾಗೇ ನೋಡುತ್ತಾ ಕಣ್ಣಲ್ಲೇ ಸವಿದೆ, ವಿನಃ ಅಕ್ಷರಗಳಲ್ಲಿ ಪೋಣಿಸಲು ಸಾಧ್ಯವಾಗಲಿಲ್ಲ. ಮಾತಿನಲ್ಲಿ ಹೇಳಲೂ ಆಗಲಿಲ್ಲ. ಬಹುಶಃ ನನ್ನ ಮೌನವನ್ನೂ ಅರ್ಥಮಾಡಿಕೊಳ್ಳೋ ಅಗಾಧ ಕಲೆಯನ್ನು ದೇವರು ನಿಂಗೆ ನೀಡಿದ್ದನಲ್ಲಾ ಅದಕ್ಕೆ ದೇವರಿಗೇ ಥ್ಯಾಂಕ್ಸ್ ಹೇಳಿದ್ದೀನಿ ಕಣೋ.

ಹೌದು, ನೀನಂದ್ರೆ ನಂಗಿಷ್ಟ, ಆದ್ರೆ ನಾ ಹೇಳಲ್ಲಿಲ್ಲ..ನೀನಿಷ್ಟ, ನಿನ್ನ ನಗು ಇಷ್ಟ, ನಿನ್ನ ಪ್ರೀತಿ ಇಷ್ಟ ಅಂತ! ನೀನೇ ಹೇಳಿಬಿಟ್ಟಿಯಲ್ಲಾ...ಅದು ನಂಗೆ ಖುಷಿ, ನಿನ್ನ ಧೈರ್ಯಕ್ಕೆ ನನ್ನ ಪುಟ್ಟ ಸಲಾಂ.

ಎಷ್ಟು ಕೆಟ್ಟದ್ದಾಗಿ ಪತ್ರ ಬರೆದಿದ್ದಾಳೆ ಅಂತ ಬೈಕೋಬೇಡ. ಮುಖ ಊದಿಸಿಕೋಬೇಡ. ನಿನ್ನ ಸುಂದರ ಮೂಗಿನ ಮೇಲೆ ಸಿಟ್ಟನ್ನು ನೋಡೋದು ನಂಗೆ ಇಷ್ಟವಿಲ್ಲ. ನಿನ್ನ ಸುಂದರ ಕಣ್ಣುಗಳ ದುರುಗುಟ್ಟುವಿಕೆಯನ್ನು, ಸಿಟ್ಟಿನಿಂದ ನೀನು ಬಡಬಡಿಸೋದನ್ನು ನನ್ನ ಕಣ್ಣಿಂದ ನೋಡಕ್ಕಾಗಲ್ಲ ಕಣೋ. ಅದಕ್ಕೆ ಯಾವತ್ತೂ ಸಿಟ್ ಮಾತ್ರ ಮಾಡಿಕೊಳ್ಳಬೇಡ.

ತುಂಬಾ ಹೇಳಬೇಕನಿಸುತ್ತೆ..ಆದರೆ ಬರೆಯೋಕ್ಕಾಗಲ್ಲ. ನಿನ್ನ ಥರ ನೀ ಬಿತ್ತಿದ ಬೀಜಗಳಿಗೆ ನಾ ರೈತ ಆಗ್ತೀನಿ ಅನ್ನೋಕೆ ಬರಲ್ಲ. ಜೀವನವಿಡೀ ನಿನಗೆ ಮೊಗೆದಷ್ಟು ಬತ್ತದ ಪ್ರೀತಿ ನೀಡ್ತೀನಿ. ನಿನ್ನ ಕನಸು, ನಿರೀಕ್ಷೆಗಳಿಗೆ ನೀರೆರೆದು ಪೋಷಿಸ್ತೀನಿ. ನನ್ನ ಹೃದಯ ತುಂಬಾನು ಕನಸುಗಳಿದೆ ಕಣೋ...ಪುಟ್ಟ ಪುಟ್ಟ ಕನಸುಗಳು. ಅದಕ್ಕೆ ಜೀವ ತುಂಬ್ತೀಯಾ ಅಂತ ಗೊತ್ತು ನಂಗೆ. ಜೀವನವನ್ನು ಪ್ರೀತಿ, ಖುಷಿ, ನೆಮ್ಮದಿಗಳಿಂದ ಸಿಂಗರಿಸಿಬಿಡು..ಅದಕ್ಕೆ ನನ್ನದೂ ಸಾಥ್ ಇದೆ.ಅಷ್ಟೇ ಸಾಕಲ್ವಾ? ನಮ್ಮ ಬದುಕಿಗೆ.....? ಇನ್ನೇನು ಹೇಳಕ್ಕೆ ಬರಲ್ಲ...ಮೌನದಲ್ಲೇ ಮಾತಾಡ್ತೀನಿ. ನೀನು ಕವನ ಬರೆ...!
ಅದಿರಲಿ, ಯಾವಾಗ ನನ್ನನ್ನು ನಿನ್ನೂರಿಗೆ ಕರೆದುಕೊಂಡು ಹೋಗ್ತಿಯಾ? ನಿಮ್ಮಮ್ಮನಿಗೆ ನಿಮ್ಮಪ್ಪನಿಗೆ ಪರಿಚಯ ಮಾಡಿಸ್ತೀಯಾ ಹೇಳು.

15 comments:

ತೇಜಸ್ವಿನಿ ಹೆಗಡೆ said...

ಮೌನ ನೀನಾದಾಗ ಅವನು ಕವನ ಬರಿದೇ ಬರೀತಾನೆ ಬಿಡು :) ಇಷ್ಟು ಸುಂದರ ಚಿಕ್ಕ ಚೊಕ್ಕ ಪತ್ರ ನೋಡಿ ಖಂಡಿತ ಬೇಗ ನಿನ್ನ ತನ್ನ ಗೂಡಿಗೆ ಸೇರಿಸಿಕೊಳ್ತಾನೆ ಕೂಡಾ :) ಆಪ್ತವಾಗಿದೆ ಬರಹ.

ದಿವ್ಯಾ ಮಲ್ಯ ಕಾಮತ್ said...

ಪ್ರೀತಿಯ ಚಿತ್ರಾ,
ನಿಮ್ಮ ಮೌನದ ಮಾತಿಗೆ ಕವನ ಬರೆಯುವ ಹುಡುಗ ಬೇಗ ಓಡೋಡಿ ಬರಲಿ...

Unknown said...
This comment has been removed by a blog administrator.
Anonymous said...

ಪುಟ್ಟ ಪುಟ್ಟ ಕನಸುಗಳೆಲ್ಲ ಜೀವ ತುಂಬಿ ನನಸಾಗಲಿ ಮತ್ತು ನಿಮ್ಮನ್ನು ಬೇಗನೆ ಊರಿಗೆ ಕರ್ಕೊಂಡು ಹೋಗಿ ಅಪ್ಪ ಅಮ್ಮನ ಪರಿಚಯ ಮಾಡಿಸ್ಲಿ ಅಂತ ನನ್ನ ಹಾರೈಕೆ!!!!

ಮನಸು said...

ಚಿತ್ರಾ,
ಮೌನ ನೀನಾದರೆ ಅವನು ಕವನ ಜೊತೆಗೆ ಪ್ರೀತಿ ತುಂಬಿದ ಪತ್ರ ಬರೆಯುತ್ತಲೇ ಇರುತ್ತಾನೆ ಬಿಡು. ತುಂಬಾ ಚೆನ್ನಾಗಿದೆ ಪತ್ರ.

VENU VINOD said...

mounadalle taane kavana huttodu! nice letter...

PARAANJAPE K.N. said...

ಮೌನ ಮಾತಾದಾಗ ಇ೦ತಹ ಆಪ್ತ ಬರಹ ಹೊರ ಹೊಮ್ಮುತ್ತೆ, ಚೆನ್ನಾಗಿದೆ.

Guruprasad said...

ಮೌನದಲ್ಲೇ ಮಾತಾಡುತ್ತಾ ಬರೆದಿರುವ ಪತ್ರ ಚೆನ್ನಾಗಿದೆ....
ಗುರು

sham said...

ಚಿಕ್ಕ ಚೊಕ್ಕ ಬರಹಗಳಿಗೆ ಅಂತರ್ ಜಾಲದಲ್ಲಿ ಮಹತ್ವ ಮತ್ತು ಪ್ರಾಶಸ್ತ್ಯ. ಇದನ್ನು ಅರಿತು ಬರೆಯುವವರೆ ಜಾಣ ಜಾಣೆಯರು.

ಶಾಮ್
http://thatskannada.oneindia.in/

ಕನಸು said...

ಇಷ್ಟು ಮುದ್ದಾಗಿರೋ
ಪತ್ರ ಬರೆದಿರೋ ನಿಮ್ಮ ಮೌನ
ತುಂಭಾ ತುಂಟತನದಿಂದ ಕೂಡಿದೆ
ನಿಮ್ಮ ಒಂದು ಒಳ್ಳೆ ಲೇಖನಕ್ಕೆ
ಎಷ್ಟು ಥ್ಯಾಂಕ್ಸ ಹೇಳಿದರೂ ಅದು ಕಡಿಮೇಯೇ..

ಅಂತರ್ವಾಣಿ said...

ಚಿತ್ರಾ,
ಆದಷ್ಟು ಬೇಗ ಅವನು ಪತ್ರ ( ಕವನ) ಬರೆಯಲಿ. ಅಪ್ಪ, ಅಮ್ಮನಿಗೆ ಪರಿಚಯ ಮಾಡಿಸಲಿ... ಮುಂದೆ ಏನು ಅಂತ ಬರಿಬೇಕಿಲ್ಲ ಅಲ್ವಾ....?

ದಿನಕರ ಮೊಗೇರ said...

ಚಿತ್ರಾ ಮೇಡಂ,
ಇಷ್ಟು ಮುದ್ದಗಿರೋ ಪತ್ರ ನೋಡಿ ಯಾರಾದರು ಸುಮ್ನೆ ಇರ್ತಾರಾ..... ಚಿಂತೆ ಬಿಡಿ ಅವನು 'ಕವನ' ಬರ್ದೇ ಬರಿತಾನೆ..... ಓಡೋಡಿ ಬರ್ತಾನೆ....... ಹಾಗಂತ ಮುಂದಿನ ಲೇಖನ ದಲ್ಲಿ ತಿಳಿಸಿ..... ಕಾಯ್ತಿರ್ತಿವಿ.....

ವಿ.ರಾ.ಹೆ. said...

ಮೌನ, ಮಾತು ಎರಡೂ ಹದವಾಗಿ ಬೆರೆತರೆ ಅದೇ ಚಂದದ ಕವನ .

All the best :-)

rohini surya said...

hi chitra...

putta putta kanasugala ballige aasareyaguva huduga begane baruva....ninnase pooraisuva....

rohini surya said...

putta putta kanasugalige aasareyaguva huduga beganebaruva....nimma aase pooraisuva....