ಹೌದು...ಮೊನ್ನೆ ನಾನೂ ನನ್ನೂರಿಗೆ ಹೊರಟಿದ್ದೆ. ಶಿರಾಡಿ ಘಾಟ್ ನಲ್ಲಿ ವರ್ಷವಿಡೀ 'ಕಾಮಗಾರಿ ಪ್ರಗತಿಯಲ್ಲಿರಿವುದರಿಂದ' ಚಾರ್ಮಾಡಿ ಘಾಟ್ ನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಾ ನನ್ನನ್ನು ಹೊತ್ತ ಬಸ್ಸು ಸಾಗಿತ್ತು. ಧಾರಕಾರವಾಗಿ ಸುರಿವ ಮಳೆ, ಗಾಳಿ, ಚಳಿ, ಸುತ್ತೆಲ್ಲಾ ಮುಸುಕಿಕೊಂಡಿದ್ದ ಮಂಜು.. ನಡುವೆ ಬಸ್ಸು ನುಗ್ಗುತ್ತಾ ಸಾಗುತ್ತಿದ್ದಂತೆ ಹಸಿರ ಚೆಲುವು ಕಣ್ಣು ತುಂಬುತ್ತಿತ್ತು. ಆದರೆ, ನನ್ನ ಪ್ರೀತಿಯ ಉಜಿರೆಯಲ್ಲಿ ಬಸ್ಸಿನಿಂದ ಇಳಿಯುತ್ತಿದ್ದಂತೆ ಚಳಿಗೆ ಮೈಯೆಲ್ಲಾ ಮರಗಟ್ಟಿ ಮೂಗು, ಕಿವಿ ಎಲ್ಲಾ ಬಂದ್ ಆಗಿತ್ತು.
ಹೌದು, ನನಗೆ ಬದುಕಿನ ಪಾಠ ಕಲಿಸಿದ ಪ್ರೀತಿಯ ಉಜಿರೆಯಲ್ಲಿ ಇಳಿದು ಎದುರುಗಡೆ ಕಾಣುತ್ತಿದ್ದ ಆ ನನ್ನ ವಿದ್ಯಾದೇಗುಲಕ್ಕೆ ಪ್ರೀತಿಯಿಂದ ವಂದಿಸಿದ್ದೆ. ಐದು ವರ್ಷಗಳ ಕಾಲ ಓಡಾಡಿದ್ದ ಉಜಿರೆ ಬದಲಾವಣೆಯತ್ತ ಮುಖಮಾಡಿದೆ. ನೂರಾರು ಜನರಿಗೆ ನೆರಳು ನೀಡುತ್ತಿದ್ದ ಸಕರ್ಲ್ ನಲ್ಲಿದ್ದ ದೊಡ್ಡ ಮರ ಕಾಣೆಯಾಗಿ ಸರ್ಕಲ್ ಸುತ್ತ ಜನರು ಬಿರುಬಿಸಿಲಿಗೂ, ಜಡಿಮಳೆಗೂ ಕೊಡೆ ಹಿಡಿದು ಬಸ್ಸಿಗೆ ಕಾಯೋ ಸ್ಥಿತಿ. ಕಾಲೇಜು ನೋಡಿದರೆ ಸುತ್ತಲೆಲ್ಲಾ ಕಟ್ಟಡಗಳೇ ತುಂಬಿಕೊಂಡು ಕಾಲೇಜು ಇನ್ನಷ್ಟು ವಿಸ್ತಾರಗೊಂಡಿದೆ. ನನ್ನ ಪ್ರೀತಿಯ ಲೈಬ್ರೇರಿ ಅದೇ ಪ್ರೀತಿಯಿಂದ ಮಾತನಾಡಿಸುತ್ತಿದ್ದೆ. ಮೊಬೈಲ್ ಇಲ್ಲದ ಪಿಯು-ಡಿಗ್ರಿ ಸಮಯದಲ್ಲಿ ನಿತ್ಯ ಅಮ್ಮನ ಜೊತೆ ಮಾತನಾಡೋಕೆ ನೇತಾಡುತ್ತಿದ್ದ ಆ ಇಂದ್ರಣ್ಣನ ಅಂಗಡಿ ಯ ಎರಡು ಕೆಂಪು ಕಾಯಿನ್ ಬೂತ್ ಗಳು ಹಾಗೇ ಇವೆ. ಇಂದ್ರಣ್ಣ ಅದೇ ಮುಖತುಂಬಾ ಗಡ್ಡ, ಖುಷಿ ಖುಷಿಯ ನಗುವಿನಿಂದ ಸ್ವಾಗತಿಸಿದರು.
ಅಲ್ಲಿಂದ ಮುಂದೆ ನನಗೆ ಐದು ವರ್ಷ ಅಮ್ಮನಂತೆ ಸಾಕಿ ಸಲಹಿದ ಬಿಸಿಎಂ ಹಾಸ್ಟೇಲ್ ನತ್ತ ಸಾಗಿದರೆ, ನನಗೆ ದಿನಕ್ಕೆರಡು ಬಾರಿ ಟೀ ಇಟ್ಟು ಕೊಟ್ಟು, ರಾತ್ರಿ ಮಲಗುವಾಗಲೂ ತಟ್ಟಿ ಮಲಗಿಸುತ್ತಿದ್ದ, ಮಗಳಂತೆ ನನ್ನ ಪ್ರೀತಿಯಿಂದ ಕಂಡ ಹೇಮಾ ಆಂಟಿಗೆ ಒಂದು ಕ್ಷಣ ನನ್ನ ಪರಿಚಯ ಸಿಗದೆ ಒಂದು ಕ್ಷಣ ಅವಕ್ಕಾಗಿ ಬಂದು ಗಟ್ಟಿಯಾಗಿ ಅಪ್ಪಿಕೊಂಡಾಗ ನಾನೇ ಕರಗಿಹೋಗಿದ್ದೆ. ಅದೇ ನಗು, ಅದೇ ಖುಷಿ, ಅದೇ ಪ್ರೀತಿಯ ಮಾತು....ಗಳಿಂದ ಮನಸ್ಸೆಲ್ಲಾ ತುಂಬಿಕೊಂಡುಬಿಟ್ಟರು. ಡಿಗ್ರಿಯಲ್ಲಿರುವಾಗ ನನ್ನ ರೂಮ್ ಬಿಟ್ಟು ಆಂಟಿ ಜೊತೆ ಮಲಗೋದು ನನ್ನ ಅಭ್ಯಾಸ. ಏಕಂದ್ರೆ ನನ್ನ ರೂಮ್ ನಲ್ಲಿರುವಾಗ ಹುಡುಗಿರೆಲ್ಲಾ ಮಧ್ಯರಾತ್ರಿ ತನಕ ಹರಟೆ ಹೊಡೆಯೊರು..ಪಕ್ಕಾ 10.30ಗೆ ನಿದ್ದೆಯ ಮಂಪರಿಗೆ ಜಾರಿ, ಬೆಳಿಗ್ಗೆ 5.30ಗೆ ಏಳೋ ನನಗೆ ಅದು ಹಿಂಸೆ ಅನಿಸುತ್ತಿತ್ತು. ಅದಕ್ಕೆ ಆಂಟಿ ಜೊತೆ ಮಲಗಿಬಿಡುತ್ತಿದ್ದೆ. ಅವರು ಏಳುವಾಗ ನನ್ನನ್ನೂ ಎಬ್ಬಿಸುತ್ತಿದ್ದರು. ಹಾಗೇ ಮತ್ತೊಬ್ರು ರತ್ನ ಆಂಟಿಯ ಪುಟ್ಟ ಮಗು ವರುಣ ಕೂಡ ನನ್ನ ಜೊತೆಗೇ ಮಲಗುತ್ತಿದ್ದ. ಹಾಗೇ ಓದುತ್ತಾ, ಆಡುತ್ತಾ ಅಲ್ಲೆ ಮಲಗುತ್ತಿದ್ದೆ. ನನ್ನ ನೋಡಿದವರೇ ಆಂಟಿ, ಚಿತ್ರಾ ಮಲಗೋಕೆ ಹೊರಟಾಗ ಯಾವಾಗಲೂ ನೀನು ನೆನಪಾಗ್ತೀ ಅಂದ್ರು. ನಾನು ನೀಡಿದ ಒಂದು ಪುಟ್ಟ ಸ್ವೀಟ್ ಬಾಕ್ಸ್ ಅನ್ನು ಆಂಟಿ ಕಣ್ಣರಳಸಿ ನೋಡಿ ತೆಗೆದುಕೊಂಡರು. ಅವರು ಮಾಡಿ ಕೊಟ್ಟ ಟೀ ಮಾತ್ರ ಮತ್ತೊಮ್ಮೆ ಆಂಟಿ ಮಾಡಿಕೊಡುತ್ತಿದ್ದ ಟೀಯನ್ನು ನೆನೆಪಿಸಿ ಕಣ್ತುಂಬಿಸಿತ್ತು. ರತ್ನ ಆಂಟಿನೂ ಹಾಗೇ ಇದ್ದಾರೆ..ಬಾಯಿ ತುಂಬಾ ನಗುತ್ತಾ.
ಆದರೆ ಹಾಸ್ಟೇಲ್ ನಾವು ಇರುವಾಗ ಇದ್ದಕ್ಕಿಂತಲೂ ಈಗ ತುಂಬಾ ಚೆನ್ನಾಗಿದೆ. ಎದುರುಗಡೆ ಮೂರು ರೂಮ್ ಗಳು ಮತ್ತೆ ನಿರ್ಮಾಣವಾಗಿವೆ. ಹೊತ್ತು ಹೊತ್ತಿಗೆ ಬೋರ್ ವೆಲ್ ನೀರು ಸೌಲಭ್ಯ, ಫೋನ್, ಬೇಕಾದಷ್ಟು ಡೆಸ್ಕುಗಳು, ಸೋಲಾರ್...ಏನು ಬೇಕೋ ಅದೆಲ್ಲಾ ಇದೆ. ನೋಡಿ ನಾನುನೂ ಈಗಲೂ ಇರಬೇಕಿತ್ತು ಅನಿಸಿದ್ದು ಸುಳ್ಳಲ್ಲ. ಇನ್ನೊಂದು ತುಂಬಾ ಖುಷಿಯಾಗಿದ್ದು ಅಂದ್ರೆ ನಾನೇ ಹೆಸರಿಟ್ಟು ಮಾಡಿದ ವಾಲ್ ಮ್ಯಾಗಜಿನ್ 'ಸ್ಫೂರ್ತಿ'ಯನ್ನು ನನ್ನ ತಂಗಿಯರು ಹಾಗೇ ಕಾಪಾಡಿಕೊಂಡು ಬಂದಿದ್ಧಾರೆ. ನೋಡಿ ಭಾಳ ಖುಷಿ ಪಟ್ಟೆ.
ಸಂಜೆಯ ಹೊತ್ತಿಗೆ ಡೈರಿ ಬರೆಯಲು ಕೂರುತ್ತಿದ್ದ ಆ ವಿಶಾಲವಾದ ಗಾಳಿ ಮರ ಹಾಗೇ ಇದೆ. ನಮಗೆ ವಾರ್ಷಿಕ ಆದಾಯ ತರುತ್ತಿದ್ದ ಆ ಗೇರುಬೀಜದ ಮರ ಇನ್ನೂ ಹಾಗೇ ಉಳಿದಿದೆ. ಅದಕ್ಕೆ ಅದೆಷ್ಟು ಸಲ ನಾವು ಹತ್ತಿ ಗೇರು ಬೀಜ ಕೊಯ್ಯುತ್ತಿದ್ದೇವೋ..ಗೆಳತಿ ಶ್ರದ್ಧಾ ಅದೆಷ್ಟು ಬಾರಿ ಮರದಿಂದ ಕೆಳಗೆ ಜಾರಿದಳೋ...ಆ ಮರ ನೋಡುತ್ತಿದ್ದಂತೆ ಹಿಂದಿನ ನೆನಪುಗಳು ಮನದ ಪರದೆ ಮೇಲೆ ಸುತ್ತಾಡಿದವು. ಅಕ್ಕಾ..ಅಕ್ಕಾ...ಎನ್ನುತ್ತಾ ಅಕ್ಕರೆ, ಅಚ್ಚರಿಯಿಂದ ಕಾಣುತ್ತಿದ್ದ ನನ್ನ ತಂಗಿಯರ ಮಾತುಗಳು ಮನತುಂಬಿಸಿದವು.
ಅಲ್ಲಿಂದ ಧರ್ಮಸ್ಥಳದತ್ತ ಹೊರಟರೆ, ಮೂರು ವರ್ಷ ಜೊತೆಗೇ ಕಲಿತ ರಾಜೇಂದ್ರ, ರೋಹನ್ ಅಚಾನಕ್ ಆಗಿ ಕಣ್ಣಿಗೆ ಬಿದ್ದರು. ಕ್ಲಾಸಿನಲ್ಲಿ ನಂ.1 ತರಲೆ ಪಟ್ಟ ಗಿಟ್ಟಿಸಿಕೊಂಡಿದ್ದ ರಾಜೇಂದ್ರ ಈಗ ಮೌನಮೂರ್ತಿ ಆಗಿದ್ದಾನೆ. ಒಂದೇ ಒಂದು ನೋಟ್ಸ್ ಬರೆಯದೆ ನನ್ನ ನೋಟ್ಸ್ ಜೆರಾಕ್ಸ್ ನಲ್ಲಿ ಪಾಸ್ ಮಾಡಿಕೊಳ್ಳುತ್ತಿದ್ದ ಆತ ಕಾಲೇಜಿಗೆ ಅಧ್ಯಕ್ಷನೂ ಆಗಿಬಿಟ್ಟಿದ್ದ. ಅವನ ತರಲೆ, ಕೀಟಲೆಗಳನ್ನು ಕಂಡ ಮೇಷ್ಟ್ರುಗಳೇ ರೋಸಿಹೋಗಿದ್ದರು. ಅವನಿದ್ದರೆ ನಮ್ಮ ಕ್ಲಾಸ್ ರೂಮ್ ಮನೋರಂಜನಾ ಹಾಲ್ ಆಗುತ್ತಿತ್ತು, ಸಿಕ್ಕಿದವನೇ ಹಿಂದಿನದನೆಲ್ಲಾ ಬಿಚ್ಚುಡುತ್ತಾ ಹೋದ..ಈಗ ಒಳ್ಳೆಯ ಕೆಲಸದಲ್ಲಿದ್ದಾನೆ. ಹಿಂದಿನ ತರಲೆ ಬುದ್ಧಿ ಬಿಟ್ಟು ಸಾದಾ ಸೀದಾ ಮನುಷ್ಯ ಆಗಿಬಿಟ್ಟಿದ್ದಕ್ಕೆ ಹೀಗೇ ಇರು ಮಾರಾಯ ಅಂದೆ.
ಎರಡು ದಿನ ಉಜಿರೆಯಲ್ಲಿ ಕಳೆದೆ. ಮತ್ತೊಮ್ಮೆ ಕಳೆದ ದಿನಗಳನ್ನು ಮೆಲುಕು ಹಾಕಿದೆ. ನನ್ನ ಬದುಕು ರೂಪಿಸಿದ ಪ್ರೀತಿಯ ಕಾಲೇಜಿಗೆ, ಹಾಸ್ಟೇಲಿಗೆ ಮನತುಂಬಾ ಮತ್ತೊಮ್ಮೆ ನಮಿಸುತ್ತಾ ಮತ್ತೆ ಬೆಂಗಳೂ ರು ಬಸ್ಸು ಹಿಡಿದೆ. ಬಸ್ಸು ಸಾಗುತ್ತಿತ್ತು...ಬದುಕಿನ ಜೊತೆಗೆ...!
Monday, September 7, 2009
Subscribe to:
Post Comments (Atom)
12 comments:
ಹೂನ್...
ಅದೇ ಜೀವನ.
hi chitra.
lekhan chennagide.nimma bavanatmaka sambandhagaLu chennagi vivarisiddira
keep it up
laxman
ಚಿತ್ರ ಅವರೇ ..
ಸುಂದರ ಬರಹ .. ಮೊನ್ನೆ ತಾನೇ ನಾನು ನನ್ನ ಕಾಲೇಜ್ ದಿನಗಳಲ್ಲಿ ಉಳಿದ ಕಾರ್ಕಳದ ಹತ್ತಿರದ ಊರಿಗೆ ಹೋಗುವ ಆಲೋಚನೆ ಮಾಡ್ತಾ ಇದ್ದೆ .. ನಿಮ್ಮ ಈ ಬರಹ ನನಗೆ ಹೋಗಲೇ ಬೇಕಂಬ ಹಂಬಲವನ್ನು ಹೆಚ್ಚು ಮಾಡ್ತಾ ಇದೆ .. ಮನ ಮಿಡಿಯುವ ಲೇಖನ ..ಹೀಗೆ ಬರೆಯುತ್ತಿರಿ ..
ಶ್ರೀಧರ ಭಟ್ಟ
ಇ೦ದ್ರಣ್ಣನ ಪಕ್ಕ ಒ೦ದು ಹೋಟಲ್ ಇತ್ತಲ್ಲ. ಅಲ್ಲಿ ಮಸಾಲೆ ದೋಸೆ ಸೂಪರ್.. :) ಸ್ವಲ್ಪ ಮು೦ದೆ ಹೋದ್ರೆ ಪಾನಿ ಪುರಿ ಅ೦ಗಡಿ ಇತ್ತಲ್ಲ. ಅಲ್ಲಿಯ ಮಸಾಲಪುರಿ ಟೇಸ್ಟ್ ಎಲ್ಲೂ ಸಿಕ್ತಿಲ್ಲ.. ಮಿಸ್ಸಿ೦ಗ್ ಇಟ್
ಬದುಕೇ ಹಾಗೆ, ತಾನು ಬಂದ ದಾರಿಯಲ್ಲಿ ಮತ್ತೆ ಹೊರಳಿ ನೋಡಿದಾಗ ತುಟಿಯಂಚಲಿ ನಗು, ಕಣ್ಣಂಚಲಿ ಅಳು ಎರಡೂ ಬರೋದೆ.
ಮೊನ್ನೆ ಗೆಳೆಯನ ಬದುವೆಗೆಂದು ಧಾರವಾಡಕ್ಕೆ ಹೋದಾಗ ಗೆಳೆಯರೆಲ್ಲ ಕೂಡಿ ನಾವಿದ್ದ ಹಾಸ್ಟೇಲಿಗೆ ಹೋಗಿದ್ದೆವು, ಹಾಗೆ ಆ ದಿನಗಳು ನೆನಪು ನಮ್ಮನ್ನು ಅಟ್ಟಿಸಿಕೊಂಡು ಬಂದಿತು. ಆದರೆ ಸದಾ ತುಂಟತನ, ಮಾತು, ನಗು, ಗದ್ದಲ ಸಾಮ್ರಾಜ್ಯವಾಗಿದ್ದ ನನ್ನ ರೂಮಿನಲ್ಲಿ ಮಧ್ಯಾನದ ಹೋತ್ತಿನಲ್ಲಿ ತನ್ನ ಪಾಡಿಗೆ ತಾನೆಂಬಂತೆ ಓದುತ್ತಾ ಕುಳಿತಿದ್ದ ಹುಡುಗನನ್ನು ನೋಡಿ ಸಂತೋಷ-ದುಃಖ ಎರಡೂ ಒಮ್ಮಗೆ ಆಗಿತ್ತು.
-ಶೆಟ್ಟರು
ಬದುಕೇ ಹಾಗೆ, ತಾನು ಬಂದ ದಾರಿಯಲ್ಲಿ ಮತ್ತೆ ಹೊರಳಿ ನೋಡಿದಾಗ ತುಟಿಯಂಚಲಿ ನಗು, ಕಣ್ಣಂಚಲಿ ಅಳು ಎರಡೂ ಬರೋದೆ.
ಮೊನ್ನೆ ಗೆಳೆಯನ ಬದುವೆಗೆಂದು ಧಾರವಾಡಕ್ಕೆ ಹೋದಾಗ ಗೆಳೆಯರೆಲ್ಲ ಕೂಡಿ ನಾವಿದ್ದ ಹಾಸ್ಟೇಲಿಗೆ ಹೋಗಿದ್ದೆವು, ಹಾಗೆ ಆ ದಿನಗಳು ನೆನಪು ನಮ್ಮನ್ನು ಅಟ್ಟಿಸಿಕೊಂಡು ಬಂದಿತು. ಆದರೆ ಸದಾ ತುಂಟತನ, ಮಾತು, ನಗು, ಗದ್ದಲ ಸಾಮ್ರಾಜ್ಯವಾಗಿದ್ದ ನನ್ನ ರೂಮಿನಲ್ಲಿ ಮಧ್ಯಾನದ ಹೋತ್ತಿನಲ್ಲಿ ತನ್ನ ಪಾಡಿಗೆ ತಾನೆಂಬಂತೆ ಓದುತ್ತಾ ಕುಳಿತಿದ್ದ ಹುಡುಗನನ್ನು ನೋಡಿ ಸಂತೋಷ-ದುಃಖ ಎರಡೂ ಒಮ್ಮಗೆ ಆಗಿತ್ತು.
-ಶೆಟ್ಟರು
ಚೆನ್ನಾಗಿದೆ..
Sort of nostalgia - ಹಂಬಲದ ಸ್ಮರಣೆ
ಬದುಕೇ ಹಾಗೆ, ತಿರುಗಿ ಬರೋ ಹಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಆಲ್ವಾ...... ಅದನ್ನ ಮಿಸ್ ಮಾಡ್ಕೊಳ್ದೆ ಇದ್ರೆ ಅದರ ನೆನಪೇ ಬರ್ತಿರ್ಲಿಲ್ಲ ಆಲ್ವಾ...... ಒಳ್ಳೆಯ ಲೇಖನ...
ಬದುಕೇ ಹಾಗೆ, ತಿರುಗಿ ಬರೋ ಹಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಆಲ್ವಾ...... ಅದನ್ನ ಮಿಸ್ ಮಾಡ್ಕೊಳ್ದೆ ಇದ್ರೆ ಅದರ ನೆನಪೇ ಬರ್ತಿರ್ಲಿಲ್ಲ ಆಲ್ವಾ...... ಒಳ್ಳೆಯ ಲೇಖನ...
ನಿನ್ನ ಕಾಲೇಜುದಿನದ ನೆನಪುಗಳ ಬುತ್ತಿಯನ್ನು ಬಿಚ್ಚಿಟ್ಟು, ಅಲ್ಲೆಲ್ಲ ಸುತ್ತಾಡಿ ಬ೦ದ ಅನುಭವಗಳನ್ನು ಹ೦ಚಿಕೊಳ್ಳುತ್ತ, ಗತದಿನಗಳ ನೆನಪುಗೊ೦ದಿಗೆ ತುಲನೆ ಮಾಡಿದ್ದೀಯಾ, ಚೆನ್ನಾಗಿದೆ. ಹಳೆಯ ಬೇರುಗಳನ್ನು ಹುಡುಕಿಕೊ೦ಡು ಹೋಗುವ ಭಾವುಕ ಮನಸ್ಸಿನ ನಿನಗಿರುವ೦ತೆ ಎಲ್ಲರಿಗೂ ಇ೦ತಹ ಗುಣ ಇರುವುದಿಲ್ಲ.
write something
Hmmmmm...... Good...
Post a Comment