Sunday, July 26, 2009

ನೆನಪುಗಳ ಜೊತೆಗೆ ಒಂದಿಷ್ಟು ಹೊತ್ತು...


ನೀ ನೀಡಿದ 'ಹಿಡಿಪ್ರೀತಿ'ಯ ನೆನಪು.
ಅಮ್ಮನಂತೆ ಸಂತೈಸಿದ ನಿನ್ನ ನುಣುಪು ಕೈಗಳ ನೆನಪು

ನನ್ನ ಕಾಲ್ಗೆಜ್ಜೆ ಸದ್ದಿಗೆ ದನಿಗೂಡಿಸಿದ ನಿನ್ನ ಹೃದಯದ ನೆನಪು.

ನಿನ್ನ ಪ್ರೀತಿಯ ಜೋಗುಳಕ್ಕೆ ನಿದ್ದೆಯ ಮಂಪರಿಗೆ ಜಾರಿದ ನೆನಪು

ನನ್ನ ಕಣ್ಣುಗಳಲ್ಲಿ ಬೆಳಕು ಮೂಡಿಸಿದ ಆ ನಿನ್ನ ಪ್ರೀತಿಯ ಕಂಗಳ ನೆನಪು

ನೀತೊಡಿಸಿದ ಕೈ ಬಳೆ, ಮುಡಿಸಿದ ಘಮ್ ಎನ್ನುವ ಮಲ್ಲಿಗೆಯ ನೆನಪು.

ನಿನ್ನ ಜೊತೆ ದೇವರೆದುರು ಮಂಡಿಯೂರಿ ನಮಿಸಿದ ನೆನಪು

ನಿನ್ನ ಹೆಸರಿನಲ್ಲಿ ದೇವರಿಗೆ ಹಣ್ಣುಕಾಯಿ ಮಾಡಿಸಿದ ನೆನಪು
ನಿನ್ನ ಮಡಿಲಲ್ಲಿ ಪ್ರೀತಿಯ ಅನನ್ಯತೆಯನ್ನು ಸವಿದ ನೆನಪು

ಮನತುಂಬಾ ಕನಸುಗಳನ್ನು ಹೊತ್ತು ನಿನ್ನ ಜೊತೆ ದಾರಿಗುಂಟ ಸಾಗಿದ ನೆನಪು
ನಿನ್ನ ಕಂಗಳಲ್ಲಿ ಕಣ್ಣಿಟ್ಟು 'ನೀ ನನ್ನ ಜೊತೆಗಿರ್ತೀಯಾ?' ಎಂದು ಭರವಸೆಯಿಂದ ಕೇಳಿದ ನೆನಪು.
ಜ್ವರದಿಂದ ನರಳುತ್ತಿರುವಾಗ ತುತ್ತು ಬಾಯಿಗಿಟ್ಟು ಅಮ್ಮನ ವಾತ್ಸಲ್ಯ ತೋರಿದ ನಿನ್ನ ವಿಶಾಲ ಮನದ ನೆನಪು

'ನಂಗ್ಯಾರಿಲ್ಲ' ಎಂದು ನಿನ್ನೆದೆಯಲ್ಲಿ ಅತ್ತಾಗ 'ನಾನಿದ್ದೇನೆ' ಎಂದು ಬದುಕಿನ ಧೈರ್ಯ ತುಂಬಿದ ನಿನ್ನ ದಿಟ್ಟ ಹೃದಯದ ನೆನೆಪು.!

9 comments:

Laxman (ಲಕ್ಷ್ಮಣ ಬಿರಾದಾರ) said...

ಹಾಯ್ ಚಿತ್ರಾ,
ತುಂಬಾ ಚೆನ್ನಾಗಿದೆ. ನಿನ್ನ ಬರವಣಿಗೆ ಶೈಲಿಯ ಮತ್ತೊಂದು ಮುಖ. ನೀವು ಪತ್ರಕರ್ತರು ಬರಿತಿರಾ ಬಿಡಿ.
ನನಗೆ ಹಿಡಿಸಿತು.
ಲಕ್ಷ್ಮಣ

Laxman (ಲಕ್ಷ್ಮಣ ಬಿರಾದಾರ) said...

ಬರಿತಾ ಇರಿ

Santhosh Rao said...

ನೆನಪುಗಳು ಚೆನ್ನಾಗಿವೆ ..

ನೆನಪುಗಳೇ ಹಾಗೆ ಕಣ್ಣಿರಿಟ್ಟ ಕ್ಷಣಗಳನ್ನು ಕಣ್ಣ ಮುಂದೆ ಇರಿಸಿ ನಗು ತರಿಸುತ್ತದೆ , ನಕ್ಕ ಕ್ಷಣಗಳನ್ನು ನನೆದು ಕಣ್ಣಲ್ಲಿ ನೀರು ತರಿಸುತ್ತದೆ .

Ittigecement said...

ಸೋತ ಕಂಗಾಲಾದ,
ಒಂಟೀ ಮನಕ್ಕೆ..
ಮಾನಸಿಕ ಸ್ಥೈರ್ಯದ ...
ದೈರ್ಯದ ಸೆಲೆ
ಸಿಕ್ಕಾಗ ಬಹಳ ಖುಷಿಯಾಗುತ್ತದೆ...
ಕ್ರತಜ್ಞತೆ ಮೂಡುತ್ತದೆ...

ತುಂಬಾ ಸುಂದರವಾಗಿದೆ ನಿಮ್ಮ ಬರವಣಿಗೆ....

sunaath said...

ಹೃದಯಸ್ಪರ್ಶಿ ಲೇಖನ.

ವಿ.ರಾ.ಹೆ. said...

wow !

ಇದಕ್ಕೆ ದುಃಖದ ಚಿತ್ರ ಬೇಡ.

ಚಿತ್ರಾ said...

ಚಿತ್ರಾ,
ತುಂಬಾ ಸುಂದರವಾದ ಕವನ ... ಹೀಗೆ ಇನ್ನಷ್ಟು ಚಂದದ ಕವನಗಳು ಬರಲಿ ..

Unknown said...

Hi Chithra,
It's nice article & looks like the things happens in everyone's life who really loved each other.

From,
SHekar suvarna.k

ಚಿತ್ರಾ ಸಂತೋಷ್ said...

ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು
-ಚಿತ್ರಾ