Thursday, July 9, 2009

ಜಿನುಗು ಮಳೆಗೆ, ಚುಟುಕ ಹನಿಗಳು...

ನಿನ್ನೆಯ ಜಿನುಗು ಮಳೆಗೆ ನನ್ನ ಪುಟ್ಟ ಮನೆಯಲ್ಲಿ ಕುಳಿತಾಗ ಯಾವುದೋ ಪುಸ್ತಕ ಓದುತ್ತಿದ್ದಂತೆ ಚುಟುಕ ಕವಿ ದಿನಕರ ದೇಸಾಯಿ ಅವರ ಚುಟುಕುಗಳು ಕಣ್ಣಿಗೆ ಬಿದ್ದವು. ಓದುತ್ತಿದ್ದಂತೆ ಮಳೆಗಾಲಕ್ಕೆಂದು ಅಮ್ಮ ಮಾಡಿಕೊಟ್ಟ ಹಪ್ಪಳ-ಸಂಡಿಗೆ ಮೆಲ್ಲೋ ಅನುಭವವಾಯ್ತು. ನಾನು ಓದಿದ್ದನ್ನು ನಿಮಗೂ ಉಣಬಡಿಸಿದ್ದೇನೆ. ಪುರುಸೋತ್ತು ಇದ್ರೆ ಓದಿಕೊಳ್ಳಿ. ಬೆಂಗಳೂರಿನ ಜಿಟಿಜಿಟಿ ಮಳೆ, ಚುಮುಚುಮು ಚಳಿಗೆ ನಿಮಗೂ ಹಪ್ಪಳ-ಸಂಡಿಗೆ ತಿಂದಂತಾಗಬಹುದೇನೋ...?

"ಬಿಸಿನೆಲದಲ್ಲಿ ತುಸು ಹಸಿಯಾಯ್ತು
ಬಿತ್ತಿದ ನೆಲದ ಬೀಜವು ಸಸಿಯಾಯ್ತು
ಸಸಿ ದೊಡ್ಡಗಾಗಲು ತೆನೆಯಾಯ್ತು
ತೆನೆಯೇ ದೇವರ ಮನೆಯಾಯ್ತು"

"ಬೆಳೆಯೇ ಭೂಮಿಯು ಬಂಗಾರ
ಬೆಳೆಯೇ ದೇವರ ಅವತಾರ"

"ಬಾಯಿಗಿಲ್ಲವೆಂದು ತುತ್ತು
ನಿನ್ನ ಕಣ್ಣಮುಂದೆ ಅತ್ತು
ಹೋದರೆನಿತೋ ಮಂದಿ ಸತ್ತು
ನೀನು ಸತ್ತರೇನು ಕುತ್ತು"

"ಜೋ ಜೋ ಜೋ ಜೋ ನನ ತಂಗಿ
ಜೋಗುಳ ಹಾಡುವೆ ರಸರಂಗಿ"


"ಕಟ್ಟಿದರೆ ಅನುಭವದ ತಳಹದಿಯ ಮೇಲೆ
ಕೊನೆಯವರೆಗೂ ನಿಲುವುದು ಕವಿಯ ಲೀಲೆ
ಇಟ್ಟಂಗಿಯಾಗಲಿ ಮಾತು ಕೃತಿಯೊಂದು
ಸರಿಯಾದ ಜಾಗದೊಳಗಿರಲಿ ಒಂದೊಂದು"

"ಲಾಭದಾಯಕವಲ್ಲ ಕವಿಯ ಬೇಸಾಯ
ಕಾಡಿನಲ್ಲಿ ಕೃಷಿ ಮಾಡಿದಂತೆ ಮಾರಾಯ"

"ಎಲೆಕವಿಯೇ ನಿನಗೇಕೆ ನರನ ಬಹುಮಾನ
ಕಾಲರಾಯನು ಕೇಳುವನು ನಿನ್ನ ಗಾನ
ಮೊದಲು ಸಿಗಬೇಕೆಂದು ಕೈಮುಗಿಯಬೇಡ
ತಲೆಬಾಗಿಸಿದರೆ ಕವಿ, ಕವಿಯುವುದು ಮೋಡ"

"ಕಾವ್ಯವೆಂಬುವುದು ಜಾಣತನವಲ್ಲ ಹುಚ್ಚು
ತೀವ್ರವಾದರೆ ಹುಚ್ಚು ಕವಿಯ ಬೆಲೆ ಹೆಚ್ಚು"

"ತರಕಾರಿ ಎಂಬುವುದು ಅಲ್ಲ ಬರಿ ಬದನೆ
ಕಾವ್ಯವೆಂಬುವುದು ಅಲ್ಲ ಬರಿ ಶಬ್ಧ ರಚನೆ
ಪ್ರತಿಯೊಂದು ಶಬ್ಧದೊಳಗಿರಬೇಕು ಪಾಕ
ಈ ಪಾಕ ಎನ್ನುವುದು ಅನುಭವದ ಲೋಕ"

17 comments:

Ittigecement said...

ನಾನು ಮೊದಲು ನಿಮ್ಮ ಟಿಪ್ಪಣೆ ಓದಿರಲಿಲ್ಲ...
"ಇದೇನು ಶರಧಿ...ದಿನಕರ ಚುಟುಕು ಥರಹ ಬರೆದಿದ್ದಾರಲ್ಲ !"ಅಂದುಕೊಂಡೆ....

ಜಿನ್ಗು ಮಳೆಯಲ್ಲಿ...
ಕುರುಕಲು ತಿಂಡಿ, ಬಿಸಿಬಿಸಿ ಕಾಫಿ ..
ಕುಡಿದ ಹಾಗಾಯ್ತು....

ಥ್ಯಾಂಕ್ಸು.....

PARAANJAPE K.N. said...

ಚೆನ್ನಾಗಿದೆ. ದಿನಕರ ದೇಸಾಯಿಯವರ ಚುಟುಕುಗಳು ನನಗೂ ಇಷ್ಟ.

sunaath said...

ದಿನಕರ ದೇಸಾಯಿಯವರ ಚುಟುಕುಗಳನ್ನು ಉಣಬಡಿಸಿದ್ದಕ್ಕಾಗಿ ಧನ್ಯವಾದಗಳು.

ಹನಿ said...

ಎಷ್ಟೊಂದು ಲವ್ಲಿ ಲವ್ಲಿ ಬರಹಗಳಿವೆ ನಿಮ್ಮ ಬ್ಲಾಗ್‌ನಲ್ಲಿ. ಅವೆಲ್ಲಾ ಓದಿ ಖುಷಿಯಾಯಿತು. ಹಾಗೇ ನೀವಿ ಬೆಂಗಳೂರಿಗೆ ಬಂದು ಅನುಭವಿಸಿದ ಪಾಡು ಕೂಡ. ನಾನೂ ಬೆಂಗಳೂರಿಗೆ ಬಂದಾಗ ಏನೆಲ್ಲಾ ಅಂದುಕೊಂಡಿದ್ದೆ ಎಂಬುದನ್ನು ಇನ್ನೊಮ್ಮೆ ಬರೆಯುತ್ತೇನೆ. ಈ ಚುಟುಕುಗಳು ಖುಷಿಕೊಟ್ಟವು.
-ಹನಿ

Anonymous said...

chennagive... dinakara desayiya chuTukagaLu yaavattigoo chennage irtave

ಅಂತರ್ವಾಣಿ said...

Desai avaru baredidda idannu...?
chennagive..

neevu prayatna maaDi.. maLeyali neneyuvudannu nenesikoNdu enaadaru bariri

ಚಿತ್ರಾ said...

ಚಿತ್ರಾ,
ಅಹಾ, ಮಳೆಗಾಲದಲ್ಲಿ ಮೆಲ್ಲಲು ಎಂಥಾ ಚುಟುಕಗಳನ್ನು ಉಣಬಡಿಸಿದ್ದೀರಿ !
"ತರಕಾರಿ ಎಂಬುವುದು ಅಲ್ಲ ಬರಿ ಬದನೆ
ಕಾವ್ಯವೆಂಬುವುದು ಅಲ್ಲ ಬರಿ ಶಬ್ಧ ರಚನೆ
ಪ್ರತಿಯೊಂದು ಶಬ್ಧದೊಳಗಿರಬೇಕು ಪಾಕ
ಈ ಪಾಕ ಎನ್ನುವುದು ಅನುಭವದ ಲೋಕ"

ನಿಜಕ್ಕೂ ಆನಿಮುತ್ತಿನಂಥ ಚುಟುಕಗಳು .

Ranjana Shreedhar said...

ಮಳೆಗಾಲದಲ್ಲಿ ಬೆಚ್ಚಗೆ ಕುಳಿತು ಕುರುಕಲು ತಿಂದಂತಾಯಿತು...
ದೇಸಾಯಿಯವರ ಚುಟುಕುಗಳನ್ನ ಓದಿ..
ಚೆನ್ನಾಗಿವೆ..
ಧನ್ಯವಾದಗಳು...

Santhosh Rao said...

chitra madam...
Chennagide..ishta aayitu..

ಕನಸು said...

ಹಾಯ್
ಚಿತ್ರಾ, ನಿಮ್ಮ ಮತ್ತೆದೆ ಮುದ್ದಾದ ಬರಹ ಹೃದಯಕ್ಕೆ ಹತ್ತಿರವಾಗುತ್ತದೆ ದಿನಕರ ದೇಸಾಯಿ ಅವರ ಕವಿತೆಯೋಂದಿಗೆ
ಓದಿ ತುಂಭಾ ಧನ್ಯವಾದಗಳು
ಆದರೆ ಚಿತ್ರಾ ,ರಿ ನೀವು ನನ್ನ ಕನಸಿಗೆ ಬರುವದೆ ಮರಿತ್ತಿರಿ ಅಂತ ಕಾಣುತ್ತದೆ!!? ಯಾಕೋ ಗೋತ್ತಾಗಲ್ಲಿಲ್ಲ ??
ನನ್ನವು ಕೇಲಸಕ್ಕೆ ಬಾರದ ಕನಸುಗಳೇ? ಅಂತ ಅಸಡ್ಡೆಯೆ..!!?

ಸುಧೇಶ್ ಶೆಟ್ಟಿ said...

ಚೆನ್ನಾಗಿದೆ:)

shivu.k said...

ಅಹಾ.! ನಿಜಕ್ಕೂ ಕುರುಕುಲನ್ನು ಈ ಮಳೆಯಲ್ಲಿ ಮೆದ್ದಷ್ಟೆ ಅನಂದವಾಯಿತು....

ಹರೀಶ ಮಾಂಬಾಡಿ said...

"ಬೆಳೆಯೇ ಭೂಮಿಯು ಬಂಗಾರ
ಬೆಳೆಯೇ ದೇವರ ಅವತಾರ"

ವಾಹ್

bhavagana said...

MALE MATHU SHARADHI-ENTHA CHITHRA?

bhavagana said...

MALE MATHU SHARADHI-ENTHA CHITHRA?

ಜಲನಯನ said...

ಲಾಭದಾಯಕವಲ್ಲ ಕವಿಯ ಬೇಸಾಯ
ಕಾಡಿನಲ್ಲಿ ಕೃಷಿ ಮಾಡಿದಂತೆ ಮಾರಾಯ
ಚಿತ್ರಾ, ಈ ಸಾಲುಗಳು..ಬಹಳ ಅರ್ಥವತ್ತಾಗಿ, ವ್ಯಂಗ್ಯವಾದರೂ ಸತ್ಯವೆಂಬಂತೆ ಬಿಂಬಿತವಾಗಿವೆ.

ಚಿತ್ರಾ ಸಂತೋಷ್ said...

ಖುಷಿಗೊಂಡೆ...ಪ್ರೋತ್ಸಾಹ ಹೀಗೇ ಇರಲಿ. ಧನ್ಯವಾದಗಳು.
-ಚಿತ್ರಾ