
ಕಳೆದ ಭಾನುವಾರ ಮುಸ್ಸಂಜೆಯಲ್ಲಿ ಮನಕ್ಕೆ ಮುದ ನೀಡಿದ್ದು ಮಾನಸಿ ಪ್ರಸಾದ್ ಅವರ 'ಒಲವೇ ಜೀವನ ಸಾಕ್ಷಾತ್ಕಾರ' ಗಾಯನ ಕಾರ್ಯಕ್ರಮ. ಬೆಳಿಗ್ಗೆ ಸ್ನೇಹಿತರೊಂದಿಗೆ ಜೋಧಾ ಅಕ್ಬರ್ ನೋಡಿ ಖುಷಿಪಟ್ಟರೆ, ಸಂಜೆಯ ಹೊತ್ತು ಮಾನಸಿ ಅವರ ಸುಶ್ರಾವ್ಯ ಗಾಯನ ಮನಸ್ಸಿಗೆ ತಂಪೆರಚಿತ್ತು. ನಂಗೆ ಹಾಡೋಕೆ ಬರದಿದ್ದರೂ, ಹಾಡುವುದನ್ನು ಕೇಳಿ ಮನ ಖುಷಿಪಡುತ್ತೆ..ಆ ಖುಷಿಯಲ್ಲಿ ಕಾರ್ಯಕ್ರಮದತ್ತ ಪುಟ್ಟದೊಂದು ನೋಟ ಹರಿಸಿದ್ದೇನೆ.

ಬದುಕಿನ ಪ್ರೀತಿ ನೀಡಿದ ಅಮ್ಮ, ಗುರು, ಪ್ರೀತಿಪಾತ್ರರನ್ನು ನೆನೆದ ಮಾನಸಿ ಅವರು, ಮೊದಲಿಗೆ ಬದುಕಿನ ಹಾಡಿನ ಶ್ರುತಿಯೇ ಪ್ರೀತಿ..ಬದುಕಿನ ಲಯ ಗತಿ ಮೈತ್ರಿ..ಪ್ರೀತಿಯ ಪರಿಕಲ್ಪನೆಯಲ್ಲಿ 'ಒಲವೇ ಜೀವನ ಸಾಕ್ಷಾತ್ಕಾರ' ಮೂಡಿಬಂದಿತ್ತು. ಅಮ್ಮ-ಮಕ್ಕಳು, ಕೃಷ್ಣ-ರಾಧೆ. ದುರ್ಯೋಧನ-ಕರ್ಣ, ಕುಂತಿ-ಕರ್ಣ ಇವರೆಲ್ಲರ ನಡುವಿನ ಪರಿಶುದ್ಧ ಪ್ರೀತಿಯ ವಿವಿಧ ಮುಖಗಳನ್ನು ತಮ್ಮ ಮಾನಸಿ ಹಾಡಿನ ಮೂಲಕ ಪ್ರಸ್ತುಪಡಿಸಿದ್ದರು.

ಕಳೆದ ವರ್ಷ 'ಮೀರಾ' ಎಂಬ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟ ಮಾನಸಿ, ಈ ವರ್ಷ 'ಒಲವೇ ಜೀವನ ಸಾಕ್ಷಾತ್ಕಾರ' ಎಂಬ ಉತ್ತಮ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮ ನಂಗೆ ತುಂಬಾ ಇಷ್ಟವಾಯಿತು. 'ಬೃಂದಾವನ ನಿಲಯೆ ರಾಧೆ..'ಅಂತರಂಗಗಳ ಬಿರುಕನ್ನು ಬೆಸೆಯಲು..ಚಿಂತಾ-ಚಿತೆಗಳ ಶಮನಿಸಲು, ಸದಾ ಮಧುರ ಸುಖ ಸದನವಾದ ಪ್ರೀತಿಯ ಅನುಭೂತಿ ಬೇಕು..ಪ್ರೀತಿಯಿದ್ದಲ್ಲಿ ಸರ್ವವೂ ಮಧುರ..
ಸುಮಾರು ಎರಡೂವರೆ ಗಂಡೆಗಳ ಕಾಲ ನಡೆದ ಈ ಸುಶ್ರಾವ್ಯ ಗಾಯನ ಕಾರ್ಯಕ್ರಮದಲ್ಲಿ ನಂಗಿಷ್ಟವಾದ ಕೆಲವು ಭಂಗಿಗಳನ್ನು ಇಲ್ಲಿ ನೀಡಿದ್ದೇನೆ..ನಿಮಗೂ ಇಷ್ಟವಾಗಬಹುದು ಎಂದು ನಂಬಿಕೆ. ಪ್ರೀತಿಯ ಪರಿಕಲ್ಪನೆಯಲ್ಲಿ ಮೂಡಿ ಬಂದ ಈ ಗಾಯನ ಕಾರ್ಯಕ್ರಮ ವಿಭಿನ್ನ ಅನಿಸಿತ್ತು. ಮುಸ್ಸಂಜೆಯಲ್ಲಿ ಮನಸ್ಸಿಗೆ ಅನುರಾಗದ ಮಳೆಗೈದ ಮಾನಸಿ ಅವರಿಗೆ ನನ್ನದೊಂದು ಅಭಿವಂದನೆ
ಶುಭವಾಗಲಿ ಮಾನಸಿ..ಇಂಥಹ ಇನ್ನಷ್ಟು ಕಾರ್ಯಕ್ರಮಗಳ ಆಶಯ ನನ್ನದು
4 comments:
ಹೌದು ನೀವಂದಂತೆ ಮನಸ್ಸು ಅರಳಿಸುವ ಕಾರ್ಯಕ್ರಮಗಳ ಅವಶ್ಯಕತೆಯಿದೆ.ಆದರೆ ದುರಂತ ನೋಡಿ ಕ್ರೌರ್ಯವೇ ತುಂಬಿ ಹೋಗಿದೆ.
ಹೌದು ಚಿತ್ರಾ, ಮಾನಸಿ ಅವರು ಹೇಳಿದಹಾಗೆ "There is no end for love".... ಒಲವೆ ಜೇವನ ಸಾಕ್ಷಾತ್ಕಾರ. ನಿಜಕ್ಕು ಪ್ರೀತಿಯಿಂದಾನೆ ಜೀವನ ಸಾರ್ಥಕ....
-Raಜಿ
Nimma Ayke tumba estavayitu.
geleya
rajesh
‘ಹುಚ್ಚುಕೋಡಿ ಮನಸು ಅದು ಹದಿನಾರರ ವಯಸು’.. ಶರಧಿಯ ಭಾವದಲೆಗಳ ಪಯಣದಲ್ಲಿ ‘ಒಲವೇ ಜೀವನ ಸಾಕ್ಷಾತ್ಕಾರ’ ಮೂಡಿಸಿದ್ದೀಯ ಗೆಳತಿ.. ಮಾನಸಿಯ ಸುಮಧುರ ಗಾಯನವನ್ನ ಕೇಳೋ ಅದೃಷ್ಟ ಸಧ್ಯಕ್ಕಂತೂ ನನಗಿಲ್ಲ.. ಆದರೆ ಒಂದೈದತ್ತು ನಿಮಿಷ ಗಾನಲೋಕದಲ್ಲಿ ಮಿಂದು ಬಂದ ಹಾಗಾಯ್ತು... ಚಂದದ ಚಿತ್ರಗಳ ಮೂಲಕ ಲೇಖನಕ್ಕೆ ಕಳಿ ನೀಡಿದ್ದೀಯ.. ಮನಸಿಗೆ ಮುದ ನೀಡುವ ಇಂತಹ ಕಾರ್ಯಕ್ರಮಕ್ಕೆ ಮತ್ತೆ ಮತ್ತೆ ಹೋಗುತ್ತಿರು.. ಅದರ ಅಲೆಗಳನ್ನು ಶರಧಿಯ ಮೂಲಕ ತಿಳಿಸುತ್ತಿರು..
Post a Comment