Wednesday, December 26, 2007

ಬಾಲ್ಯದಲ್ಲಿಯೇ ಭವಿಷ್ಯ ಕೊಲ್ಲುವ ಸಿನಿಮಾಗಳು

10th class 'A' section..ಇದೇನಪ್ಪಾ ಅಂದುಕೋಬೇಡಿ. 'ದಿಲ್ ಸತ್ಯ' ನಿರ್ದೇಶನದ ಹೊಸ ಫಿಲ್ಮ್ . ಶೂಟಿಂಗ್ ನಡೀತಿದೆ ಅಷ್ಟೇ. ಇದು ವಯಸ್ಕರು ನೋಡ್ಬೇಕೋ ಮಕ್ಕಳು ನೋಡ್ಬೇಕೋ ತಿಳೀತಾ ಇಲ್ಲ. ಕಾಲೇಜ್ ಹೀರೋ, ವಿದ್ತಾರ್ಥಿ, ಸ್ಟೂಡೆಂಟ್, ಮುಂತಾದ ಸಿನಿಮಾಗಳು ಬಂದತಾಯಿತು. ಚೆಲುವಿನ ಚಿತ್ತಾರದಲ್ಲಿ ಹೈಸ್ಕೂಲ್ ಹುಡುಗಿಯ ಲವ್ ಕತೆ ನೋಡಿಯಾಯಿತು. ಈಗ 10th class 'A' section ಲವ್ ಬಗ್ಗೆ ನೋಡಾಕೆ ಬಾಕಿಯಿದೆ. ಇದೂ ವಿದ್ಯಾರ್ಥಿಗಳ ಲವ್ ಅಂತೆ. 'A' section ಅನ್ನೋದ್ರಲ್ಲಿ ಏನು ವಿಶೇಷ ಇದೆ ಅಂತ ಗೊತ್ತಿಲ್ಲ. ಏನಾದ್ರೂ ವಿಶೇಷ ಇದ್ದೇ ಇರುತ್ತೆ. ಕಾದು ನೋಡಬೇಕು. ಹಿಂದೆ ಗಂಭೀರ ಸಿನಿಮಾಗಳೆಲ್ಲಾ ಬರ್ತಾ ಇದ್ದುವು. ಕಾಲೇಜು ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಸಿನಿಮಾಗಳು ಬಂದಂತಾಯಿತು. ಈಗ ಹೈಸ್ಕೂಲು ಕತೆ..ನೋ ನೋ ಲವ್ ಕತೆ. ಇನ್ನು ನೈಂತ್, ಸೆವೆಂತ್, ಫಿಪ್ತ್, ಥರ್ಢ್ ಕ್ಲಾಸ್ ಫಿಲ್ಮಗಳೂ ಬರಲಿವೆ.

ಈಗ ವಿಷಯಕ್ಕೆ ಬರ್ತೀನಿ ಕೇಳಿ. ಸಿನಿಮಾಗಳು, ಟಿ.ವಿ.ಯಿಂದ ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ ಎಂಬ ದೂರು ಈಗಲ್ಲ, ಬಹಳಷ್ಟು ಹಿಂದಿನಿಂದಲೇ ಕೇಳಿ ಬರ್ತಾ ಇದೆ. ಅದಕ್ಕಾಗಿ ಟಿ.ವಿ.ಗೆ ಮೂರ್ಖರ ಪೆಟ್ಟಿಗೆ ಅಂತ ಕರೆಯಲಾಯಿತು. ಹಾಗಂತ ನೋಡಿದವರೆಲ್ಲ ಮೂರ್ಖರಾಗಿಲ್ಲ. ಒಂದು ವೇಳೆ ಹಾಗೆ ಇರ್ತಾ ಇದ್ರೆ ಇಡೀ ಜಗತ್ತಿನ ಎಲ್ರೂ ಮೂರ್ಖರಾಗುತ್ತಿದ್ದರು. ಮೂರ್ಖರ ಜಗತ್ತೇ ಆಗುತ್ತಿತ್ತು. ಸಿನಿಮಾಗಳನ್ನು ನೋಡಿ ನೋಡಿ ನನ್ ಮಗ ಕೆಟ್ಟುಹೋದಪ್ಪಾ...ಅಂತ ಗೋಳಾಡುವ ಹೆತ್ತವರೂ ಇದ್ದಾರೆ. ಟಿ.ವಿ. ನೋಡಿ ನೋಡಿ ನನ್ ಮಗ ಕೆಟ್ಟೇ ಹೋದ..ಲವ್ ಮಾಡಕ್ಕೆ ಆರಂಭಿಸಿದ್ದ. ಏನ್ ಮಾಡೋದು ನಮ್ ಹಣೆಬರಹ..ಅಂತ ಹಣೆಬರಹವನ್ನು ದೂರುವವರೂ ಇದ್ದಾರೆ.

ಈಗ ಈ 10th class,.3rd class..ಮುಂತಾದ ಕ್ಲಾಸ್ವೈಸ್ ಸಿನಿಮಾಗಳನ್ನೂ ವಿದ್ಯಾರ್ಥಿಗಳು ನೋಡೇ ನೋಡ್ತಾರೆ. ಕೇವಲ ಕಾಲೇಜ್ ಮಕ್ಕಳು ಮಾತ್ರವಲ್ಲ..ಹೈಸ್ಕೂಲ್ ಮಕ್ಕಳೂ ನೋಡ್ತಾರೆ. ಏನೂ ತಿಳಿದಿಲ್ಲಂದ್ರೆ ಅದನ್ನು ನೋಡಿಯಾದ್ರೂ 'ಮರ ಸುತ್ತುವ ಲವ್' ಮಾಡೋಕೆ ಆರಂಭಿಸುತ್ತಾರೆ. ಆದ್ರೆ ಮಕ್ಕಳ ಬಗ್ಗೆ ಬಡ ಬಡ ಬಾಯಿ ಬಡಿದುಕೊಳ್ಳುವ ಕೆಲವು ಹೆತ್ತವರು ತಮ್ಮ ಮಕ್ಕಳನ್ನು ಫಿಲಂಗೆ ಹೋಗ್ಬೇಡ ಅನ್ತಾರ ಇಲ್ಲ, ಟಿವಿ ನೋಡ್ಬೇಡ ಅನ್ತಾರ ಇಲ್ಲ..ಯಾರಾದ್ರೂ ಬುದ್ದಿವಂತರು ಇಂಥ ಫಿಲಂಗಳು ವಿದ್ಯಾರ್ಥಿಯ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತೆ ಅಂಥ ವಿರೋಧಿಸ್ತರಾ ಇಲ್ಲ..ಆದ್ರೆ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ದ ಬಗ್ಗೆ ಸರ್ಕಾರ 'ಚ'ಕಾರ ವೆತ್ತಿದ್ರೆ ಸಾಕು..ಹನುಮಂತನ ಬಾಲದ ಥರ ಪುರಾತನ ಸಂಸ್ಕೃತಿ, ಆಚಾರ, ವಿಚಾರಗಳು ಎಲ್ಲಾ ಸಿದ್ಧಾಂತಗಳು ನಾಲಿಗೆ ಮೇಲೆ ನಲಿದಾಡುತ್ತೆ. ಆದ್ರೆ ಯಾವುದೋ ಥರ್ಢ್ ಕ್ಲಾಸ್ ಫಿಲಂ ಬಂದ್ರೆ ಅದನ್ನು ನಿಯತ್ತಿನಲ್ಲಿ ವಿರೋಧಿಸುವವರು ಎಷ್ಟು ಮಂದಿ ಇರ್ತಾರೆ ಹೇಳಿ? ಇರ್ತಾರೆ..ಹೇಗಿರ್ತಾರೆ..ನಾಳೆ ಇಂಥ ಟಾಕೀಸ್ ಮೇಲೆ ಮುತ್ತಿಗೆ..ಆ ಸಿನಿಮಾದ ಹಾಡು, ಸಂಭಾಷಣೆಯಲ್ಲಿ ಜಾತಿಗೆ ಅನ್ಯಾಯ, ಧರ್ಮಕ್ಕೆ ಅನ್ಯಾಯ ಹೀಗೆ ಅನ್ಯಾಯಗಳನ್ನು ಹೇಳಿ ಪತ್ರಿಕಾಗೋಷ್ಠಿ ಕರೆದು ಅಲ್ಲಿ ಅರ್ಧ ಗಂಟೆ ಕೊರೆದು, ಮರುದಿನ ಮುತ್ತಿಗೆ ಹಾಕಿ ಸುಮ್ಮನಿರ್ತಾರೆ. ಹಾಗಂತ 10th class 'A' section ಕೆಟ್ಟ ಫಿಲಂ ಎನ್ನುತ್ತಿಲ್ಲ. ಇನ್ನೂ ಅದ್ರ ಬಗ್ಗೆ ಹೇಳಕೆ ನೋಡಿಲ್ಲ..ಕೇಳಿಲ್ಲ. ಆದ್ರೆ 10ನೇ ಕ್ಲಾಸ್ ಹುಡುಗಿ ಲವ್ ಮಾಡ್ತಾಳೆ..ಪುಟ್ಟ ಹುಡುಗಿ ಹಿರೋಯಿನ್ ಎಲ್ಲ ಗೊತ್ತು. ನಾನಂದುಕೊಳ್ಳುವುದು ಅದಲ್ಲ, ಮಕ್ಕಳ ಮೇಲೆ ಪರಿಣಾಮ ಬೀಳುತ್ತೆ ಅನ್ನುವ ಕೆಲವು ಹೆತ್ತವರು ಯಾಕೆ ಇಂಥ ಸಿನಿಮಾಗಳನ್ನು ವಿರೋಧಿಸಲ್ಲ ಅಂತ. ಇದು ಮಾತ್ರವಲ್ಲ ಬಾಬಾ, ಹೈಸ್ಕೂಲು,ಪಿಯುಸಿ, ಚಿತ್ರಗಳೂ ಚಿತ್ರೀಕರಣದ ಹಂತದಲ್ಲಿವೆ. ನಿನ್ನೆ ಈ ಬಗ್ಗೆ ಮಾತಾಡುತ್ತಿರುವಾಗ ನನ್ನ ಪತ್ರಕರ್ತ ಮಿತ್ರರೊಬ್ಬರು ಹೇಳಿದ್ರು 'ಏನಾಯ್ತು ಸಿನಿಮಾದಲ್ಲಿ ಸತ್ಯ'ವನ್ನೇ ಹೇಳ್ತಾರೆ ಅಂತ. ಹೌದು! ಒಪ್ಪಿಕೊಳ್ಳೋಣ ಸತ್ಯನೇ ಹೇಳ್ತಾರೆ..ಆದ್ರೆ ಪುಟ್ಟ ಮಕ್ಕಳ ಮೇಲೆ ಇದು ಎಂಥ ಪರಿಣಾಮ ಬೀರುತ್ತೆ ಗೊತ್ತೆ? ಮಕ್ಕಳ ಮನಸ್ಸಿನ ಮೇಲೆ ಒಳ್ಳೇ ಪರಿಣಾಮವಂತೂ ಬೀಳಲ್ಲ ಎನ್ನುವುದು ನೂರಕ್ಕೆ ನೂರೂ ಸತ್ಯ. ಮಕ್ಕಳ ಭವಿಷ್ಯ ಬೆಳಗಬೇಕಾದ ನಮ್ಮಲ್ಲಿ, ಬಾಲ್ಯದಲ್ಲಿಯೇ ಭವಿಷ್ಯ ಕೊಲ್ಲುವ ಕಾರ್ಯ ನಡೆಯುತ್ತಿದೆ. ಇದನ್ನು ತಡೆಯುವರಾರು?

2 comments:

ವಿಕಾಸ್ ಹೆಗಡೆ/Vikas Hegde said...

ಇಂತ ಸಿನೆಮಾಗಳನ್ನು ತಿರಸ್ಕರಿಸಿ ತಡೆಗಟ್ಟೋ ಹೊಣೆ ನಮ್ಮ ಮೇಲೆ ಇದೆ. ಒಂದೆರಡು ಚಿತ್ರಗಳು ಓಡಲಿಲ್ಲ ಅಂದ್ರೆ ಇಂತಹ ಅಪದ್ಧಗಳೆಲ್ಲಾ ನಿಲ್ಲುತ್ತವೆ.

Manjunatha Kollegala said...

ಸರಿಯಾದ ಮಾತು. ಸೆನ್ಸಾರ್ ಮಂಡಲಿಯ ಚರ್ಮ ದಿನೇದಿನೇ ದಪ್ಪವಾಗುತ್ತಾ ನಡಿದಿದೆ, ಹಾಗೇ ವೀಕ್ಷಕನ ಚರ್ಮ ಕೂಡ. ಇವತ್ತು ಹಸಿ ಹಸೀ ಕ್ರೌರ್ಯದ ಚಿತ್ರಗಳು ಕೂಡ ಸೆನ್ಸಾರ್ ಜರಡಿಯಲ್ಲಿ ಸಲೀಸಾಗಿ ತೂರಿ ಪ್ರೇಕ್ಷಕನ ಮುಂದೆ ವಿಜೃಂಭಿಸುತ್ತವೆ. ನಾಳೆ ಇದು ಜರಡಿಯ ತೂತನ್ನು ಮತ್ತಷ್ಟು ಅಗಲಗೊಳಿಸುತ್ತದೆ.