ನನಗೆ ಮಲ್ಲಿಗೆ ಅಂದ್ರೆ ಭಾಳ ಪ್ರೀತಿ. ಅದರಲ್ಲೂ ನಮ್ಮೂರ ಮಲ್ಲಿಗೆ ಅಂದ್ರೆ ಅಕ್ಕರೆ ಜಾಸ್ತಿ. ಅದೇ 'ಮಂಗ್ಳೂರ ಮಲ್ಲಿಗೆ' ಅಂತಾರಲ್ಲಾ ಅದೇ ಮಲ್ಲಿಗೆ. ಒಂದು ಮಲ್ಲಿಗೆ ಎಸಳು ಕೂಡ ನಮ್ಮನೆ-ಮನವನ್ನು ಘಮ್ಮೆನಿಸಬಲ್ಲುದು.ನಾನು ಊರಿಗೆ ಹೋಗುವಾಗ ತಪ್ಪದೆ ತಲೆತುಂಬಾ ಮಲ್ಲಿಗೆ ಮುಡಿತೀನಿ. ಯಾಕಂದ್ರೆ ಈ ಬೆಂಗ್ಲೂರಲ್ಲಿ ಅಂಥ ಸುಂದರ ಮಲ್ಲಿಗೆನೇ ಸಿಗೊಲ್ಲ. ಅದನ್ನು ಏನಿದ್ರೂ ನೀವು ಮಂಗಳೂರಲ್ಲೇ ನೋಡಬೇಕು. ಮೊನ್ನೆ ಮೊನ್ನೆ ಊರಿಗೆ ಹೋದೆ. ಹೋಗುವಾಗಲೇ ಪೇಟೆಯಲ್ಲಿ ಇಳಿದು ಮಲ್ಲಿಗೆ ತಕೊಂಡು ಹೊರಟೆ.
ನಾನು ಶಾಲೆಗೆ ಹೋಗುತ್ತಿದ್ದಾಗಲೂ ಅಷ್ಟೇ ತುಂಬಾ ಹೂವು ಮುಡಿಯೋ ಹುಚ್ಚು. ಅದರಲ್ಲೂ ಮಲ್ಲಿಗೆ ಅಂದ್ರೆ ಜಡೆಗಿಂತಲೂ ಜಾಸ್ತಿ ಮಲ್ಲಿಗೆ ಮುಡಿಯುತ್ತಿದ್ದೆ. ಆವಾಗ ನಮ್ಮ ಹೆಡ್ ಮಾಸ್ತರು ಯಾವಾಗಲೂ ಹೂವು ಮುಡಿದಿದ್ದಕ್ಕೆ ರೇಗಿಸುತ್ತಿದ್ದು ಈಗಲೂ ನೆನಪಿದೆ. ಹೈಸ್ಕೂಲು-ಕಾಲೇಜಿನಲ್ಲೂ ಅಷ್ಟೇ. ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಅಮ್ಮ ಎರಡು ಜಡೆ ಕಟ್ಟಿ. ಎರಡೂ ಜಡೆಗೂ ಮಲ್ಲಿಗೆ ಮುಡಿಸಿ ಕಳುಹಿಸುತ್ತಿದ್ದರು. ಆ ಮಲ್ಲಿಗೆ ಮುಡಿದು ಕ್ಲಾಸಿನಲ್ಲಿದ್ದವರಿಗೆಲ್ಲ ಅಸೂಯೆ ಬರಿಸೋದು ನನ್ ಕೆಲಸ. ಅದೆಷ್ಟೋ ಹುಡುಗಿಯರು ನನ್ ಮಲ್ಲಿಗೆ ಮೇಲೆ ಕಣ್ಣು ಹಾಕಿದ್ದಾರೋ? ಕಡಲವರಂರೂ ಸ್ವಲ್ಪ ಕೊಡೇ ಅನ್ನುತ್ತಾ ತೆಗೆದುಕೊಂಡು ಬಿಡೋರು.
ನಮ್ಮೂರಿನ ಪ್ರತಿ ಹಬ್ಬ ಅಥವಾ ಯಾವುದೇ ಸಮಾರಂಭಗಳಲ್ಲಿ ಮಲ್ಲಿಗೆ ತಂದೇ ತರುತ್ತಾರೆ. ವಧುವಿಗೆ ಮಲ್ಲಿಗೆ ಮುಡಿಸಿದರೇನೇ ಚೆನ್ನ ಕಾಣೋದು. ಅಷ್ಟೇ ಅಲ್ಲ, ತಲೆಯಲ್ಲಿ ಆ ಮಲ್ಲಿಗೇನ ನೋಡೋದು ಕಣ್ಣಿಗೆ ಒಂಥರಾ ಹಬ್ಬ.
ಅದೇ ಮೊನ್ನೆ ನಾನು ಊರಿಗೆ ಹೋದನ್ನಲ್ಲಾ..ಬೆಂಗಳೂರಿಗೆ ವಾಪಾಸು ಬರುವಾಗಲೂ ಮಲ್ಲಿಗೆ ತಕೋ ಬಂದೆ. ಇತರ ಮಲ್ಲಿಗೆಗಳಿಗಿಂತ ಇದು ದುಬಾರಿ. ಮನೆಯಿಂದ ಹೊರಟು 10 ಗಂಟೆ ಪ್ರಯಾಣಿಸಿದವಳು ಮಲ್ಲಿಗೇನ ಜೋಪಾನವಾಗಿ ತಕೊಂಡು ಬಂದೆ. ಇಡೀ ಬಸ್ಸೇ ಘಮ್ಮೆನ್ನುತ್ತಿತ್ತು.
ಮಲ್ಲಿಗೆ ತಂದ್ರೆ ಬೆಂಗಳೂರಿನ ನಮ್ಮನೆ ಬಿಡೀ ಇಡೀ ಬಿಲ್ಡಿಂಗೇ ಘಮ್ ಅನ್ನಬೇಕೇ? ಪಕ್ಕದ ಮನೆ ಆಂಟಿ ಬಂದು ಕೇಳಿದ್ರು...ತುಂಡು ಮಾಡಿ ಕೊಟ್ಟೆ. ಅವರ ಮಕ್ಜಳು, ಮರಿಗಳೆಲ್ಲಾ ಮುಡಿದ್ರು. ನಾಲ್ಕು ಮನೆಗೆ ಹಂಚಿದೆ. ಎಲ್ರ ಬಾಯಲ್ಲೂ ಮಂಗ್ಳೂರ ಮಲ್ಲಿಗೆ. ನಮ್ಮನೆ ಓನರ್ ಆಂಟಿಯ ಖುಷಿಗಂತೂ ಸರಿಸಾಟಿ ಏನೂ ಇರಲಿಲ್ಲ. ಅಷ್ಟು ಖುಷಿಯಾಗಿಬಿಟ್ರು. ಎಲ್ಲರಿಗೆ ಹಂಚಿ ಪುಟ್ಟದೊಂದು ತುಂಡು ಉಳಿಯಿತು. ದೇವರ ಫೋಟೋಗೆ ಹಾಕಿ ಮಲಗುವಾಗ ಮುಡಿದುಕೊಂಡೇ ಮಲಗಿದೆ.
ಹಂಗೇ ನಮ್ಮೂರ ಮಲ್ಲಿಗೆ ಅಂದ್ರೆ ತುಂಬಾ ಚಂದ..ನೋಡಕ್ಕೂ ಮುಡಿಯಕ್ಕೂ. ನೀವು ನೋಡಿದ್ರೂನೂ ಇಷ್ಟಪಡ್ತೀರ..ತುಂಬಾ ಪ್ರೀತಿ ಮಾಡ್ತೀರಾ!
Monday, August 17, 2009
Subscribe to:
Post Comments (Atom)
12 comments:
Chitraravare,
Malligeya kampannu nimma building poorthi chimmisiddheera.Chennagide malligeya hogalike.Compare maadi nodbekitthu B'lore mallige & M;lore mallige.
Shekar.
Hi Chitra
chennagide nimma mallige varnane. namma kade(BIJAPUR) mallige astu suvasane irolla adkke nanu nammurige hoguvag kaddayavagi mallige oyyabeku nanu bengalore mallige oyyuttidde. nimma mangalore mallige varnane keli adanne oyyabeku anstide, Mangalore ,allige bangaloralli sigutta
Barita iri
Laxman
ಮಂಗಳೂರು ಮಲ್ಲಿಗೆಗೆ ಒಳ್ಳೆ ಸುವಾಸನೆ ಇರುತ್ತದೆ. ನಿಮ್ಮ ಲೇಖನಗಳೂ ಸಹ ಮಂಗಳೂರು ಮಲ್ಲಿಗೆಯಂತಿವೆ.
mangalooru mallige vaasane bantandre oorina nenapella marukaLisutte.. nimma baraha kooda adannu nenapisde thanks
ನಿಜಕ್ಕೋ ಮಂಗಳೂರು ಮಲ್ಲಿಗೆ ಬಲು ಚೆನ್ನ...ಮದುವೆ ಮನೆಯಲ್ಲಂತು ಇನ್ನೂ ಚೆಂದ.ನಮ್ಮ ಫ್ರೆಂಡ್ ಒಬ್ಬರು ಬೆಂಗಳೂರಿನಲ್ಲಿ ನಡೆದ ಮದುವೆಗೆ ಮಂಗಳೂರಿನಿಂದ ಮಲ್ಲಿಗೆ ತರಿಸಿದ್ರು...ನಾನು ಮೈಸೂರಲ್ಲಿದ್ದಾಗ ನಿಮ್ಮ ತರಾನೆ ಮಲ್ಲಿಗೆ ತೆಗೆದುಕೊಂಡು ಹೋಗಿ ಅಕ್ಕ-ಪಕ್ಕ ಆಫೀಸ್ ಲ್ಲು ಹಂಚುತ್ತಿದ್ದೆ..
ಚಿತ್ರಾ ಎ೦ಬ ಮ೦ಗಳೂರು-ಮಲ್ಲಿ :-
ನಿನ್ನ ಮಲ್ಲಿಗೆ ಪರಿಮಳ ಇಲ್ಲಿಗೂ ಬ೦ತು. ಊರಿಗೆ ಹೋಗಿ ಬ೦ದು ಏನು ಬರಿತಾಳೆ ನಮ್ ಚಿತ್ರಾ ಅ೦ತ ಯೋಚನೆ ಮಾಡ್ತಿರುವಾಗಲೇ ಬ೦ತು ನೋಡು ಮಲ್ಲಿಗೆ ಕಥೆ. ಚೆನ್ನಾಗಿದೆ. ಇನ್ನು ಏನಾದರು ಬರಿ ಊರಿನ ಅನುಭವಗಳ ಬಗ್ಗೆ.
ಊರಿ೦ದ ಏನೇನು ತ೦ದಿದ್ದಿ, ಹಪ್ಪಳ-ಉಪ್ಪಿನಕಾಯಿ ?? ಊರಿ೦ದ ತ೦ದ ತಿ೦ಡಿತಿನಿಸುಗಳು ನಿನಗಿರಲಿ, ಊರ ಅನುಭವಗಳನ್ನಾದರು ನಮ್ಮೊಡನೆ ಹ೦ಚಿಕೋ ತ೦ಗೀ !!
ಮಲ್ಲಿಗೆ ಪುರಾಣ ಓದಿದೆ... ಆದರೂ.. ಇನ್ನೂ ಬೇಕನ್ನಿಸಿತು...
ಮಂಗಳೂರಿನಲ್ಲಿ ಮಲ್ಲಿಗೆ ಇಲ್ಲದೆ ಸಮಾರಂಭಗಳಿಲ್ಲ...
ಆದರೆ.. ಒಂದು ವಿಷಯ.. ನೀವು ಲಗತ್ತಿಸಿದ ಚಿತ್ರ ಶುದ್ಧ ಮಂಗಳೂರು ಮಲ್ಲಿಗೆಯಲ್ಲ... ಅದು ಜಾಜಿ ಮಲ್ಲಿಗೆ ಎನ್ನುವುದು ನನ್ನ ಅಂಬೋಣ.
ಮಂಗಳೂರು ಮಲ್ಲಿಗೆ ಕೆಂಪು ಬಣ್ಣದಲ್ಲಿರುವುದಿಲ್ಲ... ಶುದ್ಧ ಬಿಳಿ ಬಣ್ಣ
ಅಂದಾಗೆ ಉಡುಪಿ ಸಮೀಪದ "ಶಂಕರ ಪುರ" ಮಲ್ಲಿಗೆ ಕೃಷಿಗೆ ಭಾರೀ ಫೇಮಸ್ಸು.. ಆ ಪ್ರದೇಶದಲ್ಲಿ ಮಲ್ಲಿಗೆಯಿಲ್ಲದ ಅಂಗಳ ಕಾಣುವುದೇ ಅಪರೂಪ...
ಹಾಂ ಇನ್ನೊಂದು ವಿಷಯ ಮಲ್ಲಿಗೆಯಲ್ಲಡಗಿದೆ...
ಹೆಚ್ಚಾಗಿ ಮಲ್ಲಿಗೆ ಬೆಳೆಸೋದು ಕ್ರೈಸ್ತರು, ಮಾರೋದು ಮುಸ್ಲಿಮರು.. ಹಾಗೂ ಮುಡಿಯೋದು ಹಿಂದೂಗಳು...
ಈ ನಿಟ್ಟಿನಲ್ಲಿ ಮಲ್ಲಿಗೆ ಕರಾವಳಿಗರಲ್ಲಿ ಕೋಮು ಸೌಹಾರ್ಧತೆಯನ್ನು ಬೆಳೆಸಲು ಸಹಕಾರಿಯಾಗಿದೆ.
ಮಲ್ಲಿಗೆ ತರ ನಿಮ್ಮ ಬರಹ ಕೂಡ ಚೆನ್ನಾಗಿದೆ.
ಮಲ್ಲಿಗೆ ತರ ನಿಮ್ಮ ಬರಹ ಕೂಡ ಚೆನ್ನಾಗಿದೆ.
very nice dear.. i like the way you present your view.. u take very simple matter and present it in such a way that it pleases the reader... Nimma Article odovaaga mangalore mallige kampu suthalu pasarisida anubhava!! :-)
-Divyadarshini
mundina baari oorige hogi bartha nanagu ondistu hoovu tanni aaytha..
neevu pustaka hora taruvaaga "mangalooru mallige" antha sheershike koDi. pustaka Ghama Ghama antha irali.
Post a Comment