Saturday, March 7, 2009

'ಮೈ ಆಟೋಗ್ರಾಫ್' ಪುಟಗಳಿಂದ...

ನನ್ನೆದೆಯ ಮಾತು ಇದೆ..
ಅಮ್ಮ ಕಲಿಸಿದ ಹಾಡು ಇದೆ
ಆ ಹಾಡಿನ ತೋಟದಲಿ
ನೀವು ಬೆಳೆಸಿದ ಹೂವು ಇದೆ...
ಈ ಹೃದಯ ಬಯಸುವುದು ಪ್ರೀತಿಸುವ ಹೃದಯವನ್ನು..! ಎಂದು ಮುದ್ದಾದ ಅಕ್ಷರಗಳಲ್ಲಿ ಬರೆದುಬಿಟ್ಟು ನನ್ನ ಪ್ರೀತಿಗೆ 'ಕಾಲೇಜಿಗೆ' ಸುಂದರವಾದ ಪುಸ್ತಕವನ್ನು ನೀಡಿದ್ದೆ...ಅದು 'ಮೈ ಆಟೋಗ್ರಾಫ್'! ಅಮ್ಮನೊಂದಿಗೆ ಮುನಿಸಿಕೊಂಡು ಮನಸ್ಸು ಭಾರವಾದಗ, ಕಾಲೇಜಿನ ಹಳೇ ನೆನಪುಗಳು ನನ್ನ ಕಾಡಿದಾಗ, ಮನೆಯಲ್ಲಿ ಅಣ್ಣ-ತಮ್ಮ ನ ಜೊತೆ ರಚ್ಚೆ ಹಿಡಿದು ಬೈಸಿಕೊಂಡು ಮೌನಕ್ಕೆ ಶರಣಾದಾಗ, ಪವರ್ ಕಟ್ ಆಗಿ ಮನೆಯೊಳಗೆ ಕ್ಯಾಂಡಲ್ ಉರಿಸಿ ಕುಳಿತಿದ್ದಂತೆ ನನ್ನ ಸುತ್ತುಹಾಕುವ ನೆನಪುಗಳ ಜೊತೆ ಮಾತಿಗಿಳಿದಾಗ, ಏಕಾಂತದಲ್ಲಿ ಭಾವನೆಗಳು ನನ್ನ ಮುತ್ತಿಕ್ಕಿದ್ದಾಗ..ನಾನು ಕೈಗೆತ್ತಿಕೊಳ್ಳುವುದು 'ಮೈ ಆಟೋಗ್ರಾಫ್'..!! ಹರಿದು ಚಿಂದಿ ಚಿತ್ರಣ್ಣವಾಗಿರುವ ಆ ನೆನಪಿನ ಹೊತ್ತಗೆಯ ಪುಟಗಳನ್ನು ಮತ್ತೆ ಜೋಡಿಸುತ್ತಾ...ನೋಡ್ತೀನಿ. ಅದೇ 'ಮೈ ಆಟೋಗ್ರಾಫ್'!

ಕನಸ ಕಸುವೂ ಬೇಕು
ಯಶದ ಹಾದಿಯ ಹೆಜ್ಜೆಗೆ
ಬಯಕೆ ಬಯಲು ಎರಡೂ ಬೇಕು
ಸಾಧನೆಯ ಕಾಲ್ಗೆಜ್ಜೆಗೆ...

ನನ್ನ ತುಂಬಾ ಪ್ರೀತಿಸಿದ, ಇಂದಿಗೂ ನನ್ನೆಲ್ಲಾ ಕನಸುಗಳಿಗೆ ಜೀವ ತುಂಬುತ್ತಾ ಬರುವ ಪ್ರೀತಿಯ ಮೇಡಂ ಶುಭದಾಸ್ ಮರವಂತೆ ಬರೆದ ನಾಲ್ಕು ಸಾಲುಗಳು ನನ್ನ ಹೊತ್ತಗೆಯ ಮೊದಲ ಪುಟದಲ್ಲೇ ಸ್ವಾಗತಿಸುತ್ತವೆ. ನನ್ನ ಮುದ್ದಾದ ಅಕ್ಷರಗಳನ್ನು ಕಂಡು ಹೆಮ್ಮೆಪಡುತ್ತಿದ್ದ ನಾಗಣ್ಣ ಸರ್, ನಿತ್ಯ ವಿಧೇಯತೆಯ ಪಾಠ ಹೇಳುತ್ತಾ ಬೆನ್ನುತಟ್ಟುತ್ತಿದ್ದ ಸಂಪತ್ ಸರ್...ಹಿತನುಡಿಗಳು.
'ಸವಿನೆನಪುಗಳು ಸಾವಿರವಿದ್ದರೂ, ಮನದೊಳಗೆ ನಿನಗೊಂದು ಮನೆಯಿದೆ ಗೆಳತೀ..'ಎಂದು ಸವಿಸವಿ ಮಾತುಗಳನ್ನು ಗೀಚಿದ ಸ್ನೇಹಿತರು, ನಿತ್ಯ ಅಕ್ಕಾ ..ಅಕ್ಕಾ..ಎಂದು ಹಿಂಬಾಲಿಸುತ್ತಿದ್ದ ನನ್ನ ತಮ್ಮ-ತಂಗಿಯರ ಎಂಥೆಂಥ ಸವಿನುಡಿಗಳು..ಪ್ರೀತಿಯ ಜೊತೆಜೊತೆಗೆ.
20 ಪುಟಗಳನ್ನು ಮೊದಲೇ ಮೀಸಲು ಎಂದು ಬರೆದಿಟ್ಟ ಆ ನನ್ನ ಗೆಳತಿ ಕವಿತಾ, ಹಾಸ್ಟೇಲಿನಿಂದ ಗಂಟುಮೂಟೆ ಕಟ್ಟಿಕೊಂಡು ಹೊರಡೋ ಮುಂಚಿನ ದಿನ..ಕರೆಂಟಿಲ್ಲದೆ ಕ್ಯಾಂಡಲ್ ಬೆಳಕಿನಡಿಯಲ್ಲಿಯೇ ಪುಟತುಂಬಿಸಿದ್ದಳು. ಆದರೆ ಮದುವೆಯ ಬಳಿಕ ಫೋನು ಮಾಡದಿದ್ದರೂ..ಮೊನ್ನೆ ಮೊನ್ನೆ ಅವಳಿಗೆ ಹೆಣ್ಣು ಮಗುವಾದಾಗ ಅವಳ ಗಂಡನೇ ಫೋನು ಮಾಡಿ ಖುಷಿಸುದ್ದಿ ತಿಳಿಸಿಬಿಟ್ಟರು. 'ಇಷ್ಟವಾಗದನ್ನು ಕಷ್ಟದಿಂದಲೇ ಸಹಿಸಿ, ಕಷ್ಟವೇ ಇಷ್ಟವೆಂಬಂತೆ ಬದುಕುವ ಕಲೆ ಹೇಗೆ ಕಲಿತೆ, ನನಗೂ ಕಲಿಸಿಕೊಡು ಅಕ್ಕಾ' ಎಂದು ನಾಲ್ಕು ಪುಟ ಭಾವದನಿಗಳನ್ನು ಬಿಚ್ಚಿಟ್ಟ ನನ್ನ ಪ್ರೀತಿಯ ತಮ್ಮ ಪಚ್ಚು...ಈಗಲೂ ಮೈಸೂರಿನಿಂದ ಫೋನು ಮಾಡಿ ಸಂತೋಷಗೊಳಿಸುತ್ತಾನೆ. ಕಾಲೇಜು ಕ್ಯಾಂಪಸ್ ನಲ್ಲಿ ನಿತ್ಯ ಹೊಡೆದಾಡುತ್ತಿದ್ದ ಪ್ರೀತಿಯಿಂದ ದಿನಾ ಕಿವಿಹಿಂಡುತ್ತಿದ್ದ ನನ್ನ ತುಂಬಾ ಪ್ರೀತಿಸುವ ಮುದ್ದು ತಮ್ಮ ಸಂದೇಶ ಈಗಲೂ ನನ್ನ ಮಡಿಲಲ್ಲೇ ಇದ್ದಾನೆ ಅನ್ನೋ ಬೆಟ್ಟದಷ್ಟು ಖುಷಿ ನನಗೆ.
ದಿನಾ ಮಧ್ಯಾಹ್ನದ ಕ್ಲಾಸಿನಲ್ಲಿ ಅಕ್ಕರೆಯಿಂದ ಚಾಕಲೇಟು ನೀಡುತ್ತಿದ್ದ, ಜಗಳವಾಡುತ್ತಿದ್ದ ಗೆಳೆಯ ಸುದರ್ಶನ್ ಬೆಂಗಳೂರಿನಲ್ಲೇ ಇದ್ದರೂ ಫೋನು ಕರೆಗೂ ಬರ..ಫೋನ್ ಮಾಡಿದರೂ ರಿಸೀವ್ ಮಾಡಲಾಗದಷ್ಟು ಬ್ಯುಸಿಯಾಗಿದ್ದಾನೆ. "ಬದುಕು ಇರುವುದು ಬಾಳುವುದಕ್ಕಾಗಿ...ಬಾಳು ಇರುವುದು ಬೆಳೆಯುವುದಕ್ಕಾಗಿ" ಎಂದು ಸುಂದರ ಬದುಕಿಗೆ ಶುಭಹಾರೈಸುತ್ತಾ ನೆನಪಿನ ಹೊತ್ತಗೆಯಲ್ಲಿ ಚಂದದ ಅಕ್ಷರಗಳಿಂದ ಬರೆದಿಟ್ಟ ನಿತ್ಯ ಅಪರೂಪಕ್ಕೊಮ್ಮೆ ನಗುತ್ತಿದ್ದ ಪ್ರೀತಿಯ ಗೆಳೆಯ ವೃಷಭ್ ಈಗಲೂ ಪುರುಸೋತ್ತಿನಿಂದ ಸವಿದನಿಗಳಿಗೆ ಕಿವಿಯಾಗುತ್ತಾನೆ. "ಹುಡುಗಿಯರು ಕೊರಳಿಗೆ ಹಾಕುತ್ತಾರೆ ಮಣಿಸರ...
ಆದ್ರೆ ಹುಡುಗರು ಡೈಲಿ ಹಾಕುತ್ತಾರೆ 'ಗಂಗಸರ'..
ಚಿತ್ರಾ ನಿನ್ನ ಬಿಟ್ಟಿರುವ ಕಿಂಚಿತ್ತೂ ತಾಕತ್ತು ನಂಗಿಲ್ಲ" ಎಂದು ಪೋಲಿ ಜೋಕುಗಳನ್ನು ತೇಲಿಬಿಟ್ಟ ಗೆಳೆಯ ರೋಹನ್, ಈಗ ಎಲ್ಲಿದ್ದಾನೋ ದೇವರೇ ಬಲ್ಲ. ದಿನಾ ನನಗೆ ಕೀಟಲೆ ಮಾಡು ಗುದ್ದು ತಿನ್ನುತ್ತಿದ್ದ ತರಗತಿಯ ಲಂಭು ಸಂತೋಷ ಇತ್ತೀಚೆಗೆ 'ನಿನ್ನ ಯಾವ ಹುಡುಗನೂ ಎತ್ತಹಾಕ್ಕೊಂಡು ಹೋಗಿಲ್ವಾ?' ಅಂತ ನಕ್ಕುನಗಿಸಿದ್ದ.
ಹಾಸ್ಟೇಲಿನಲ್ಲಿ ನಿತ್ಯ ನನ್ನ ಕೀಟಲೆ, ಪೋಲಿ ಜೋಕುಗಳಿಗೆ ಸಾಥ್ ನೀಡುತ್ತಿದ್ದ ಗೆಳತಿ ಚಿತ್ರಕಲಾ ಮರೆಯದೆ ಇತ್ತೀಚೆಗೆ ಮದುವೆಗೆ ಕರೆದಿದ್ದಳು. 'ತಾಳಿ ಕಟ್ಟುವ ಶುಭವೇಳೆ...ಬರಲಿ ಎನಗೊಂದು ಪ್ರೀತಿಯ ಕರೆಯೋಲೆ' ಎಂದು ಗೀಚಿಟ್ಟ ಗೆಳತಿ ಗೀತಾನಿಗೆ ಮದುವೆಯಾಗಿದೆಯೋ ಗೊತ್ತೇ ಇಲ್ಲ. ನನ್ನ ಬರವಣಿಗೆಗಳಿಗೆ ದಿನಾ ಬೆನ್ನುತಟ್ಟುತ್ತಿದ್ದ, 'ಭವಿಷ್ಯದಲ್ಲಿ ನಿನ್ನ ನಾ ಬರಹಗಾರ್ತಿಯಾಗಿ ನೋಡಬೇಕು 'ಎಂದು ಶುಭಹಾರೈಸಿದ ಮೂರನೇ ಬೆಂಚಿನ ಗೆಳತಿ ರಜನಿ,..ವಿಳಾಸ ಬರೆಯುವುದನ್ನು ಮರೆತುಬಿಟ್ಟಿದ್ದು ಮನಸ್ಸಿಗೆ ತುಂಬಾ ನೋವಾಗುತ್ತೆ. 'ಚಿತ್ರಾ ನಿನ್ನ ಹೇಗೆ ನಾ ಬಿಟ್ಟಿರಲೀ?' ಎಂದು ಅತ್ತು ವಿದಾಯ ಹೇಳಿದ ಗೆಳತಿ ಶ್ರುತಿ ಈಗ ಇಲ್ಲೇ ದಾರಿ ನಡುವೆ ಸಿಕ್ಕರೂ ಮತನಾಡಿಸಲೂ ಅವಳಿಗೆ ಪುರುಸೋತ್ತಿಲ್ಲ. ಹಾಸ್ಟೇಲಿನಲ್ಲಿ ನನ್ನ ಬೆಡ್ ಶೀಟ್ ಒಳಗಡೆ ಹುದುಗಿ ಮಲಗುತ್ತಿದ್ದ ನನ್ನ ಮುದ್ದು ತಂಗಿ ಪ್ರತಿಮಾನಿಗೆ ಈಗಲೂ ಫೋನ್ ಮಾಡಿ ಮಾತನಾಡದಿದ್ದರೆ ನಿದ್ದೆನೇ ಬರಲ್ಲ...ಇದು 'ಮೈ ಆಟೋಗ್ರಾಫ್'!
ಅಬ್ಬಾ..! ಇಷ್ಟು ನೆನಪುಗಳು ಗರಿಗರಿಯಾಗಿ ಬಿಚ್ಚಿ..ಬರೆದು ಮುಗಿಸಿದಾಗ ನಿನ್ನೆ ರಾತ್ರಿ ೧೨ ಗಂಟೆ. 'ಭಾವಸಂಗಮ' ದ ಹಾಡುಗಳು ಒಂದು ರೌಂಡು ಮುಗಿದು ..ಎರಡನೇ ರೌಂಡು ಶುರುವಾಗಿತ್ತು. ತಮ್ಮ ಸಂದೇಶ 'ಅಕ್ಕಾ, ಮಲಗು..ನಾಳೆ ಚಪಾತಿ-ಪಲ್ಯ ಮಾಡಬೇಕು..ಬೇಗ ಏಳಬೇಕು' ಅಂತ ಪದೇ ಪದೇ ಅಲಾರಂ ಥರ ತಡಬಡಿಸುತ್ತಿದ್ದ. ಅವನ ಮೇಲೆ ಪ್ರೀತಿಯಿಂದ ರೇಗುತ್ತಲೇ ನಿದ್ದೆಗೆ ಜಾರಿದೆ.
ಫೋಟೋ; ವ್ವ್ವ. flickr.com

26 comments:

ಮನಸು said...

ನಮಸ್ಕಾರ ಚಿತ್ರ..

ನೆನಪುಗಳ ಮಾತು ಮಧುರ ..... ಅದು ಮನದಿಂದ ಮಾಸೋ ಮುಂದೆ ಎಲ್ಲವನು ನೆನಪಿಸಿ ಬರೆಯೋದೇ ಆಟೋಗ್ರಾಫ್..ತುಂಬಾ ಚೆನ್ನಾಗಿ.
ಎಲ್ಲರ ಪ್ರೀತಿ, ವಿಶ್ವಾಸ, ಸಮಯ ಎಲ್ಲವೋ ಹಾಗೆ ಇರಲಿ ಜೊತೆಗೆ ಮತ್ತೆ ... ಮತ್ತೆ ಮರುಕಳಿಸಲೆಂದು ಆಶಿಸುತ್ತೇನೆ.

ವಂದನೆಗಳು

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

:)
Chendada baraha Chitra.. :)

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

:)
Chendada baraha Chitra.. :)

ಹೊರಗಣವನು said...

nenapina ganiyinda hekki tegeda mana muttuva bavanegalu akshara roopu taledive. autograph innastu munduvareyali.
nenapu matravalla. nityvoo nava chaitanya niduva jeevad selegalu. kadala aleyante matte matte avu tiru tirugi barali. nimma nave munde sagali

www.kumararaitha.com said...

ವ್ಹಾ.ನೆನಪುಗಳನ್ನು ಪ್ರಸ್ತುತಕ್ಕೆ ಸೊಗಸಾಗಿ ತಂದಿದ್ದೀರಿ.ನಿಮ್ಮ ಬರವಣಿಗೆಗೆ ಚಿತ್ರಕ ಶಕ್ತಿಯಿದೆ

shivu.k said...

ಚಿತ್ರ ಮರಿ,

ನಿಜಕ್ಕೂ ಇದು ನಿನ್ನ[ಜೊತೆಗೆ ನಾವೆಲ್ಲರೂ ಒಮ್ಮೆ ತಿರುಗಿ ನೋಡಿಕೊಳ್ಳುವಂತ] ಅದ್ಬುತ ಆಟೋಗ್ರಾಫ್....

ಮೊದಲೆಲ್ಲಾ ನೀನು ವಿಚಾರಗಳನ್ನು ಭಾವನೆಗಳ ಮೂಲಕ ಹೇಳಲು ಪ್ರಯತ್ನಿಸುತ್ತಿದ್ದೆ.....ಈಗ ನೋಡಿದರೆ ಭಾವನೆಗಳ ಜೊತೆಗೆ ಬಳಸುವ ಪದಗಳು ಹೇಗಿವೆಯೆಂದರೆ...ಒಂದು ಆತ್ಮೀಯ ಸಮಾರಂಭದಲ್ಲಿ...

"ಮುಗ್ದತೆಯಿಂದ ಸಿಂಗಾರಗೊಂಡ ಪುಟ್ಟ ಮಕ್ಕಳ ಹಾಗೆ,... "

"ಸರಳತೆಯ ಸಿಂಗಾರ...ಬಂಗಾರ.. ತೊಟ್ಟ ನಮ್ಮ ಸುಸಂಕೃತ ಹೆಣ್ಣು ಮಕ್ಕಳು ಅಲ್ಲಲ್ಲಿ ಇಣುಕು ನಮ್ಮ ಮನ ಪುಳಕಗೊಳಿಸಿದಂತೆ..."


"'ಇಷ್ಟವಾಗದನ್ನು ಕಷ್ಟದಿಂದಲೇ ಸಹಿಸಿ, ಕಷ್ಟವೇ ಇಷ್ಟವೆಂಬಂತೆ ಬದುಕುವ ಕಲೆ ಹೇಗೆ ಕಲಿತೆ, ನನಗೂ ಕಲಿಸಿಕೊಡು ಅಕ್ಕಾ'"...ಈ ಸಾಲನ್ನು ನಿನ್ನ ಡೈರಿಯಿಂದ ಕದ್ದಿದ್ದೇನೆ....ನನ್ನ ಡೈರಿಯಲ್ಲಿ ಬರೆದುಕೊಂಡಿದ್ದೇನೆ...ಇದಕ್ಕೆ ತಂಗಿಯ ಅನುಮತಿ ಪಡೆಯಬೇಕೆನಿಸಿಲ್ಲ....

ಮತ್ತೆ ಈ ಲೇಖನ ಎಂಥ ಸ್ಪೂರ್ತಿಯುತವಾಗಿದೆಯೆಂದರೆ..ನನ್ನ ಹಳೇ ನೆನಪುಗಳು ತೆರೆದುಕೊಳ್ಳಲಾರಂಬಿಸಿವೆ....ಕೆಲವು ಯಾರಿಗೂ ಹೇಳದ[ನನ್ನ ಶ್ರೀಮತಿಗೂ ಹೇಳಿರದ] ವಿಚಾರಗಳಿಗೂ ಪುಟ್ಟ ಕಾಲುಗಳು ಬರುತ್ತಿವೆ...ಬರೆಯಲಾರಂಬಿಸಿದ್ದೇನೆ......

ಮಲ್ಲಿಕಾರ್ಜುನ.ಡಿ.ಜಿ. said...

ಆಟೋಗ್ರಾಫ್... ಇದೊಂದು ಜಾರುಬಂಡೆ.
ಮನಸ್ಸು ತಿರುಗುಮುರುಗಾಗಿ ಹಿಂದಕ್ಕೆ ಸುಯ್ಯೆಂದು ಜಾರುತ್ತಾ ನೆನಪಿನ ಚೀಲದಿಂದ ಕಳೆದ ಜೀವನದ ಅಮೃತಘಳಿಗೆಗಳನ್ನು ಹೆಕ್ಕಿ ಹೆಕ್ಕಿ ಕೊಡುತ್ತದೆ.
PolarExpress ನಲ್ಲಿರುವ ಟ್ರೇನ್ ತರಹದ್ದು.
ಬರಹ ತುಂಬಾ ತುಂಬಾ ಚೆನ್ನಾಗಿದೆ.

ಅಂತರ್ವಾಣಿ said...

ತುಂಬಾ ಚೆನ್ನಾಗಿ ಬರೆದಿದ್ದೀರ.

[ನಿಮ್ಮನ್ನು ಎತ್ತು ಕೊಂಡು ಹೋಗಲು ಯಾರಿಗೆ ಸಾಧ್ಯ (ತಾಕತ್ತು) ಇದೆ ಸ್ವಲ್ಪ ಹೇಳಿ..?]

PARAANJAPE K.N. said...

ಚಿತ್ರಾ,
ಬರಹ ಉತ್ತಮವಾಗಿದೆ. ಹಳೆಯ ನೆನಪುಗಳನ್ನು ಕೆದಕಿ, ಮರಳಿ ಅವುಗಳತ್ತ ಹೊರಳಿ, ಅ೦ದಿಗೂ ಇ೦ದಿಗೂ ಹೋಲಿಕೆ ಮಾಡಿ, ಕೆಲವರ ಬರವಣಿಗೆ ಮತ್ತು ನಡವಳಿಕೆಯಲ್ಲಿರುವ ವೈರುಧ್ಯಗಳನ್ನು ಸೂಚ್ಯವಾಗಿ, ಸೂಕ್ಷ್ಮವಾಗಿ ತೆರೆದಿಟ್ಟಿರುವೆ. ಆಪ್ತವೆನಿಸುವ , ನೆನಪಿನಲ್ಲಿಡಬೇಕಾದ ಅಕ್ಷರಸಾಲುಗಳು. ಬಣ್ಣಬಣ್ಣದ ಮಣಿಸರಕಿನಿ೦ದ ಪೋಣಿಸಿದ ಚೆ೦ದದ ಹಾರದ೦ತಿದೆ ಈ ಲೇಖನ. Very Good

Laxman (ಲಕ್ಷ್ಮಣ ಬಿರಾದಾರ) said...

ಚಿತ್ರಾ..... ನಿನ್ನ ಬರಹ ಚೆನ್ನಾಗಿದೆ. ಹತ್ತು ವರುಷದ ಹಿಂದಿನ ಆಟೋಗ್ರಾಪ ತೆಗೆದು ಓದುವಂತೆ ಮಾಡಿದ್ದಿಯ. ನನ್ನ ನೆನಪುಗಳನ್ನ ಮೆಲುಕು ಹಾಕುವಂತೆ ಮಾಡಿದ್ದಕ್ಕೆ ಧನ್ಯವಾದಗಳು. ಎಲ್ಲರನ್ನು ಒಂದುಂದು ಬಗೆಯ ವಿಚಾರಕ್ಕೆ ನಾಂದಿ ಹಾಡುತ್ತಿದ್ದಿಯಾ! ಬರಹದಲ್ಲಿ ವಿವಿಧತೆ ಇದೆ. ಲಕ್ಶ್ಮಣ

ಹರೀಶ ಮಾಂಬಾಡಿ said...

:)

sunaath said...

ಆ^ಟೋಗ್ರಾಫದಲ್ಲಿಯ ಸಂದೇಶಗಳು ಮನಸೂರೆಗೊಳ್ಳುತ್ತಿವೆ.

ವಿ.ರಾ.ಹೆ. said...

nice.

ಆ ಫೋಟೋ ನಿಮ್ದಾ? :)

ಶಿವಪ್ರಕಾಶ್ said...

ಚಿತ್ರಾ ಅವರೇ,
ನಿಮ್ಮ ಆಟೋಗ್ರಾಫ್ ತುಂಬಾ ಚನ್ನಾಗಿದೆ..
ಧನ್ಯವಾದಗಳು

ಕನಸು said...

ಹಾಯ್
ನೆನಪುಗಳು ಇತಿಹಾಸದ ತುಣುಕುಗಳು ಅಂತೆ ಹೌದೆ ಚಿತ್ರಾ ಮಡಂ, ನಿಮ್ಮ ಲೇಖನ ಯಾಕೋ ಓದದೆಬಿಡಕಾಗಲ್ಲ ಯಾಕೋ ಗೊತ್ತಿಲ್ಲ

ಚಿತ್ರಾ said...

ಚಿತ್ರಾ,
ಮತ್ತೊಂದು ಒಳ್ಳೆಯ ಬರಹ.
ಒಂದು ಕಾಲದಲ್ಲಿ ಬೆಂಚಿನ ಜೊತೆ , ತಿಂಡಿಯ ಜೊತೆ ಖುಶಿ, ಕೋಪ, ಬೇಸರ ಎಲ್ಲವನ್ನೂ ಹಂಚಿಕೊಂಡು ಜೀವದಂತೆಯೇ ಆಗಿ, ಅಗಲುವಾಗ ಅಪ್ಪಿಕೊಂಡು ಭೋರೆಂದು ಅತ್ತ ಗೆಳತಿಯರು ಮುಂದೊಂದು ದಿನ ಪಕ್ಕದಲ್ಲೇ ಇದ್ದರೂ ನಗಲೂ ಪುರಸೊತ್ತಿಲ್ಲದಷ್ಟು ಬ್ಯುಸಿ ಯಾಗುವುದು,ಮೊದಲು ಎಲ್ಲೋ ಎದಿರು ಸಿಕ್ಕಾಗ ಹಲೋ ಎಂದು ಮುಗುಳ್ನಕ್ಕು ಮುಂದೆ ಹೋಗುತ್ತಿದ್ದವರು ದೊಡ್ಡವರಾದಮೇಲೆ ಎಲ್ಲೋ ಸಿಕ್ಕಿದಾಗ ನಿಧಿಯೇ ಸಿಕ್ಕಷ್ಟು ಖುಶಿಪಟ್ಟು ಮಾತನಾಡಿಸುವುದು .. ಹೀಗೆ ಎಷ್ಟೋ ಸಲ ಆಗುತ್ತದೆ ಅಲ್ಲವೆ? ನಿಮ್ಮದೇ ಅನುಭವ ನನಗೂ ಆಗಿದೆ. ಇದುವೇ ಜೀವನ !

Mahesh Sindbandge said...

i wish i could learn Kannada in a jiffy...
Anyways when i learn i will come here to read your post, for they seem to be interesting in some way..

Anonymous said...

ಚಿತ್ರಾ, ನಿನ್ನ ಬರಹಗಳೆಲ್ಲವೂ ತುಂಬಾ ಆಪ್ತ ಎನಿಸುತ್ತವೆ.... ಭಾವ ಶರಧಿಯ ಅಲೆಗಳು ಮನದ ದಂಡೆಯಲ್ಲಿ ಮತ್ತೆ ಓಲಾಡಲು ಆರಂಭವಾಯ್ತು ಇದನ್ನು ಓದಿದ ಮೇಲೆ. ಮಾತೃ ಉತ್ಸವಕ್ಕೆ ಬರಲಾಗಲಿಲ್ಲ ಅಂತ ಬರದೆ ಹೋಗುವುದು ಬೇಡ.. ನೀವು ಬಂದ ದಿನವೇ ಹಬ್ಬ ... ನಿರೀಕ್ಷೆಯಲ್ಲಿರುವೆ.

ತೇಜಸ್ವಿನಿ ಹೆಗಡೆ said...

ಚಿತ್ರಾ,

ಸವಿನೆನಪುಗಳು ಸದಾ ಇರಬೇಕು ಹೀಗೇ ಜೊತೆ... ನಿನ್ನ ಆಟೋಗ್ರಾಪ್ ನನಗೆ ನನ್ನ ಶಾಲಾ/ಕಾಲೇಜುಗಳ ದಿನಗಳನ್ನು ನೆನೆಪಿಸಿತು.. ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ಸವಿನೆನಪುಗಳು ಸದಾ ನಿನ್ನ ಮನದೊಳಗೂ ತುಂಬಿರಲಿ..

PaLa said...

ತುಂಬಾ ಒಳ್ಳೆ ಕೆಲ್ಸ ಮಾಡಿದೀರ, ಆಟೋಗ್ರಾಫ್ ಬರ್ದಿರ್ಸಿಕೊಂಡು. ನಾನು ಮಾಡೇ ಇಲ್ಲ ಅದನ್ನ :(
ನಿಮ್ಮ ತರಾನೇ ಕರೆಂಟ್ ಹೋದಾಗ್ಲೋ, ಒಬ್ಬನೇ ಇದ್ದು ಬೇಸರವಾದಾಗ್ಲೋ, ಸ್ನೇಹಿತರೋ, ಬಂಧುಗಳೋ ಬರೆದ ಯಾವುದಾದರು ಹಳೇ ಪತ್ರ ಹಿಡಿದು ಕೂತ್ಕೊತೀನಿ.. ಸೂಪರ್ರಾಗಿರುತ್ತೆ
--
ಪಾಲ

ಬೆಂಗಳೂರು ರಘು said...

Chennagide Chennagide Chitra Madam

ಅಹರ್ನಿಶಿ said...

ಚಿತ್ರಾ,

ದಿನನಿತ್ಯ ನೀವು ಜೀವನಕ್ಕೆ ಸ್ಪ ೦ದಿಸುವ ಪರಿ ತು೦ಬಾ ಇಷ್ಟ ಆಗುತ್ತೆ .

ಚಿತ್ರಾ ಸಂತೋಷ್ said...

ಮನಸು, ಪೂರ್ಣಿಮಾ, ಕುಮಾರ್, ವೈ.ಗ. ಜಗದೀಶ್, ಮಲ್ಲಿಯಣ್ಣ...ಬಿಡುವು ಮಾಡಿಕೊಂಡು ಮೈ ಆಟೋಗ್ರಾಫ್ ಓದಿದ್ದಕ್ಕೆ ಧನ್ಯವಾದಗಳು. ಹಾಗೇ ಬರುತ್ತಿರಿ..ಕಾಯುತ್ತಿರುತ್ತೇನೆ.

@ಶಿವಣ್ಣ..ಯಪ್ಪಾ..ಇಷ್ಟೆಲ್ಲಾ ಹೊಗಳಿಬಿಟ್ಟೀರಾ ಜೋಕೆ. ನನ್ನ ಡೈರಿಯ ಸಾಲುಗಳನ್ನು ತೆಗೆದುಕೊಂಡಿರಾ...ಇರಲಿ ಬಿಡಿ. ಜೋಪಾನವಾಗಿ ಇಟ್ಟುಕೊಳ್ಳಿ.

@ಜಯಶಂಕರ್..ಪ್ರತಿಕ್ರಿಯೆಗೆ ಧನ್ಯವಾದಗಳು. ನನ್ನ ಎತ್ತುಕೊಂಡು ಹೋಗೋ ತಾಕತ್ತು ಸದ್ಯಕ್ಕೆ ಯಾರಿಗೂ ಇಲ್ಲಾರಿ.

@ಪರಾಂಜಪೆಯಣ್ಣ, ಲಕ್ಷ್ಮಣ್ ಸರ್...ಮತ್ತೆ ಬನ್ನಿ..ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

@ಕನಸು, ಹರೀಶ್ ಸರ್, ವಿಕಾಸ್, ಸುನಾಥ್ ಸರ್, ಶಿವಪ್ರಕಾಶ್, ಪಾಲಚಂದ್ರ , ತೇಜಕ್ಕ..ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ.

@ಚಿತ್ರಾ ನಿಮ್ಮ ಅನುಭವವನ್ನೂ ಬ್ಲಾಗಿಗೆ ಇಳಿಸಿಬಿಡಿ..ವಂದನೆಗಳು.

@ಮಹೇಶ್..ನಿಮ್ಮದು ಮೊದಲ ಭೇಟಿ ಅನಿಸುತ್ತೆ. ಶರಧಿ ಕಡೆಯಿಂದ ನಿಮಗೆ ಪ್ರೀತಿಯ ಸ್ವಾಗತ. ಹೀಗೇ ಬರುತ್ತಿರಿ..ವಂದನೆಗಳು.

@ಶಮಾ...ಅಮ್ಮನ ಹಬ್ಬಕ್ಕೆ ಬರಬೇಕಂದುಕೊಂಡರೂ..ಸಾಧ್ಯವಾಗಲಿಲ್ಲ..ಇನ್ನೊಮ್ಮೆ ನಿಮ್ಮ ಕಾಣುವೆ.

@ಬೆಂಗಳೂರು ರಘು..ಶರಧಿಗೆ ಮೊದಲ ಬಾರಿ ಭೇಟಿ ನೀಡಿದ್ದೀರಿ..,ಹೀಗೇ ಬರುತ್ತಿರಿ ಸರ್. ವಂದನೆಗಳು

@ಅಹರ್ನಿಶಿ ಸರ್..ತುಂಬಾ ದಿನಗಳಾಯ್ತು ನಿಮ್ಮನ್ನು ಕಾಣದೆ...! ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.

ಮತ್ತೊಮ್ಮೆ ನನ್ನ ಪ್ರೀತಿಯ ಶರಧಿಯಲ್ಲಿ ನಿಮ್ಮದೂ ಪಯಣವಾಗಿಸಿದ್ದಕ್ಕೆ, ಇನ್ನಷ್ಟು ಬರೆಯಲು ನನ್ನ ಬೆನ್ನು ತಟ್ಟಿದ್ದಕ್ಕೆ ನಿಮಗೆ ಪ್ರೀತಿಯ ಕೃತಜ್ಞತೆಗಳು.

ಇಂತೀ,
ಚಿತ್ರಾ

Guruprasad said...

ಹಾಯ್ ಚಿತ್ರ,
ತುಂಬ ಚೆನ್ನಾಗಿ ಬರೆದಿದ್ದೀರ ನಿಮ್ಮ ಮಧುರ ನೆನಪುಗಳ " ಮೈ ಆಟೋಗ್ರಾಫ್" , ಗುಡ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಬರಹ.. ಎಲ್ಲೊ ಓದಿದ ನೆನಪು,, ನಮಗೆ ಬೇಜಾರ್ ಅದಾಗ, ನಮ್ಮ ಹಳೆಯ (ಒಳ್ಳೆಯ) ಸವಿ ನೆನಪುಗಳನ್ನು ನೆನಪಿಸಿ ಕೊಳ್ತಾ ಇದ್ದರೆ ನಮ್ಮ ಮನಸಿಗೆ relax ಆಗುತೆ ಅಂತೆ,,
ಫರ್ಸ್ಟ್ ಟೈಮ್ ನಿಮ್ಮ ಶರದಿಯ ಪರಿದಿಯೊಳಗೆ ಬಂದಿದೇನೆ,, ಇನ್ನು ಮುಂದೆ ಯಾವಾಗಲು ಬಂದು ಹೋಗುತೇನೆ,, ನೀವು ಬಿಡುವಾದಾಗ ನನ್ನ ಬ್ಲಾಗಿನ ಕಡೆ ಇಣುಕಿನೋಡಿ ....

ಗುರು

Mahesh Sindbandge said...

Wow..someone without my asking has replied to me in kannada..
I am amazed...

Neevu barita iri... :D

ಚಿತ್ರಾ ಸಂತೋಷ್ said...

ಗುರು, ಮಹೇಶ್..ಧನ್ಯವಾದಗಳು. ಬರ್ತಾ ಇರಿ.
-ಚಿತ್ರಾ