Friday, December 19, 2008

ಅಂತರ್ವಾಣಿ ಕವನ

'ಏನೂ ಬೇಡ ಹಿಡಿ ಪ್ರೀತಿ ಕೊಡ್ತೀರಾ...? ಬರಹದ ಚಿತ್ರ ನೋಡಿ ಅಂತರ್ವಾಣಿ ಬ್ಲಾಗ್ ನ ಜಯಶಂಕರ್ ಕಳಿಸಿರುವ ಪುಟ್ಟದಾದ ಸರಳ ಕವನ ಇಲ್ಲಿದೆ. ..

ಪ್ರೀತಿ ಸಿಗದೆ ಜಗತ್ತಾಗಿದೆ ಕತ್ತಲು,
ಯಾರು ಬರುವರು ಇದ ಬೆಳಗಲು?
ಸೂರ್ಯನೋ? ಸೋಮನೋ?

ಪ್ರೀತಿಯ ಹುಡುಕಿ ಬಳಲಿದೆ ಜೀವ
ಎಲ್ಲಡಗಿರಬಹುದು ಈ ಪ್ರೀತಿ?
ಸಂಸಾರದಲ್ಲೋ? ಸಂದೇಶಗಳಲ್ಲೋ?

ದಿನವೆಲ್ಲಾ ಅಹಿಂಸೆಯ ವರದಿ
ಮನದಲ್ಲಿ ನೋವಿನ ಸರದಿ
ಹೇಳುವುದೋ? ಬಿಡುವುದೋ?

ಹಿಡಿ ಪ್ರೀತಿಯ ಹಿಡಿಯುವ ಕೈಯಿಲ್ಲಿದೆ
ಹಿಡಿದ ಪ್ರೀತಿಯ ಕಿಡಿಯಿಂದ
ಜಗತ್ತನ್ನು ಬೆಳಗಿಸುವ ಜೀವವಿಲ್ಲಿದೆ!

8 comments:

shivu.k said...

ಚಿತ್ರಾ,

ಕವನದ ಕೊನೆಸಾಲು ತುಂಬಾ ಇಷ್ಟವಾಯಿತು.

"ಹಿಡಿ ಪ್ರೀತಿಯ ಹಿಡಿಯುವ ಕೈಯಿಲ್ಲಿದೆ
ಹಿಡಿದ ಪ್ರೀತಿಯ ಕಿಡಿಯಿಂದ
ಜಗತ್ತನ್ನು ಬೆಳಗಿಸುವ ಜೀವವಿಲ್ಲಿದೆ!"

ನಾನು ಯಾರಿಗೆ ಥ್ಯಾಂಕ್ಸ್ ಹೇಳಲಿ, ಕವನ ಬರೆದ ಜಯಶಂಕರ್‌ಗೋ, ಕವನಕ್ಕೆ ಫೋಟೊ ಕೊಟ್ಟು ಸ್ಪೂರ್ತಿ ನೀಡಿದವರಿಗೋ ?
ಒಟ್ಟಾರೆ ಒಂದಷ್ಟು ಥ್ಯಾಂಕ್ಸುಗಳನ್ನು ಮನಪೂರ್ವಕವಾಗಿ ಹೇಳಿಬಿಟ್ಟಿದ್ದೇನೆ. ಹಂಚಿಕೊಳ್ಳಿ !

ಅಂತರ್ವಾಣಿ said...

shivaNNa,
thnx Chitraa ravagige hELi... avara lEkhanada kavana roopa idu.
idralli nan shrama kEvala eradu pada.. "preetiya kiDiyiMDa" mikka vicaaragaLella lEkhanadalle ide..

ಸುಧೇಶ್ ಶೆಟ್ಟಿ said...

ತು೦ಬಾ ಚೆನ್ನಾಗಿತ್ತು. ಲೇಖನ ಮತ್ತು ಕವನದ ಜುಗಲ್ ಬ೦ದಿ ಚೆನ್ನಾಗಿದೆ. ಯಾಕೋ ಈ ಪ್ರೀತಿ ಎ೦ಬ ತು೦ಬಾ ಚು೦ಬಕ ಪದ.

ಚಿತ್ರಾ ಸಂತೋಷ್ said...

@ಶಿವಣ್ಣ..ಸ್ವಲ್ಪ ಥ್ಯಾಂಕ್ಸ್ನ್ನು ನಾನಿಟ್ಟುಕೊಂಡು..ಉಳಿದುದನ್ನು ಎಲ್ಲಾ ಜಯಶಂಕರ್ ಸರ್ ಕಿಸೆಗೆ ಹಾಕಿಬಿಟ್ಟಿದ್ದೀನಿ..ಎಲ್ಲವೂ ಅವರಿಗೇ ಸಲ್ಲಬೇಕು
@ಸುಧೇಶ್..ವಂದನೆಗಳು .
@ಜಯಶಂಕರ್..ನಂಗ್ಯಾಗ್ರೀ ಥ್ಯಾಂಕ್ಸ್ಊ..ನಾನು ಹೇಳ್ತೀನಲ್ಲ..ಕವನ ಬರೆಯಕೆ ಬಾರದ ದಡ್ಡಿ ಅಂತ..ಎಲ್ಲವೂ ನಿಮಗೇ..
ತುಂಬುಪ್ರೀತಿ,
ಚಿತ್ರಾ

ಅಂತರ್ವಾಣಿ said...

ಚಿತ್ರಾ,
ನನಗೂ ಕವನ ಸರಿಯಾಗಿ ಬರೆಯೋಕೆ ಬರೋದಿಲ್ಲ ರೀ. ನನ್ನಿಂದ ಸ್ವಲ್ಪ ಥ್ಯಾಂಕ್ಸನ್ನು ನಿಮ್ಮ ವ್ಯಾನಿಟಿಗೆ ಹಾಕುತ್ತಾಯಿದ್ದೀನಿ... ನೀವು ಆ ಲೇಖನ ಬರೆಯದೆ ಇದ್ದಿದ್ದರೆ ನಾನು ಕವನ ಬರೆಯೋಕೆ ಆಗ್ತಾಇರಲಿಲ್ಲ.

shivu.k said...

ಚಿತ್ರಾ ಮತ್ತು ಜಯಶಂಕರ್,

ಇಬ್ಬರು ನನಗೆ ಸಾಕು ನನಗೆ ಸಾಕು ಅಂಥ ಕಿಸೆಗೆ, ವ್ಯಾನಿಟಿಗೆ, ಅಂತ ವಾಪಸ್ ಹಾಕುತ್ತಿದ್ದರೆ ನನ್ನ ಥ್ಯಾಂಕ್ಸ್‌ಗಳು ಬೆಲೆ ಕಳೆದುಕೊಳ್ಳುತ್ತಿವೆಯೇನೊ ಅನ್ನಿಸುತ್ತಿದೆ.

ಅಂತರ್ವಾಣಿ said...

ಶಿವಣ್ಣ,
ಚಿತ್ರಾ ಹಾಗು ನಾನು ಸಮವಾಗಿ ಹಂಚಿಕೊಂಡ್ವಿ

ಹೆಸರು ರಾಜೇಶ್, said...

ಜಯಶಂಕರ್ ರವರ ಪದ್ಯ ಚೆನ್ನಾಗಿದೆ.
ಗೆಳೆಯ
ರಾಜೇಶ್