ಮನುಷ್ಯರಿಗಿಂತ ಅವೇ ಹೆಚ್ಚು ಪ್ರೀತಿ ತೋರಿಸುತ್ತವೆ. ಮೊನ್ನೆ ಮೊನ್ನೆ ಪ್ರಕಾಶ್ ಹೆಗ್ಡೆ ಅವರ ಬ್ಲಾಗ್ ನಲ್ಲಿ ಅವರ ಪ್ರೀತಿಯ ನಾಯಿ ಕುರಿತು ಬರೆದಿರುವುದನ್ನು ಓದುತ್ತಿದ್ದಂತೆ ನನ್ನ ಮುದ್ದಿನ ಅಪ್ಪಿ ನೆನಪಾದಳು. ಚಿಕ್ಕವಳಿರುವಾಗ ನಾನು ತುಂಬಾನೇ ಪ್ರೀತಿ ಮಾಡಿದ್ದ, ನನ್ನ ತಟ್ಟೆಯಲ್ಲೇ ಆಕೆಗೂ ಊಟ ಹಾಕಿದ್ದ, ಅವಳೊಂದಿಗೆ ನಾನು ಮಗುವಾಗುತ್ತಾ, ನನ್ನ ಮಡಿಲಲ್ಲಿ ಮಲಗಿ ಜೋಗುಳ ಹಾಡುತ್ತಿದ್ದ ಆ ಪ್ರೀತಿಯ ಅಪ್ಪಿ ಜೊತೆ ಮೂರು ವರ್ಷ ಕಳೆದ ದಿನಗಳು ನೆನಪಾದುವು.
ನನಗಾಗ ಮೂರ್ನಾಲ್ಕು ವರ್ಷವಾಗಿರಬಹುದು. ನಮ್ಮನೆ ಕೆಂಪಿ ಹಸುವಿನ ಮಗಳು ಅಪ್ಪಿ ಆಗಿನ್ನೂ ಹಸುಗೂಸು. ಕೆಂಪಿಗೆ ಅಪ್ಪಿ ಹುಟ್ಟಿದಾಗ ನನಗಂತೂ ಹೊಸ ಗೆಳತಿ ಸಿಕ್ಕ ಸಂಭ್ರಮ. ಮನೆಯಲ್ಲಿ ಅಮ್ಮನಿಗಿಂತಲೂ ಅಪ್ಪಿ ಜೊತೆ ಇರೋದು ಅಂದ್ರೆ ಭಾಳ ಇಷ್ಟ. ನೋಡಲೂ ಮುದ್ದಾಗಿದ್ದ ಅವಳು ಚಂಗನೆ ನಗೆಯುತ್ತಾ ಬರೋದು, ಅಂಗಳವಿಡೀ ಖುಷಿ ಖುಷಿಯಿಂದ ಓಡುವಾಗ ಅವಳ ಬಾಲ ಹಿಡಿಯಲು ಓಡಿ ನಾನೂ ಎಡವಿ ಬೀಳೋದು..ಅವಳಿಂದ ತುಳಿಸಿಕೊಳ್ಳೋದು ಎಲ್ಲವೂ ಯಾಕೋ ಅಪ್ಯಾಯಮಾನ. ಅದೇ ಖುಷಿ.
ಅಮ್ಜಮ ಬೆಳಿಗ್ಗೆ ಹಾಲು ಕೊಡಕೆ ಡಿಪೋಗೆ ಹೋದರೆ, ನಾನು ಆಗಿನಿಂದಲೇ ನನ್ನ ಬೆಡ್ ಶೀಟ್ ಕೊಂಡೋಗಿ ಅಪ್ಪಿಯನ್ನು ಕಟ್ಟಿಹಾಕುವ ಜಾಗದಲ್ಲಿ ಅವಳ ಜೊತೆ ಮಲಗುತ್ತಿದ್ದೆ. ಅವಳ ಮೈಯಲ್ಲಿದ್ದ ಮಣ್ಣು ತೊಳೆಯುವುದು, ಕಿವಿ ತೊಳೆಯುವುದು, ಮೈಯಲ್ಲಿದ್ದ ಉನುಗು ತೆಗೆಯೋದು..ಹೀಗೆ ಅಲ್ಲಿ ಸ್ಚಚ್ಛಗೊಳಿಸಿ ನಾನು ತಿನ್ನುವ ಆಹಾರವನ್ನೇ ಅವಳಿಗೆ ಕೊಡೋದು..ಅವಳ ಕೊರಳಿಗೆ ಚೆಂದದ ಮಣಿಯುಳ್ಳ ಹಾರ ಹಾಕೋದು ಎಲ್ಲಾವನ್ನೂ ಮಾಡುತ್ತಿದ್ದೆ. ಅಪ್ಪಿನೂ ಅಷ್ಟೇ..ಬೆಳಿಗ್ಗೆ ಹಾಕು ಕುಡಿದ ಮೇಲೆ ನನ್ನ ಬರುವಿಗಾಗಿ ಅಂಬಾ ಎನ್ನುತ್ತಿದ್ದಳು. ಹಟ್ಟಿಯಿಂದ ಓಡಿ ಸೀದಾ ಮನೆಯೊಳಗೆ ಬರುವಳು. ನನ್ನ ಕೈಯನ್ನೆಲ್ಲ ನೆಕ್ಕೋಳು. ಥೇಟ್ ಮನುಷ್ಯರಂತೆ ಆಕೆನೂ ನನ್ನ ತುಂಬಾ ಪ್ರೀತಿ ಮಾಡುತ್ತಿದ್ದಳು. ಒಂದೊಂದು ಬಾರಿ ಅವಳ ಕಣ್ಣಿಂದ ನೀರು ಸುರಿಯುತ್ತಿದ್ದಾಗ, ಅದನ್ನು ಒರೆಸುತ್ತಾ ನಾನೂ ಅಳುತ್ತಿದ್ದೆ. ಪಾಪ! ಮೂಕಪ್ರಾಣಿಗೆ ಹೇಳಲೇನೂ ಬರದು. ಅಮ್ಮ ಹಾಲು ಮಾರಿ ಬರುವಾಗ ದಿನಾ ಬೇಬಿ ಬಿಸ್ಕೀಟು ತರೋದು..ಅದ್ರಲ್ಲಿ ಹೆಚ್ಚು ಪಾಲು ಅಪ್ಪಿಗೆ. ಆವಾಗ ಬೇಬಿ ಬಿಸ್ಕಿಟ್ ಗೆ ಒಂದು ಪ್ಯಾಕ್ ಗೆ ೧.೩೦ ರೂ. ಈಗ? ಅದೇ ಬಬೇಬಿ ಬಿಸ್ಕಿಟು ಇದೆಯಾ ಅಂತಾನೇ ಗೊತ್ತಿಲ್ಲ.
ಅಪ್ಪಿ ಜೊತೆ ಮಲಗಿದ ನನ್ನ ಕಿವಿಯಲ್ಲೂ ಒಂದು ಸಲ ಉನುಗು ಸೇರಿಕೊಂಡಿದ್ದು ದೊಡ್ಡ ಕತೆ. ಉನುಗು ಸೇರಿದ್ರೆ ಈಗ ಆಪರೇಷನ್ ಮಾಡ್ತಾರೆ. ನನ್ನ ಕಿವಿ ಜೋರಾಗಿ ನೋವಾಗಲೂ ಶುರುವಾದಾಗ ಅಮ್ಮ ಕಾಣಿಯೂರಿನ ಡಾಕ್ಟರ್ ಶಶಿಧರ ಹತ್ರ ಕರೆದುಕೊಂಡು ಹೋದಾಗ ಅವರೇನೋ ಕಿವಿಗೆ ಹಾಕೋ ಮದ್ದು ಕೊಟ್ಟರು .ಅದ್ಕೆ ನಮ್ಮಜ್ಜಿ ಇಲ್ಲ, ಈ ಮದ್ದಿಂದ ಎಲ್ಲಾ ಆಗಲ್ಲ..ಅಂತ ಹೇಳಿ ಅಮ್ಮ ಎಲ್ಲೊ ಹೊರಗಡೆ ಹೋದ ಸಮಯದಲ್ಲಿ ಉನುಗು ಹೊರಬರಕ್ಕೆ ಹಲಸಿನ ಹಸಿ ಹಸಿ ಅಂಟು ಕಿವಿಗೆ ಸುರಿದದ್ದು. ಅಬ್ಬಾ! ಬೇಕಾ..ಯಾರಾದ್ರೂ ಅಂಟು ಸುರೀತಾರ? ಸುರಿದ ದಿನ ಏನೂ ಆಗಲಿಲ್ಲ..ನೋವು ನಿಂತುಹೋಯಿತು. ಯಾಕಂದ್ರೆ ಉನುಗು ಅಂಟು ಜೊತೆ ಅಂಟಿ ಸತ್ತೇ ಹೋಗಿತ್ತು. ಆದರೆ ಕಿವಿ ಕೇಳಬೇಕಲ್ಲಾ? ನಂತರ ನನ್ನ ಏಳನೇ ತರಗತಿ ಯವರೆಗೆ ಒಂದು ಕಿವಿನೇ ಕೆಳಿಸಲಿಲ್ಲ. ಆವಾಗಲೇ ಡಾಕ್ಟರ್ ಅದನ್ನು ತೆಗೆದದ್ದು. ಆಮೇಲೆ ಕಿವಿ ಸರಿಯಾಯಿತು ಬಿಡಿ. ಇದು ಅಜ್ಜಿ ಆವಾಂತರ. ಇರಲಿ ಬಿಡಿ.
ಹಾಗೇ ಮೂರು ವರ್ಷ ನಾನು ಅಪ್ಪಿ ಜೊತೆನೇ ಇದ್ದೆ. ರಾತ್ರಿ ಅಮ್ಮನ ಮಡಿಲು, ಹಗಲು ಅಪ್ಪಿ ಜೊತೆ. ಮತ್ತೆ ಅಪ್ಪಿ ದೊಡ್ಡ ಆದ ಮೇಲೆ ಮತ್ತೊಂದು ಕರು ಹಾಕಿದ್ಳು. ಅದಕ್ಕೆ ಅಕತ್ತಿ ಅಂತ ಹೆಸರಿಟ್ಟಿದ್ದೆ. ಆವಾಗ ಮೂರು ಹಸುಗಳನ್ನು ಸಾಕಲು ಆಗುವುದಿಲ್ಲವೆಂದು ಅಮ್ಮ ಮಾರಿಬಿಟ್ಟರು. ಅದ್ರಲ್ಲಿ ಬಂದ ಹಣದಲ್ಲಿ ಅಮ್ಮ ಅಪ್ಪಿ ನೆನಪಿಗೆ ನಂಗೊಂದು ಮೂಗುತಿ ತೆಗೆದುಕೊಟ್ಟಿದ್ದಾರೆ. ಅಪ್ಪಿ ಎಲ್ಲಿದ್ದಾಳೋ ಗೊತ್ತಿಲ್ಲ..ಮೂಗುತಿ ನನ್ನ ಮೂಗ ಮೇಲೆ ಈಗಲೂ ಮಿನುಗುತ್ತಿದೆ..ಥೇಟ್ ಅಪ್ಪಿಯ ಪ್ರೀತಿ ಥರಾನೇ.!
ಫೋಟೋ: flickr.com
25 comments:
ಹಲೋ, ಅಪ್ಪಿಯನ್ನಪ್ಪಿಕೊಂಡ ಅಪ್ಪಿ !
ಕೇಳಿಸ್ತಿದೆಯಾ ? ನಿನಗೆ ಕಿವಿ ಕೇಳಿಸೋಲ್ಲ ಅಂತ ಈಗ ಗೊತ್ತಾಯ್ತು. ಅದಕ್ಕೆ ಯಾವಾಗಲು ನೆಟ್ ವರ್ಕ್ ಬ್ಯುಸಿ ಅಂತೀದ್ದಿದ್ದು. ಮತ್ತು ಜಾಸ್ತಿ ಎಸ್ ಎಮ್ ಎಸ್ ಮಾಡ್ತಾ ಇದ್ದೀದ್ದು[ತಮಾಷೆ ಮಾಡಿದೆ!]
ಚಿಕ್ಕ ದಾಗಿ ಚೊಕ್ಕವಾಗಿ ಪ್ರೀತಿಯಿಂದ ಅಪ್ತವಾಗಿ ಅಪ್ಪಿಗಾಗಿ ಅಪ್ಪಿಯಂತೆ ಬರೆದಿದ್ದೀಯಾ... ಮುಂದುವರಿಸು..
ನಿನ್ನನ್ನು ಬೇಟಿಯಾದಾಗ ಮೂಗುತಿ ನೋಡಿದ್ದೆ. ಒಂದು ಮೂಗುತಿಯ ಹಿಂದೆ ಇಂಥ ಕತೆ ಇದ್ದರೆ ಇನ್ನು ಯಾವ್ಯಾವ ವಸ್ತುಗಳ ಹಿಂದೆ ಏನೇನು ಕತೆ ಉಪಕತೆ ಇದೆಯೋ ಬೇಗ ಬೇಗ ಬ್ಲಾಗಿಗೆ ಬರಲಿ !
chennagide :)
ಮತ್ತೊಂದು ಆತ್ಮೀಯ ಬರಹ...
ಅಭಿನಂದನೆಗಳು...
ಕಾಯುತಿದ್ದೇನೆ...
ಇನ್ನೂ ಬರಲಿ...
ಒಲವಿನಿಂದ
ಬಾನಾಡಿ
ಬಾಲ್ಯದ ಮಧುರ ಸಂಬಂಧಗಳು ಸುಂದರವಾಗಿ ಪದಗಳಲ್ಲಿ ಪಡಿಮೂಡಿದೆ.
ಆದರೆ ಬ್ಲಾಗ್ ಬಂಧುಗಳಿಗೆ ತಿಳಿಸದೆ ಶಿವು ಕೈಲಿ ಪಾರ್ಟಿ ಗಿಟ್ಟಿಸಿಕೊಂಡಿರುವುದು ಮಾತ್ರ ಮಹಾಪರಾಧ!!!
ಅಪ್ಪಿಗೊಂದು ಪಪ್ಪಿ:)
ಉತ್ತಮ ಬರಹ...ಓದಿ ಖುಷಿಯೆನಿಸಿತು...
ನಾನು ದೂರವಾಣಿಯಲ್ಲಿ ನಿಮ್ಮೊಂದಿಗೆ ಮಾತನಾಡುವಾಗ ಕೆಲವೊಮ್ಮೆ ಸರಿಯಾದ ಉತ್ತರ ಬಾರದಿದ್ದುದಕ್ಕೆ ಕಾರಣ ಏನೂಂತ ಇವತ್ತು ಗೊತ್ತಾಯ್ತು.. :-)
@ಸಂತೋಷ್..ಬಾನಾಡಿ ಸರ್..ಥ್ಯಾಂಕ್ಸ್. ಮತ್ತೆ ಬನ್ನಿ
@ಶಿವಣ್ಣ,..ನಾನು ಸುಳ್ಳು ಹೇಳಲ್ಲ!
@ರಾಘುವ..ಯಾವಗನೋ ನೀನು ಫೋನ್ ಮಾಡಿದ್ದು..ನಾವೇ ನಮ್ ಆಫೀಸ್ ನಿಂದ ಫೋನು ಮಾಡೋದು..ಸುಳ್ಳು ಆರೋಗ್ಯಕ್ಕೆ ಒಳ್ಳೆಯದಲ್ಲ.
@ಮಲ್ಲಿಯಣ್ಣ..ಕೃತಜ್ಷತೆಗಳು ಬ್ಲಾಗ್ ಗೆ ಭೇಟಿ ನೀಡ8ದ್ದಕ್ಕೆ. ಹು ಪಾರ್ಟಿ..ಆಕಸ್ಮಿಕ ಪಾರ್ಟಿ..ಭರ್ಜರಿ ಊಟ. ಹೋಗೋಣ ಇನ್ನೊಮ್ಮೆ..!ನೀವು ಕೊಡಿಸೋದಾ..ನಾನಾ? ಕನ್ ಫ್ಯೂಸ್!
@ಸಂದೀಪ್..ಅಪ್ಪಿಗೆ ಕೊಟ್ಟ ಪಪ್ಪಿನ ಅವಳ ಮೊಮ್ಮಕ್ಕಳಿಗೆ ತಿಳಿಸುತ್ತೇನೆ.ಸರೀನಾ.
-ಚಿತ್ರಾ
cho chweeet... ನಂದೂ ಒಂದು ಪಪ್ಪಿ :)
ಚಿತ್ರಾ ಕರ್ಕೇರಾರವರೆ...
ತುಂಬಾ ಅಪ್ಯಾಯಮಾನವಾಗಿ ಬರೆದಿದ್ದೀರಿ...
ನನ್ನ ಬಾಲ್ಯಕ್ಕೆ ಹೋಗಿ ಬಂದೆ...
ನಿಮ್ಮ ಬರವಣಿಗೆ ಬಹಳ ಆತ್ಮೀಯವಾಗುತ್ತದೆ...
ಅನುಭವಿಸಿ ಬರೆಯುತ್ತೀರಲ್ಲ ಅದಕ್ಕೆ...
ನಿಮ್ಮ ಅಪ್ಪಿಯನ್ನು ತಡವಾಗಿ ನೋಡಿದ್ದಕ್ಕೆ ನನಗೆ ಬೇಸರವಾಗಿದೆ..
ಅಭಿನಂದನೆಗಳು..
hu chennagide munduvareyali...
ಅಪ್ಪಿಯಂತೆ ನಿಮ್ಮದೂ ನಿಷ್ಕಲಂಶ ಮನಸು ಅನ್ನುವುದು ಈ ಬರವಣಿಗೆಯಿಂದ ತಿಳಿಯುತ್ತೆ.ಏಕಂದ್ರೆ ಕಿವಿ ಕೇಳಿಸ್ತಿರಲಿಲ್ಲ ಅಂತ
ಹೇಳಿಕೊಳ್ಳುವುದು ಅಂಥ ಮುಗ್ದತೆ ಉಳಿಸಿಕೊಂಡವರಿಗಷ್ಟೇ ಸಾಧ್ಯ
ಚಿತ್ರಾ ಮೆಡಂ,
ಅಪ್ಪಿ ಬಗ್ಗೆ ಆಪ್ತವಾಗಿ ಬರೆದು ಸಾವಿರ-ದ ನೆನಪುಗಳ
ಮತ್ತೆ ತೆಗೆದು ಆನಂದ ಪಟ್ಟು ,ನಮ್ಮೋಂದಿಗೆ ಹಂಚಿಕೋಂಡಿದ್ದಿರಿ..
ಸವಿ ನೆನಪುಗಳು ಬೇಕು
ಸವಿಯಲೆ ಬದಕು
ಧನ್ಯವಾದಗಳೋಂದಿಗೆ,
ಕನಸು
ಬೆಳಗಾವಿ
ಮುಗಿಸು ಮುನ್ನ ನನ್ನ ಬಗ್ಗೆ
ಒಂದಿಷ್ಟು
ನಾನು ಕನಸು
ಮೈಸೂರು ವಿಶ್ವವಿದ್ಯಾನಿಲದಲ್ಲಿ
ಪ್ರಥಮ ಪತ್ರಿಕೋದ್ಯಮ ಓದುತ್ತಿದ್ದೆನೆ.
ಆಗಾಗ್ಗ ನೆಟ್ ಸರ್ಪ ಮಾಡಾತ್ತ ಇರತ್ತೆನಿ
ಬರವಣಿಗೆಯಲ್ಲಿ ಅಂಬೆಗಾಲಿಡುತ್ತಿರುವ
ನನಗೆ ನೀವು ಮಾರ್ಗದರ್ಶಿಯಾಗತ್ತಿರಿ
ಎಂದು ನಂಬಿದ್ದನೆ.
ಪ್ರೀತಿ-ವಿಶ್ವಾಸದೋಂದಿಗೆ.
ಸರಿಯಾಗಿ ಹೇಳಿದ್ದೀರಿ ಚಿತ್ರಾ ಅವರೇ, ಮನುಷ್ಯರಿಗಿಂತ ಪ್ರಾಣಿಗಳೇ ಅಪ್ಯಾಯಮಾನವಾಗಿ ಬಿಡುತ್ತದೆ! ಮಾನವರಲ್ಲಿರುವ ಕ್ರುತಕತೆ ಅವುಗಳಲ್ಲಿಲ್ಲವಲ್ಲಾ. ನಮ್ಮ ಮನೆಯಲ್ಲಿ ಬೆಕ್ಕೊಮ್ಮೆ ನಾಲ್ಕು ಮರಿಯಿಟ್ಟು, ಈಗ ಅವುಗಳಿಗೆ ಮರಿಯಾಗಿ, ತಮ್ಮ, ತಂಗಿಯರಾಗಿ, ಹತ್ತು-ಹನ್ನೊಂದು ಬೆಕ್ಕಿನ ಸಂತೆಯಾಗಿದೆ! :-) ಆದರೆ, ಎಷ್ಟೇ ತೊಂದರೆ ಕೊಟ್ಟರೂ ಓಡಿಸಲು ಮನವೊಪ್ಪುವುದಿಲ್ಲ........
ಚೆನ್ನಾಗಿದೆ, ಬರಹ, ಚಿತ್ರ ಮತ್ತು ನಿಮ್ಮ ಸಂಗಾತಿಯ ಹೆಸರುಗಳು "ಅಪ್ಪಿ", "ಅಕತ್ತಿ"
Sweet & cute..well written...
@ವಿಕಾಸ್..ಥ್ಯಾಂಕ್ಯೂ..ಅದೇ ಹೇಳ್ತಿನಿ..ಅಪ್ಪಿ ಮೊಮ್ಮಕ್ಕಳಿಗೆ. ಅದೇ ಗೊತ್ತಾತು..ನೀವು ಅಜ್ಜನ ಮನೆಗೆ ಹೋದ್ರೆ ಈಗ್ಲೂ ಕರು ಜೊತೆ ಆಟವಾಡ್ತೀರಿ ಅಂತ..ಗುಡ್!
@ರವಿರಾಜ್, ಪ್ರಕಾಶ್..ನಿಮ್ಮ ಪ್ರತಿಕ್ರಿಯೆಗಳೇ ನನಗೆ ಸ್ಫೂರ್ತಿ
@ಕುಮಾರ್, ಪಾಲಚಂದ್ರ,ವನಿತಾ.ವಂದನೆಗಳು. ..
@ಪ್ರದೀಪ್..ಕೃತಜ್ಷತೆ. ಆಗಾಗ ಬರುತ್ತಿರಿ ಬ್ಲಾಗ್ ಗೆ..ಮೃಗೀಯ ಭಾವ..ಪ್ರಾಣಿಗಳು ಕ್ರೂರ ಅಂತೀವಿ. ನಾವು ಅವುಗಳನ್ನು ಪ್ರೀತಿಸಿದರೆ ಅವುಗಳೂ ನಮ್ಮ ಪ್ರೀತಿಸುತ್ತವೆ ಅಲ್ವೇ?
@ಪ್ರೀತಿಯ ಕನಸು..ನಿನ್ನ ಕನಸು ನನಸಾಗಲಿ. ಆದ್ರೆ ನಿನ್ನ ಬ್ಲಾಗ್ ನೋಡಿದ್ರೆ ನೀನು ಅಂಬೆಗಾಲಿಕ್ಕುವ ಮಗು ಅನಿಸಲ್ಲಪ್ಪ. ಚೆನ್ನಾಗಿ ಬರೀ..ಶುಭವಾಗಲಿ.
ಪ್ರೀತಿಯಿಂದ,
ಚಿತ್ರಾ
ಚಿತ್ರಾ ಅವರೇ,
ತು೦ಬಾ ಆತ್ಮೀಯವಾದ ಬರಹ. ನನಗೆ ನಮ್ಮ ಮನೆಯಲ್ಲಿದ್ದ ಬೆಳ್ಳಿ, ಅಮ್ಮಿ, ಮ೦ಗಳ, ಬುಗುಡಿ (ನನ್ನ ತ೦ಗಿ ಇಟ್ಟಿದ್ದು) ಎಲ್ಲವೂ ನೆನಪಾಯಿತು. ಈಗ ನಮ್ಮ ಮನೆಯಲ್ಲಿ ದನಗಳು ಇಲ್ಲ. ಅವುಗಳು ನೆನಪಾದಾಗ ಮನಸು ಬಾಲ್ಯಕ್ಕೆ ಓಡುತ್ತದೆ.
ಬರಹದಲ್ಲಿರುವ ಕರುವ೦ತೂ ತು೦ಬಾ ಮುದ್ದಾಗಿದೆ.
ತು೦ಬಾ ಖುಷಿ ಕೊಟ್ಟ ಬರಹ.
ನಮ್ಮ ಮನೆಯಲ್ಲೂ ದನ ಕರು ಹಾಕಿದೆ.......
@ಸುಧೇಶ್ ಅವರೇ ..ಕೃತಜ್ಞತೆಗಳು
@ರಾಧಾಕೃಷ್ಣ..ಕಂಗ್ರಾಟ್ಸ್ ಕಣ್ರೀ.
-ಚಿತ್ರಾ
ಹಾಗೆಲ್ಲಾ ಆಗಿತ್ತಾ.. ಪಾಪ ಅನ್ನಿಸುತ್ತದೆ..
Hi Chitra..
Nimma Lekhanagalu bahala chennagi mudi barittive..
Naanu nimmorinavale... Bareppadi antha Savanoor hatra...
Eega prakritha America dalli iddene..
ಕೃಷ್ಣವೇಣಿ..ಶರಧಿಗೆ ಸ್ವಾಗತ,ಧನ್ಯವಾದ. ಹಾಗೇ ಬರೆಪ್ಪಾಡಿ,..ಸವಣೂರು ನಮ್ಮೂರ ಪಕ್ಕನೇ ಮಾರಾಯ್ರೆ. ನಿಮ್ಮ 'prakritha America' ಗೊತ್ತಾಗಲಿಲ್ಲ..ಹಾಗಾಗಿ ಮೇಲ್ ಮಾಡಿದ್ದೇನೆ. ಮೇಲ್ ಗೆ ಉತ್ತರಿಸಿ. ನೀವು ಯಾರೂಂತ ಸ್ವಲ್ಪ ಮಟ್ಟಿಗೆ ಗೊತ್ತಿದೆ...ನನ್ ಊಹೆ ಸರಿನಾ ಅಂತ ಮೇಲ್ ನಲ್ಲಿ ಉತ್ತರಿಸಿ.ಶುಭವಾಗಲಿ
-ಪ್ರೀತಿಯಿಂದ,
ಚಿತ್ರಾ
ಹಾಯ್ ಚಿತ್ರಾ,
ಚೆಂದದ ಬ್ಲಾಗ್, ಒಳ್ಳೆಯ ಬರವಣಿಗೆ......
ಅದಾಗ ನನ್ನ ಬ್ಲಾಗಿಗೊಮ್ಮೆ ಭೇಟಿಕೊಡಿ:)
Hi Chitra,
Nange Nimma email barlilla.. :-(
Nanna email ID: venisharma@gmail.com
ಕರು ಮುದ್ದಾಗಿದೆ :-)
Post a Comment