ಆವಾಗ ದ್ವಿತೀಯ ಪಿಯುಸಿ..ಅಕ್ಟೋಬರ್ ರಜಾ ಸಮಯ. ರಜೆಯಲ್ಲಿ ಮನೆಗೆ ಬಂದು
ಆರಾಮವಾಗಿ ಮನೆಯಲ್ಲಿ ಅಮ್ಮ ಮಾಡಿಟ್ಟಿದ್ದನ್ನು ತಿಂದು ತೇಗೋ ದೀನಗಳು. ನಮ್ಮೂರಿನ ಆನಂದನಿಗೆ ಊರ ಹುಡುಗಿಯರಿಗೆಲ್ಲ ಗಂಡು ಹುಡುಕೋ ಚಾಳಿ. ನಮ್ಮನೆಗೆ ಬಂದರೆ 'ಬಾಲೆಕ್ಕ'ನಿಗೆ ಹುಡುಗ ನೋಡ್ತೀನಿ ಅಂತ ಹೇಳುತ್ತಲೇ ಇದ್ದ. ಬಾಲೆಕ್ಕ ಅಂತ ಅಮ್ಮ ಪ್ರೀತಿಯಿಂದ ಕರೆಯುವ ಹೆಸರು. ಆನಂದನ ನೋಡಿದರೆ ನಂಗೆ ಎಲ್ಲಿಲ್ಲದ ಸಿಟ್ಟು ಬರುತ್ತಿತ್ತು. ಕೆಟ್ಟ ಕೆಟ್ಟ ಪದದಲ್ಲಿ ಬೈಯುತ್ತಿದ್ದೆ. ಅಷ್ಟಾದರೂ ಒಂದು ದಿನ ಹುಡುಕಿಯೇ ಬಿಟ್ಟ!
ಹುಡುಗ ಹುಡುಕಿದ ಖುಷಿಯಲ್ಲಿ ಬೆಳ್ಳಂಬೆಳಿಗ್ಗೆ ನಮ್ಮನೆಗೆ ಬಂದು ಅಮ್ಮನ ಜೊತೆ ರಾಗ ಎಳೆದ. ಆವಾಗಿನ್ನೂ ಹಳ್ಳಿಗಳಿಗೆ ಮೊಬೈಲು ಹೊಸತು. ಆನಂದ ಬಂದು ಅಮ್ಮನ ಜೊತೆ ಹುಡುಗನ ಬಗ್ಗೆ ಹೇಳಿದ್ದೇ , "ಬಾಲೆಕ್ಕನಿಗೆ ಒಳ್ಳೆ ಹುಡುಗ ಹುಡುಕಿದ್ದೀನಿ..ಗೌರ್ನಮೆಂಟ್ ಕೆಲಸದಲ್ಲಿದ್ದಾನೆ. ಓಡಾಟಕ್ಕೆ ಬೈಕ್ ಇದೆ. ಮನೆಯಲ್ಲೊಂದು ಜೀಪು ಇದೆ. ಅವನಿಗೊಂದು ಮತ್ತು ಅವನ ಮನೆಯಲ್ಲೊಂದು ಮೊಬೈಲ್ ಸೆಟ್ ಇದೆ. ಒಬ್ಬನೇ ಮಗ..ತುಂಬಾ ಒಳ್ಳೆಯವನು..." ಹೀಗೇ ಅವನ ಮೊಬೈಲು ಪ್ರತಿಷ್ಠೆ, ಮೈಬಣ್ಣ, ಕುಟುಂಬ, ಅವನ ಸರ್ಕಾರಿ ಕೆಲಸ..ಎಲ್ಲವನ್ನೂ ಪುಂಖಾನುಪುಂಖವಾಗಿ ಕೊಂಡಾಡಿದ್ದೇ ಕೊಂಡಾಡಿದ್ದು. ಅವನು ಹೇಳೋ ಪರಿ ಹೇಗಿತ್ತೆಂದರೆ..ನಮ್ಮಮ್ಮ ಮಗಳಿಗೆ ಮದುವೆನೇ ಆಗಿಬಿಡ್ತು ಅನ್ನುವ ಸಂಭ್ರಮದಲ್ಲಿದ್ದರು!!. ಅಬ್ಬಾ..! ಇವನಿಗೊಂದು ಗತಿ ಕಾಣಿಸಬೇಕು ಅಂದುಕೊಂಡು..ಸುಮ್ಮನಾದೆ. ಅಮ್ಮ, "ಆಯ್ತು..ಆನಂದ ನೋಡಿಕೊಂಡು ಹೋಗಲಿ..ಬಾಲೆಕ್ಕನಿಗೆ ರಜೆ ಮುಗಿಯಕೆ ಮೊದಲು ಕರೆದುಕೊಂಡು ಬಾ" ಅಂದ್ರು. ಬೈಕಿರುವ, ಜೀಪು ಇರುವ, ಮೊಬೈಲು ಹುಡುಗ ಮನೆಗೆ ಹೆಣ್ಣು ನೋಡೋ ದಿನ ಬಂದೇಬಿಟ್ಟಿತ್ತು..ಇನ್ನು ಒಂದೇ ದಿನ ಬಾಕಿಯಿರುವುದು. ಅಮ್ಮನಿಗಂತೂ ಖುಷಿಯೇ ಖುಷಿ..ಅಮ್ಮನತ್ರ ಹೇಳಿದೆ..ಅರ್ಜೆಂಟಾಗಿ ಕಾಲೇಜಿಗೆ ಹೋಗಬೇಕಂತೆ..ಫೋನ್ ಬಂದಿದೆ..ಹುಡುಗನ ಇನ್ನೊಂದ್ಸಲ ನೋಡಿಕೊಂಡು ಹೋಗಕ್ಕೆ ಹೇಳಿ..! ಅಮ್ಮನಿಗೆ ಸಿಟ್ಟು ಬಂತು. ಯಾಕಂದ್ರೆ ಮರುದಿನ ಹುಡುಗ ಬರುವವನಿದ್ದ. ಅಮ್ಮ ಹೇಳೋದನ್ನು ಕೇಳದೆ ಸೀದಾ ಉಜಿರೆಗೆ ಹೋಗಿಬಿಟ್ಟೆ. ನಾಲ್ಕು ದಿವಸ ಹಾಸ್ಟೇಲ್ ನಲ್ಲಿ ಹೋಗಿ ಕುಳಿತು ಆಮೇಲೆ ಮನೆಗೆ ಬಂದೆ. ಅಮ್ಮ ಒಳ್ಳೆ ಹುಡುಗ ಕೈ ತಪ್ಪಿ ಹೋದ ಅಂತ ರೇಗಾಡುತ್ತಿದ್ದರೆ, ಇತ್ತ ಆನಂದ 'ಮೊಬೈಲು, ಜೀಪು ಹುಡುಗ' ತಪ್ಪಿಹೋದನಲ್ಲಾ ಅಂತ ಗೊಣಗುತ್ತಿದ್ದ! ಅವನಿಗೆ ಸಿಗು ಪುಡಿಗಾಸೂ ಕೂಡ ಸಿಗದೆ ಹೋಯ್ತಲ್ಲಾ ಅಂತ ಅವನಿಗೆ ತಲೆಬಿಸಿ ಬೇರೆ.
ಮತ್ತೆ ಕಾಲೇಜು ಆರಂಭವಾಯಿತು. ನಾನು ಉಜಿರೆಗೆ ಹೋದೆ. ಪ್ರತಿ ಎರಡು ವಾರಕ್ಕೊಮ್ಮೆ ಊರಿಗೆ ಬರುತ್ತಿದ್ದೆ ನಾನು. ಹಾಗೇ ಒಂದು ದಿನ ಶನಿವಾರ ಕಾಲೇಜಿಂದ ಮನೆಗೆ ಬರುವಾಗ ಪುತ್ತೂರು ಬಸ್ ಸ್ಟಾಂಡಿನಲ್ಲಿ ಆನಂದ ಹುಡುಗನ ಜೊತೆ ಪ್ರತ್ಯಕ್ಷ ಆಗಿದ್ದ. ನಿಜವಾಗಿಯೂ ಆತ ಮೊಬೈಲು ಹುಡುಗನೇ..ಕೈಯಲ್ಲಿರುವ ಮೊಬೈಲನ್ನು ಕುಟ್ಟುತ್ತಾ..ಯಾರಿಯಾರಿಗೋ ಕಾಲ್ ಮಾಡಿ ಏನೇನೋ ಮಾತಾಡುತ್ತಿದ್ದ. ಮೊಬೈಲ್ ಇಲ್ಲದ ನಾನು ಮಾತ್ರ ಅವನ ವಿಚಿತ್ರ ವರ್ತನೆಯನ್ನು ನೋಡಿ ದಂಗಾಗಿದ್ದೆ. ನೇರವಾಗಿ ಆನಂದನಿಗೆ ಹೇಳಿದೆ, "ಇನ್ನು ಮುಂದೆ ಯಾರನ್ನಾದ್ರೂ ಕರೆದುಕೊಂಡು ಬಂದ್ರೆ ನೆಟ್ಟಗಿರಲ್ಲ. ಮೊಬೈಲು, ಜೀಪು ಅಂತ ಗೊಣಗಾಡಿದ್ರೆ...ನೋಡು ನಿನ್ನ. ಅವನ ಮೊಬೈಲು, ಜೀಪನ್ನು ಹಿಡಿದುಕೊಂಡು ನಾನೇನು ಮಾಡ್ಲಿ?" ಅಂದಾಗ ಆ ಹುಡುಗ ಮತ್ತು ಆನಂದ ಇಬ್ಬರು ಬೆಪ್ಪರಂತೆ ನನ್ನನ್ನೆ ನೋಡುತ್ತಿದ್ದರು. ಮನೆಗೆ ಬಂದವಳು..ಅಮ್ಮನೆದುರು ಕೂಡ ರೇಗಾಡಿ ಬಾಯಿ ಮುಚ್ಚಿಸಿದೆ. ಕೊನೆಗೆ ಗಂಡು ನೋಡುವ ಕೈಂಕರ್ಯಕ್ಕೆ ಮಂಗಳ ಹಾಡಿದ್ದೆ.
ನಮ್ಮೂರು ಈಗಲೂ ಹಳ್ಳಿ. ಕೆಲ ಮನೆಗಳಲ್ಲಿ ಟಿವಿ, ಬಲ್ಬ್ ಉರಿಯುತ್ತಿದೆ. ಆವಾಗೆಲ್ಲ ಮೊಬೈಲು ನೆಟ್ ವರ್ಕ್ ಸಿಗ್ತಾ ಇರಲಿಲ್ಲ..ಮೊಬೈಲ್ ಕಾಣಿಸಿಕೊಳ್ಳುತ್ತಿದ್ದೂ ಅಪರೂಪವೇ. ಮೊಬೈಲ್ ಹಳ್ಳಿಗೆ ಕಾಲಿಡುವ ಸಮಯದಲ್ಲಿ ಅದೊಂದು ಪ್ರತಿಷ್ಠೆಯ ಸಂಕೇತವಾಗಿತ್ತು. ಈವಾಗ ಭಿಕ್ಷುಕರ ಕೈಯಲ್ಲೂ ಮೊಬೈಲು ಇದೆ.
Tuesday, December 23, 2008
Subscribe to:
Post Comments (Atom)
18 comments:
ತುಂಬ ತುಂಬ ಚೆನ್ನಾಗಿ ಬರೆದಿದ್ದೀರಿ..
ಇಷ್ಟವಾಯಿತು ಬರವಣಿಗೆ..
ಮೊಬೈಲ್ ಇದ್ದೋನು ದೊಡ್ದ ಜನ ಎ೦ಬ ಕಾಲ ಹೋಯಿತು, ಹಾಗೇನೇ ಹುಡುಗ ಸಾಫ್ಟ್ ವೇರ್ ಇ೦ಜಿನಿಯರ್ ಲಕ್ಷ-ಲಕ್ಷ ಸ೦ಬಳ ಉ೦ಟು ಎ೦ಬಾ ಟೈಮೂ ಹೋಯಿತು ಅಲ್ವಾ..ಎಲ್ಲವೂ ಈಗ 'ನಾಯಿಸ೦ತೆ'
avÁæ gÀªÀgÉÃ,
¤ªÀÄä ¸ÀgÀ¼À, ªÀ¸ÀÄÛ¤µÀÖ ¤gÀÆ¥ÀuÉ N¢¹PÉÆAqÀÄ ºÉÆÃUÀĪÀ UÀÄt ºÉÆA¢zÉ.
CzÀÄ ¤d, ªÉƨÉ樀 EAzÀÄ ¥ÀæwµÉ×AiÀÄ ¸ÀAPÉÃvÀªÀ®è, §gÀºÀ ZÉ£ÁßVzÉ, »ÃUÉÃ
¥Àæw¤vÀå §gÉAiÀÄÄwÛj. CAzÀ ºÁUÉ £Á£ÀÆ J¸ï.r.JA.«zÁåyðAiÉÄà (1980
gÀ zÀ±ÀPÀzÀ°è). £À£ÀßzÀÆ MAzÀÄ ¨ÁèUÀÄ ¹zÀÞªÁUÀÄwÛzÉ.ªÀÄÄAzÉ w½¸ÀÄvÉÛãÉ.
ªÀAzÀ£ÉUÀ¼ÀÄ.
ಚಿತ್ರಾ ರವರೇ,
ನಿಮ್ಮ ಸರಳ, ವಸ್ತುನಿಷ್ಟ ನಿರೂಪಣೆ ಓದಿಸಿಕೊಂಡು ಹೋಗುವ ಗುಣ ಹೊಂದಿದೆ.
ಅದು ನಿಜ, ಮೊಬೈಲು ಇಂದು ಪ್ರತಿಷ್ಠೆಯ ಸಂಕೇತವಲ್ಲ, ಬರಹ ಚೆನ್ನಾಗಿದೆ, ಹೀಗೇ
ಪ್ರತಿನಿತ್ಯ ಬರೆಯುತ್ತಿರಿ. ಅಂದ ಹಾಗೆ ನಾನೂ ಎಸ್.ಡಿ.ಎಂ.ವಿದ್ಯಾರ್ಥಿಯೇ (೧೯೮೦
ರ ದಶಕದಲ್ಲಿ). ನನ್ನದೂ ಒಂದು ಬ್ಲಾಗು ಸಿದ್ಧವಾಗುತ್ತಿದೆ.ಮುಂದೆ ತಿಳಿಸುತ್ತೇನೆ.
ವಂದನೆಗಳು.
(ಪರಾಂಜಪೆ ಅವರು ಮೇಲೆ ನುಡಿ ಫಾರ್ಮೆಟ್ ನಲ್ಲಿ ಪ್ರತಿಕ್ರಿಯೆ ಬರೆದಿದ್ದಾರೆ..ಅದನ್ನು ಯುನಿಕೋಡ್ ಗೆ ಬದಲಾಯಿಸಿ ಹಾಕಿದ್ದಿನಿ)
-ಚಿತ್ರಾ
ಚಿತ್ರಾರವರೆ,
ಬದುಕಿನಲ್ಲಿ ಇತ್ತೀಚಿಗೆ ಎಲ್ಲ ಅರ್ಥ ಕಳೆದುಕೊಳ್ತಿದೆಯೇನೋ ಅಂತ ಅನ್ಸುತ್ತೆ, ಆಧುನಿಕತೆ ನಮ್ಮ ಹೆಗಲೇರಿ ಕುಳಿತಿದೆ. ಬೇಜಾರಾಗುತ್ತೆ.
ಲೇಖನ ಚೆನ್ನಾಗಿದೆ, ನೇರವಂತಿಕೆ ನಿಮ್ಮ ಬರಹದ ಜೀವಾಳ.
ಹುಡುಗನ ಹುಡುಕಿ, ಮದುವೆ ಗೊತ್ತಾದರೆ ಮರೆಯದೆ ನಮಗೂ ಕರೀತೀರ ತಾನೇ.
-ರಾಜೇಶ್ ಮಂಜುನಾಥ್
ಚಿತ್ರಾ,
ಎಂದಿನಂತೆ ಬರಹ ಚೆಂದವುಳ್ಳದ್ದು. ಮತ್ತು ನಿನ್ನದೇ ಶೈಲಿ ಉಂಟು.
ಚಿತ್ರಾ,
ಮೊಬೈಲ್ ಅಂದರೇನೂಂತ ಗೊತ್ತಾಗುವ ಮೊದಲೇ ನಾನು ಕೂಡ ಪರ್ಚೇಸ್ ಮಾಡಿದ್ದೆ... ತಗೊಂಡು ಒಂದು ವರ್ಷದ ನಂತ್ರವಷ್ಟೇ ಅದನ್ನು ಹೇಗೆ ಬಳಸೋದು ಅಂತೆಲ್ಲಾ ತಿಳ್ಕೊಂಡಿದ್ದೆ...ಅದನ್ನು ಜ್ಞಾಪಿಸ್ಕೊಂಡ್ರೆ ಈಗ ನಗು ಬರುತ್ತೆ :)
ಈ ದಲ್ಲಾಳಿಗಳಲ್ಲಿ ಶೇ.20 ಮಂದಿ ಕೂಡ... ಹಣಕ್ಕಾಗಿ ಬಾಯಿ ಬಿಡೋರು... ಶೇ.10 ಮದುವೆಗಳು ಮಾತ್ರ ಯಶಸ್ವಿಯಾಗ್ತವೆ..
ಚಿತ್ರಾ ಮೇಡಂ,
ನಿಮ್ಮ ಮೋಬೈಲ್ ಹುಡುಗ ಚೆನ್ನಾಗಿದ್ದಾನೆ..!!
ನೀವೆ ಹೇಳಿದ ಹಾಗೆ ನಂಗೂ
ಲೇಖನಾ ಬರೆಯಬೇಕುಎಂಬ ಆಸೆ ನನಗೂ ಇದೆ.ಆದರೆ ಬರೆಯಲಿಕ್ಕೆ ತುಂಭಾ ಇಷ್ಟವಾದ ವಿಷಯ ಸಿಗುತ್ತಿಲ್ಲ..'
ಅಲ್ಲಿಯವರೆಗೆ ನನ್ನ " ಸಾವಿರ ಕನಸು" ನಲ್ಲಿ ಕವಿತೆಯನ್ನೆ ಓದಿ ಎಂದು ಜಗಳಕಾಯತ್ತೆನೆ.
ನಿಮ್ಮ ಪ್ರೀತಿಗೆ ಸಾವಿರ ಥ್ಯಾಂಕ್ಸ..
-ಕನಸು
ಈ ಮೊಬೈಲನ್ನು ಟೆಕ್ನಲಾಜಿಕಲ್ ವೆಪನ್ ಅನ್ಬೋದು ನೋಡಿ.. ಕರ್ಮಕಾಂಡ.
mobile huDuga... hEgidda antha hELale illa...
kelavomme kone saMkye vyatyaasa aadare saMdEshagaLu bere vyakthige hOguttade.. hushaaraagiri.. :)
ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಬಹಳ ಸರಳವಾಗಿ,ಆಪ್ತವಾಗಿ ಬರೆಯುತ್ತರಿ ಕಣ್ರಿ.
ಸೋಕಾತಂಡ್..:-)
ಈಗ (ನಿಮಗಿನ್ನೂ ಮದುವೆಯಾಗಿರದಿದ್ರೆ) ಮೊಬೈಲ್ ಇಲ್ಲದ ಹುಡುಗನ್ನ ಮದುವೆ ಆಗಿ ನೋಡೋಣ!
ನಾನು ಮೊಬೈಲ್ ಮಾರಿ ಬಿಡೋಣ ಅಂತ ಇದ್ದೀನಿ .. :)
ಈರ್ನ ಮೊಬೈಲು ಜವನೆ ಕಥೆ ಎಡ್ಡೆ ಉಂಡು(ಪಾಪ !)
@ರಾಘವೇಂದ್ರ, ಪ್ರಮೋದ್, ಶಿವಣ್ಣ, ಅವಿನಾಶ್ ಸರ್ , ಗುರುಬಾಳಿಗ ಸರ್, ಹರೀಶ್ ಸರ್..ಧನ್ಯವಾದಗಳು
@ಪರಾಂಜಪೆ..ಬ್ಲಾಗ್ ಆರಂಭಿಸಿ..ಶುಭಾರಂಭ ದಿನ ಕರೆಯಿರಿ ನನ್ನನ್ನೂ!
@ರಾಜೇಶ್..ಖಂಡಿತಾ ಕರೆತೀನಿ ಆಯಿತಾ?
@ಕನಸು...ಧನ್ಯವಾದಗಳು.
@ಪರಿಸರಪ್ರೇಮಿ...ಹೂ..ಹೌದು! ಕರ್ಮಕಾಂಡ..
@ಜಯಶಂಕರ್..ಹೇಳಲೇಬೇಕಾ? ಇನ್ನೊಂದ್ಸಲ ಹೇಳ್ತಿನಿ. ಹೌದಾ? ಜೋಪಾನವಾಗಿರ್ತೀನಿ..(:)
@ಕುಮಾರ ರೈತ..ಥ್ಯಾಂಕ್ಯೂಉಉ
@ಹರೀಶ್...ಮೊಬೈಲು ಇಲ್ಲದ ಹುಡುಗನ ಹುಡುಕೋದೇ ಕಷ್ಟ. ನೀವೆಲ್ಲ ಸಾಥ್ ನೀಡಿದ್ದರೆ ಅದಕ್ಕೇನು ಕಷ್ಟ ಅಂತೀರಾ
@ಸಂತೋಷ್..ಒಳ್ಳೆ ಕೆಲ್ಸ!
-ತುಂಬುಪ್ರೀತಿ,
ಚಿತ್ರಾ
ಚಿತ್ರ ನೀವು ತುಂಬಾ ಅದ್ಬುತವಾಗಿ ಬರೆಯುತ್ತೀರ. ನಿಮ್ಮ ಅನುಭವಗಳನ್ನು ಬರವಣಿಗೆಯಲ್ಲಿ ಅದ್ಬುತವಾಗಿ ತರುತ್ತೀರಿ. ಹೀಗೆ ನಿಮ್ಮ ಅನುಭವಗಳು blogನಲ್ಲಿ ಲೇಖನದ ರೂಪದಲ್ಲಿ ಕಳೆದುಹೋಗದಿರಲಿ. ನಿಮ್ಮ ಅನುಬವಗಳನ್ನು ಕಥೆಯಾಗಿಸಿದರೆ ಕನ್ನಡದ ಸಾಹಿತ್ಯ ಲೋಕಕ್ಕೆ ಮತ್ತೊಬ್ಬ ಸಂವೇದನಾಶೀಲ ಲೇಖಕಿ ಸಿಕ್ಕಂತಾಗುತ್ತದೆ. ಇದು ಉತ್ಪ್ರೇಕ್ಷಣೀಯ ಮಾತಂತು ಅಲ್ಲ.
ಗೆಳೆಯ
ರಾಜೇಶ್
Post a Comment