Thursday, December 4, 2008

ಪ್ರೀತಿಯ ಅಭಿನಂದನೆಗಳು

ಬ್ಲಾಗ್ ಲೋಕದಲ್ಲಿ ತಮ್ಮ ವಿಭಿನ್ನ ಮತ್ತು ಆಕರ್ಷಣೀಯ ಛಾಯಾಚಿತ್ರಗಳ ಮೂಲಕ ಮನತಟ್ಟುವ ಫೋಟೋಗ್ರಾಪರುಗಳಾದ ಶಿವಣ್ಣ ಮತ್ತು ಮಲ್ಲಿಯಣ್ಣ ಇದೀಗ ರಾಷ್ಟ್ರೀಯ ಮಟ್ಟದ ಛಾಯಾಚಿತ್ರಗಳ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಮತ್ತು ತೃತೀಯ ಪುರಸ್ಕಾರ ಪಡೆದಿದ್ದಾರೆ.
"ನೆಲದ ಮೇಲೆ ಕಾಮನಬಿಲ್ಲು"
ದಿನಾಂಕ: ೪.೧೨.೨೦೦೮ ರಂದು ಮೈಸೂರಿನಲ್ಲಿ ನಡೆದ ಫೆಡರೇಷನ್ ಅಪ್ ಇಂಡಿಯನ್ ಫೋಟೋಗ್ರಪಿಯಿಂದ ಅಂಗೀಕೃತಗೊಂಡ ಮೈಸೂರಿನ ಡಿಸ್ಟ್ರಿಕ್ಟ್ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಸ್ಥೆ ನಡೆಸಿದ ಸ್ಪರ್ದೆಯಲ್ಲಿ ಶಿವಣ್ಣ ಅವರ ಚಿತ್ರ "ನೆಲದ ಮೇಲೆ ಕಾಮನಬಿಲ್ಲು" ಪ್ರಥಮ ಮತ್ತು ಡಿ.ಜಿ. ಮಲ್ಲಿಕಾರ್ಜುನ ರವರ "ನೀರಿನಾಟ" ತೃತೀಯ ಬಹುಮಾನ ಪಡೆದಿದೆ. ಅವರಿಗೆ ಪ್ರೀತಿಯ ಅಭಿನಂದನೆಗಳು . ಈ ಸ್ಪರ್ಧೆಯಲ್ಲಿ ದೇಶದಾದ್ಯಂತ ೨೦೦ಕ್ಕೂ ಹೆಚ್ಚು ಛಾಯಾಚಿತ್ರಕಾರರು ಸ್ಪರ್ದಿಸಿದ್ದರು. ಮತ್ತು ೨೦೦೦ಕ್ಕೂ ಹೆಚ್ಚು ಚಿತ್ರಗಳು ಸ್ಪರ್ಧೆಗೆ ಬಂದಿದ್ದವು.
"ನೀರಿನಾಟ"
ಅವರ ಬ್ಲಾಗ್ ಗೆ ನೀವೂ ಭೇಟಿನೀಡಬಹುದು. .http://chaayakannadi.blogspot.com/(ಶಿವು) ಹಾಗೂ http://dgmalliphotos.blogspot.com(ಮಲ್ಲಿಕಾರ್ಜುನ/

9 comments:

Ittigecement said...

ಚಿತ್ರಾರವರೆ...

ನಿನ್ನೆ ಕಾರಾಣಾಂತರಗಳಿಂದ ಮಲ್ಲಿಕಾರ್ಜುನ್ "ನಮ್ಮನೆ"ಯಲ್ಲಿದ್ದರು. ನಿಮ್ಮ ಮೆಸೇಜ್ ಬರುವ ಮೊದಲೆ ನನಗೆ ಗೊತ್ತಗಿತ್ತು. ಕೆಲಸದ ಒತ್ತಡದಲ್ಲಿ ಉತ್ತರಿಸಲಾಗಲಿಲ್ಲ..ಕ್ಷಮಿಸಿ..

ಬಹುಮಾನ ಬಂದ ವಿಷಯ ಕೇಳಿ..ತುಂಬಾ ಖುಷಿಯಾಯಿತು..
ಆಶ್ಚರ್ಯ ಆಗಲಿಲ್ಲ...
ಶಿವು ಕೆ. ಮತ್ತು ಮಲ್ಲಿಕಾರ್ಜುನ್ ಇಬ್ಬರೂ ಬಹಳ ಪ್ರತಿಭಾವಂತ ಛಾಯಾಗ್ರಾಹಕರು...
ಬಹಳ ಕಷ್ಟಪಟ್ಟು ಮೇಲೆ ಬಂದವರು...
ಅವರಿಬ್ಬರಿಗೂ ಇನ್ನೂ ಯಶಸ್ಸು ಸಿಗಲಿ....
ಮತ್ತೊಮ್ಮೆ ಅವರಿಗೆ ಈ ಮೂಲಕ...
ಹ್ರದಯ ಪೂರ್ವಕ..ಅಭಿನಂದನೆಗಳು....

ಇದನ್ನು ಪ್ರಕಟಿಸಿದ ನಿಮಗೂ ಅಭಿನಂದನೆಗಳು...

ಅಂತರ್ವಾಣಿ said...

ಚಿತ್ರಾ ಅವರೆ,

ಶಿವು ಅವರಿಗೆ ಹಾಗು ಮಲ್ಲಿಕಾರ್ಜುನ್ ಅವರಿಗೆ ನನ್ನ ಅಭಿನಂದನೆಗಳು

Harisha - ಹರೀಶ said...

ನನ್ನ ಕಡೆಯಿಂದಲೂ ಅಭಿನಂದನೆಗಳು :-)

ಚಿತ್ರಾ ಸಂತೋಷ್ said...

ಪ್ರಕಾಶ್ ಸರ್, ಹರೀಶ್, ಅಂತರ್ವಾಣಿ ಅವರಿಗೆ ಕೃತಜ್ಞತೆಗಳು. ನಿಮ್ಮ ಪ್ರೀತಿಯ ಅಭಿನಂದನೆಗಳನ್ನು ಅವರಿಗೆ ತಿಳಿಸುತ್ತೇನೆ.
-ಚಿತ್ರಾ

ರಾಘವೇಂದ್ರ ಕೆಸವಿನಮನೆ. said...

ಶಿವು ಹಾಗೂ ಮಲ್ಲಿಕಾರ್ಜುನ್ ಅವರಿಗೆ ಅಭಿನಂದನೆಗಳು.! ಬ್ಲಾಗ್ ಮುಖಾಂತರ ವಿಷಯ ತಿಳಿಸಿದ ನಿಮಗೂ ಧನ್ಯವಾದಗಳು.!!
- ರಾಘವೇಂದ್ರ ಕೆಸವಿನಮನೆ.

shivu.k said...
This comment has been removed by the author.
PaLa said...

ಶಿವು, ಮಲ್ಲಿಕಾರ್ಜುನರಿಗೆ ಅಭಿನಂದನೆಗಳು. ಈ ವಿಷಯವನ್ನು ಛಾಯಾಚಿತ್ರದೊಂದಿಗೆ ಪ್ರಕಟಿಸಿದ ನಿಮಗೆ ಧನ್ಯವಾದ.
--
ಪಾಲ

ಚಿತ್ರಾ ಸಂತೋಷ್ said...

ರಾಘವೇಂದ್ರ, ಪಾಲಚಂದ್ರ ..ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.
-ಚಿತ್ರಾ

Anantha Hudengaje said...

Hi Chitra,
Viewed your blog.
Good Effort. Keep writing.
Anantha Hudengaje
hudengaje@gmail.com