Saturday, September 20, 2008

ಕೊನೆಗೂ ಅನಾಥರಾದ ಮಕ್ಕಳು...!!

ಅದೊಂದು ಪುಟ್ಟ ಸಂಸಾರ. ಇಬ್ಬರು ಮಕ್ಕಳು. ಆ ಮಕ್ಕಳಿಗೆ ತಂದೆ-ತಾಯಿ ಎರಡೂ ಅಮ್ಮನೇ. ಹೆಣ್ಣುಮಕ್ಕಳಿಗೆ ತಿಳಿವು ಬರುವ ಹೊತ್ತಿಗೆ ತಂದೆಯಾದವ ಎತ್ತಲೋ ಹೋಗಿದ್ದ! ತಂದೆಯ ಪ್ರೀತಿ, ಅಮ್ಮನ ಪ್ರೀತಿ ಎಲ್ಲವನ್ನೂ ಆ 'ಅಮ್ಮ ದೇವರು' ಧಾರೆಯೆರೆದಳು. ಬದುಕಿಗೊಂದು ರೂಪ ನೀಡಿದ್ದಳು. ಗಂಡ ಬಿಟ್ಟು ಹೋದ ಏಕೈಕ ಕಾರಣಕ್ಕಾಗಿ ಆ ಅಮ್ಮ ಇಡೀ ಕುಟುಂಬದಿಂದಲೇ ದೂರವಿರಬೇಕಾಯಿತು. ನೋವಿನಲೆಯಲ್ಲಿ ಕೊಚ್ಚಿಹೋಗುತ್ತಿದ್ದರೂ, ಆ ಅಮ್ಮನ ಮುಖದಲ್ಲಿ ಮಕ್ಕಳಿಗಾಗಿ ನಗು ತುಂಬಿತ್ತು. ಪ್ರೀತಿ ತುಂಬಿತ್ತು. ಮಕ್ಕಳ ಭವಿಷ್ಯದ ಕುರಿತು ಕನಸಿನ ಮಹಾಗೋಪುರವನ್ನೇ ಕಟ್ಟಿದ್ದಳು. ಬಡತನ ಬದುಕನ್ನೇ ಕಸಿದುಕೊಳ್ಳುತ್ತೇ ಎಂದಾಗ..ಭಿಕ್ಷೆಗೂ ಹಿಂಜರಿಯಲಿಲ್ಲ ಅಮ್ಮ! ಕಾಲಚಕ್ರದೊಂದಿಗೆ ಬಾಳರಥ ದೂಡುತ್ತಿದ್ದಳು.

ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಏಕೈಕ ಕಾರಣದಿಂದ ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದಳು. ತಾಯಿಮನೆಯೆಂಬ ಆಶ್ರಯ ಇದ್ದರೂ, ದಿಕ್ಕಿಲ್ಲದ ಮಕ್ಕಳಿಗಿರುವ ಅನಾಥಶ್ರಮದ ಮಕ್ಕಳಾದುವು ಆ ಇಬ್ಬರು ಹೆಣ್ಣು ಮಕ್ಕಳು. ಅದೇ ಅವರ ಮನೆಯಾಯಿತು. ಇತ್ತ ಮನೆಯಲ್ಲಿ ಅಮ್ಮನೊಬ್ಬಳೇ. ಗಂಡನಿದ್ದೂ ಇಲ್ಲದಾದ, ಮಕ್ಕಳೂ ಕಣ್ಣೆದುರಿಗಿಲ್ಲ. ಆ ಪುಟ್ಟ ಮಕ್ಕಳನ್ನು ಒಂಬತ್ತು ತಿಂಗಳು ಹೊತ್ತು ಸಲಹಿದ ಅಮ್ಮನಿಗೆ ಮಕ್ಕಳ ನೆನಪಿನಲ್ಲಿ ಬದುಕಲಾಗಲಿಲ್ಲ. ಮನೆಯೆಲ್ಲ ಬಿಟ್ಟು ಮಕ್ಕಳಿರುವ ಆಶ್ರಮದ ಹತ್ತಿರವೇ ಯಾವುದೋ ಒಂದು ಸಂಸ್ಥೆಯಲ್ಲಿ ದುಡಿದು ಜೀವನ ಸಾಗಿಸುತ್ತಿದ್ದಳು. ಮಕ್ಕಳು ಹೈಸ್ಕೂಲು ಹಂತಕ್ಕೆ ತಲುಪಿದ್ದರು.

ಅದೊಂದು ದಿನ ಮಕ್ಕಳಲ್ಲಿ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಗೆ ವಾಪಾಸಾದಳು. ಅಂದೇ ರಾತ್ರಿ ಮನೆಯ ಹಿಂಬದಿಯಲ್ಲಿರುವ ಗೇರುಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು. ಹೋಗಿ ಬರುತ್ತೇನೆಂದು ಹೇಳಿದ ಅಮ್ಮ ಮತ್ತೆಂದೂ ಬರದ ಲೋಕಕ್ಕೆ ತೆರಳಿದಳು. ತಮ್ಮ ಬದುಕಿನ ಉಸಿರಾಗಿರುವ ಅಮ್ಮನೂ ತಬ್ಬಲಿಗಳನ್ನಾಗಿ ಮಾಡಿ ದೂರಾದಳು. ಕೊನೆಗೂ ಅನಾಥ ಮಕ್ಕಳಿಗೆ ಆಶ್ರಯ ನೀಡಿದ್ದು ಅನಾಥಾಲಯ!!

ಆಫೀಸ್ ನಲ್ಲಿ ಕುಳಿತಿದ್ದೆ. ನಾನು ಹೊರಡುವ ಸಮಯವೂ ಮೀರಿತ್ತು. ಮನೆಗೆ ಹೋಗಕ್ಕೆ ಮನಸ್ಸಾಗಲಿಲ್ಲ. ಕೆಲಸ ಮಾಡಕ್ಕೂ ಮನಸ್ಸಿಲ್ಲ. ಯಾವುದೋ ಒಂದು ಹಳೆಯ ಗೀತೆ ಕೇಳುತ್ತಿದ್ದೆ. ಮನಸ್ಸು ಯಾಕೋ ಐದು ವರ್ಷಗಳ ಹಿಂದೆ ನಮ್ಮೂರಲ್ಲಿ ನಡೆದ ಘಟನೆಯತ್ತ ಹೊರಳಿತ್ತು. ಯಾಕೋ ನನ್ನ ಕಣ್ಣೆದುರು ಓಡುತ್ತಿದ್ದ ಆ ಮಕ್ಕಳು, ಅಮ್ಮ ನೆನಪಾದರು. ಇತ್ತೀಚೆಗೆ ಊರಿಗೆ ಹೋದಾಗಲೂ ಆ ಮಕ್ಕಳನ್ನು ಕೇಳಿದೆ. ಯಾವುದೋ ಎನ್ ಜಿಒ ಅವರಿಗೆ ಆಶ್ರಯ ನೀಡಿ, ಕೆಲಸ ಕೊಡಿಸಿದೆ ಎಂದರು ಅಮ್ಮ. ಹೀಗಾಗಬಾರದಿತ್ತು..ಹೀಗಾಗಬಾರದು...!!

8 comments:

bhadra said...

ಒಂದೇ ಉಸಿರಿನಲ್ಲಿ ಓಡಿಬಿಟ್ಟಿರಿ :) - ಕಥಾನಕಕ್ಕೆ ಸ್ವಲ್ಪ ಒತ್ತು ಕೊಟ್ಟು ಬರೆಯಬಹುದಿತ್ತು ಎಂದು ಅನ್ನಿಸುತ್ತಿದೆ
ನಿಮ್ಮ ಮನಸ್ಸಿನಲ್ಲಿರುವ ಒತ್ತಡವನ್ನು ತಿಳಿದಿರುವೆ. ಮನದಲ್ಲಿಯ ಹೊಯ್ದಾಟದ ಮುಂದೆ ಬರಹಕ್ಕೆ ಅವಕಾಶ ಸಿಕ್ಕಿಲ್ಲ ಅಲ್ವೇ?

कोई लौटा दे मेरे बीते हुये दिन
बीते हुये दिन वो मेरे प्यारे पलछिन

मेरे ख्वाबों के महल, मेरे सपनों के नगर
पीलिया जिनके लिये मैने जीवन का झहर
आज मैं ढूंढूं कहां खॊ गये जाने किधर
बीते हुये दिन वो मेरे प्यारे पलछिन

ಆದರೂ, ಮನೋಜ್ಞವಾದ ಚಿತ್ರಣ - ಮನದಲ್ಲಿ ಕಲ್ಪಿಸಲೂ ಆಗದಂತಹದ್ದು ಜೀವನದಲ್ಲಿ ನಡೆದುಬಿಡುವುದು
ಆ ಪುಟ್ಟ ಮಕ್ಕಳಿಗೆ ಎಳೆಯ ವಯಸ್ಸಿನಿಂದ ಎಂತಹ ಜೀವನ ಪಾಠವನ್ನು ವಿಧಿ ನೀಡಿದ್ದಾನೆ ಅಲ್ವಾ
ಅವರ ಮುಂದಿನ ಭವಿಷ್ಯ ಮಾತ್ರ ಬಹಳ ಉಜ್ವಲವಾಗಿರುವುದು - ಇದು ಖಂಡಿತ - afterall, ಬದಲಾವಣೆಯೇ ಜಗದ ನಿಯಮ

ಸಮಾಜದಲ್ಲಿ ಆ ಮಕ್ಕಳೊಂದಿಗೆ ಬೆಳೆಯುತ್ತಿರುವ, ಉಳಿಯುತ್ತಿರುವ ನನ್ನಿಂದಲೂ ಏನಾದರೂ ಸಹಾಯ ಆಗುವಂತಿದ್ದರೆ
ಜರೂರು ತಿಳಿಸಿ

ಗುರುದೇವ ದಯಾ ಕರೊ ದೀನ ಜನೆ

ವಿ.ರಾ.ಹೆ. said...

nija, ಹೀಗಾಗಬಾರದಿತ್ತು..ಹೀಗಾಗಬಾರದು...

KRISHNA said...

ದುರಂತಗಳು ಸಾಮಾನ್ಯವೆಂಬಂತೆ ಘಟಿಸುತ್ತವೆ. ಅವು ನಂತರ ಕೊಡುವ ವೇದನೆ ಬೇರೆಯೇ ಇದೆ. ದುರಂತ ನಡೆದಾಗ ಸಾಂತ್ವನ ಹೇಳುವ ಮಂದಿ ನಂತರದ ದಿನಗಳಲ್ಲಿ ಕ್ರಮೇಣ ದೂರ ದೂರವಾಗುವುದು ಸಹಜ ತಾನೆ?

Santhosh Rao said...

ಹಾಳೆ ನೆನೆಪುಗಳು ಗಕ್ಕನೆ ಎದುರು ಬಂದು ಮೌನಕ್ಕು ಮಾತು ಬಂದಂತಿದೆ ...

- Santhosh

jomon varghese said...

ಏನು ಹೇಳುವುದು,ಇಂತಹ ಲೇಖನಗಳನ್ನೂ ಓದುವಾಗ ಕಣ್ಣು ತೇವವಾಗುತ್ತದೆ.

ಚಿತ್ರಾ ಸಂತೋಷ್ said...

ಶ್ರೀನಿವಾಸ್, ವಿಕಾಸ್, ಕೃಷ್ಣ, ಜೋಮನ್, ಸಂತೋಷ್ ..ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ಸದಾ ಹೀಗೇ ಆಗಾಗ ಬರುತ್ತೀರಿ ನನ್ನ ಬ್ಲಾಗಿಗೆ..ನಿನ್ನ ಮಾತುಗಳೇ ನನಗೆ ಸ್ಫೂರ್ತಿ..
ಒಲವಿನಿಂದ,
ಚಿತ್ರಾ

ಹೆಸರು ರಾಜೇಶ್, said...

edakke samajave(nave) hone
regards
rajesh

ಕನಸು said...

ಹಾಯ್,
ನಾನು ಕನಸು
ನಿಮ್ಮ ಬ್ಲಾಗ ಈ ತಾನೆ ನೊಡಿದೆ .ಆವತ್ತು ಕನ್ನಡ ಪ್ರಭ ದಲ್ಲಿ ನಿಮ್ಮ ಲೇಖನಗಳನ್ನು ಓದಿದ ನೆನಪು.ಇವತ್ತು ಇಮ್ಮ ಬ್ಲಾಗು ನೋಡಿದೆ . ಆಮೇಲೆ ಎಲ್ಲಾ ಓದಿ ಹೇಗಿದೆ ಅಂತ ಬರೆಯುತ್ತೆನೆ.
ನನ್ನದು ಒಂದು ಬ್ಲಾಗಿದೆ ಸಾದ್ಯವಾದರೆ ಬೇಟಿ ಕೊಡಿ
http://savira-kanasu.blogspot.com
ದನ್ಯವಾದಗಳೋಂದಿಗೆ.
ಕನಸು