ಹೀಗೇ ನಾ ಎದ್ದಾಗ, ಕುಂತಾಗ..ಮಲಕೊಂಡಾಗ..ನಿದ್ದೆಯಲ್ಲಿ ಗೊರಕೆ ಹೊಡೆದಾಗ, ಕನಸಿನಾಂಗ...ಸಿಟ್ಟು ನನ್ನ ಬೆನ್ನು ಬಿಡಲ್ಲ. ನಡೆಯೋ ದಾರಿಯ ಪ್ರತಿ ಹೆಜ್ಜೆಯಲ್ಲೂ ಸಿಟ್ಟು ನನ್ನ ಜೊತೆ ಇರುತ್ತೆ..ಬೇಡ ಬೇಡ ಹೋಗು ಹೋಗು ಎಂದರೂ ..ಮತ್ತೆ ಮತ್ತೆ ನನ್ನ ಕಾಡಿಸುತ್ತೆ. ರೇಗುವಂತೆ ಮಾಡುತ್ತೆ...ಮತ್ತೆ ನನ್ನ ಪಶ್ಚಾತ್ತಾಪ ಪಡುವಂತೆ ಮಾಡುತ್ತೆ.
ಆಫೀಸ್ ನಲ್ಲಿ ಬಾಸ್..ಬೆಳಿಗ್ಗೆಯಿಂದ ಏನು ಮಾಡಿದ್ರಿ ಅಂದ್ರೆ ಗುರ್ ರ್ ಅಂತೀನಿ..ಸಂಜೆ ಮನೆಗೆ ಹೊರಟಾಗ ಲೇಟಾಗಿ ಮನೆಗೆ ಹೋಗುವ ಬಾಸ್ ನಾಳೆ ಬಂದು ಏನ್ ಮಾಡ್ತೀರಿ ಎಂದು ಕೇಳಿದಾಗಲೂ ಇಲ್ಲದ ಉಸಾಬರಿ ಇವರಿಗ್ಯಾಕೆ ಅಂತ ಮುಖ ಸಿಂಡರಿಸ್ತೀನಿ.. ಮೊನ್ನೆ ಮೊನ್ನೆ ಸಿಕ್ಕ ನಮ್ಮೂರ ಗೆಳೆಯನತ್ರ ಪರಿಚಯ ಆದ ಮೂರೇ ದಿನದಲ್ಲಿ ಮುನಿಸಿಕೊಂಡಿದ್ದೀನಿ...ಚಾಟ್ ಮಾಡುತ್ತಿದ್ದ ಗೆಳತಿ ಇದ್ದಕಿದ್ದಂತೆ ಆಫ್ ಲೈನ್ ಆದಾಗ ಮತ್ತೆ ಫೋನ್ ಮಾಡಿ ಬೈದು ಬಿಡ್ತೀನಿ..ಪ್ರೀತಿಯ ಗೆಳೆಯ/ಗೆಳತೀರು ಪ್ರೀತಿಯಿಂದ ತಮಾಷೆ ಮಾಡಿದ್ರೂನು ಒಮ್ಮೊಮ್ಮೆ ..i dont like ಅಂತೀನಿ..ಹಾಗಾಗಿ ಎಲ್ರ ದೃಷ್ಟೀಲಿ ನಾ 'ರೆಬೆಲ್ ಸ್ಟಾರ್ 'ಆಗಿಬಿಟ್ಟಿದ್ದೀನಿ.
ನಂಗೊತ್ತು ಸಿಟ್ಟು ನಮ್ಮನ್ನು ತುಂಬಾ ಕೆಟ್ಟವರನ್ನಾಗಿ ಮಾಡುತ್ತೆ..ನೋಡೋರ ಕಣ್ಣಲ್ಲಿ ತೀರ ಕೆಟ್ಟವಳು ಅನಿಸಿಕೊಂಡಿದ್ದೀನಿ..ನಿತ್ಯ ನನ್ ತಮ್ಮ ಆಫೀಸಿಗೆ ಹೊರಡುವಾಗ ಅಕ್ಕ..ನೀಟಾಗಿ ಕೆಲ್ಸ ಮಾಡು..ಬಾಸ್ ಜೊತೆ ಜಗಳ ಮಾಡ್ಬೇಡ ಅಂತಾನೆ...ಅಮ್ಮ ಫೋನು ಮಾಡಿ ಪ್ರೀತಿಯಿಂದ 'ಮಂಡೆ ಬೆಚ್ಚ ಮಲ್ಪೊಡ್ಚಿ ಮ್ಮ" ಅಂತಾರೆ..ಇಷ್ಟಾದ್ರೂ ನನ್ ಸಿಟ್ಟು ಹಾಗೇ ಇದೆ..ಯಾಕೋ ಬಿಟ್ಟು ಹೋಗ್ತಿಲ್ಲ.ಸಿಟ್ಟು ಮಾಡ್ಕೊಂಡು ಎದುರಿಗಿದ್ದವರಿಗೂ ಸಿಟ್ಟು ಬರಿಸ್ತೀನಿ. ಮತ್ತೆ ಪಶ್ಚಾತ್ತಾಪ ಪಡ್ತೀನಿ.
ಮೊದ್ಲು ಹಾಸ್ಟೇಲ್ ಜೀವನ. ಅಲ್ಲೂ ಅಷ್ಟೇ. ನಾನು ಗುರ್ ಅಂದ್ರೆ ಒಂಬತ್ತು ರೂಂಗಳ ಹುಡುಗೀರು ಸುಮ್ಮನಾಗುತ್ತಿದ್ರು. ಶೌಚಾಲಯದಲ್ಲಿ ಕಸ ಬಿದ್ರೆ, ಹೂವಿನ ಗಿಡಗಳಿಗೆ ನೀರು ಹಾಕದಿದ್ರೆ, ಸಂಜೆ ಶುರುವಾಗುವ ಭಜನೆಗೆ ಚಕ್ಕರ್ ಹಾಕಿದ್ರೆ..ರಂಪಾಟ ಮಾಡೋ ನನ್ನ ಮನಸ್ಸು ಮತ್ತೆ ಸ್ವಲ್ಪ ಹೊತ್ತಿನಲ್ಲಿ ಹೋಗಿ ಅವರನ್ನು ಸಮಧಾನಿಸುತ್ತಿತ್ತು. ಆದರೆ ಆವಾಗಲೇ ಕಾಲ ಮಿಂಚಿ ಹೋದ ಘಟನೆಗಳು ಅದೆಷ್ಟೋ. ನಂಗೆ ಶಾಪ ಹಾಕಿದೋರು ಅದೆಷ್ಟೋ ಮಂದಿ.
ಸಿಟ್ಟು ನಮ್ಮನ್ನು ತುಂಬಾ ಹಾಳು ಮಾಡುತ್ತೆ..ಸಿಟ್ಟು ಬೇಡ ಪ್ರೀತಿಯಷ್ಟೇ ಸಾಕು. ಅಸಹನೆ, ಕೆಟ್ಟ ಸಿಟ್ಟು ಬೇಡ..ಪ್ರೀತಿಯ ಹುಸಿಮುನಿಸು, ಪ್ರೀತಿಯ ಸಿಟ್ಟು ಬೇಕು..ಆದ್ರೆ ನಂಗಿನೂ ಇದರಿಂದ ಬಿಡುಗಡೆ ಸಿಕ್ಕಿಲ್ಕ. ಸಿಟ್ಟು ಬರುತ್ತೆ..ಹೋಗುತ್ತೆ...ಏನೋ ಮಾಡುತ್ತೆ..ನನ್ನ ತೀರ ಕೆಟ್ಟವಳನ್ನಾಗಿ..ಕೆಲವರ ಶತ್ರುವನ್ನಾಗಿ. ಇದಕ್ಕೆ ಏನು ಪರಿಹಾರ ಅಂತೀರಾ?
ಪೋಟೋ: http://www.flicker.com/
17 comments:
ಸಧ್ಯ ಹೇಳಿದ್ದು ಒಳ್ಳೆದಾಯ್ತು .
ಇನ್ನು ಮೇಲೆ ಸ್ವಲ್ಪ ಹುಶಾರಾಗಿರಬಹುದು೧
ಆಫೀಸ್ ನಲ್ಲಿ ಬಾಸ್..ಬೆಳಿಗ್ಗೆಯಿಂದ ಏನು ಮಾಡಿದ್ರಿ ಅಂದ್ರೆ ಗುರ್ ರ್ ಅಂತೀನಿ..ಸಂಜೆ ಮನೆಗೆ ಹೊರಟಾಗ ಲೇಟಾಗಿ ಮನೆಗೆ ಹೋಗುವ ಬಾಸ್ ನಾಳೆ ಬಂದು ಏನ್ ಮಾಡ್ತೀರಿ ಎಂದು ಕೇಳಿದಾಗಲೂ ಇಲ್ಲದ ಉಸಾಬರಿ ಇವರಿಗ್ಯಾಕೆ ಅಂತ ಮುಖ ಸಿಂಡರಿಸ್ತೀನಿ..
ಇದು ದಿನನಿತ್ಯದ ಕತೆನಾ? ಗುರ್ ಗುರ್ ಗುರ್ ಗುಟ್ಟಮ್ಮ...
ಸಿಟ್ಯಾಕೆ-ಸಿಡುಕ್ಯಾಕೆ ಅಂತ ಅಂದ್ಕೋಬೇಡಿ.ಸಾತ್ವಿಕ ಸಿಟ್ಟು ಮಾನಸಿಕ ಆರೋಗ್ಯಕ್ಕೂ ಒಳೆಯದು.ಸಿಟ್ಟನ್ನು ವ್ಯಕ್ತಪಡಿಸುವ
ರೀತಿಯೂ ಮುಖ್ಯ.ಯಾರು ಏನೇ ಅಂದ್ರೂ ಸುಮ್ನಿರದೆ ಸಿಟ್ಟು
ಮಾಡ್ಕೋಳ್ಳಿ,ಆದ್ರೆ ಅದು ನಿಮಗೆ ಹಿತ ಬೇರೆಯವರಿಗೆ ಮಿತವಾಗಿರಲಿ
I hate u...
-Mel
ಮೇಡಮ್,
ಸಿಟ್ಟು ಬಂದಿದೆ ಅಂತ ಗೊತ್ತಾಗಿದೆಯಲ್ಲ, ಅಲ್ಲಿಗೆ ನಿಮಗೆ ಸಿಟ್ಟಿನ ಅರಿವಾಗಿದೆ ಅಂತ ಆಯ್ತು. ಇನ್ನು ಮುಂದೆ ನಿಮಗೆ ಬರುವ ಸಿಟ್ಟು ಕಡಿಮೆಯಾಗುತ್ತೆ. ಬಿಡಿ.
ಸಿಟ್ಟು ಮಾತ್ರಾನ? ಅಥ್ವಾ ಕೈಗೆ ಸಿಕ್ಕಿದ್ದು ಎಸಿತೀರಾ? :-) (ಸುಮ್ನೆ ನಮ್ಮ safety-ಗೆ:-)
ಮೀನಗುಂದಿ ಸುಬ್ರಮಣ್ಯರ ’ಮನಸು ಇಲ್ಲದ ಮಾರ್ಗ’ ಓದಿ ನೋಡಿ. ಸಹಾಯ ಆಗ್ಬಹುದು.
ಅದು ’ಮೀನಗುಂಡಿ’
ಹೌದಾ, ಇಷ್ಟೆಲ್ಲಾ ಸಿಟ್ಟಾ? ನಂಗೇನೂ ಹಾಗೆ ಅನ್ಸಲ್ವಲ್ಲ! :)
ಅಸಹನೆ ಇರ್ಬೇಕು ಅದು. ಅದನ್ನ ಸಿಟ್ಟು ಮಾಡ್ಕೋಂಡಿದಿರ.
http://thinksimplenow.com/happiness/15-simple-ways-to-overcome-anger/
ಯಾವುದಾದರೂ ಒ೦ದು ಕ್ಲಿಕ್ ಆಗಬಹುದೇನೋ? :)
ನಿಮ್ಮ ಸಿಟ್ಟಿನ ಪರಿಧಿಗೆ ನಾನು ಸೇರಿದೆ ಅನಿಸುತ್ತೆ.ಯಾಕೆಂದರೆ ನಾನು ನಿಮ್ಮ ಸಿಟ್ಟು ಓದಿದೆ. ತುಂಬಾ ಚೆನ್ನಾಗಿ ಬರೆದಿದ್ದಿರಾ !!
ಧನ್ಯವಾದಗಳು.
ಕನಸು
@ನನ್ ಮನೆ ವೀರೇಶ್, ಶಿವಣ್ಣ, ಕುಮಾರ್, ಕನಸು...ತುಂಬಾ ಧನ್ಯವಾದಗಳು.
@ಸಂದೀಪ್..ಹಿಹಿ..ಹುಷಾರಾಗಿರಿ!
@ಭಾಗವತರೇ, ಪ್ರಮೋದ್, ನಿಮ್ಮ ಸಲಹೆಗಳನ್ನು ಶಿರಸಾವಹಿಸಿ ಪಾಲಿಸುತ್ತೇನೆ.
@ವಿಕಾಸ್..ಇನ್ನು ಮುಂದೆ ನನ್ ಬುದ್ದಿ ತೋರಿಸ್ತೀನಿ
@Mel. ಥ್ಯಾಂಕ್ಯೂ. ಯಾಕ್ರೀ ಅರ್ಧ ಹೆಸ್ರು ಬರೆದಿಟ್ಟೀರಿ. ಸಿಟ್ಟಾದ್ರೆ ಕಷ್ಟ ಅಂತನಾ?
-ಪ್ರೀತಿಯಿರಲಿ,
ಚಿತ್ರಾ
ಪಾಪು ಫೋಟೋ ಚನ್ನಾಗಿದೆ.
ಗೆಳೆಯ
ರಾಜೇಶ್
@ರಾಜೇಶ್..ಚೆನ್ನಾಗಿರೋದನ್ನೇ ಹಾಕಿದ್ದೀನಿ ಬಿಡಿ..ಅದ್ಸರಿ ಸ್ವಲ್ಪ ಬರೆದಿರೋದನ್ನು ಓದ್ರೀ..(:)
-ಚಿತ್ರಾ
ಚಿತ್ರಾ,
ಸಿಟ್ಟು ವಿನಾಕಾರಣವಾದರೆ ಅಷ್ಟು ಒಳ್ಳೆಯದಲ್ಲ, ಸಿಟ್ಟಿಗೊಂದು ಬಲವಾದ ಕಾರಣವಿದ್ದರೆ ಮನಸ್ಸಿಗೂ ಪೂರಕವಾಗಿರುತ್ತದೆ. ತಾಳ್ಮೆಯಿರಲಿ, ಹೀಗೆಂದೇ ಎಂದು ಸಿಟ್ಟಾಗದಿರಿ. ಬರವಣಿಗೆಯ ವೈಖರಿ ಚೆನ್ನಾಗಿದೆ, ಇಷ್ಟವಾಯ್ತು.
-ರಾಜೇಶ್ ಮಂಜುನಾಥ್
ರಾಜೇಶ್ ಸರ್..
ಶರಧಿಗೆ ಸ್ವಾಗತ..ಥ್ಯಾಂಕ್ಯೂ.....
-ಚಿತ್ರಾ
"Anger should be a positive emotion" ಅಂತೆ :)
ನಿಮಗೆ ಸಿಟ್ಟು ಬಂದಾಗೆಲ್ಲ ನೀವೇ ಬರ್ದಿರೋ ಈ ಲೇಖನ ಓದಿ.. ಸರಿ ಹೋಗುತ್ತೆ.. ಗುರ್ರ್..
Post a Comment