Friday, November 28, 2008

ಮನಸ್ಸು ಹಗುರವಾಗಿಸಲು...

ಮೊನ್ನೆ ಬುಧವಾರ ರಾತ್ರಿ ಮುಂಬೈಯ ತಾಜ್ ಹೊಟೇಲ್ ನಲ್ಲಿ ಸಿಡಿದ ಬಾಂಬುಗಳ ಸದ್ದು. ನೂರಾರು ಜೀವಗಳ ಮಾರಣಹೋಮ, ಗಾಯಾಳುಗಳು, ಕುಟುಂಬದವರ ಆಕ್ರಂದನ. ಆ ರಕ್ತದೋಕುಳಿಯನ್ನು ನೋಡುತ್ತಿದ್ದ ಮನಸ್ಸೇಕೋ ಅಸಹನೀಯವಾಗಿ ನೋವನನ್ನುಭವಿಸುತ್ತಿದೆ. ಭಾರತ ಎಂದರೆ ಭಯೋತ್ಪಾದನೆ, ಭಾರತ ಎಂದರೆ ಭ್ರಷ್ಟಾಚಾರ ಅನ್ನುವ ಸ್ಥಿತಿ ನಮ್ಮದು. ಅಂದು ಜೈಪುರದಲ್ಲಿ ಬಾಂಬು ಸ್ಫೊಟವಾದಾಗ ಪ್ರಧಾನಿ, ಗೃಹಸಚಿವರು ಹೇಳಿದ್ದು ; ಇನ್ನೆಂದೂ ದೇಶದಲ್ಲಿ ಬಾಂಬು ದಾಳಿ ನಡೆಸದಂತೆ ಎಚ್ಚರಿಕೆ ವಹಿಸುತ್ತೇವೆ. ಆಮೆಲೆ ಬೆಂಗಳೂರು, ಅಹಮದಾಬಾದ್, ದೆಹಲಿ ಎಲ್ಲಿ ರಕ್ತದೋಕುಳಿ ನಡೆದರೂ ಇದೇ ಮಾತನ್ನು ಪುನರುಚ್ಚರಿಸಿದರು. ಇದೀಗ ಮುಂಬೈ ಇನ್ನೂ ಚೇತರಿಸಿಕೊಂಡಿಲ್ಲವಾದರೂ ಇದೇ ಮಾತು ಗಣ್ಯರ ಬಾಯಿಂದ ಉದುರುತ್ತಿದೆ. ಒಂದೇ ಸಮನೆ ಚಾನೆಲ್ ಗಳು ಪ್ರಸಾರ ಮಾಡುತ್ತಲೇ ಇವೆ..ನಿರಂತರ ಕಾರ್ಯಾಚರಣೆ, ಬಿಳುವ ಹೆಣಗಳ ರಾಶಿ ನೋಡಿ ಬದುಕೇ ಬೇಡ ಅನ್ನುವಷ್ಟು ಮನಸ್ಸು ರೋಸಿಹೋಗುತ್ತಿದೆ. ಬೆಳಿಗೆದ್ದು ಟಿವಿ ಆನ್ ಮಾಡಿದರೆ ರಕ್ತದೋಕುಳಿಯ ಸುಫ್ರಭಾತ, ಪೇಪರ್ ನೋಡಿದ್ರೂ ಅದೇ. ಆಫಿಸ್ ನಲ್ಲಿ ಬಂದು ಕುಳಿತರೆ ಕೆಲಸ ಮಾಡಕ್ಕಾಗದಷ್ಟು ದುಃಖವಾಗುತ್ತಿದೆ. ಭಯೋತ್ಪಾದನೆ ದಾಳಿ ಆದಾಗಲೆಲ್ಲಾ ಸತ್ತವರಿಗೆ, ಗಾಯಾಳುಗಳಿಗೆ ಪರಿಹಾರ ಘೋಷಿಸಿ ಕೈತೊಳೆದುಕೊಳ್ಳುತ್ತದೆ ನಮ್ಮ ಆಡಳಿತ ವ್ಯವಸ್ಥೆ. ಮತ್ತದೇ ರಾಗ..ಅದೇ ನರಕದ ಬದುಕು. ಉಗ್ರರು ದಾಳಿ ಮಾಡಿದ ತಕ್ಷಣ, ಪೇಪರ್, ಟಿವಿ ಯವ್ರು ದುಂಬಾಲು ಬಿದ್ದಾಗ ನಮ್ಮ ಗೃಹಸಚಿವರು ಹೇಳೋ ಮಾತು, "ಉಗ್ರರ ಮಹತ್ವದ ಸುಳಿವು ಸಿಕ್ಕಿದೆ. ತನಿಖೆ ಮುಂದುವರೆಯುತ್ತಿದೆ" . ಶಿವರಾಜ್ ಪಾಟೀಲ್ ಇಂದೂ ಅದೇ ಮಾತನ್ನು ಹೇಳುತ್ತಿದ್ದಾರೆ. ಅವರನ್ನು ರಾಜೀನಾಮೆಗೆ ಒತ್ತಾಯಿಸುವ, ಸರ್ಕಾರದ ವೈಫಲ್ಯ, ಪಿತೂರಿ ಅನ್ನೋ ಟೀಕಿಸುವ ಎದುರು ಪಕ್ಷಗಳು ಅಧಿಕಾರದಲ್ಲಿದ್ದರೂ ಶಿವರಾಜ್ ಪಾಟೀಲ್ ಗೆ ಮತ್ತು ದೂರೋವರಿಗೆ ಏನೂ ವ್ಯತ್ಯಾಸ ಕಾಣುತ್ತಿರಲಿಲ್ಲ ಬಿಡಿ.

ಅಮೇರಿಕದಲ್ಲಿ ನಡೆದ 9/11 ಘಟನೆ ಬಳಿಕ ಅಲ್ಲಿ ಒಂದೇ ಒಂದು ಭಯೋತ್ಪಾದನಾ ಕೃತ್ಯಗಳು ನಡೆದಿಲ್ಲ. ಕಾರಣ? ಅಲ್ಲಿಯ ಕಾನೂನು, ಆಡಳಿತ ವ್ಯವಸ್ಥೆ. ನಮ್ಮಲ್ಲಿ ನಿತ್ಯ ಬಾಂಬುಗಳದ್ದೇ ಸುದ್ದಿ. ಬಾಂಬುಸ್ಫೋಟ ಆಗಿ ಒಂದು ವಾರದ ತನಕ ಭಾರೀ ಸುದ್ದಿಗಳಬ್ಬುತ್ತವೆ..ಆಮೇಲೆ ಸುದ್ದಿ ತಣ್ಣಗಾಗುತ್ತದೆ. ಉಗ್ರರು, ಬಂಧನ ಅದೇನಾಯಿತೋ ಯಾರಿಗೂ ಗೊತ್ತಾಗಲ್ಲ. ನಮ್ಮವರು ಬಿಗಿಭದ್ರತೆ ಎಂದರೆ ವಿಧಾನಸೌಧ, ಇಂಡಿಯಾ ಗೇಟ್, ಪಾರ್ಲಿಮೆಂಟ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಎಂದಷ್ಟೇ ತಿಳಿದುಕೊಂಡಿದ್ದಾರೆ.

ಮೊನ್ನೆ ಮಂಗಳವಾರ ಪತ್ರಿಕೆಯೊಂದರಲ್ಲಿ ಒಂದು ಸುದ್ದಿ ಓದಿದೆ. ಭವಿಷ್ಯದ ಪ್ರಧಾನಿ ಎಂದು ಆಗಾಗ ಹಳಸಲು ಸುದ್ದಿಯಾಗುತ್ತಿರುವ ಯುಪಿ ಮುಖ್ಯಮಂತ್ರಿ ಮಾಯಾವತಿ ಭದ್ರತೆಗೆ 350 ಪೊಲೀಸ್, 34 ವಾಹನಗಳಂತೆ! ಅಷ್ಟೇ ಅಲ್ಲ, ಮಾಯಾವತಿ ಬೀದಿಗಿಳಿದು ಹೊರಟೆಂದರೆ ಆ ಪ್ರದೇಶದಲ್ಲಿ ಸಂಪೂರ್ಣ ಬಂದೋಬಸ್ತು ಅಂತೆ.!! ಮಾಯಾವತಿ ಒಬ್ಬರಿಗೆ 350 ಮಂದಿ ಭದ್ರತಾ ಸಿಬ್ಬಂದಿಗಳಿದ್ದರೂ, ನಮ್ಮ ದೇಶದ ಪೊಲೀಸ್ ಠಾಣೆಗಳನ್ನು ನೋಡಿದ್ರೆ ಪೊಲೀಸ್ ಸಿಬ್ಬಂದಿಗಳ ಕೊರತೆ, ಭದ್ರತಾ ಸಿಬ್ಬಂದಿಗಳ ಕೊರತೆ. ದೇಶದಲ್ಲಿ ಬಾಂಬು ದಾಳಿಯಾದಾಗಲೆಲ್ಲಾ ಅಗತ್ಯ ಭದ್ರತಾ ಸಿಬ್ಬಂದಿಗಳ ಮಾತು ಕೇಳಿ ಬಂದರೂ, ಆಮೇಲೆ ಅದಕ್ಕೆ ಬೆಲೆನೇ ಇಲ್ಲ. ಮಾಯಾವತಿ ಅಥವಾ ನಮ್ಮ ಕೆಲಸಕ್ಕೆ ಬಾರದ ಜನನಾಯಕರಿಗೆ ಇಷ್ಟೊಂದು ದೊಡ್ಡ ಮಟ್ಟದ ಭದ್ರತೆ ಒದಗಿಸುವ ಬದಲು, ಈ ರೀತಿಯ ಬಾಂಬು ದಾಳಿಗಳಿಂದ ಏನೂ ತಪ್ಪು ಮಾಡದ ಅಮಾಯಕರು ಬಲಿಯಾಗುತ್ತಿದ್ದಾರೆ. ಅದನ್ನು ತಪ್ಪಿಸಿ. ಬಾಂಬು ದಾಳಿಯಂಥ ಘೋರ ಸನ್ನಿವೇಶಗಳು ಎದುರಾದಾಗ ನಮ್ಮ ರಾಜಕೀಯ ಪಕ್ಷಗಳು ಟೀಕಿಸುವ ಬದಲು ಜೊತೆಯಾಗಿ ಹೆಜ್ಜೆಹಾಕಬೇಕು. ಪರಸ್ಪರ ದೂರುತ್ತಿರುವುದರಿಂದ ಯಾವುದೇ ಪ್ರಯೋಜವಿಲ್ಲ. ಮತ ಬ್ಯಾಂಕ್ ಗಾಗಿ ತಪ್ಪಿತಸ್ಥರನ್ನು ಶಿಕ್ಷಿಸದೆ ಸುಮ್ಮನಿರುವ ನೀಚ ಬುದ್ಧಿ ಬಿಟ್ಟುಬಿಡಬೇಕು. ಆದರೆ ಯಾರು ಬಿಡ್ತಾರೆ ಬೇಕಲ್ಲಾ..?! ಮೊನ್ನೆಯಿಂದ ಬಾಂಬು ದಾಳಿಯ ನಿರಂತರ ಸನ್ನಿವೇಶವನ್ನು ನೋಡುತ್ತಿದ್ದಂತೆ ಏನೇನೋ ನೆನಪಾಗುತ್ತದೆ. ಭಾರವಾದ ಮನಸ್ಸು, ಹೃದಯನ ಇಲ್ಲಿ ಹಂಚಿಕೊಂಡೆ. ಭಯೋತ್ಪಾದಕರನ್ನು ಮಟ್ಟಹಾಕಲೂ ನಾವು ದುರ್ಬಲರೇ? ದೇಶಕ್ಕೆ ಎಂಥ ದುರ್ಗತಿ ಬಂತು? ಬದಲಾವಣೆ ಸಾಧ್ಯನೇ ಇಲ್ವಾ?!...

8 comments:

ಆಲಾಪಿನಿ said...

ಅದೆಷ್ಟು ಬರಿತೀರಿ ನೀವು. ಹೊಟ್ಟೆಕಿಚ್ಚಾಗತ್ತೆ :)

ರಾಘವೇಂದ್ರ ಕೆಸವಿನಮನೆ. said...

ಚಿತ್ರಾ ಮೇಡಂ,
ನನ್ನ ಬ್ಲಾಗಿಗೆ ಭೇಟಿನೀಡಿದ್ದಕ್ಕೆ ಧನ್ಯವಾದಗಳು.( ಹಾಗೇ ಕನ್ನಡಪ್ರಭದಲ್ಲಿ ಪ್ರಕಟವಾದ ವಿಷಯ ತಿಳಿಸಿದ್ದಕ್ಕೂ) ಹೀಗೇ ಬರುತ್ತಿರಿ."ಇಂಚರ"ದ ಇಂಪು ಹಿಡಿಸಿದರೆ ನಿಮ್ಮ ಬ್ಲಾಗಿನಲ್ಲಿ ಲಿಂಕ್ ಹಾಕಿಕೊಳ್ಳಿ.
-ರಾಘವೇಂದ್ರ ಕೆಸವಿನಮನೆ.

shivu.k said...

ಚಿತ್ರ[ಹಾಗಂತ ಅತ್ಮೀಯವಾಗಿ ಕರಿತೀನಿ] ದೇಶದ ಬಗ್ಗೆ ಅಮಾಯಕರ ಬಗ್ಗೆ ಇರುವ ಕಾಳಜಿ ನಿನ್ನ ಬರವಣಿಗೆಯಲ್ಲಿ ಕಾಣುತ್ತದೆ. ಹೀಗೆ ಬರೆಯುತ್ತಿರು.....

ವಿನಾಯಕ ಕೆ.ಎಸ್ said...

ಲೇಖನ ಸಮಯೋಚಿತವಾಗಿದೆ. ಇವತ್ತು ನಿಮ್ಮ ಬ್ಲಾಗ್‌ ಸಂಪೂರ್ಣ ನೋಡಿದೆ. ಬರವಣಿಗೆ ಚೆನ್ನಾಗಿದೆ. ಹೀಗೆ ಬರೀತಾ ಇರಿ. ಸಾಧ್ಯವಾದರೆ ನನ್ನ ಬ್ಲಾಗಿನತ್ತಲೂ ಒಮ್ಮೆ ಕಣ್ಣಾಡಿಸಿ..
ವಿನಾಯಕ

ಚಿತ್ರಾ ಸಂತೋಷ್ said...

@ಶ್ರೀದೇವಿ...ಹೊಟ್ಟೆಗಿಚ್ಚು ಪಡಬೇಡಿ..ನೀವೂ ಬರೆಯಿರಿ.
@ರಾಘವೇಂದ್ರ.ಶರಧಿಗೆ ಪ್ರೀತಿಯ ಸ್ವಾಗತ.
@ಶಿವಣ್ಣ ಥ್ಯಾಂಕ್ಯೂಊಊ
@ವಿನಾಯಕ್...ಆಯ್ತು..ನಿನ್ ಬ್ಲಾಗ್ ನೋಡ್ತೀನಿ..ಆಗಾಗ ಬರುತ್ತಿರು.
-ಚಿತ್ರಾ

Anonymous said...

Chitra,
well written.. You have mentioned that after 9/11, no other terrorist attack in US. Absolutely right.. but here the system is so much sophisticated, which we cannot think in near future in India. Moreover all the borders are porous in India, compared to US.

ಚಿತ್ರಾ ಸಂತೋಷ್ said...

ವಾಣಿ ಪ್ರತಿಕ್ರಿಯೆಗೆ ಧನ್ಯವಾದಗಳು. ಬ್ಲಾಗಿಗೆ ಬಂದ್ರೆ ಅಲ್ಲಿನ ವ್ಯವಸ್ಥೆಯ ಕುರಿತು ಇನ್ನಷ್ಟು ನಮಗೂ ತಿಳಿಸಿ.
-ಚಿತ್ರಾ

ವೃಷಾಂಕ್.ಖಾಡಿಲ್ಕರ್ said...

its very nice to read your article yar