Wednesday, February 27, 2008

ನೋವಿನಲೆಗಳು...

ತಸ್ಲೀಮಾ ನಸ್ರೀನ್ ದೆಹಲಿಯಲ್ಲಿ 'ಗೃಹಬಂಧನ'ದಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಇದೀಗ ಗೃಹ ಬಂಧನದಲ್ಲಿದ್ದುಕೊಂಡು ಆಕೆಯ ನೋವು ' ಬಲವಂತವಾಗಿ ಕೂಡಿಟ್ಟ ಮನೆ' ಎಂಬ ಕವನದ ಮೂಲಕ ಹೊರಬಂದಿದೆ. ನೋಟಕ್ಕೆ ಸಿಕ್ಕಿದ ಅದರ ಕೆಲವು ಸಾಲುಗಳು ಇಲ್ಲಿವೆ..

ನಾನೊಬ್ಬ ಎಂತಹ ಅಪರಾಧಿ ಮತ್ತು ಮನುಷ್ಯತ್ವದ ವಿರೋಧಿ
ನಾನೊಬ್ಬ ದೇಶಭ್ರಷ್ಟ ಮೋಸಗಾತಿ
ನನ್ನದೇ ಎಂದು ಹೇಳಿಕೊಳ್ಳುವ ದೇಶ ಕೂಡ ನನಗಿಲ್ಲ..

..ನಾನು ಸತ್ಯ ಹೇಳಿದ್ದಕ್ಕಾಗಿ ಇಂದು ರಾಜದ್ರೋಹಿ
ನೀವು ಸುಳ್ಳು ಹೇಳುವವರ ಭುಜಕ್ಕೆ ಭುಜ ಕೊಟ್ಟು ನಡೆಯಿರಿ
ಆದರೆ ನಾನು ಮಾತ್ರ ರಾಜದ್ರೋಹಿಯಾದ ಮನುಷ್ಯಳು

ನಾನು ಕಿಟಕಿಗಳನ್ನು ಮುಚ್ಚಿದ ಒಂದು ಮನೆಯಲ್ಲಿ ವಾಸವಾಗಿದ್ದೇನೆ
ಇಚ್ಛಿಸಿದರೂ ಆ ಕಿಟಕಿಗಳನ್ನು ನಾನು ತೆಗೆಯಲಾಗುವುದಿಲ್ಲ
...ನಾನು ಇಷ್ಟವಿಲ್ಲದ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದೇನೆ
ಏಕೆಂದರೆ ನನ್ನನ್ನು ಬಲವಂತಾಗಿ ಇರಿಸಲಾಗಿದೆ
ನೋವು, ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕುವಂತೆ ಒತ್ತಡ ಹೇರಲಾಗಿದೆ
ಈ ಪ್ರಜಾಪ್ರಭುತ್ವದಿಂದ(ಭಾರತ)
ಈ ಕೋಣೆಯಲ್ಲಿ ದಿನದಿಂದ ದಿನಕ್ಕೆ ಪ್ರಜಾಪ್ರಭುತ್ವದ ಮೇಲಾಟ
ಈ ಕೋಣೆಯಲ್ಲಿ ಭರವಸೆಯ ಬೆಳಕಿಲ್ಲ, ಭಯ ಮಾತ್ರ
ಜಾತ್ಯತೀತ ಹೆಸರಲ್ಲಿ ಪ್ರತಿ ಕ್ಷಣವೂ ಆ ಕೋಣೆಯಲ್ಲಿ ನನ್ನ ಕೊಲೆಯಾಗುತ್ತಿದೆ
ನನ್ನ ಪ್ರೀತಿಯ ಭಾರತವೇ ನನ್ನ ಬಂಧಿಸಿಬಿಟ್ಟಿದೆ
ಇಲ್ಲಿ ಅತ್ಯಂತ ಕಾರ್ಯನಿರತ ಪ್ರಜೆಗಳಿದ್ದಾರೆ, ನನಗೊಂದು ಅನುಮಾನ
ಇವರಿಗೆ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಮಟ್ಟಿಗಾದರೂ
ಒಂದೆರಡು ನಿಮಿಷ ಕಾಲಾವಕಾಶ ಇದೆಯೇ?..

..ಹೆಚ್ಚೆಂದರೆ ಒಂದು ದಿನ ಪ್ರಜಾಪ್ರಭುತ್ವದ ಧ್ವಜದೊಂದಿಗೆ
ನನ್ನ ದೇಹವನ್ನು ಸುತ್ತಿ, ನನ್ನ ಪ್ರಿಯ ಭಾರತದಲ್ಲಿ,
ಯಾರಾದರೂ ಒಬ್ಬರು ನನ್ನನ್ನು ಗೋರಿಗೆ ಹಾಕುತ್ತಾರೆ, ಹೆಚ್ಚಿನ ಪಕ್ಷ
ಒಬ್ಬ ಅಧಿಕಾರಿ ಆ ಕೆಲಸ ಮಾಡಬಹುದು ಎಂಬ ಶಂಕೆ ನನ್ನದು..

3 comments:

ವಿಜಯ್ ಜೋಶಿ said...

ಧನ್ಯವಾದಗಳು ಚಿತ್ರಾ. ನಾನೂ ಕೂಡ ನಿಮ್ಮ ಬ್ಲಾಗಿನ ಮೇಲೆ ಒಂದು ಕಣ್ಣಿಟ್ಟಿರುತ್ತೇನೆ! ನೀವೂ ನನ್ನ ಬ್ಲಾಗ್ ನೋಡ್ತಾ ಇರಿ...
ನಮಸ್ತೆ...

ಬಾನಾಡಿ said...

ಒಂದು ಮಹತ್ವಪೂರ್ಣವಾದ ಹಾಗೂ ಗಹನವಾದ ವಿಚಾರದ ಬಗ್ಗೆ ಬರೆದ ವಾಕ್ಯಗಳು ವ್ಯವಸ್ಥೆಯ ಕುರಿತು ನಿನ್ನಲ್ಲಿರುವ ಭಾವನೆಗಳನ್ನು ರೂಪಿಸಿದರೂ ಉತ್ತಮ ಕವನವಾಗಲು ಬಹಳಷ್ಟು ಪ್ರಯತ್ನಿಸಬೇಕು. ಈಜಲೆಂದು ನೀರಿಗಿಳಿದವರು ನದಿ ದಾಟಿ ಕಡಲು ದಾಟಲು ಸಖ್ಯರು. ಭರವಸೆಯೊಂದಿಗೆ.
ಒಲವಿನಿಂದ
ಬಾನಾಡಿ

ಮಹೇಶ್ ಪುಚ್ಚಪ್ಪಾಡಿ said...

ಚೆನ್ನಾಗಿತ್ತು. TSIಯಲ್ಲಿ ಇದರ ಪ್ರಸ್ತಾಪವಿರಲಿಲ್ಲ ಅಲ್ವಾ?