Monday, November 5, 2007

ಹುಡುಗ್ರು ಹಿಂಗ್ಯಾಕೆ?

'ಈ ಹುಡುಗ್ರು ಹಿಂಗ್ಯಾಕೆ?' ಈ ಕ್ವಶನ್ನು ದಿನಾ ನನ್ ತಲೆ ತಿನ್ತಿದೆ. 'ಮೊನ್ನೆ ನನ್ ಕಣ್ಣೆದುರಲ್ಲೇ ಚಡ್ಡಿ ಹಾಕ್ಕೊಂಡು ಓಡಾಡುತ್ತಿದ್ದ ಪ್ರಕಾಶ ಮೀಸೆ ಬರೋ ಮುಂಚೆನೇ ಕಾಲೇಜು ಹುಡುಗೀರಿಗೆ ಕೀಟ್ಲೆ ಮಾಡ್ತಾನಂತೆ. ಅದೇನಪ್ಪಾ ಕಾಲ ಕೆಟ್ಟುಹೋಯ್ತು..ಅದೇನು ಹುಡುಗ್ರೋ.." ಪಕ್ಕದ್ಮನೆ ಹಣ್ಣು ಹಣ್ಣು ಸೀತಜ್ಜಿ ಬಾಯ್ ಬಡ್ಕೊಂಡಾಗ ನನಗೆ ಅಚ್ಚರಿ. ಈ ಹಣ್ಣು ಹಣ್ಣು ಮುದುಕೀರೇ ಇಷ್ಟು ಥಿಂಕ್ ಮಾಡುವಾಗ ನಾನು ಥಿಂಕ್ ಮಾಡಿದ್ರಲ್ಲಿ ತಪ್ಪೇನಿಲ್ಲ ಬಿಡಿ.

ಅದ್ಯಾಕೆ ಹುಡುಗ್ರು ಹಿಂಗೋ..ಅದ್ಯಾಕೆ ಹುಡುಗೀರುಗೆ ದುಂಬಾಲು ಬೀಳ್ತಾರೋ ನಾ ಕಾಣೆ. ಒಂದು ಸಲ ರಾಂಗ್ ನಂಬರಿಗೆ ಹುಡುಗಿಯೊಬ್ಬಳು ಮೆಸೇಜ್ ಮಾಡಿದ್ರೆ ಸಾಕು..ಹುಡುಗನಾದ್ರೆ ತಕ್ಷಣ ಪೋನು.."ಹಲೋ ಮೆಸೇಜ್ ಮಾಡಿದ್ರಲ್ಲಾ..ಯಾರು..ಕೇಳಬಹುದೇ?" ಇತ್ತಲಿಂದ ಹುಡುಗಿ ಪೋನು ಕಟ್ ಮಾಡಿದ್ರೂ ಮತ್ತೆ ಪೋನು ಮಾಡಿ 'ನನ್ಗೆ ನಿಮ್ ಜೊತೆ ಮಾತಾಡ್ಬೇಕಿತ್ತು..' ಆಗ್ಲೂ ಹುಡುಗಿ ಪೋನ್ ಕಟ್ ಮಾಡ್ತಾಳೆ. ಆಮೇಲೆ ಅದೇ ಹುಡುಗ ತನ್ನ ಫ್ರೆಂಡ್ಸ್ಗಳಿಗೆಲ್ಲಾ ನಂಬರು ಕೊಟ್ಟು 'ಆ ಹುಡುಗಿ ಜೊತೆ ಮಾತಾಡಿ ಅನ್ತಾನೆ. ಅಲ್ಲಿಂದ ಹುಡುಗೀರಿಗೆ ಕಿರಿಕಿರಿ...ಯಾರ್ಯಾರೋ ಪೋನು ಮಾಡಿ 'ಐ ಲವ್ ಯೂ' ಅಂದು ಹುಡುಗಿ ಬಾಯಿಂದ ಮುಖ ತುಂಬಾ ಉಗಿಸಿಕೊಂಡ್ರೂ ಕೆಲವರಿಗೆ ತೃಪ್ತಿಯೇ ಇಲ್ಲ ಬಿಡಿ.

ಇನ್ನು ಕೆಲವರು ಹಾಗಲ್ಲ. ನಿತ್ಯ ಪ್ರಯಾಣಿಸುವ ಬಸ್ಸಲ್ಲಿ ಚೆಂದದ ಹುಡುಗೀನ ನೋಡಿದ್ರೆ ಸಾಕು ಮತ್ತೆ ನಿತ್ಯ ಅದೇ ಬಸ್ಸಲ್ಲಿ, ಅದೇ ಸ್ಥಳದಲ್ಲಿ ಅವ್ಳ ಮುಖದರ್ಶನ ಮಾಡದೆ ಸಮಾಧಾನವೇ ಇರಲ್ಲ. ಯಾವತ್ತೂ ಶೇವ್ ಮಾಡದವ್ರು ಅವತ್ತು ನೀಟಾಗಿ ಶೇವ್ ಮಾಡ್ಕೊಂಡು ಬರ್ತಾರೆ. ಬಾರ್ಗೆ ಹೋಗಿ ಕುಡಿದು ತೂರಾಡ್ತಾ ಇದ್ದ ಹುಡುಗ್ರೂ ಸ್ನಾನ ಮಾಡಿ ಸಭ್ಯನ ಥರ ಡ್ರೆಸ್ ಮಾಡ್ಕೊಂಡು ರೆಡಿ. ಯಾರೂ ಈ ಹುಡ್ಗ 'ಚಾಕಲೇಟ್ ಹೀರೋ' ಅನ್ನದೆ ವಿಧಿಯಿಲ್ಲ. ಬೆಳಿಗೆದ್ದು ತಿಂಡಿ-ಕಾಫಿನೂ ಕುಡಿಯದೆ ಮನೆಯಲ್ಲಿ ಅಮ್ಮನಿಂದ ಮುಖಕ್ಕೆ ಮಂಗಳಾರತಿ ಮಾಡಿಸ್ಕೋಂಡು ಬಸ್ಸ್ಟಾಂಡಿನಲ್ಲಿ ಕಾಯ್ತಾ ಕೂತಿರ್ತಾರೆ.

ಅಲ್ರೀ ಈ ಹುಡುಗ್ರೂ ಹಿಂಗ್ಯಾಕೆ? ಅದ್ಯಾಕೆ ಹುಡುಗೀರಿಗೆ ಕಾಟ ಕೊಡ್ತಾರೋ? ಮೊನ್ನೆ ನಾನು ಮೆಜೆಸ್ಟಿಕ್ಗೆ ಹೊರಟಿದ್ದೆ. ಭಾನುವಾರ. ತುಂಬಾ ರಶ್ ಇತ್ತು. ನಾಲ್ಕು ಹುಡುಗೀರು ಬಸ್ಸು ಹತ್ತಿದ್ರು. ಹತ್ತಿರ ನಿಂತಿದ್ದ ಹುಡುಗನೊಬ್ಬ ತರ್ಲೆ ಮಾಡಿದ್ದ ಅನಿಸುತ್ತೆ. ಒಬ್ಳು ಹುಡುಗಿ ಅವ್ನ ಮೂತಿ ನೋಡದೆ ಕೆನ್ನೆಗೆ ಬಾರಿಸಿದ್ಳು. ಆ ಹುಡುಗ ಏನು ಹೇಳ್ಬೋಕೋ ತಿಳಿಯದೆ ಸುಮ್ಮನಾಗಿದ್ದಾನೆ. ಮತ್ತೆ ಮೂವರು ಹುಡುಗೀರು 'ನಾನ್ಸೆನ್ಸ್' ಅಂದು ಆತ ಕಾಲರ್ ಹಿಡಿದಿದ್ದಾರೆ. ನಂತ್ರ ಕಂಡಕ್ಟರ್ ಬಂದು ವಿಲ್ಸನ್ಗಾರ್ಡನ್ನಲ್ಲಿ ಅವ್ನನ್ನು ಬಸ್ಸಿಂದಿಳಿಸಿದ.

ಎಲ್ರೂ ಈ ರೀತಿ ಇರಲ್ಲ ಬಿಡಿ. ಆದ್ರೆ ಮಾಕ್ಸಿಮಂ ಆ ರೀತಿ ಇರ್ತಾರೆ ಬಿಡಿ. ಅಲ್ರೀ ಅದೇನು ಲವ್ವೋ? ಅದೇನು ಅಟ್ರಾಕ್ಕ್ಷನೋ ದೇವ್ರೇ ಬಲ್ಲ. ಪೆಟ್ಟು ತಿಂದ್ರೂ, ಹಲ್ಲು ಉದುರಿಸಿಕೊಂಡ್ರೂ ಅದ್ಯಾಕೆ ಹುಡುಗ್ರು ಹಿಂಗಾಡ್ತಾರೋ? ಹುಡುಗೀರಿಗಾಗಿ ಅದ್ಯಾಕೆ ಹುಡುಗ್ರು ಊಟ ನಿದ್ದೆ ಬಿಡ್ತಾರೋ? ಅದ್ಯಾಕೆ ಟೈಮ್ ವೇಸ್ಟ್ ಮಾಡ್ತಾರೋ? ಅಲ್ರೀ ಹುಡುಗೀ 'ಒಲ್ಲೆ' ಅಂದ್ರೂ ನೀನೇ ನನ್ 'ನಲ್ಲೆ' ಅಂದು ದುಂಬಾಲು ಬೀಳೋರಿಗೆ ಏನೆನ್ನಬೇಕು? ಪೆದ್ರನ್ನಬೇಕೋ? ಹುಚ್ಚ್ರನ್ನಬೇಕೋ? ನೀವೇ ಹೇಳಿ. (ಎಲ್ಲ ಹುಡುಗ್ರುಗೆ ಇದು ಅನ್ವಯ ಆಗಲ್ಲ)

ಕೊನೆಗೆ ಒಂದಿಷ್ಟು..
ಸಂಚಿಹೊನ್ನಮ್ಮ ತನ್ನ 'ಹದಿಬದೆಯ ಧರ್ಮ' ಕೃತಿಯಲ್ಲಿ ಹೀಗೆನ್ನುತ್ತಾರೆ..
ಪೆಣ್ಣಲ್ಲವೇ ತಮ್ಮನೆಲ್ಲಾ ಪಡೆದ ತಾಯಿ
ಪೆಣ್ಣಲ್ಲವೇ ಪೊರೆದವಳು
ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು!!

5 comments:

Melka Miyar said...

streevadigala duranta andre idene. kevala purusha prapanchadalli tappu hudukuvudu ashte...
ide tara purusharu saha hudugiyaralli tappu hudukalu hodare saviraru tappugalannu patti madabahudu annodannu mareyadiddare chenna. purusharu yavattu streeyara virodhigalalla annodannu manavarike madikollabekada agatya indina 'so called' streevadi barahagararu artha madi kollabekada agatyavide. purusharu mattu streeyaru paraspara puraka ashte... gharshane nadedare prapancha uliyadu... adakkagiye samarasya agatyavide... paraspara kesarerachata alla. haganta purusharalli hulukugalilla anta alla. adare hulukugalanne vaibhaveekarisuvudu, streeyaru enu tappanne maduvudilla annuvudu murkhatanada paramavadhi allave?

-Melvin Mangalore

ಚಿತ್ರಾ ಸಂತೋಷ್ said...

ಮೆಲ್ವಿನ್ ಅವ್ರೆ..ಪ್ರತಿಕ್ರಿಯೆಗೆ ಧನ್ಯವಾದಗಳು
ಹುಡುಗೀರ ತಪ್ಪೇ ಇಲ್ಲ ಅನ್ನೋ ರೀತಿ ನಾನೆಲ್ಲೂ ಹೇಳಿಲ್ಲ...ಹಾಗಂತ ನೀವು ತಪ್ಪುಕಲ್ಪನೆ ನಾಡಿಕೊಂಡಿದ್ದರಷ್ಟೇ. ನಾನು ಕೇಳಿರೋದು 'ಹುಡುಗ್ರು ಹಿಂಗ್ಯಾಕೆ'ಅಂತ. ನಾನು ಹೇಳಿರುವುದು ಹುಡುಗೀರ ತಪ್ಪಿಲ್ಲ ಅಂತಲ್ಲ. ನಾನು ಹೇಳಿರುವುದೆಲ್ಲಾ ಹುಡುಗ್ರ ಬುದ್ದೀನೇ..ಅದನ್ನು ಹುಡುಗೀರು ಮಾಡಲ್ಲ.

Melka Miyar said...

hagadre navu iga hudgira buddi bagge comments shuru madabekenu?

Prakash Shetty said...

ಮೆಲ್ವಿನ್-ಚಿತ್ರಾ...

ನಿಮ್ಮಿಬ್ಬರ ವಾಕ್-ಸಮರ ನೋಡಿದಾಗ...

ಪಂಗಡವಾರು ವಿಭಜನೆಯಲ್ಲಿ ನೊಂದವರ ದುಃಖದ ಅನುಭವ ಆಗುತ್ತಿದೆ...

ಬೇಡ... ಈ ರೀತಿಯ ಬೆಳವಣಿಗೆ ಸರಿಯಲ್ಲ...

ಲೇಖಕಿಯ ಮನದಾಳದಲ್ಲಿ ನೊಂದ ಮಾತುಗಳಿವೆ...

ಪ್ರತಿಕ್ರಿಯಿಸಿದಾತನ ಮನದಲ್ಲಿ -ತನ್ನ ವರ್ಗದವರ ತಪ್ಪಿನ ಅರಿವಿದೆ...

ಇಬ್ಬರೂ ತಮ್ಮ ಮನದಾಳದಿಂದ ಮಾತಾಡಿದ್ದಾರೆ..

ತಮ್ಮ ಮನಸ್ಸನ್ನು ಶುಚಿಗೊಳಿಸಿ.. ಇತರರನ್ನು ಒಳ್ಳೆಯದರೆಡೆಗೆ ದಾರಿ ತೋರಿಸುವಂತೆ ನಿಮ್ಮ ಸಾಧನೆ ಸಾಗಲೆಂದು ಹಾರೈಸುತ್ತೇನೆ...

Unknown said...

hi chitra..

chennagi bardideera.... Tumba khushi aaytu nodi. adrottige nagunu banthu. hudugrinda baisikoltideera.. innooo baisikoltheera. rediyagiri. Naanthu bayyalla. blog thumba chennaagide. bye

-rohi