Friday, March 20, 2009

ಇದೊಂದು ಸಿಹಿ ಸುದ್ದಿ.....

ನಮ್ ಛಾಯಾಕನ್ನಡಿ ಬ್ಲಾಗ್ ನ ಶಿವಣ್ಣ ಮತ್ತು ಕ್ಯಾಮಾರ ಕಣ್ಣಿನಲ್ಲಿ ಬ್ಲಾಗ್ ನ ಮಲ್ಲಿಕಾರ್ಜುನ ಅವರ ಫೋಟೋಗ್ರಾಫಿ ಬಗ್ಗೆ ನಾ ಹೇಳೋದು ಅಗತ್ಯವಿಲ್ಲ. ಎಲ್ಲಿ ನೋಡಿದ್ರೂ ಬೆನ್ನಲ್ಲಿ ಕ್ಯಾಮರಾ ನೇತುಹಾಕೊಂಡು, ಮಾತಿಗಿಳಿದರೆ ಬರೇ ಫೋಟೋಗ್ರಾಫಿಯ ಬಗ್ಗೆ ಹರಟೆ ಹೊಡೆಯುವ ಈ ಗೆಳೆಯರಿಗೆ ಇದೀಗ ಮತ್ತೊಂದು ಅಂತರ್ ರಾಷ್ಟ್ರೀಯ ಮನ್ನಣೆ! ನಾವೆಲ್ಲಾ ಹೆಮ್ಮೆ ಪಡುವ ವಿಷಯ. ಲಂಡನ್ನಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ(Associate) ಎಂಬ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ.
ಈವರೆಗೆ ರಾಯಲ್ ಫೋಟೋಗ್ರಫಿ ಸೊಸೈಟಿಯ ಈ ಗೌರವಕ್ಕೆ ೧೩೨ ಭಾರತೀಯರು ಪಾತ್ರರಾಗಿದ್ದಾರೆ. ಈ ವರ್ಷ ವಿಶ್ವದಾದ್ಯಂತ ಈ ಮನ್ನಣೆ ೨೯ ಜನ ಛಾಯಾಗ್ರಾಹಕರಿಗೆ ಸಿಕ್ಕಿದೆ. ಅದರಲ್ಲಿ ಭಾರತೀಯರು ಇವರಿಬ್ಬರು ಮಾತ್ರ ಎನ್ನುವುದು ಖುಷಿಯ, ಹೆಮ್ಮೆಯ ವಿಚಾರ. ಮೇರಾ ಭಾರತ್ ಮಹಾನ್! ಅಭಿನಂದನೆಗಳು..ಎಲ್ಲಾ ಬ್ಲಾಗಿಗರ ಪರವಾಗಿ ಪ್ರೀತಿಯ ಅಭಿನಂದನೆಗಳು.
ಹೆಚ್ಚಿನ ಮಾಹಿತಿಗೆ: http://avadhi.wordpress.com

18 comments:

ಸಿಮೆಂಟು ಮರಳಿನ ಮಧ್ಯೆ said...

ಇದು ನಾನು ಕನ್ನಡ ಬ್ಲಾಗಿಗರ ಕೂಟದಲ್ಲಿ ಹಾಕಿದ ಪೋಸ್ಟನ

ಮಕ್ಕಿ ಕಾ ಮಕ್ಕಿ ಕಾಪಿ...! ನೀವು ಕ್ರತಿ ಚೌರ್ಯ ಮಾಡಿದ್ದೀರಿ...!

ಹೆದರಿ ಬಿಟ್ರಾ...?

ಹ್ಹಾ... ಹ್ಹಾ...!

ಖುಷಿ ವಿಚಾರ...! ಖುಷಿ ಪಡೋಣ...!!

ಮಲ್ಲಿಕಾರ್ಜುನ್ ಹಾಗೂ ಶಿವು ರವರಿಗೆ ಹಾರ್ದಿಕ ಅಭಿನಂದನೆಗಳು...

ಚಿತ್ರಾ...

ನಿಮಗೂ ಸಹ... ಹೇಳಲೇ ಬೇಕಾ...?

ನಿಮ್ಮನ್ನು ಇಲ್ಲಿ ಕಂಡು....

ಬಹಳ.. ಬಹಳ..

ಸಂತೋಷವಾಗಿದೆ...!

ಸಿಹಿ ಸುದ್ಧಿಯೊಂದಿಗೆ ಮತ್ತೆ ಶುರುವಾಗಿದೆ....

ಶುಭಾಶಯಗಳು...

ಪ್ರೀತಿಯಿಂದ...

ಹರೀಶ ಮಾಂಬಾಡಿ said...

avarige ee moolaka congrats

Laxman said...

ಚಿತ್ರಾ , ತುಂಬಾ ಸಂತಸ ದ ಸುದ್ದಿ,
ಅಭಿನಂದನೆಗಳು ಶಿವು ಮತ್ತು ಮಲ್ಲಿಕಾರ್ಜುನರಿಗೆ.

ತಿಳಿಸಿದ್ದಕ್ಕೆ ನಿನಗೂ ಕೂಡ ಧನ್ಯವಾದಗಳು.
ಲಕ್ಷ್ಮಣ

Keshav Kulkarni said...

ಚಿತ್ರಾ,

ಮಾಹಿತಿಗೆ ಧನ್ಯವಾದಗಳು, ಮತ್ತು ಶಿವು ಮತ್ತು ಮಲ್ಲಿಕಾರ್ಜುನರಿಗೆ ಅಭಿನಂದನೆಗಳು.

ನನ್ನದೊಂದು ಪುಟ್ಟ ಆಕ್ಷೇಪ:
ನೀವು ಬರೆದಿದ್ದೀರಿ: "...ಮತ್ತೊಂದು ಅಂತರ್ ರಾಷ್ಟ್ರೀಯ ಮನ್ನಣೆ! ನಾವೆಲ್ಲಾ ಹೆಮ್ಮೆ ಪಡುವ ವಿಷಯ. ಲಂಡನ್ನಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ(Associate) ಎಂಬ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ."

ಲಂಡನ್ ರಾಯಲ್ ಫೋಟೋಗ್ರಾಫಿ ಸೊಸೈಟಿ ನೀವಂದುಕೊಂಡಂತೆ ಅಂತರರಾಷ್ಟ್ರೀಯ ಸಂಸ್ಥೆ ಅಲ್ಲ, ಅದೊಂದು ಬ್ರಿಟಿಷ್ ಸೊಸೈಟಿ ಅಷ್ಟೇ. ಇದು ಬ್ರಿಟಿಷ್ ಮನ್ನಣೆ ಆಗುತ್ತದೆಯೇ ಹೊರತು ಅಂತರರಾಷ್ಟ್ರೀಯ ಮನ್ನಣೆ ಅಲ್ಲ. ಯಾವುದೇ ಬ್ರಿಟಿಷನಿಗೆ ಭಾರತೀಯ ಸೊಸೈಟಿಯ "ಪ್ರತಿನಿಧಿ" ಅಂತ ಗುರುತಿಸಿ, ಅವರು ಅದನ್ನು "ಅಂತರರಾಷ್ಟ್ರೀಯ" ಎಂದು ಪರಿಗಣಿಸುವುದಿಲ್ಲ. ಶಬ್ದಶಃ ಅರ್ಥವನ್ನು "ಅಂತರರಾಷ್ಟ್ರೀಯ" ಎಂದು ನೀವು ಹೇಳುವುದು ಸರಿ, ಆದರೆ ಅದರಿಂದ ಹೊಮ್ಮುವ ಧ್ವನಿ ಮಾತ್ರ ಬೇರೆ ಎಂದು ಬೇರೆ ಹೇಳಬೇಕಾಗಿಲ್ಲ ಅಲ್ಲವೇ?

ಇನ್ನೂ ಇದನ್ನು ವಿಸ್ತರಿಸಿ ಹೇಳಬೇಕೆಂದರೆ, ನಾನು ಇಂಗ್ಲಂಡಿನಲ್ಲಿ ಮಾಡಿರುವ ಡಿಗ್ರಿ ಅಂತರರಾಷ್ಟ್ರೀಯ ಡಿಗ್ರಿ ಆಗಲಾರದು, ಏಕೆಂದರೆ ಅದಕ್ಕೆ ಭಾರತದಲ್ಲಿ ಅಥವಾ ಅಮೇರಿಕದಲ್ಲಿ ಯಾವುದೇ ಮಾನ್ಯತೆ ಇಲ್ಲ. "ಆಸ್ಕರ್" ಅಮೇರಿಕದ motion picture association ಕೊಡುವ ಪ್ರಶಸ್ತಿಯೇ ಹೊರತು ಅಂತರರಾಷ್ಟ್ರೀಯ ಪ್ರಶಸ್ತಿ ಅಲ್ಲ.

ಸಾರಿ, ಬರೆಯದಿರಲಾಗಲಿಲ್ಲ.

- ಕೇಶವ (www.kannada-nudi.blogspot.com)

ಶಿವಪ್ರಕಾಶ್ said...

ಮಲ್ಲಿಕಾರ್ಜುನ್ ಮತ್ತು ಶಿವು ಅವರಿಗೆ ಅಭಿನಂದನೆಗಳು...
ಇ ಶುಭ ಸಂದೇಶವನ್ನು ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಚಿತ್ರಾ ಅವರಿಗೆ ಧನ್ಯವಾದಗಳು....
ಮಲ್ಲಿಕಾರ್ಜುನ್ ಮತ್ತು ಶಿವು ಅವರೇ, ಹೀಗೆ ಫೋಟೋ ಕ್ಲಿಕ್ಕಕಿಸುತ್ತಿರಿ....

ಅಂತರ್ವಾಣಿ said...

shubhaashayagaLu diggajarige

Vinutha said...

ಹೃತ್ಪೂರ್ವಕ ಅಭಿನಂದನೆಗಳು ಮಲ್ಲಿಕಾರ್ಜುನ್ ಹಾಗೂ ಶಿವುರವರಿಗೆ.

Anonymous said...

ಸೂಪರ್ ಸುದ್ದಿ. ಅವರಿಗೆ ನನ್ನ ಅಭಿನಂದನೆಗಳನ್ನ ತಲುಪಿಸಿಬಿಡಿ. ನನಗೂ ಛಾಯಾಗ್ರಹಣ ಹವ್ಯಾಸ ಆಗಿರೋದ್ರಿಂದ ಇದು ಇನ್ನಶ್ಟು ಖುಶಿ ತರೋ ವಿಚಾರ.

PARAANJAPE K.N. said...

ಸತತ ಸಾಧನೆಯಿ೦ದ ಅ೦ತರರಾಷ್ಟ್ರೀಯ ಮನ್ನಣೆಯನ್ನು ತಮ್ಮದಾಗಿಸಿಕೊ೦ಡ ಹಕ್ಕ-ಬುಕ್ಕ, ಶಿವೂ ಮತ್ತು ಮಲ್ಲಿ ಯವರಿಗೆ ಹಾರ್ದಿಕ ಅಭಿನ೦ದನೆಗಳು.

ಚಿತ್ರಾ ಕರ್ಕೇರಾ said...

@ಹರೀಶ್ ಸರ್, ಜಯಶಂಕರ್, ಲಕ್ಷ್ಮಣ್ ಸರ್, ಶಿವಪ್ರಕಾಶ್, ಪರಾಂಜಪೆ, ವಿನುತಾ, ಕ್ರೀಯೆಟೀಮ್..ಶರಧಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.

@ಪ್ರಕಾಶ್ ಸರ್..ವಂದನೆಗಳು. ನಾನು ಫೋಸ್ಟ್ ಮಾಡುವಾಗ ನೀವು ಬರೆಯುತ್ತಿದ್ದೀರಿ ಅಂತ ಸುದ್ದಿ ಸಿಕ್ಕಿದೆ(:)

@ಕೇಶವ ಕುಲಕರ್ಣಿ ಸರ್ ವಂದನೆಗಳು. ಕ್ಷಮಿಸಿ ನನಗದು ಗೊತ್ತಿರಲಿಲ್ಲ ಸರ್. ನನಗೆ ಗೊತ್ತಿಲ್ಲದ ವಿಚಾರವನ್ನು ಅರ್ಥಮಾಡಿಸಿಕೊಟ್ಟಿರಿ. ತುಂಬಾ ಕೃತಜ್ಞತೆಗಳು ಸರ್.
ಪ್ರೀತಿಯಿಂದ,
ಚಿತ್ರಾ

Gurus world said...

ತುಂಬ ಸಂತೋಷ ಪಡುವಂಥ ವಿಷಯ,,
I wish you all the best for ಶಿವೂ K and ಮಲ್ಲಿಕಾರ್ಜುನ್ .
ಥ್ಯಾಂಕ್ಸ್ ಚಿತ್ರರವರೆ ನಿಮ್ಮ ಬ್ಲಾಗಿನಲ್ಲಿ ಇಂತಹ ಸಿಹಿ ಸುದ್ದಿ ಹಂಚಿದಕ್ಕೆ.

ಗುರು

ಚಂದ್ರಕಾಂತ ಎಸ್ said...

ಇದೀಗ ತಾನೆ ಅವಧಿಯಲ್ಲಿ ಕನ್ನಡದ ಹಕ್ಕ-ಬುಕ್ಕ ಶಿವು ಮತ್ತು ಮಲ್ಲಿಯವರಿಗೆ ದೊರೆತ ಪ್ರಶಸ್ತಿಯ ಬಗ್ಗೆ ಓದಿ ಇಲ್ಲಿಗೆ ಬಂದರೆ ಅದೇ ಸಾಲುಗಳನ್ನು ಓದಿದಂತಾಗುತ್ತದಲ್ಲಾ ? ಅನಿಸಿತು. ಅನುಮಾನ ಪರಿಹಾರವಾಯಿತು ಬಿಡಿ. ಒಳ್ಳೆಯ ಸುದ್ದಿ ಎಷ್ಟು ಬಾರಿ ಬೇಕಾದರೂ ಓದಬಹುದು, ಮತ್ತೊಮ್ಮೆ ಅವರಿಬ್ಬರಿಗೂ ಅಭಿನಂದನೆಗಳು.

sunaath said...

ಚಿತ್ರಾ,
ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮ ಮೂಲಕ ಶಿವು ಹಾಗೂ ಮಲ್ಲಿಕಾರ್ಜುನರಿಗೆ ಅಭಿನಂದನೆಗಳು.

ಉಮಿ :) said...

ಶಿವು ಸರ್ ಮತ್ತು ಮಲ್ಲಿಕಾರ್ಜುನ್ ಸರ್, ಇಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು :)

ಚಿತ್ರಾ said...

ಚಿತ್ರಾ,
ಇಂಥಾ ಒಳ್ಳೆ ಸುದ್ದಿ ಕೊಟ್ಟಿದ್ದಕ್ಕೆ ನಿಮ್ಮ ಬಾಯಿಗೆ ಸಿಹಿ ಹಾಕಬೇಕು.ನನ್ನ ಪರವಾಗಿ ನೀವೇ ಸ್ವಲ್ಪ ಸ್ವೀಟ್ ತೊಗೊಂಡು ತಿಂದು ಬಿಡಿ. ವಿಷಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು !ಶಿವು ಹಾಗೂ ಮಲ್ಲಿಕಾರ್ಜುನ್ ಇಬ್ಬರಿಗೂ ಅಭಿನಂದನೆಗಳು !!!

vishwanath sunkasal said...

ಬ್ಲೊಗ್ ತುಂಬ ಚೆನ್ನಾಗಿದೆ

ಪ್ರೀತಿಯಿ೦ದ ವೀಣಾ :) said...

Shivu mathu mallikarjun avarige thumbu hrudayada vandanegalu :)

ಚಿತ್ರಾ ಕರ್ಕೇರಾ said...

@ಸುನಾಥ್ ಅಂಕಲ್, ಗುರು, ವೀಣಾ, ಚಿತ್ರಾ, ಉಮೇಶ್, ಚಂದ್ರಕಾಂತ, ವಿಶ್ವನಾಥ್..ಎಲ್ಲರಿಗೂ ಧನ್ಯವಾದಗಳು.
-ಚಿತ್ರಾ