Wednesday, March 4, 2009

ಸಾಗರದಾಚೆಯ ಅಣ್ಣನಿಗೆ....

ಲೇ ಅಣ್ಣಾ..
ನಾನು-ನೀನು ಕಣ್ಣ ಮುಚ್ಚೆ ಆಡಲಿಲ್ಲ, ಗಾಡೇ ಗೂಡೇ ಅನ್ನಲಿಲ್ಲ. ಬಣ್ಣದ ಗಾಳಿಪಟ ಹಾರಿಸೇ ಇಲ್ಲ. ಜೊತೆ-ಜೊತೆಯಾಗಿ ವಾಕಿಂಗ್ ಹೋಗೇ ಇಲ್ಲ. ಇಬ್ಬನಿ ಹನಿಬಿಂದು ನೋಡಿ ಖುಷಿಪಟ್ಟಿ;ಲ್ಲ. ಎಸ್ಎಂಎಸ್ ಗಳ ಹರಟೆ ಮಾಡೇ ಇಲ್ಲ. ಸಂಜೆ ಹೊತ್ತಿನಲ್ಲಿ ತಿಳಿಬಾನಲ್ಲಿ ಹಾರಾಡೋ ಪಾರಿವಾಳ ನೋಡಿ ನಕ್ಕುನಲಿಯಲೇ ಇಲ್ಲ. ಆದ್ರೂ ನಿನ್ನ ಕಂಡರೆ ನಂಗೆ ಅಕ್ಕರೆ, ಪ್ರೀತಿ, ಅಭಿಮಾನ, ಗೌರವ. ನಿನ್ನನ್ನು ಅಣ್ಣಾ ಅಂತ ಕೂಗೋದು ಏನೋ ಮನಸ್ಸಿಗೆ ಹಿತ, ಖುಷಿ. ನಿಂಗೂ ಅಷ್ಟೇ ನಾನಂದ್ರೆ ಇಷ್ಟ ಆಲ್ವಾ?

ನೀನು ನನ್ನ ತಂಗೀ ಅಂತ ಕೂಗುವಾಗ ನಾನೂ ಖುಷಿಗೊಳ್ಳುತ್ತೇನೆ. ನಂಗೂ ಒಬ್ಬ ಅಣ್ಣ ಸಿಕ್ಕಿದ್ದಾನೆ ಅಂತ ಹಿರಿಹಿರಿ ಹಿಗ್ಗುತ್ತೇನೆ. ನಿನ್ನ ಪ್ರೀತಿಯಲ್ಲೇ ತೊಯ್ದು ಬಿಡುತ್ತೇನೆ. ಆ ಖುಷಿಯಲ್ಲಿ ನಿನ್ನ ನಾ ತುಂಬಾ ಪ್ರೀತಿಸುವ ತಂಗೀ ಅಂತ ಜೋರು ಬೊಬ್ಬಿಡಬೇಕು ಅನಿಸುತ್ತೆ. ಆದರೆ, ಬೇಡ..ಪ್ರೀತಿನ ಹೇಳಿಕೊಳ್ಳಬಾರದು ಎಂದನಿಸಿ ಸುಮ್ಮನಾಗುತ್ತೇನೆ. ಮೌನವಾಗಿ ನಿನ್ನ ಪ್ರೀತಿನ ಸವಿಯುತ್ತಿದ್ದೇನೆ ಕಣಣ್ಣಾ. ನೀನು ಫೋನು ಮಾಡಿದಾಗ ..ಅದೂ ಮೊದಲ ಬಾರಿಗೆ ನೀ ಫೋನ್ ಮಾಡಿದಾಗ ಸ್ವರ್ಗಕ್ಕೆ ಮೂರೇ ಗೇಣು..ಅಷ್ಟು ಖುಷಿಗೊಂಡೆ ಗೊತ್ತಾ?! ಆ ಕ್ಷಣ ಅಮ್ಮನ ಮಡಿಲಲ್ಲಿ ಮುಖ ಹುದುಗಿಸಿ ಖುಷಿ ಪಟ್ಟಂತೆ ಆಯ್ತು. ನೀ ನನ್ನ ನೋಡಲೇ ಇಲ್ಲ ಅಲ್ವಾ..ನಾನೆಷ್ಟು ದೊಡ್ಡದಿದ್ದೀನಿ ಗೊತ್ತಾ?
ಅಣ್ಣಾ..ದಿನಾ ನೀ ಸಣ್ಣಗಾಗು ಅಂತೀನಿ. ಡುಮ್ಮಣ್ಣ ಅಂತ ರೇಗಿಸ್ತೀನಿ. ನೋಡು..ನೀ ಸಣ್ಣಗಾಗು ಸಣ್ಣಗಾಗು ಅನ್ನುತ್ತಲೇ ನಾ ದಪ್ಪ ಆಗಿಬಿಟ್ಟಿದ್ದೀನಿ. ಬಹುಶಃ ನೀ ಕಲಿಸಿದ ಅಡುಗೆ ಪರಿಣಾಮವೇ ಆಗಿರಬೇಕು. ಎಲ್ರೂ ನನ್ನ ಡುಮ್ಮಿ ಅಂದಾಗ ಅಣ್ಣನತ್ರ ದೂರು ಹೇಳ್ತೀನಿ ಅಂತ ಬೈತೀನಿ. ಅದಕ್ಕೆ ಭಾರತಕ್ಕೆ ಬೇಗ ಬಂದುಬಿಡಣ್ಣ. ಈಗಲೇ ನೀನು ನನ್ನೆದುರು ಬಂದು ಬಿಡು ಅಂತ ರಚ್ಚೆಹಿಡಿಯಬೇಕು ಅನಿಸುತ್ತೆ. ಆದರೆ, ನೀನಿದ್ದಲ್ಲಿಂದ ಇಲ್ಲಿ ಬರೋದು ಎಷ್ಟು ದೂರ ಅಲ್ವಾ? ಆದ್ರೂ ಬೇಗ ನನ್ನ ನೋಡಕ್ಕೆ ಬರ್ತಿಯಾ ಅಂದುಕೊಂಡಿದ್ದೀನಿ. ಬರದಿದ್ರೆ ನಿನ್ನ ಜೊತೆ ನಾ ಟೂ ಟೂ ಬಿಡ್ತೀನಿ ನೋಡು. ನೀ ಬಂದಾಗ ನಿನ್ನ ಕೈಯಿಂದ ನನ್ನ ಪ್ರೀತಿಯ ಕಪ್ಪು ಹ್ಯಾಟ್ ತೆಗೆಸಿಕೊಳ್ಳಬೇಕು. ಚಾಕಲೇಟು ಗಿಟ್ಟಿಸಿಕೊಳ್ಳಬೇಕು. ಫೋಟೋ ತೆಗೆಸಿಕೊಳ್ಳಬೇಕು. ನಿನ್ನ ಜೊತೆ ವಾಕಿಂಗ್ ಹೋಗಬೇಕು. ನೀ ಕಲಿಸಿದ ಅಡುಗೆ ಗಳನ್ನು ನಿನ್ನೆದುರಲ್ಲೇ ಮಾಡಿತೋರಿಸಬೇಕು. ನಿನ್ನ ಬಾಯಿಂದ ಆಗಾಗ 'ಟ್ಯೂಬ್ ಲೈಟ್' ಅಂತ ಕರೆಸಿಕೊಳ್ಳಬೇಕು. ನಿನ್ನ ಜೊತೆ ಲಗೋರಿಯಾಟ ಆಡಬೇಕು. ನನ್ನ ಡುಮ್ಮಿ ಅಂತ ಕರೆದವರಿಗೆ ಎಲ್ಲಾ ನಿನ್ನ ಬಾಯಲ್ಲಿ ಬೈಸಬೇಕು. ಒಟ್ಟಿನಲ್ಲಿ ನಿನ್ನ ಜೊತೆಗೆ ನಾ ಖುಷಿಖುಷಿ ಕ್ಷಣಗಳನ್ನು ಕಳೆಬೇಕು..ನೀನು ನನ್ನ ಅಣ್ಣಂತ ಎಲ್ಲರೆದುರು ಹೇಳಿಕೋಬೇಕು. ಲೇ ಅಣ್ಣಾ..ಇನ್ನೂ ಹೇಳಕ್ಕಿದೆ..ಇವತ್ತಿಗೆ ಇಷ್ಟು ಸಾಕು. ನೀ ನಕ್ಕಾಗ, ನೀ ಅತ್ತಾಗ..ನಿನ್ನ ಜೊತೆ ನಾನಿರ್ತೀನಿ. ನನ್ನೆದುರೇ ನಕ್ಕುಬಿಡು..ಅಳಬೇಕಾಂದ್ರೂ ನನ್ನೆದುರೇ ಅತ್ತುಬಿಡು. ನಾ ನಿನಗೆ ಕಿವಿಯಾಗುತ್ತೇನೆ. ಮರೀಬೇಡ..ನಿನ್ನ ಹಿಂದೆ ನೆರಳಂತೆ ನಾನಿರ್ತೀನಿ...ನಿನ್ನ ತುಂಬಾ ಪ್ರೀತಿಸುವ ತಂಗಿಯಾಗಿ..! ನಿದ್ದೆ ಬರುತ್ತಿದೆ..ನಾ ಮಲಗ್ತೀನಿ..ಬೊಗಸೆ ತುಂಬಾ ಪ್ರೀತಿ ನಿನಗಾಗಿ ಇಟ್ಟಿದ್ದೀನಿ...ತಕೋತಿಯಲ್ಲಾ..!!
ಇಂತೀ,
ನಿನ್ನ
ಪೋಟೋ: ವ್ವ್ವ. flickr.com

19 comments:

Sushrutha Dodderi said...

ನಂಗೂ ಬೈಯಿಸ್ತೀಯಾ??! ನಾನೇನೂ ನಿನ್ನ ’ಡುಮ್ಮಿ’ ಅಂತ ಕರ್ದಿಲ್ವಪ್ಪ.. :/

ಹರೀಶ ಮಾಂಬಾಡಿ said...

ಭಲೇ ಭಲೇ ಅಣ್ಣ-ತಂಗಿ ಜೋಡಿ!

ವಿ.ರಾ.ಹೆ. said...

:) :)

Ittigecement said...

ಚಿತ್ರಾ..

ಸರಳ ಶಬ್ಧಗಳಲ್ಲಿ..
ಪ್ರೀತಿಯನ್ನು ಹೇಳಿಕೊಳ್ಳಬಾರದು ಅಂತ...

ಅಣ್ಣ ತಂಗಿ ಭಾಂಧವ್ಯದ
ಚಂದವಾಗಿ ಭಾವನೆಗಳನ್ನು ..

ಮನ ಕಲಕುವಂತೆ.. ಬಣ್ಣಿಸಿದ್ದೀರಿ...

ನನಗೆ ಇಷ್ಟವಾಯಿತು..

ಅಭಿನಂದನೆಗಳು..

ಶಿವಪ್ರಕಾಶ್ said...

ಚಿತ್ರ ಅವರೇ,
ಏನೋ ತಿಳಿಯದೆ(ತಿಳಿದು) ಅಂದಿದಾರೆ. :D
ಕ್ಷಮಿಷಿಬಿಡಿ...

ತೇಜಸ್ವಿನಿ ಹೆಗಡೆ said...

Maththondu bhavapoorna baraha :)

Mohan Hegade said...

ಡುಮ್ಮಿಜಿ ಓ ಕ್ಷಮಿಸಿ ಚಿತ್ರಾಜಿ,
ಡುಮ್ಮಿ, ಡುಮ್ಮಿ, ಡುಮ್ಮಿ, ಡುಮ್ಮಿ, ಡುಮ್ಮಿ ಎಂದು ನಾ ಹೇಳಲಪ್ಪ.
ನಾನು ಡುಮ್ಮಿ ಎಂದೋ , ಅವರ ಜಡೆ ಎಳೆಯೋದೋ ಹೀಗೆ ಕಿಟಲೆ ಕೊಡೊ ಸುಖವೇ ಬೇರೆ ಇದೆ. ಅದರಲ್ಲಿ ಬೆತ್ತದಸ್ತು ಪ್ರೀತಿ ಇರುತ್ತೆ ಹ.
ಬರಲಾ,

ಚಿತ್ರಾ ಸಂತೋಷ್ said...

@ಶುಶ್ರುತಣ್ಣ..ನಿಂಗೆ ಬೈಯಲ್ಲ..ಎಲ್ಲಾದ್ರೂ ಸಿಗ್ತಿಯಲ್ಲ? ಕಿವಿಹಿಂಡಿಬಿಡ್ತೀನಿ ನೋಡು..(:)

@ಹರೀಶ್ ಸರ್..ಧನ್ಯವಾದಗಳು.

@ವಿಕಾಸ್..(:)

@ಪ್ರಕಾಶ್ ಸರ್...ಆಫಿಸ್ ನಲ್ಲಿ ಕುಳಿತಿರುವಾಗ ಏನು ಬರೀಬೇಕು ಅಂತ ಹೊಳಿಲೇ ಇಲ್ಲ..ಆವಾಗ 'ಸಾಗರದಾಚೆಯ ಅಣ್ಣಗೆ ಪತ್ರ ಬರೆದೆ' ಮೆಚ್ಚಿದ್ದಕ್ಕೆ ಧನ್ಯವಾದಗಳು.

@ಶಿವಪ್ರಕಾಶ್..ಆಯಿತು..ಕ್ಷಮಿಸಿಬಿಟ್ಟೆ! ಮೆಚ್ಚಿದ್ದಕ್ಕೆ ವಂದನೆಗಳು.

@ತೇಜಕ್ಕ..ಥ್ಯಾಂಕ್ಸ್ಉಊಊಊ

@ಮೋಹನ್ ಹೆಗಡೆ ಅವರೇ ನಮಸ್ಕಾರ...ಕೀಟಲೆ ಮಾಡೋದು ಭಾರೀ ಇಷ್ಟ ಅನಿಸುತ್ತೆ ಇರ್ಲಿ ಬಿಡಿ..ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಅದೇ ಚಿತ್ರಾನ ಮುಂದೇ ಜೀ ಬೇಡ ಕಣ್ರೀ..

-ಎಲ್ಲರಿಗೂ ಪ್ರೀತಿಯಿಂದ,
ಚಿತ್ರಾ

shivu.k said...

ಪುಟ್ಟಿ,

ಅಣ್ಣಂದಿರ ಬಗ್ಗೆ ಅದೆಷ್ಟು ಒಲವೇ ನಿನಗೆ ಹುಡುಗಿ...!

"ಅಣ್ಣ" ಅನ್ನುವ ಪದ ನಿನ್ನ ಹೃದಯದಿಂದ, ಬಾಯಿಂದ, ಲೇಖನಿಯಿಂದ ಹೊರಬರುವ [ತುಂಬುಪ್ರೀತಿಯಿಂದ. ಇದು ನಿನ್ನದೇ ಪದ] ರೀತಿಗೆ ನನ್ನ ಸಲಾಂ.

ನಿನ್ನನ್ನು ಡುಮ್ಮಿ ಅಂತ ಹೇಳಿರುವವರಲ್ಲಿ ನಾನೇ ಜಾಸ್ತಿ..ಆನ್ನಿಸುತ್ತೆ.....ಮತ್ತೆ ನಿನ್ನ ಟ್ಯೂಬ್ ಲೈಟ್ ಅನ್ನೋ ಹೊಸ ಪದ ಸಿಕ್ಕಿದೆ[ಕೂಗಲಿಕ್ಕೆ] ನನಗೆ...ಥ್ಯಾಂಕ್ಸ್...
ನಿನ್ನ ಹಿಡಿಪ್ರೀತಿಯನ್ನು ಎಲ್ಲಾ ಅಣ್ಣಂದಿರಿಗೆ ಹಂಚುವ ಕೆಲಸವನ್ನು.....

ಮೊದಲ ಪ್ಯಾರದಲ್ಲಿ ಮುಗ್ದತೆಯ ಉಪಮೆಗಳು...ಅಪ್ತವಾಗಿ ಮನಸ್ಸಿನಲ್ಲಿ ನಾಟುತ್ತವೆ...
ಮುಂದುವರಿಯಲಿ ಅಣ್ಣಂದಿರಿಗೆ "ಹಿಡಿಪ್ರೀತಿ" ತುಂಬು ಹೃದಯದಿಂದ ಹಂಚುವ ಕಾಯಕ....

ಚಿತ್ರಾ ಸಂತೋಷ್ said...

@ಶಿವಣ್ಣ...
ಹೌದು..ನಿಜವಾಗಲೂ ಅಣ್ಣಂದಿರು ಅಂದರೆ ನನ್ನ ಜೀವ..ಅಣ್ಣಂದಿರಂದ್ರೆ ನಂಗೆ ಅಮ್ಮನ ಥರ..ಅದ್ಕೆ ದೇವರು ನಂಗೆ ಅಮ್ಮನ ಒಡಲಲ್ಲಿ ಅಣ್ಣಂದಿರನ್ನು ನೀಡದಿದ್ದರೂ, ಅಮ್ಮನ ಮಡಿಲಾಗುವ ಪ್ರೀತಿಯ ಅಣ್ಣಂದಿರನ್ನು ನೀಡಿದ್ದಾನೆ. ಅದೇ ನಂಗೆ ಖುಷಿ..ಆ ಖುಷಿಯಲ್ಲಿ ಇಂಥ ಪ್ರೀತಿಯ ಪತ್ರಗಳನ್ನು ಬರೀತೀನಿ. ಅಣ್ಣ ಎನ್ನುವ ಕರೆಗೂ..ಅಮ್ಮಾ ಎನ್ನುವ ಕರೆಗೂ ನಾ ವ್ಯತ್ಯಾಸ ಕಾಣಲ್ಲ. ಅಷ್ಟೇ..ನನ್ನ 'ಹಿಡಿಪ್ರೀತಿ'ನ ಅಣ್ನಂದಿರಿಗೆ ಹಂಚುವ ಕೆಲಸವನ್ನು ನಾ ಎಂದೆಂದಿಗೂ ಮಾಡುತ್ತಲೇ ಇರುತ್ತೇನೆ. ನಿಮ್ಮ ಪ್ರೀತಿಗೆ ನಾ ಋಣಿ..
ಹೌದೌದು..ಡುಮ್ಮಿ ಅಂತ ಕರೇತೀರಿ..ಆದರೆ ನೀವೆಲ್ಲ ಬೊಬ್ಬೆ ಹೊಡೆವಷ್ಟು ಡುಮ್ಮಿ ನಾನಲ್ಲ ತಿಳೀತಾ..ಟ್ಯೂಬ್ ಲೈಟ್ ಅಂದ್ರೆ..ನೋಡ್ಕೋತೀನಿ. ನೋಡೋಣ...ಅಲ್ಲಾ..ನಿಮ್ಮ ಜೊತೆನೂ ಟೋಪಿ ಕೇಳಿದ್ದೀನಲ್ಲಾ..ಯಾವಾಗ ಕೊಡಿಸೊದು?
ಪ್ರೀತಿಯ ಅಣ್ಣನ ಆಪ್ತ ಕಮೆಂಟಿಗೆ..ವಂದನೆಗಳು..
ಪ್ರೀತಿಯಿಂದ,
ಚಿತ್ರಾ

Anonymous said...

ಚಿತ್ರಕ್ಕ

ಸಾಗರದಾಚೆಗೆ ಇರುವ ಅಣ್ಣನಿಗೆ ಸಾಗರದ ಈಚೆ ಇರುವ ತಂಗಿ ಬರೆದ ಪತ್ರ ಮಸ್ತಾಗಿದೆ. ಅದರಲ್ಲೂ ಮೊದಲ ಪ್ಯಾರ ತುಂಬಾ ಮನಸ್ಸಿಗೆ ಹತ್ತಿರವಾಯಿತು. ಚಿತ್ರಕ್ಕ ಯನ್ಲ ಇರೆನ್ ಡುಮ್ಮಿ ಪಂಡ್ದ್ ಲೆಪ್ಪೋಲಿಯೆ. ಅಣ್ಣ ತಂದ ಚಾಕಲೇಟಲ್ಲಿ ನನಗೂ ಪಾಲಿದೆ ಅಲ್ವಾ ಅಕ್ಕ

PARAANJAPE K.N. said...

ತ೦ಗಿ ಚಿತ್ರಾ,
ನಾನಿನ್ನು ನಿನ್ನ ನೋಡಿಲ್ಲ, ನೋಡದೆ ಡುಮ್ಮಿ ಎನ್ನಲು ಮನಸು ಬಾರದು. ಆದರೆ ಡುಮ್ಮಿ ಎ೦ದು ಕರೆಯುವುದರಲ್ಲೇ ಏನೋ ಒ೦ದು ಬಗೆಯ ಖುಷಿ ಇದೆ ಅನಿಸುತ್ತೆ. ಬಹಳ ಆಪ್ತವಾದ ಬರಹ. ಸಾಗರದಾಚೆಯ ಅಣ್ಣನಿಗೆ ಬರೆದ ಪತ್ರದಲ್ಲಿ ಅಣ್ಣ೦ದಿರ ಬಗ್ಗೆ ನಿನಗಿರುವ ಪ್ರೀತಿ,ಕಕ್ಕುಲತೆ, ಆಪ್ತತೆ, ಎಲ್ಲವು ಭರಪೂರ ಇದೆ. ಚೆನ್ನಾಗಿದೆ.

ಚಿತ್ರಾ ಸಂತೋಷ್ said...

ಪ್ರೀತಿಯ ತಂಗೀ ರೋಹಿಣಿ..
ಪತ್ರ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ ಹೇಳ್ತೀನಿ. ನೋಡು ತಂಗೀ..ನಾ ಇನ್ನೊಂದುಸಲ ೂರಿಗೆ ಬಂದಾಗ ನಿನ್ನ ನೋಡಕ್ಕೆ ಮಂಗಳೂರಿಗೆ ಬರ್ತೀನಿ..ಆವಾಗ ಡಿಸೈಡ್ ಮಾಡೋಣ ಯಾರು ಸಣ್ಣ/ ಯಾರು ದಪ್ಪ ಅಂತ? ಸರೀನಾ..?! ಈಗ ಅದಕ್ಕೆ ಅನುಮತಿ ಕೊಡಲ್ಲ. ಚಾಕಲೇಟಲ್ಲಿ ನಿನಗೂ ಪಾಲಿದೆ..ಆದ್ರೆ ನಾ ತಿಂಡಿಪೋತಿ..ಮುಗಿಯಕ್ಕೆ ಮೊದಲು ನೀನೂ ಹಾಜರಾಗಿಬಿಡಮ್ಮಾ!
-ಪ್ರೀತಿಯಿಂದ,
ಚಿತ್ರಾ

ಚಿತ್ರಾ ಸಂತೋಷ್ said...

ಪರಾಂಜಪೆಯಣ್ಣ..
ನೀವು ನೋಡಿಲ್ಲ...ಆದ್ರೂ ಡುಮ್ಮಿ ಅನ್ನಕ್ಕೆ ಮನಸ್ಸು ತುದಿಗಾಲಲ್ಲಿ ನಿಂತಿದೆ!! ಆದಷ್ಟು ಬೇಗ ನೋಡೋದು ಒಳ್ಳೆಯದು. ನಾನು ನೀವೆಲ್ಲ ಬೊಬ್ಬೆಹಾಕುವಷ್ಟು ಡುಮ್ಮಿ ಆಗಿಲ್ಲ ಅನ್ನೋದು ಜಗತ್ತಿಗೇ ಗೊತ್ತು..ಇನ್ನು ಅನ್ಣಂದಿರ ಕೈಯಲ್ಲಿ ಡುಮ್ಮಿ ಕರೆಸಿಕೊಳ್ಳೋದು, ಕರೆದ ತಪ್ಪಿಗೆ ಅವರಿಂದ ಸಿಗೋದನ್ನು ಗಿಟ್ಟಿಸಿಕೊಳ್ಳೋ ಟೆಕ್ನಿಕ್ಕು ನಂಗೆ ಚೆನ್ನಾಗಿ ಗೊತ್ತು. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಎಲ್ರೂ ಕಮೆಂಟು ಮಾಡುವಾಗ ಬರಹಕ್ಕಿಂತಲೂ 'ಡುಮ್ಮಿ' ಶಬ್ಧದ ಬಗ್ಗೆನೇ ತಲೆಕೆಡಿಸಿಕೊಂಡ ಹಾಗೇ ಇದೆ...ಇರಲಿ ಬಿಡಿ. ಬೇಜಾರೇನಿಲ್ಲ.
-ಪ್ರೀತಿಯಿಂದ,
ಚಿತ್ರಾ

sunaath said...

ಬರಹದ ಮೇಲಿನ ಚಿತ್ರದಲ್ಲಿಯ ಹುಡುಗಿ ತುಂಬ ಮುದ್ದಾಗಿದ್ದಾಳೆ. ಬರಹವೂ ತುಂಬಾ ಮುದ್ದಾಗಿದೆ. ನಮ್ಮನಮ್ಮಲ್ಲಿ ಭಾವಸಂಬಂಧಗಳನ್ನು ಬೆಳೆಯಿಸುವ ಇಂತಹ ಲೇಖನಗಳಿಂದ ಹರ್ಷವಾಗುತ್ತದೆ.

ಮಲ್ಲಿಕಾರ್ಜುನ.ಡಿ.ಜಿ. said...

comments ಓದುತ್ತಿದ್ದರೆ...
ಕೆಲವರು ಅಣ್ಣಂದಿರು ಹೆಗಲು(ಹೊಟ್ಟೆ) ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಅನ್ನಿಸ್ತಿದೆ!!
ಪ್ರೀತಿ, ಆಪ್ಯಾಯತೆ, ಸಲಿಗೆ, ಆತ್ಮೀಯತೆ...
ಎಲ್ಲವನ್ನೂ ಒಳಗೊಂಡಿರುವ ಪತ್ರ ತುಂಬಾ ಚೆನ್ನಾಗಿದೆ.

Laxman (ಲಕ್ಷ್ಮಣ ಬಿರಾದಾರ) said...

ಹೇ ಚಿತ್ರಾ.......
ತುಂಬಾ ಚೆನ್ನಾಗಿತ್ತು . ನನ್ನ ತಂಗಿದೇ ನೆನಪಾಯಿತು. ನನಗೇನೆ ಬರೆದಿದಾಳೆ ಅಂತ ಅನಿಸಿತು. ಓಟದ ಜೀವನದಲ್ಲಿ ಸಂಬಂಧಗಳ ಮೌಲ್ಯಗಳ ನೆನಪಿಸಿತು. ಬರಿತಾ ಇರು. - ಲಕ್ಷ್ಮಣ

ಚಿತ್ರಾ ಸಂತೋಷ್ said...

@ಸುನಾಥ್ ಸರ್..ಅಭಿನಂದನೆಗಳು. ದೊಡ್ಡ ಮಾತು ಸರ್. ನಿಮ್ಮ ಪ್ರೋತ್ಸಾಹ ಸದಾ ಎನಗಿರಲಿ.

@ಮಲ್ಲಿಯಣ್ಣ..ನೀವು ಹೆಗಲು ಮುಟ್ಟಿ ನೋಡಿದ್ರಾ? ಹೊಟ್ಟೆನಾ? ಹೇಳಿದ್ರೆ ಚೆನ್ನಾಗಿರ್ತಾ ಇತ್ತು..ಶರಧಿಗೆ ಬಂದಿದ್ದಕ್ಕೆ ವಂದನೆಗಳು.

@ಲಕ್ಷ್ಮಣ್ ಸರ್..ಪ್ರೀತಿಯ ಮಾತುಗಳಿಗೆ ನಾ ಋಣಿ. ನಿಮ್ಮ ತಂಗಿದೇ ನೆನಪಾಯಿತು..ನಿಮಗೇ ಬರೆದಿದ್ದಾಳೆ ಅನಿಸ್ತಾ ? ಹಾಗೇ ಅಂದುಕೊಳ್ಳಿ..ನಾನೂ ನಿಮ್ಮ ತಂಗಿಯಿಂದ ಹೊರತಲ್ಲ ಬಿಡಿ.ಮತ್ತೆ ಬನ್ನಿ..ಕಾಯು್ತಿರುವೆ.

-ಚಿತ್ರಾ

ಚಿತ್ರಾ ಸಂತೋಷ್ said...

ಶಿವಶಂಕರ್ ಸರ್...
ಅಣ್ನಾ ಹೆಸರು ಹಾಕೋದಕ್ಕಿಂತ..ಅಣ್ಣ ಅನ್ನೋ ಆ ಪ್ರೀತಿಯನ್ನೇ ಕುರಿತು ಬರೆದರೆ ಚೆನ್ನ ಎಂದನಿಸಿತು.
-ಚಿತ್ರಾ