Friday, February 27, 2009

ಥರಗುಟ್ಟುವ ಚಳಿಯಲ್ಲಿ ಆ ಬಾಲಕ ಬೂದಿಯಲ್ಲಿ ಮಲಗಿದ್ದ..!!

ಜ್ವರದಿಂದ ತಲೆಭಾರ, ನೆನಪುಗಳಿಂದ ಅದೇಕೋ ಮನಸ್ಸು ಭಾರ. ಆದರೆ ಸಂಜೆಯ ತಂಪಿನಲ್ಲಿ ಪಡುವಣದಿ ಮುಳುಗುತ್ತಿದ್ದ ನೇಸರನನ್ನು ನೋಡುತ್ತಿದ್ದಂತೆ ಮನಸ್ಸೇಕೋ ಖುಷಿ, ಖುಷಿ. ಮನೆಯ ಟೆರೇಸ್ ಮೇಲೆ ಹೋಗಿ ನಿಂತರೆ, ಅದೇ ಖುಷಿ ನೀಡುವ ತಂಗಾಳಿ. ಗೂಡು ಸೇರುವ ಹಕ್ಕಿಗಳ ಕಲರವ. ಪುಟ್ಟ ಬಾಲಕನೊಬ್ಬ ತಾನು ಸಾಕಿದ ಪಾರಿವಾಳ ಜೊತೆ ಆಟವಾಡುತ್ತಿದ್ದ. ಕೆಳಗಡೆ ನೋಡಿದರೆ ರಾಶಿ ಮರಳ ಮೇಲೆ 'ಮರಳಾಗಿ' ಆಡುವ ಮಕ್ಕಳು, ಬ್ಯಾಟ್ ಹಿಡಿದು ಸಚಿನ್, ಗಂಗೂಲಿ ಕನಸು ಕಾಣುವ ಕಂದಮ್ಮಗಳು. ಇನ್ನೊಂದೆಡೆ ಇವೆಲ್ಲವನ್ನೂ ಅಕ್ಕರೆಯಿಂದ ನೋಡುತ್ತಾ ಅಚ್ಚರಿಪಡುವ 'ಚಿಂದಿ' ಪುಟಾಣಿಗಳು.

ಹೌದು, ಅಂದು ನನ್ನ ಹೃದಯ ಕಣ್ಣೀರಾದ ದಿನ. ಬದುಕಿನ ಇನ್ನೊಂದು ಮುಖವನ್ನು ನೋಡಿ ಬದುಕೆಂದರೆ ಹೀಗೂ ಇರುತ್ತಾ? ಎಂದು ಬೆರಗುಗಣ್ಣಿಂದ ಮಗುವಿನಂತೆ ಪಿಳಿಪಿಳಿ ನೋಡುತ್ತಾ ನಿಂತ ದಿನ, ಘಟನೆ ನೆನೆಸಿಕೊಂಡಾಗ ಈಗಲೂ ಮನ ಅಳುತ್ತೆ. ಅಸಹಾಯಕಳಾಗಿ ಮೌನವಾಗಿ ಮನ ರೋಧಿಸುತ್ತದೆ. ನವೆಂಬರ್ 3, 2006! ಮಲ್ಲೇಶ್ವರದ ದೇವಯ್ಯ ಪಾರ್ಕ್ ಬಳಿ ಇರುವ ರೈಲುಮಾರ್ಗ..ಕಸ ಕಡ್ಡಿ, 'ಬೇಡ'ದೆಲ್ಲವನ್ನೂ ತನ್ನೊಳಗೆ ತುಂಬಿಸಿಕೊಳ್ಳುವ ಜಾಗ ಅದು. ಏಳೆಂಟು ವರ್ಷದ ಪುಟ್ಟ ಬಾಲಕ. ಕಣ್ಣಲ್ಲಿ ಮುಗಿಲು ಮುಟ್ಟುವ ಕನಸು ತುಂಬಿಕೊಂಡಿದ್ದ. ಹರಿದ ಬಟ್ಟೆ ಮೈಮೇಲೆ. ಮಲದ ಬದಿಯಲ್ಲಿದ್ದ ಇಡ್ಲಿ ತುಂಡನ್ನು ಹೆಕ್ಕಿ ತಿನ್ನುತ್ತಿದ್ದ!! ನನ್ನೆರಡೂ ಕಣ್ಣುಗಳು ಒಂದು ಕ್ಷಣ ಮುಚ್ಚಿಕೊಂಡಿದ್ದವು. ತೆರೆದು ನೋಡಿದಾಗ 'ಅಕ್ಕಾ..'ಎನ್ನುತ್ತಾ ನನ್ನೆದುರು ಕೈಚಾಚಿದ್ದ. ವಾಸ್ತವದ ಇನ್ನೊಂದು ಮುಖ. ಅಲ್ಲೇ ಇರುವ ಇರುವ ಶಾಂತಿಸಾಗರ ಹೊಟೇಲಿನಲ್ಲಿ ದೋಸೆ ಕೊಡಿಸಿದೆ. ಒಂದಲ್ಲ..ಎರಡಲ್ಲ..ಮೂರು ದೋಸೆಗಳನ್ನು ತಿಂದ!! ಪ್ರೀತಿಯಿಂದ ತನ್ನೆರಡೂ ಕಣ್ಣುಗಳನ್ನು ತೆರೆದು ನನ್ನತ್ತಾ ನೋಡುತ್ತಾ ನಿಂತ...ಯಾವುದೋ 'ಹೆಸರಿಡದ ಸಂಬಂಧಿಕನಂತೆ'!!

ಆಗಸ್ಟ್ 14. ಅಂದು ಜೀವನದ ಮೊದಲ ಬಾರಿಗೆ ನಾವು ಹಂಪಿಗೆ ಹೊರಟ ದಿನ. ಥರಗುಟ್ಟುವ ಚಳಿ. ಆಕಾಶದಲ್ಲಿ ಚಂದ್ರ, ನಕ್ಷತ್ರಗಳು ಕಾಣುತ್ತಿಲ್ಲ. ಮೋಡಗಳ ಮೇಲಾಟಗಳೂ ಗೋಚರಿಸುತ್ತಿಲ್ಲ. ಚಿತ್ರದುರ್ಗದಿಂದ ಮುಂದೆ ಸಾಗುತ್ತಿದ್ದಂತೆ ಗಣಿಲಾರಿಗಳ ಧೂಳು, ಆವೇಗ.!ವೇಗದಿಂದ ಎದುರಿಗೆ ಬರುತ್ತಿದ್ದ ಲಾರಿಗಳನ್ನು ನೋಡಿ ನಮ್ಮ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದೆವು. ಚಳಿಗೆ ಮೈ ಬೆಚ್ಚಗಾಗಿಸುವಾಸೆ. ಅಲ್ಲೇ ಒಂದು ಟೀ ಅಂಗಡಿ. ಟೀ ಅಂಗಡಿ ಮಾಲೀಕ ಗೊರಕೆ ಹೊಡೆಯುತ್ತಿದ್ದರೆ, ಇತ್ತ ಒಬ್ಬ ಬಾಲಕ ನಿದ್ದೆಯ ಮಂಪರಿನಲ್ಲಿ ತೂಕಾಡಿಸುತ್ತಿಸಿದ್ದ. ಮತ್ತೊಮ್ಮೆ ಬಾಲಕ ..???! ಬೂದಿಯಲ್ಲಿ ಮಲಗಿದ್ದ. ನಾವು ಹೋದ ಕೂಡಲೇ ಮಾಲೀಕ ಆ 'ಬೂದಿ ಬಾಲಕ'ಕನನ್ನು ಎಬ್ಬಿಸಿದ..ಇಲ್ಲ, ಆತ ಏಳಲೇ ಇಲ್ಲ. ಅಲ್ಲೇ ಇದ್ದ ಕೋಲಿನಲ್ಲಿ ಹೊಡೆದೇಬಿಟ್ಟ..! ಎದ್ದ..'ಬೂದಿ ಬಾಲಕ'..ಕಂಣ್ಣೊರೆಸಿಕೊಂಡು!!..ಕಾಲೆಳೆಯುತ್ತಲೇ ಬಂದು..ಟೀ ತಂದುಕೊಟ್ಟ. ಟೀ ಕುಡಿಯುವ ಬದಲು..ಆ ಬಾಲಕನ ಕಣ್ಣುಗಳನ್ನೇ ನೋಡುತ್ತಿದ್ದೆ...ಅಲ್ಲಿ ಆಪ್ತತೆಯಿತ್ತು, ಪ್ರೀತಿಯಿತ್ತು..ಅಸಹಾಯಕತೆಯಿತ್ತು., ಸಾವಿರ ಕನಸುಗಳ ಆಶಾಗೋಪುರ ಇತ್ತು..ಆದರೆ 'ಬದುಕಿರಲ್ಲಿಲ್ಲ'!!!

ಮೊನ್ನೆ ಮೊನ್ನೆ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರಕ್ಕೆ ಆಸ್ಕರ್ ಬಂತು...ಅದಕ್ಕೆ ಸಿಕ್ಕ ಪ್ರಚಾರ, ಆಸ್ಕರ್, 'ಕೊಳಗೇರಿ' ಮಕ್ಕಳೂ ಆಚರಿಸಿದ ಆ ಸಂಭ್ರಮದ ಕ್ಷಣಗಳನ್ನು ಕಂಡಾಗ ಯಾಕೋ ಮೇಲಿನ ಘಟನೆಗಳು ನೆನಪಾದುವು. ಆಸ್ಕರ್ ಬಂದ ಖುಷಿಯ ಭರದಲ್ಲಿ ಸೋನಿಯಾ ಗಾಂಧಿ, 'ಈ ಚಿತ್ರ ನಮಗೆ ಸ್ಪೂರ್ತಿ' ಎಂದರೆ ,. ಮಹಾರಾಷ್ಟ್ರ ಸರ್ಕಾರ, ಸ್ಲಂ ಡಾಗ್ ನಲ್ಲಿ ಅಭಿನಯಿಸಿದ ಬಾಲಕಲಾವಿದರಿಗೆ ಫ್ಲಾಟ್ ಒದಗಿಸುವ ಭರವಸೆ ನೀಡಿದ್ದಾರೆ..ಥೇಟ್ 'ಶರದ್ ಪವಾರ್' ನಂತೆ!! ಆಸ್ಕರ್ ಬಂದಿರುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ..ಆದರೆ, ಈ ಸ್ಲಂ, ಈ ಬದುಕು, ಚಿಂದಿ ಪುಟಾಟಿಗಳು, ಅವರ ಕನಸುಗಳು, ಕಕ್ಕುಲತೆ...ಜೀವ ಹಿಂಡುವ ಬದುಕು, ಸರ್ಕಾರ ನೀಡಿರುವ ಭರವಸೆಗಳು, ವಿಜಯೋತ್ಸವ....ಯಾಕೋ ನನ್ನೊಳಗೊಂದು 'ನೋವಿಗೆ' ಕಾರಣವಾಯಿತು. ಅದನ್ನೇ 'ಶರಧಿ' ಜೊತೆ ಹಂಚಿಕೊಂಡೆ.

31 comments:

Prakash Shetty said...

ಇಂದು ಮದ್ಯಾಹ್ನ...

ನಮ್ಮ ಆಪೀಸಿನ ಎದುರಿರುವ ಮಾಲ್ ಒಳಗಿಂದ ಊಟಕ್ಕಾಗಿ ಹೊರಡುತ್ತಿದ್ದೆ..
ಮಾಲ್ ಎದುರು ಇಬ್ಬರು ಫಾರಿನರ್ಸ್ ಬಂದಿಳಿದರು..
ಬಂದಿತು ದಂಡು.. ನಾಲ್ಕು ಪುಟ್ಟ ಪುಟ್ಟ ಮಕ್ಕಳು..

ಆ ಬಿಳಿ ಚರ್ಮದವರನ್ನು ನೋಡಿದ ಕೂಡಲೆ... ಓಡಿ ಬಂದು ಹಣ, ತಿನಿಸಿಗಾಗಿ ಕಾಡಿ, ಬೇಡಿ.. ತೊಳಲಾಟವಿಟ್ಟರು..

ಉ ಹುಂ... ಇಲ್ಲ... ಇವರು ಅದಕ್ಕೇನೂ ಬಗ್ಗಲಿಲ್ಲ...

ಅವರಿಗೂ ಗೊತ್ತಾಯಿತು.. ಇನ್ನೇನೂ ದಕ್ಕುವುದಿಲ್ಲ...

ಒಂದೇ ಸಮನೆ ಬಯ್ಯತೊಡಗಿದರು ಮಕ್ಕಳು... ಅದೂ ಸಾಲದೆಂಬಂತೆ ತಮಗೆ ತೋಚಿದಂತೆ ಕೈ ಬಾಯಿ ಕಾಲುಗಳ ಸನ್ನೆಯಿಂದ ಮೂದಲಿಸತೊಡಗಿದರು... ಈ ಫಾರಿನರನ್ನು...

ಅವರು ಹಿಂತಿರುಗಿ ನೋಡಲೇ ಇಲ್ಲ...

PARAANJAPE K.N. said...

ಚಿತ್ರಾ
ನಿಮ್ಮಲ್ಲಿ ಅ೦ತಹ ಅಸಹಾಯಕರ ನೋವನ್ನು ಅರಿಯುವ, ಅವರ ಕಣ್ಣಿನಲ್ಲಿರುವ ಮುಗ್ಧ ಭಾವವನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇದೆಯಾದ್ದರಿ೦ದ ಆ ಬಡ ಹುಡುಗನಿಗೆ ಇಡ್ಲಿ ಕೊಡಿಸಿದಿರಿ, ಬೂದಿ ಮೆತ್ತಿಕೊ೦ದಿದ್ದ ಚಹಾ ಕೊಡುವ ಹುಡುಗನ ಮೊಗದ ಆಪ್ತತೆ ಗುರುತಿಸಿದಿರಿ. ಇನ್ನೊಬ್ಬರ ನೋವಿಗೆ, ನಲಿವಿಗೆ ಸ್ಪ೦ದಿಸುವ ಹೃದಯವಿದ್ದವರಿಗೆ ಮಾತ್ರ ಇದು ಅರಿವಿಗೆ ಬರುತ್ತದೆ. ನಮ್ಮ ಸುತ್ತಮುತ್ತ ಬಹುತೇಕ ಜನರಿಗೆ ಅ೦ತಹ ಸ್ಪ೦ದನೆಯ ಗುಣ ಇಲ್ಲವೇ ಇಲ್ಲ. ಒ೦ದು ಉದಾಹರಣೆ ಹೇಳುತ್ತೇನೆ. ನನ್ನ ಅತ್ಮಿಯರೊಬ್ಬರು ಶ್ರೀಮ೦ತರಿದ್ದಾರೆ. ತಮ್ಮ ಮಗುವನ್ನು ನೋಡಿಕೊಳ್ಳಲು ಆ ಮಗುವಿಗಿ೦ತ ಮುರುವರುಷ ದೊಡ್ದದಿರಬಹುದಾದ ಒ೦ದು ಹುಡುಗಿಯನ್ನು ಇಟ್ಟುಕೊ೦ಡಿದ್ದಾರೆ. ಬೇಕರಿ ಮು೦ದೆ ಕಾರು ನಿಲ್ಲಿಸಿ ತಮ್ಮ ಮಗುವಿಗೆ ice-cream ತಿ೦ಡಿತಿನಿಸು ಕೊಡಿಸುತ್ತಾರೆ. ಅದು ತಿನ್ನುತ್ತದೆ. ಆದರೆ ಅದರ ಜೊತೆಯೇ ಇರುವ ಆ ಕೆಲಸದಹುಡುಗಿಗೆ ಏನನ್ನು ಕೊಡುವುದಿಲ್ಲ. ಆ ಹುಡುಗಿ ಆಸೆಕಣ್ಣು ಗಳಿ೦ದ ಮಗುವಿನ ಕೈ ಬಾಯಿ ನೋಡುತ್ತಿದ್ದರೂ ಆ ಶ್ರೀಮ೦ತನಿಗೆ ಅರ್ಥವಾ ಗುವುದಿಲ್ಲ. ಹೀಗೆ ಜಗತ್ತಿನಲ್ಲಿ ಹೃದಯಶೂನ್ಯತೆ ಯುಳ್ಳ , ಮಾನವೀಯ ಅನುಕ೦ಪ ಕಡಿಮೆ ಇರುವವರೇ ಜಾಸ್ತಿ. ಇನ್ನು ಸ್ಲಂ ಡಾಗ್ ಚಿತ್ರದ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ ಅನ್ಸುತ್ತೆ.

ಚಿತ್ರಾ ಸಂತೋಷ್ said...

@ಪ್ರಕಾಶಣ್ಣ..
ಕೆಲವೇ ನಿಮಿಷಗಳ ಹಿಂದೆ ನಡೆದ ಘಟನೆಯನ್ನು ನೀವು ಹಂಚಿಕೊಂಡಿರಿ. ಹೌದು 'ಅವರು ಹಿಂದುರುಗಿ ನೋಡಲಾರರು'..ಅದು 'ನಮ್ಮವರಿಗೂ' ಗೊತ್ತು..ಆದರೂ ಅವರಿಗೊಂದು ಸೆಲ್ಯೂಟ್..ಅದು ನಮ್ಮಲ್ಲಿನ ದುರಂತ! ಭಿಕ್ಷೆ ಬೇಡೋ ಎಲ್ಲಾ ಮಕ್ಕಳಿಗೆ ಭಿಕ್ಷೆ ನೀಡಿ ಅನ್ನೋದು ತಪ್ಪಾದೀತು..ಯಾಕಂದ್ರೆ ಭಿಕ್ಷಾಟನೆ ಅನ್ನೋದು ಈಗ ಇಲ್ಲಿ ಹಣ ಗಳಿಸುವ ದಂಧೆಯಾಗಿಬಿಟ್ಟಿದೆ. ಆದರೆ, ನಾನು ಹೇಳಿದ ಈ ಎರಡು ನಿದರ್ಶನಗಳು ಖಂಡಿತ ದಂಧೆಯಿಂದ ಹೊರತಾಗಿ..ಬದುಕನ್ನು ಉಳಿಸಿಕೊಳ್ಳುವ ಪ್ರಶ್ನೆಯಾಗಿತ್ತು..ವಾಸ್ತವದ ಮುಖವಾಗಿತ್ತು ಅಲ್ಲವೇ? ನೋಡೋರಿಗೆ 'ಸಿಲ್ಲಿ' ಕಾಮೆಂಟು ಥರ ಹಾಕಿ, ಅಗಾಧ ಅರ್ಥವನ್ನೇ ಹೇಳಿಬಿಟ್ಟಿದ್ದೀಯಾ..ಥ್ಯಾಂಕ್ಸ್ ಪ್ರಕಾಶಣ್ಣ..
ಪ್ರೀತಿಯಿಂದ,
-ಚಿತ್ರಾ

ಚಿತ್ರಾ ಸಂತೋಷ್ said...

ಪರಾಂಜಪೆ ಅಣ್ಣ..

ನಂಗೆ ಬೇಡೋರನ್ನು ನೋಡಿದ್ರೆ ಸಿಟ್ಟುಬರುತ್ತೆ..ಮಕ್ಕಳು ಬೇಡಿದ ತಕ್ಷಣ ಕೈಗೆ ಹಾಕಲ್ಲ. ಆದ್ರೆ ಮನಸ್ಸನ್ನು ಕಲಕುವ ಇಂಥ 'ವಾಸ್ತವ ಮುಖ'ಗಳು ತುಂಬಾ ನೋವುಂಟುಮಾಡುತ್ತವೆ. ಅದೂ,....ಬೆಂಗಳೂರಿಗೆ ನಾ ಬಂದ ಹೊಸದರಲ್ಲಿ ಇಂಥ ಅಪರೂಪದ ದೃಶ್ಯಗಳು ನನಗೆ ತುಂಬಾ ನೋವು ಕೊಟ್ಟಿದ್ದವು. ಮಾನವೀಯತೆ ಅನ್ನೋ ಪದ 'ಮನುಷ್ಯನ ಬದುಕಿನ ಶಬ್ಧಕೋಶ'ದಿಂದ ಮರೆಯಾಗುವ ದಿನ ಬಹುದೂರವಿಲ್ಲವೇನೋ ಎಂಬ ಆತಂಕ ಕಾಡುತ್ತಿದೆ. ಹಸಿದನಿಗೆ ಅನ್ನ, ಬಾಯಾರಿದವನಿಗೆ ಒಂದು ತೊಟ್ಟು ನೀರು....ಇಂಥಹ ಮಾತುಗಳು ಹಳೆಯದಾದುವು ಎನಿಸಲ್ವೇ?
-ಪ್ರೀತಿಯಿಂದ,
ಚಿತ್ರಾ

ಹರೀಶ ಮಾಂಬಾಡಿ said...

'ಬೂದಿ ಬಾಲಕ, 'ಚಿಂದಿ' ಪುಟಾಣಿಗಳು ಎಲ್ಲರಿಗೂ ಸ್ಲಂ ಡಾಗ್ ಪ್ರಶಸ್ತಿ ಸಮಾಧಾನ ತಂದಿದೆ ಎಂಬರ್ಥದ ಚಿಂತನೆಗಳು ಇಂದು ನಡೆಯುತ್ತಿವೆ...ಯಾರಿಗೆ ಏನು ಸಿಕ್ಕರೆ, ಬಿಟ್ಟರೂ 'ಬೂದಿ ಬಾಲಕ, 'ಚಿಂದಿ ಪುಟಾಣಿಗಳ ಬಾಳಲ್ಲೂ ಆಶಾಜ್ಯೋತಿ ಕಾಣಲಿ ಎಂಬುದು ನನ್ನ ಹಾರೈಕೆ. ನಿಮ್ಮಂತೆ ಅವರ ಗುರುತಿಸುವಿಕೆ(ಪಾಸಿಟಿವ್ ಆಗಿ - ಮಸಾಲೆದೋಸೆ ತಿನ್ನಿಸಿದ್ದು) ಎಲ್ಲರಿಗೂ ಬರಲಿ..ಅಟ್ ಲೀಸ್ಟ್, ಸ್ವಲ್ಪ ಕ್ಷಣಕ್ಕದರೂ ಅವರಿಗೆ ಸಮಾಧಾನ ಸಿಗಲಿ

ತೇಜಸ್ವಿನಿ ಹೆಗಡೆ said...

ಚಿತ್ರಾ,

ಇಂತಹ ಘಟನೆಗಳು ಪ್ರತಿಯೊಬ್ಬರ ಜೀವನದಲ್ಲೂ ಒಂದೆಲ್ಲಾ ಒಂದು ಸಲ ನಡೆಯುತ್ತದೆ. ಮಾನವೀಯತೆ ಉಳ್ಳವರು ಮಾತ್ರ ಇದಕ್ಕೆ ಸ್ಪಂದಿಸಿ, ಉಳಿದವರು ಇಂತಹ ಮುಗ್ಧ ಮಕ್ಕಳನ್ನು ತಿರಸ್ಕಾರದಿಂದ ಕಾಣುತ್ತಾರಷ್ಟೇ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೇಂದ್ರ ಮಂತ್ರಿಯಾದ ಮಹಿಳಾ ಮಣಿ "ರೇಣುಕಾ ಚೌಧರಿ" ಪಬ್ ಭರೋ ಆಂದೋಲನಕ್ಕೆ ಕರೆಕೊಡವ ಬದಲು, ಬಚ್ಚೋಂಕೆ ದಿಲ್ ಭರೋ ಆಂದೋಲನ ಹಮ್ಮಿಕೊಂಡಿದ್ದರೆ ಅವರ ಸ್ಥಾನ-ಮಾನಕ್ಕೂ ಅರ್ಥಸಿಗುತ್ತಿತ್ತು. ಸ್ಥಾನವೇನೋ ಈಗಿನ ರಾಜಕಾರಣಿಗಳಿಗೆ ದುಡ್ಡಿಂದ ಸಿಗುವುದು. ಮಾನ ಮತ್ರ.....!!!!???

Anonymous said...

ಬಡತನ ಮತ್ತು ಅಕ್ಷರಹೀನತೆ - ನಮ್ಮ ದೇಶದ ಬಹುದೊಡ್ಡ ಸಮಸ್ಯೆಗಳು ಎಂದು "ಸ್ಲಂ" ಬರುವ ಮೊದಲು ನಮಗೆ ಈ ಮೊದಲು ಗೊತ್ತೇ ಇರಲಿಲ್ಲ, ಮತ್ತು ಈವರೆಗೂ ಯಾರೂ ಸ್ಪಂದಿಸಲೇ ಇಲ್ಲ. ಅಲ್ಲವೇ?

ನಿಮ್ಮ ಮಾತು ನನ್ನನ್ನು ಭಾವುಕನನ್ನಾಗಿಸುತ್ತದೆ, ಆದರೆ ಭಾವುಕತೆ ಈ ಸಮಸ್ಯೆಗಳಿಗೆ ಉತ್ತರಗಳಲ್ಲ ಎಂದು ದಿಗಿಲಾಗುತ್ತದೆ.

- ಸ್ಲಂಬಾಲ

PaLa said...

ಅಂತೂ ಆ ಹುಡುಗನಿಗೆ ತಿಂಡಿ ಕೊಡ್ಸಿ, ೧೧ ದಿನ ಮೊದ್ಲೆ ಮಕ್ಕಳ ದಿನಾಚರಣೆ ಆಚರಿಸಿದ್ರಿ.. ಪ್ರಕಾಶರು ಹೇಳಿದಂತೆ ದುಡ್ಡು ಕೊಡದೇ ಒಳ್ಳೇ ಕೆಲ್ಸ ಮಾಡಿದ್ರಿ.. ನಾನು ಆಫೀಸ್ ಬಸ್ ಕಾಯ್ತಾ ಹೊಸಕೆರೆ ಹಳ್ಳಿ ಸಿಗ್ನಲ್ ಹತ್ರ ಒಂದಿನ ನಿಂತಿದ್ದೆ. ಒಂದು ಚಿಕ್ಕ ಹುಡ್ಗ ಹುಡ್ಗೀರ್ ತರ ಲಂಗ ಹಾಕೊಂಡು ಕಂಕಳಲ್ಲಿ ಬಿದಿರಿನ ಕೋಲು ಸಿಕ್ಕಿಸ್ಕೊಂಡು, ಕುಂಟ್ತಾ, ಸಿಗ್ನಲ್ಲಲ್ಲಿ ನಿಂತ ವಾಹನಗಳ ಮುಂದೆಲ್ಲಾ ಕೈಚಾಚ್ತಾ ಇದ್ದ.. ಗ್ರೀನ್ ಸಿಗ್ನಲ್ ಬಂತು, ಇವ್ನು ಒಂದು ಮೂಲೆಗೆ ಬಂದು ಕಾಲನ್ನ ಬದಲಾಯಿಸಿಕೊಳ್ಳೋದೇ(ಯಾವ್ದೋ ಫಿಲ್ಮ್ ಕತೆ ಅಲ್ಲ, ನನ್ನ ಕಣ್ಣೆದುರೇ ನಡೆದಿದ್ದು, ನನ್ನ ಪಕ್ಕ ಒಬ್ಬ ಟ್ರಾಫಿಕ್ ಪೋಲೀಸ್ ಬೇರೆ ನಿಂತಿದ್ದ. ಇವ್ನು ಕಾಲು ಬದಲಾಯಿಸಿದ್ದು ನೋಡಿ ನಾನು ಪೋಲೀಸ್ ಕಡೆ ತಿರ್ಗಿ ನಕ್ಕೆ,, ಪೋಲೀಸಿನವ್ನು ಆ ಹುಡ್ಗನ್ನ ಅಟ್ಟಿಸ್ಕೊಂಡ್ ಹೋದ)!!!

Ittigecement said...

ಸ್ವತಂತ್ರ ಆದಾಗಿನಿಂದ ನಮ್ಮ ಸರಕಾರ..
ಬಡವರ ಬಗೆಗೆ ಏನೇನೋ ಕಾರ್ಯಕ್ರಮ ಹಾಕುತ್ತಲೇ ಇದೆ..
ಹಾಕುತ್ತಲೇ ಇರುತ್ತದೆ..

ಸ್ಲಮ್ ಡಾಗ್ ಅಂಥಹ ಸಿನೇಮಾಗಳು..
ಕೆಲವರಿಗೆ ಆಸೆಯ ಆಶಾಕಿರಣ ಹುಟ್ಟಿಸುತ್ತದೆ..

ಅಂಥಹ ಸಿನೇಮಾಗಳೂ ಮುಂದೆಯೂ ಬರುತ್ತದೆ...

ಅದಕ್ಕೆ ಪ್ರಶಸ್ತಿ ಬರುತ್ತದೆ..

ವಿಜಯೋತ್ಸವ ಆಚರಿಸಲಾಗುತ್ತದೆ..
ಸ್ಲಮ್ಗಳಲ್ಲಿಯೂ ಆಚರಿಸುತ್ತಾರೆ..

ಪರ ವಿರೋಧ ಚರ್ಚೆ ಸ್ವಲ್ಪ ದಿನ ನಡೆಯುತ್ತದೆ..

ಬೂದಿ ಹುಡುಗರು,ಚಿಂದಿ ಪುಟ್ಟಾಣಿಗಳು....
ವಿಜಯೋತ್ಸವದಲ್ಲಿ ಭಾಗವಹಿಸಿ..

ದಣಿದು ಮಲಗುತ್ತಾರೆ..
ಮರುದಿನ ಬೇಗನೇ ಎದ್ದು ದುಡಿಯಲು...

ತುಂಬಾ ಇಷ್ಟವಾಯಿತು ನಿಮ್ಮ ಬರಹ...
ಯಾವತ್ತಿನಂತೆ..
ಮನದಲ್ಲುಳಿಯಿತು...

ಅಭಿನಂದನೆಗಳು... ಚಿತ್ರಾ...

ಮಲ್ಲಿಕಾರ್ಜುನ.ಡಿ.ಜಿ. said...

ಮಾನವೀಯತೆ, ನೋವಿಗೆ ಸ್ಪಂದಿಸುವುದು, ಪರರ ಕಷ್ಟಕ್ಕೆ ಮರುಗುವುದು... ಇವೆಲ್ಲಾ ಇಲ್ಲದಿರುವುದೇ ನಿಜವಾದ ಬಡತನ.

shivu.k said...

ಪುಟ್ಟಿ,

ಇತ್ತೀಚೆಗೆ ನಿನ್ನ ಬರವಣಿಗೆ ತುಂಬಾ ಚೆನ್ನಾಗಿ ಬರುತ್ತಿದೆ...ಪಕ್ವವಾಗಿ ತುಂಬಾ ಅನುಭವದಿಂದ ಕೂಡಿದಂತಿದೆ...

ಬಡವರಾಗಲಿ...ಶ್ರೀಮಂತರಾಗಲಿ...ಮಾನವೀಯತೆ ಇರಬೇಕು.... ಮನುಷ್ಯನ ಕೆಲ ಮೌಲ್ಯವುಳ್ಳ ಅಂಶಗಳು ಎಲ್ಲರಲ್ಲೂ ಇರಬೇಕು ಅಂತ ನಾವೆಲ್ಲಾ ಬಯಸುತ್ತೇವೆ....ಆದರೆ ನಿಜ ಪ್ರಪಂಚ ನಾವಂದುಕೊಂಡಷ್ಟು ಚೆನ್ನಾಗಿಲ್ಲ.....ಅದಕ್ಕೆ ನಿನ್ನ ಅನುಭವ ಮತ್ತು ಬರವಣಿಗೆಯ ವಸ್ತುವೇ ಸಾಕ್ಷಿ....
ಹುಟ್ಟಿದ ಪ್ರತಿಯೊಬ್ಬನಿಗೂ ಬದುಕುವ ಬಾಳುವ ಹಕ್ಕು ದೇವರು ಕೊಟ್ಟಿರುತ್ತಾನೆ.....ಅದರೆ ನಮ್ಮ ನಿಜ ಸಮಾಜ ಎಲ್ಲಾ ನಿಭಂದನೆಗಳನ್ನು ಗೊತ್ತಿದ್ದೋ ಗೊತ್ತಿಲ್ಲದೊಯೋ, ಅವರವರ ಅನುಕೂಲಕ್ಕೋ ಮಾಡಿಕೊಂಡ ವಿಧಾನಗಳು..ಈ ರೀತಿ ಮಕ್ಕಳನ್ನು ಬೀದಿಗೆ ತರುತ್ತಿವೆ...ನಾವು ತಿನ್ನುವುದರಲ್ಲಿ ಒಂದು ತುತ್ತನ್ನು ಇಂಥವರಿಗೆ ಕೊಟ್ಟರೆ ನಾವೇವು ಹರೆಹೊಟ್ಟೆಯಾಗಲ್ಲ....ಅದಕ್ಕೆ ಮನಸ್ಸಿರಬೇಕು....ನಿನ್ನ ಲೇಖನದಲ್ಲಿ ಅದೆಲ್ಲಾ ಇದೆ....ಇದನ್ನು ಓದುತ್ತಾ....ಅನೇಕ ಬೀದಿ ಮಕ್ಕಳ, ಹೋಟಲಿನಲ್ಲಿ, ಕೂಲಿ ಕೆಲಸ ಮಾಡುವ ಹುಡುಗರ ಚಿತ್ರಗಳು ಕಣ್ಣ ಮುಂದೆ ಬಂದವು......good ಇಂಥವು ಇನ್ನಷ್ಟು ನಿನ್ನಿಂದ ಬರಲಿ ಅಂತ ನಿರೀಕ್ಷಿಸುತ್ತೇನೆ....

sunaath said...

ಚಿತ್ರಾ,
ಸಂವೇದನಾಶೀಲ ಮನಸ್ಸು ನಿನ್ನದು. ಅದಕ್ಕಾಗಿಯೇ, ಬೂದಿಬಾಲಕನಿಗಾಗಿ ಮರುಗಿದೆ.
ಮಹಾತ್ಮಾ ಗಾಂಧಿಯವರ ಮೆಚ್ಚಿನ ಭಜನೆಯಲ್ಲಿಯೂ ಅದನ್ನೇ ಹೇಳಿದ್ದಾರಲ್ಲವೆ?:-"ವೈಷ್ಣವ ಜನತೊ ತೇನೆ ಕಹಿಯೆ ಜೋ ಪೀಡ ಪರಾಯಿ ಜಾಣೇರೆ"

ವಿ.ರಾ.ಹೆ. said...

:( :(

ಶ್ರೀನಿಧಿ.ಡಿ.ಎಸ್ said...

ಚಂದ ಬರೆದಿದ್ದೀಯ. ಹಮ್...

Anonymous said...

ಚಿತ್ರಕ್ಕ
ನಿಮ್ಮ ಮನಸ್ಸು ಎಷ್ಟು ಮ್ರದು ಅಂತ ಈ ಲೇಖನ ಓದಿದಾಗಲೇ ಗೊತ್ತಾಯ್ತು. ನಿಜ ಅಕ್ಕ ಇಂಥಹ ಮಕ್ಕಳನ್ನ ನೋಡಿದಾಗ ಮನಸ್ಸು ತುಂಬಾ ಮರುಗುತ್ತೆ ಈ ಮಕ್ಕಳನ್ನೆಲ್ಲಾ ಒಂದೇ ಕಡೆ ಸೇರಿಸಿ ಅವರಿಗೆ ವಿದ್ಯಾಬ್ಯಾಸ ಕೊಡಿಸುವಂಥ ಶಕ್ತಿ ನಮಗಿರಬೇಕಿತ್ತು ಅನ್ಸುತ್ತೆ. ನಿಮ್ಮ ಮನಸಂತೆ ಎಲ್ಲರಿಗೂ ಮರುಗೋ ಮನಸನ್ನ ದೇವರು ಕೊಟ್ಟರೆ ಇಂಥಹ ಒಂದು ದಾಖಲೆನ ನಾವೆಲ್ಲ ಸೇರಿ ಮಾಡಬಹುದಲ್ಲವೇ

Anonymous said...

chitra i am ur fan. i like ur writings.
-mahesh from mysore
mr2008918@yahoo.com.sg

Santhosh Rao said...

ಚಿತ್ರ ಮೇಡಮ್ಮು ..

ಬರಹ ಚೆನ್ನಾಗಿದೆ ..ಊರೂರು ಸುತ್ತುವಾಗ ನೀವು ಕಂಡ ಬೂದಿ ಬಾಲಕರು ತುಂಬಾ ಸಿಕುತ್ತಾರೆ ..

ಇನ್ನು ಮುಂದೆ ಹೋದರೆ .. ಹೊಟ್ಟೆ ಮತ್ತು ಬೆನ್ನಿಗೆ ವ್ಯತ್ಯಾಸ ಇಲ್ಲದವರು .. ಒಂದೇ ತೊಟ್ಟಿಯಲ್ಲಿ ತುಂಡು ರೊಟ್ಟಿಗಾಗಿ ನಾಯಿ ಮತ್ತು ಮನುಷ್ಯ ಕಿತ್ತಾಡುವುದು..

ಅಂದ ಹಾಗೆ ಹಸಿದವನಿಗೆ ಊಟ ಕೊಡುವುದರಲ್ಲಿ ತಪ್ಪಿಲ್ಲ But...

Give a man a fish and he will eat for a day. Teach him how to fish and he will eat for a lifetime." ...

Laxman (ಲಕ್ಷ್ಮಣ ಬಿರಾದಾರ) said...

ಹಲೋ ಚಿತ್ರಾ,
ನಿಮ್ಮ ಈ ಬರಹ ನನಗೆ ತುಂಬಾ ಖೇದವನ್ನು ಉಂಟು ಮಾಡಿತು. ನಾನು ಇದಕ್ಕಾಗಿ ನನ್ನ ಬ್ಲಾಗ್ ಪ್ರಾರಂಭ ಮಾಡಿದ್ದು. www.nanisaha.blogspot.com ನಾನಿಸಾಹ ಅಂದರೆ (ನಾನು ನಿನಾದರೆ ಮತ್ತು ಸಾವಿಗೆ ಒಂದು ದಿನ ಹತ್ತಿರ) . ಅರ್ಥ : ನಾನು ಆ ಬಾಲಕನ ಸ್ಥಾನದಲ್ಲಿದ್ದರೆ ನಾನು ಏನು ನಿರಿಕ್ಷಿಸುತ್ತಿದ್ದೆನೊ ಅದನ್ನು ನಾವು ಮಾಡಬೇಕು. (Swaping Each other and think.) ಮತ್ತು ಒಂದು ದಿನ ಕಳೆದಾಗ ನಮ್ಮ ಸಾವು ನಮಗೆ ಒಂದು ದಿನ ಹತ್ತಿರವಾಗುತ್ತದೆ ಅಂದ್ರೆ ನಮ್ಮ ಜೀವನದ ಸೇವೆಯ ಒಂದು ದಿನ ಕಳೆದು ಹೊಗುತ್ತದೆ ಅದರೊಳಗೆ ನಾವು ಏನದರೂ ಮಾದಬೇಕು. ನನಗೆ ಸರಿಯಾಗಿ ನನ್ನ ಅನಿಸಿಕೆಗಳನ್ನ ಹೇಳಿಕೊಳ್ಳಲು ಬರುವದಿಲ್ಲ.
ಅದಕ್ಕೆ ನನ್ನ ಬ್ಲಾಗಿನಲ್ಲಿ ಚಿತ್ರಗಳನ್ನ ಹಾಕಿದ್ದು. ಬರೆಯಲು ಪ್ರಯತ್ನಿಸಿದ್ದೆನೆ. ಒಂದುಸಲ ಮತ್ತೋಮ್ಮೆ ನನ್ನ ಬ್ಲಾಗ ವಿಕ್ಷಿಸಿ.
ಇಂತಿ
ಲಕ್ಷ್ಮಣ
http://www.prajavani.net/Archives/mar012006/4604220060301.php
http://www.prajavani.net/Archives/apr062005/112212005406.php

Laxman (ಲಕ್ಷ್ಮಣ ಬಿರಾದಾರ) said...

ಹಲೋ ಚಿತ್ರಾ,
ನಿಮ್ಮ ಈ ಬರಹ ನನಗೆ ತುಂಬಾ ಖೇದವನ್ನು ಉಂಟು ಮಾಡಿತು. ನಾನು ಇದಕ್ಕಾಗಿ ನನ್ನ ಬ್ಲಾಗ್ ಪ್ರಾರಂಭ ಮಾಡಿದ್ದು. www.nanisaha.blogspot.com ನಾನಿಸಾಹ ಅಂದರೆ (ನಾನು ನಿನಾದರೆ ಮತ್ತು ಸಾವಿಗೆ ಒಂದು ದಿನ ಹತ್ತಿರ) . ಅರ್ಥ : ನಾನು ಆ ಬಾಲಕನ ಸ್ಥಾನದಲ್ಲಿದ್ದರೆ ನಾನು ಏನು ನಿರಿಕ್ಷಿಸುತ್ತಿದ್ದೆನೊ ಅದನ್ನು ನಾವು ಮಾಡಬೇಕು. (Swaping Each other and think.) ಮತ್ತು ಒಂದು ದಿನ ಕಳೆದಾಗ ನಮ್ಮ ಸಾವು ನಮಗೆ ಒಂದು ದಿನ ಹತ್ತಿರವಾಗುತ್ತದೆ ಅಂದ್ರೆ ನಮ್ಮ ಜೀವನದ ಸೇವೆಯ ಒಂದು ದಿನ ಕಳೆದು ಹೊಗುತ್ತದೆ ಅದರೊಳಗೆ ನಾವು ಏನದರೂ ಮಾದಬೇಕು. ನನಗೆ ಸರಿಯಾಗಿ ನನ್ನ ಅನಿಸಿಕೆಗಳನ್ನ ಹೇಳಿಕೊಳ್ಳಲು ಬರುವದಿಲ್ಲ.
ಅದಕ್ಕೆ ನನ್ನ ಬ್ಲಾಗಿನಲ್ಲಿ ಚಿತ್ರಗಳನ್ನ ಹಾಕಿದ್ದು. ಬರೆಯಲು ಪ್ರಯತ್ನಿಸಿದ್ದೆನೆ. ಒಂದುಸಲ ಮತ್ತೋಮ್ಮೆ ನನ್ನ ಬ್ಲಾಗ ವಿಕ್ಷಿಸಿ.
ಇಂತಿ
ಲಕ್ಷ್ಮಣ
http://www.prajavani.net/Archives/mar012006/4604220060301.php
http://www.prajavani.net/Archives/apr062005/112212005406.php

ಚಿತ್ರಾ said...

ಚಿತ್ರಾ,
ಓದುತ್ತಾ ಕಣ್ಣು ತುಂಬಿದ್ದೇ ತಿಳಿಯಲಿಲ್ಲ !ಮನತಟ್ಟುವಂತೆ ಬರೆದಿದ್ದೀರಾ.ನಮ್ಮಲ್ಲಿ ಇಂಥ ಮಕ್ಕಳ ಪರಿಸ್ಥಿತಿ ಸುಧಾರಣೆಯಾಗುವುದು ಅಸಾಧ್ಯವೆನೋ ಎಂದೆನಿಸಿಬಿಡುತ್ತದೆ. ಟ್ರೈನ್ ನಲ್ಲಿ ಹೋಗುವಾಗ, ಪ್ರಯಾಣಿಕರು ಹರಡಿದ ಕಸವನ್ನೆಲ್ಲ ಪುಟ್ಟ ಬಾಲಕನೊಬ್ಬ ತನ್ನ ಅಂಗಿಯಿಂದ ಗುಡಿಸಿ ಸ್ವಚ್ಚ ಮಾಡಿ ಮತ್ತದೇ ಅಂಗಿ ಹಾಕಿಕೊಂಡು ಅವರೆದುರು ಕೈಯೊಡ್ಡಿದ ದೃಶ್ಯ ನೆನಪಾಗಿ ಸಂಕಟವಾಯಿತು !

ಕನಸು said...

ನಿಮ್ಮ ಬರಹದ ಶೈಲಿ ತುಂಭಾ ಚೆನ್ನಾಗಿದೆ.

ರಾಘವೇಂದ್ರ ಕೆಸವಿನಮನೆ. said...

ಚಿತ್ರಾ,
ಬರಹ ಬಹಳ ಸತ್ವಯುತವಾಗಿ ಮೂಡಿಬಂದಿದೆ.ಸಣ್ಣ ಪಟ್ಟಣ, ಮಹಾನಗರಗಳಲ್ಲಿ ಇಂತಹ ನಿಸ್ಸಹಾಯಕ ಮುಖಗಳನ್ನು ಕಂಡಾಗ ನಮ್ಮ ತಥಾಕಥಿತ ನಾಗರೀಕ ಸಮಾಜವನ್ನು ಅವು ಅಣಕಿಸುತ್ತಿರುವಂತೆ ಅನಿಸುತ್ತದೆ.
ಭಿಕ್ಷೆ ಹಾಕುವವರಿಂದ ಬೈಗುಳು, ನಿಂದನೆ, ತಿರಸ್ಕಾರ ಎದುರಿಸುತ್ತ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಒಂದೆಡೆಯಾದರೆ, ದಿನ ಬೆಳಗಾದರೆ ಬಡಿದು ಭಿಕ್ಷೆಗೆ ಅಟ್ಟುವ ತಂದೆತಾಯಿಗಳ ಹಿಂಸೆ ಇನ್ನೊಂದೆಡೆ. ಈ ಇಬ್ಬಂದಿಯಲ್ಲಿ ಆ ಪುಟ್ಟ ಮಕ್ಕಳ ಕನಸುಗಳು ಕಮರಿಹೋಗುವುದು ಯಾರ ಗಮನಕ್ಕೂ ಬರುವುದಿಲ್ಲ!
ಇನ್ನು, ಸರ್ಕಾರದ ನೆರವು... (?), ಭರವಸೆ ಸೂರು.. ಇವೆಲ್ಲ ಕನ್ನಡಿಯೊಳಗಿನ ಗಂಟೇ ಸರಿ..
- ರಾಘವೇಂದ್ರ ಕೆಸವಿನಮನೆ.

Dr.Gurumurthy Hegde said...

ಆತ್ಮೀಯ ಚಿತ್ರಾ,
ಬರಹ ಮನಸ್ಸಿಗೆ ತಟ್ಟಿತು,
ಹೀಗೆಯೇ ಬರೆಯುತ್ತಿರಿ, ಬರುತ್ತಿರುತ್ತೇನೆ.

ಅಂತರ್ವಾಣಿ said...

ಚಿತ್ರಾ,

ಈ ರೀತಿ ಬರೆದು ನನ್ನ ಕಣ್ಣಲ್ಲಿ ನೀರು ತರಿಸಿದರೆ ನಿಮಗೆ ಸಂತೋಷನಾ?

ಚಿತ್ರಾ ಸಂತೋಷ್ said...

ಒಂದು ವಾರದಿಂದ ಬ್ಲಾಗ್ ಕಡೆ ತಲೆಹಾಕಲಿಲ್ಲ..ಕಾರಣ: ತುಂಬಾ ಕೆಲಸವಿತ್ತು.

@ಹರೀಶ್ ಸರ್ ...ಸ್ಲಂಡಾಗ್ ಗೆ ಆಸ್ಕರ್ ಸಿಕ್ಕರೇನು? ಬೂದಿಬಾಲಕರ ಕಣ್ಣಲ್ಲಿ 'ಜೀವನ ಜ್ಯೋತಿ' ಕಾಣಲಿಲ್ಲವಲ್ಲಾ ಎನ್ನೋ ಕೊರಗೂ ನನ್ನದೂ ಸಹ.

@ತೇಜಕ್ಕ...ನಿಜವಾಗಲೂ ನೀವು ನಿಜವನ್ನೇ ಹೇಳಿದ್ದೀರಿ..ರೇಣುಕಾ ಚೌಧುರಿ "ಬಚ್ಚೋಂಕೆ ದಿಲ್ ಭರೋ" ಆಂದೋಲನ ಹಮ್ಮಿಕೊಳ್ಳಬಹುದಿತ್ತು..ಆದರೆ ಅವರಿಗೆ ತಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಎನ್ನುವುದನ್ನೇ ಮರೆತುಬಿಟ್ಟಿದ್ದಾರೆ. ಬಹುಷಃ ಬಚ್ಚೋಂಕೆ ದಿಲ್ ಭರೋ ಆಂದೋಲನದಿಂದ ಇಷ್ಟು ಮಟ್ಟದ ಪ್ರಚಾರ ಸಿಗುತ್ತಿರಲಿಲ್ಲವೇನೋ?!

@ಪಾಲಚಂದ್ರ..ಹೌದು..ನೀವು ನೋಡಿರುವ ಘಟನೆಗಳು ನನ್ನ ಅನುಭವಕ್ಕೂ ಬಂದಿದೆ. ಭಿಕ್ಷಾಟನೆ ಸುಲಭವಾಗಿ ಹಣ ಗಳಿಸುವ ದಂಧೆಯಾಗಿರುವುದರಿಂದ ಇದನ್ನೇ ಉದ್ಯೋಗ ಅಂದುಕೊಂಡವರು ಎಷ್ಟೋ ಜನ. ಆದರೆ ಎಲ್ಲೋ ಒಂದೆಡೆ ವಾಸ್ತವವನ್ನು ಕಣ್ಣಿಗೆ ಕಟ್ಟುವ ಚಿತ್ರಗಳೂ ಸಿಗುತ್ತವೆ. ಪ್ರತಿಕ್ರಿಯೆಗೆ ವಂದನೆಗಳು.
@ಮಲ್ಲಿಯಣ್ಣ ಹೀಗೇ ಬರುತ್ತಿರಿ..ನಿಮಗಿದೋ ನನ್ನ ಕೃತಜ್ಞತೆಗಳು.

@ಪ್ರಕಾಶ್ ಸರ್.".ಬೂದಿ ಹುಡುಗರು,ಚಿಂದಿ ಪುಟ್ಟಾಣಿಗಳು....
ವಿಜಯೋತ್ಸವದಲ್ಲಿ ಭಾಗವಹಿಸಿ..

ದಣಿದು ಮಲಗುತ್ತಾರೆ..
ಮರುದಿನ ಬೇಗನೇ ಎದ್ದು ದುಡಿಯಲು.." ನಿಮ್ಮ ಅರ್ಥಪೂರ್ಣ ಮಾತಿಗೆ ನನ್ನದೂ ಸಾಥ್. ಹೌದು..'ಬೂದಿಬಾಲಕರು 'ಬದುಕೇ ಹೀಗೇ...

@ಸುನಾಥ್ ಸರ್..ಶರಧಿಗೆ ಭೇಟಿಕೊಟ್ಟಿದ್ದಕ್ಕೆ ವಂದನೆಗಳು. ನೀವು ಬರೆದ ಒಂದು ಸಾಲು ನಂಗೆ ತುಂಬಾ ಕಲಿಸಿಕೊಡುತ್ತೆ...

@ಶ್ರೀನಿಧಿ..ಅಪರೂಪಕ್ಕೆ 'ಶರಧಿಗೆ' ಭೇಟಿ ಕೊಟ್ಟಿದ್ದಕ್ಕೆ ನಾ ಧನ್ಯಳಾದೆ ಮಾರಾಯ.

@ವಿಕಾಸ್..ಈ ಸಿಂಬಲ್ಲುಗಳೆಲ್ಲ ಅರ್ಥವಾಗಲ್ಲ..ಆದ್ರೂ ಬರಹ ನೀವು ಇಷ್ಟಪಟ್ಟಿದ್ದಕ್ಕೆ ವಂದನೆಗಳು. ಬರ್ತಾ ಇರಿ.

-ಪ್ರೀತಿಯಿಂದ,
ನಿಮ್ಮ ಚಿತ್ರಾ

ಚಿತ್ರಾ ಸಂತೋಷ್ said...

@ಸ್ಲಂಬಾಲ ಎಂದು ಪ್ರತಿಕ್ರಿಯೆ ಹಾಕಿದ್ದೀರಿ..ಆದರೆ ಅದೇ ಹೆಸರಿನಿಂದ ಕರೆಯಾಕೆ ಮನಸ್ಸು ಒಪ್ಪುತ್ತಿಲ್ಲ..ಆದರೆ ನಿಮ್ಮ ಪ್ರತಿಕ್ರಿಯೆಗೆ ನಾವು ಉತ್ತರಿಸಬೇಕಾದರೆ ಹಾಗೇ ಕರೆಯುವುದು ಅನಿವಾರ್ಯ.ನೀವಂದಿದ್ದು ನಿಜ. ಬಡತನ ಮತ್ತು ಅಕ್ಷರಹೀನತೆ ಬಹುದೊಡ್ಡ ಸಮಸ್ಯೆಗಳು. ಇದು ಎಲ್ಲರಿಗೂ ಗೊತ್ತು. ಅಭಿವೃದ್ಧಿ ಮಂತ್ರ ಘೋಷಿಸುತ್ತಿರುವ ಸರ್ಕಾರಗಳಿಗೂ ಗೊತ್ತು. ಆದರೆ ಏನೂ ಮಾಡಲೂ ಅಸಾಧ್ಯ. ಅದನ್ನು ಆರೋಪಿಸುವುದೂ ಮೂರ್ಖತನ ಎನಿಸುತ್ತದೆ. ನಂಗನಿಸುವುದೂ ಇಷ್ಟೇ: ಒಪ್ಪೊತ್ತಿನ ಅನ್ನಕ್ಕೂ ಕಷ್ಟಪಡುವ 'ಬೂದಿಬಾಲಕ'ರಿಗೆ ಹೊಟ್ಟೆಗೆ ಹಿಟ್ಟು ಸಿಗಲಿ. ಬದುಕನ್ನು ರೂಪಿಸಿಕೊಳ್ಳುವ ಶಕ್ತಿ ಬರಲಿ ಅಂತ. ಪ್ರೀತಿಯಿಂದ ಶರಧಿಗೆ ಬಂದಿದ್ದಕ್ಕೆ ಅಭಿನಂದನೆಗಳು. ಹಾಗೇ ಬರುತ್ತಿರಿ.
ಪ್ರೀತಿಯಿಂದ,
ಚಿತ್ರಾ

ಚಿತ್ರಾ ಸಂತೋಷ್ said...

ಪ್ರೀತಿಯ ಶಿವಣ್ಣ..
ನಿಮ್ಮ ಪ್ರತಿಕ್ರಿಯೆ ಓದುತ್ತಿದ್ದಂತೆ ನಮ್ಮ ಬಾಗೇವಾಡಿ ಎಂಬ ಪಿ.ಟಿ. ಮೇಷ್ಟ್ರುರು ಹೇಳುತ್ತಿದ್ದ 'ಹಂಚಿ ಉಂಡರೆ ಹಸಿವಿಲ್ಲ' ಮಾತು ನೆನಪಾಯಿತು. ಜೀವನಪ್ರೀತಿ, ಮಾನವೀಯತೆ ಎಲ್ಲವನ್ನೂ ನಾವು ನಿರೀಕ್ಷಿಸುವವರು ಹೌದು..ಪ್ರಪಂಚ! ಸುತ್ತಲಿನ ಪ್ರಪಂಚನ ಕಣ್ನುಬಿಟ್ಟು ನೋಡಿದರೆ..ಮಾನವೀಯತೆ ಅನ್ನೋ ಶಬ್ಧವೇ ಢಾಳಾಗಿ ಕಾಣಿಸುತ್ತೆ. ಎಂಥ ದುರಂತ ಅಲ್ಲವೇ? ಬರವಣಿಗೆ ಮೆಚ್ಚಿದ್ದಕ್ಕೆ ನಿಮಗೆ ತುಂಬಾ ತುಂಬಾ ..'ಪ್ರೀತಿ, ಪ್ರೀತಿ..ಪ್ರೀತಿ'!

@ಪ್ರೀತಿಯ ತಂಗಿ ರೋಹಿಣಿ..ಬರವಣೀಗೆ ಮೆಚ್ಚಿದ್ದಕ್ಕೆ ವಂದನೆಗಳು. ನಾ ತುಂಬಾ ಮೃದುನಾ? ಅಯ್ತೋ ದೇವ್ರೇ..ನಿನ್ನಷ್ಟು ಅಲ್ಲ ಅನಿಸುತ್ತೆ! ಆಗಾಗ ಬರುತ್ತಿರಿ. ನಿನ್ನಕ್ಕನ ಬರಹಗಳನ್ನು ಗಮನಿಸ್ತಾ ಇರು.

@ಸಂತೋಷ್..ನಿಮ್ಮ ಪ್ರತಿಕ್ರಿಯೆ ತುಂಬಾ ಇಷ್ಟವಾಯಿತು. ನನಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ಒಳ್ಳೆ ಪಾಠವಾದೀತು.

@ಮಹೇಶ್..ಶರಧಿಗೆ ಭೇಟಿ ನೀಡಿದ್ದಕ್ಕೆ..ನಾನೇನೂ ಮಹಾ ಬರಹಗಾಳಲ್ಲ..ಆದರೂ ಬರಹಗಳನ್ನು ಮೆಚ್ಚಿ ನನ್ನ ಬರಹಗಳ ಅಭಿಮಾನಿಯಾಗಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಕಣ್ರೀ. ಹೀಗೇ ಬರುತ್ತಾ ಇರುತ್ತೀರಿ ಅಂದುಕೊಂಡಿದೀನಿ.

-ಪ್ರೀತಿಯಿಂದ, ನಿಮ್ಮ ನಿರೀಕ್ಷೆಯಲ್ಲಿ..
ಚಿತ್ರಾ

ಚಿತ್ರಾ ಸಂತೋಷ್ said...

@ಲಕ್ಷ್ಮಣ್ ಸರ್..
ಶರಧಿಗೆ ಭೇಟಿ ಕೊಟ್ಟು ಪ್ರೋತ್ಆಹಿಸಿದ್ದಕ್ಕೆ ಧನ್ಯವಾದಗಳು ಸರ್. ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟು, ಪ್ರತಿಕ್ರಿಯಿಸಿದ್ದೀನಿ. ಅನಿಸಿಕೆಗಳನ್ನು ಹೇಗೇ ಅಂದುಕೊಳ್ಳುತ್ತಿರೋ ಹಾಗೇ ಬರೆದುಬಿಡಿ..ಹೇಗೇ ಇದ್ದರೂ ನಾವು ಓದ್ತೀವಿ. ಬರೆಯಿರಿ..ಶುಭವಾಗಲಿ..

@ಗುರುಮೂರ್ತಿ ಹೆಗಡೆ ನಮಸ್ಕಾರ...ಶರಧಿಗೆ ಸ್ವಾಗತ. ಮತ್ತೆ ಬನ್ನಿ..ಕಾಯುತ್ತಿರುತ್ತೇನೆ.

@ರಾಘವೇಂದ್ರ, ಕನಸು, ಚಿತ್ರಾ..ಮೆಚ್ಚುಗೆಗೆ ಧನ್ಯವಾದಗಳು. ಮತ್ತೆ ಬರುತ್ತೀರಿ ಅಲ್ವಾ? ಬರಲೇಬೇಕು...

@ಜಯಶಂಕರ್..ಏನ್ರೀ ಕಣ್ಣಲ್ಲಿ ನೀರು..ಛೇ!ಛೇ! ....(:) ಕ್ಷಮಿಸಿ..

ಮತ್ತೊಮ್ಮೆ, ಮಗದೊಮ್ಮೆ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ನೆನೆಕೆಗಳು, ಬೊಗಸೆ ತುಂಬಾ ಪ್ರೀತಿನಾ ಅರ್ಪಿಸುವ..
-ಚಿತ್ರಾ

Sushrutha Dodderi said...

ಒಳ್ಳೇ ರೈಟಪ್ಪು ಡುಮ್ಸ್..

ಚಿತ್ರಾ ಸಂತೋಷ್ said...

ಶುಶ್ರುತಣ್ಣ..ಥ್ಯಾಂಕ್ಯೂ..(:)
-ಚಿತ್ರಾ

Madhu said...

chitra

enendu helali, enu helalu aguthilla astu chennagi barediddira......