Wednesday, January 14, 2009

ಕಂಡಿದ್ದು..ಕೇಳಿದ್ದು...!

ಇದೇ ಮೊನ್ನೆ ಮೊನ್ನೆ ಕೇಳಿದ್ದು ..ಕಂಡಿದ್ದು..ಏನಾದ್ರೂ ಬ್ಲಾಗಲ್ಲಿ ಹಾಕೋಣ ಅಂದಾಗ ಫಕ್ಕನೆ ತಲೆಯಲ್ಲಿ ಏನೂ ಹೊಳೆಲಿಲ್ಲ..ಹೊಳೆದಿದ್ದು ಇಷ್ಟೇ..ಪುಕ್ಸ್ಸಟ್ಟೆಯಾಗಿ..!

ಬ್ಯೂಟಿಪಾರ್ಲರ್ಗೂ ಗ್ರಾಹಕರ ಕೊರತೆ!
"ಈ ಬಾರಿ ರೆಂಟ್ ಕೊಡಕ್ಕೆ ಕಾಸಿಲ್ಲ ಮೇಡಂ" ಅಂದ ಬ್ಯೂಟಿ ಪಾರ್ಲರ್ ಮೇಡಂ ಒಬ್ರು.. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ತಮಗೂ ತಟ್ಟಿದೆ ಅನ್ನೋದನ್ನು ವಿವರಿಸಿಬಿಟ್ಟರು. ನಮ್ಮನೆ ಪಕ್ಕನೆ ಇರುವ ಬ್ಯೂಡಿಪಾರ್ಲರ್ ಆಂಟಿ, ಇಷ್ಟೊಂದು ತೊಂದರೆ ಆಗುತ್ತೆ ಅಂಥ ಕನಸಲ್ಲೂ ಅಂದುಕೊಂಡಿರಲಿಲ್ಲ ಅಂತೆ. ಅದೇ ಐಟಿ ಹುಡುಗೀರು, ಹಾಗೇ ದೊಡ್ಡ ಜಾಬ್ ನಲ್ಲಿರುವ ಹುಡುಗಿಯರು ಪ್ರತಿ ವಾರ ಫೇಶಿಯಲ್ ಮಾಡಿಸಿಕೊಳ್ಳ್ತಾ ಇದ್ರು. ಆದ್ರೆ ಈಗ ಬರೋದೇ ಕಡಿಮೆ. ಕೆಲ ಕಂಪನಿಯಲ್ಲಿ ಕೆಲಸದಿಂದಲೇ ಕಿತ್ತುಹಾಕಿಬಿಟ್ಟಿದ್ದಾರಂತೆ..ಹಾಗೆ ರೂಮ್ ಖಾಲಿ ಮಾಡಿಕೊಂಡು ಊರಿಗೆ ಹೋಗಬ್ಬಿಟ್ಟಿದ್ದಾರೆ. ಈ ಐಬ್ರೋ (೧೫ ರೂ)ಮಾಡಿಸೋಕೆ ಬಂದ್ರೆ..ಎಷ್ಟು ಜನ ಬಂದ್ರೂ ಅಷ್ಟೇ. ಈ ಬಾರಿಗೆ ಬಾಡಿಗೆ ಕಟ್ಟಕೆ ಕಷ್ಟ ಆಗಿಬಿಟ್ಟಿದೆ..ಮನೆಯಲ್ಲಿರುವವರು ಬ್ಯೂಟಿಪಾರ್ಲರ್ ಹೋಗೋ ಕುರಿತು ಅಷ್ಟೊಂದು ತಲೆಕೆಸಿಕೊಳ್ಳಲ್ಲ..ನೋಡಿ ಈ ಕ್ರೈಸ್ ಸಿನಿಂದ ನಾವೂ ಬೀದಿಗೆ ಬರುವಂತಾಗಿದೆ ಎಂದು ತಲೆಚಚ್ಚಿಕೊಳ್ತಾ ಇದ್ರು.

ಯುವಜನರೆಂದರೆ ಗೂಳಿಗಳ ತರ!
ಮೊನ್ನೆ ಮೊನ್ನೆ ಪ್ರೆಸ್ ಕ್ಲಬ್ನಲ್ಲಿ ವಿದ್ಯಾರ್ಥಿಗಳ ಪಡೆಯೊಂದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವ ಕುರಿತು ಪತ್ರಿಕಾಗೋಷ್ಠಿ ಕರೆದಿತ್ತು. ಎಲ್ಲಾ ಸ್ನಾತಕೋತ್ತರ, ಸಂಶೋಧನಾ ವಿದ್ಯಾರ್ಥಿಗಳು. ತಮ್ಮ ಬೇಡಿಕೆಗಳು, ಸರ್ಕಾರದ ವೈಫಲ್ಯತೆ, ಸರ್ಕಾರದ ವಿರುದ್ಧ ಒಂದಿಷ್ಟು ಟೀಕೆಗಳು, ತಮ್ಮ ನಿರೀಕ್ಷೆ, ವಿದ್ಯಾರ್ಥಿಗಳ ಪಾಡು, ವಿವಿಗಳಲ್ಲಿರುವ ಭ್ರಷ್ಟಾಸುರರ ಕುರಿತೆಲ್ಲ ಮಾತಾಡಿದ್ದೇ ಮಾತಾಡಿದ್ದು. ಅವರಿಗೆ ನೆರವೆಂಬಂತೆ ಕೆಲವರು 'ದೊಡ್ಡ'ವರು ಕೂಡ ಪತ್ರಿಕಾಗೋಷ್ಠಿಗೆ ಸಾಥ್ ನೀಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತಾಡ್ತಾ ಮಾತಾಡ್ತಾ ಪಿತ್ತ ನೆತ್ತಿಗೇರಿಸಿಕೊಂಡವ ವಿದ್ಯಾರ್ಥಿಯೊಬ್ಬ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದು ಹೇಗೇ ಗೊತ್ತಾ? "ಯುವಕರಂದ್ರೆ ಹೇಗಿರ್ತಾರೆ ಅಂತ ನಿಮಗೂ ಗೊತ್ತಲ್ವಾ? ಗೂಳಿ .....ಗೂಳಿಗಳ ಥರಾ..ಒಂದು ಬಾರಿ ಎದ್ದು ಮತ್ತೆ ತಿರುಗಿ ನೋಡೋರಲ್ಲ..ಗೂಳಿಗಳು ಹೊಲಕ್ಕೆ ನುಗ್ಗಿದ್ರೆ ಏನಾಗುತ್ತೆ? ಹಾಗೇ ಆಗುತ್ತೆ..ಹಾಗಾಗಿ ಸರ್ಕಾರ ಆದಷ್ಟು ಬೇಗ ನಮ್ ಬೇಡಿಕೆಗಳಿಗೆ ಸ್ಪಂದಿಸೋದು ಒಳಿತು" ಎಂದು ಬಿಸಿರಕ್ತದ ತರುಣ ಸರ್ಕಾರಕ್ಕೆ ಬೆದರಿಕೆ ಹಾಕಿಬಿಟ್ಟ!

9 comments:

sunaath said...

ಈಗಿನ ತರುಣರನ್ನು ಇಷ್ಟು irresponsible ಗೂಳಿಗಳನ್ನಾಗಿ ಮಾಡಿದವರು ನಮ್ಮ ರಾಜಕಾರಣಿಗಳು. ಈಗ ಬಿತ್ತಿದ್ದನ್ನು ಬೆಳೆಯುತ್ತಿದ್ದಾರೆ.

shivu said...

ಚಿತ್ರಾ,

ಅರ್ಥಿಕ ಬಿಕ್ಕಟ್ಟು ಎಲ್ಲಾ ರಂಗದಲ್ಲೂ ತನ್ನ ಬಿಸಿ ತೋರಿಸಿದೆ...ನೀನು ಬ್ಯೂಟಿ ಪಾರ್ಲರ್ ಬಗ್ಗೆ ಹೇಳಿದೆ...ಅದ್ರೆ ನಮ್ಮ ದಿನಪತ್ರಿಕೆಯ ಗಿರಾಕಿಗಳು ಅವರು ತಮ್ಮ ಕೆಲಸದಲ್ಲಿ "ಸಂಬಳ ಕಡಿತ" ಅಂತ ಮೂರು-ನಾಲ್ಕು ಪತ್ರಿಕೆ ತರಿಸುತ್ತಿದ್ದವರು ಈಗ ಒಂದು ಎರಡಕ್ಕೆ ಇಳಿಸಿದ್ದಾರೆ...ದೊಡ್ಡ ಅಫೀಸುಗಳಲ್ಲೂ ಹೀಗೆ ಹಾಗಿದೆ. ಒಂದು ದೊಡ್ಡ ಫ್ಯಾಬ್ರಿಕೇಷನ್ ಕಂಪನಿ ಮೊದಲು ತರಿಸುತ್ತಿದ್ದ ೧೬ ಪೇಪರುಗಳ ಬದಲಿಗೆ ೬ ಮಾತ್ರ ತರಿಸುತ್ತಿದ್ದೆ.....ನಮ್ಮಂಥವರಿಗೂ ಇದರ ಬಿಸಿ ತಟ್ಟಿದೆ....ಇದು ಎಲ್ಲಿಗೆ ಮುಟ್ಟುತ್ತೋ ಗೊತ್ತಿಲ್ಲ.....

Nagesh said...

ಚಿತ್ರಾರವರೆ, ನಿಮ್ಮ ಬ್ಲಾಗ್ ತುಂಬ ಚೆನ್ನಾಗಿರುತ್ತದೆ. ಅದು ಕನ್ನಡದಲ್ಲಿ ಬ್ಲಾಗ್ ಎಂದರೆ ಇನ್ನು ಚನ್ನ :)

ಚಿತ್ರಾ ಕರ್ಕೇರಾ said...

@ಸುನಾಥ್ ಸರ್..ನೀವಂದಿದ್ದು ನಿಜ.
@ಶಿವಣ್ಣ..ಮುಂದೇನಾಗುತ್ತೋ ಅನ್ನೋ ಚಿಂತೆ ನನ್ನನ್ನೂ ಕಾಡುತ್ತಿದೆ
@ನಾಗೇಶ್..ನಿಮ್ ಪ್ರೀತಿಯ ಮಾತು ಬರೆಯೋಕೆ ನನಗೆ ಸ್ಪೂರ್ತಿ.
-ಚಿತ್ರಾ

ಕೆ.ಎನ್. ಪರಾಂಜಪೆ said...

ಚಿತ್ರಾ,
ಅರ್ಥಿಕ ಬಿಕ್ಕಟ್ಟು ತಟ್ಟದ ಕ್ಷೇತ್ರವೇ ಇಲ್ಲವೆನ್ನಬಹುದಾದಷ್ಟು ವ್ಯಾಪಕವಾಗಿದೆ Recession ಪರಿಣಾಮ. ಸಕಾಲಿಕ ಬರಹ. Thanks.

ಸಂದೀಪ್ ಕಾಮತ್ said...

"ಬ್ಯೂಟಿಪಾರ್ಲರ್ಗೂ ಗ್ರಾಹಕರ ಕೊರತೆ!" ಒಳ್ಳೆದಾಯ್ತು ಬಿಡಿ ಬಹುಶ ಐಟಿಯವರು ದುಂದು ವೆಚ್ಚ ಮಾಡಲು ಬ್ಯೂಟಿ ಪಾರ್ಲರ್ ಗೆ ಹೋಗ್ತಾ ಇದ್ರು ಅಂತ ಕಾಣ್ಸುತ್ತೆ .ಇನ್ನು ಮುಂದೆ ಮನೇಲೆ ಅಲಂಕಾರ ಮಾಡಿಕೊಳ್ಳಲಿ.

ಪಾಲಚಂದ್ರ said...

ಚಿತ್ರಾ ಮೇಡಂ,
"recession"ನ್ನು ಬ್ಯೂಟಿ ಪಾರ್ಲರ್ ಸಮಸ್ಯೆಯೊಂದಿಗೆ, ಸರಳವಾಗಿ ಚಿತ್ರಿಸಿದ್ದೀರ.
ಇನ್ನೊಂದೆರ್ಡ್ ವರ್ಷ ಹಿಂಗೇನೆ, ನಾವೆಷ್ಟು ಪರಾವಲಂಬಿಗಳಲ್ಲವೇ?
--
ಪಾಲ

Rajesh Manjunath - ರಾಜೇಶ್ ಮಂಜುನಾಥ್ said...

ಚಿತ್ರ,
ಜೀವನ ನಿಜಕ್ಕೂ ದುಸ್ತರ ಅನ್ನೋ ಸ್ಥಿತಿ ತಲುಪುತ್ತಿದೆ, ಎಲ್ಲ ವರ್ಗಗಳನ್ನು ಈ ಆರ್ಥಿಕ ಹಿಂಜರಿತ ತಾಕಿದೆ. ಆದಷ್ಟು ಬೇಗ ಎಲ್ಲ ಸುಧಾರಿಸಲಿ ಎಂದು ಆಶಿಸೋಣ. ಸಮಯೋಚಿತ ಲೇಖನ ಮತ್ತು ವಿಷಯ.
-ರಾಜೇಶ್ ಮಂಜುನಾಥ್

ಚಿತ್ರಾ ಕರ್ಕೇರಾ said...

@ಸಂದೀಪ್..(:)
@ಪರಾಂಜಪೆ, ಪಾಲಚಂದ್ರ, ರಾಜೇಶ್ ..ಪ್ರತಿಕ್ರಿಯೆಗೆ ಧನ್ಯವಾದಗಳು.
-ಚಿತ್ರಾ