ಯಾವತ್ತೋ ಬರೆದ ಕವನ ನನ್ನ 'ಬೆಳದಿಂಗಳು' ಬ್ಲಾಗ್ನಲ್ಲಿ ಹಾಕಿದ್ದೆ. ಆದರೆ ಅದರಲ್ಲಿ ಮೂರು ಪೋಸ್ಟ್ ಮಾಡಿದ ಮೇಲೆ ಮತ್ತೆ ಮುಂದುವರೆಸಲಾಗಲಿಲ್ಲ. ಅದಕ್ಕೆ ಅದನ್ನು ಅಲ್ಲಿಂದ ತೆಗೆದು ಇಲ್ಲಿ ಹಾಕಿದ್ದೀನಿ...ಓದಬೇಕನಿಸಿದರೆ ಓದಿಕೊಳ್ಳಿ..ಖುಷಿಪಡಿ.
ಅಮ್ಮ ಎನ್ನುತ್ತಲಿ ಚಂಗನೆ ಹಾರಿದ್ದೆ
ಅಮ್ಮನ ಒಡಲಲ್ಲಿ ಪ್ರೀತಿಯ ಸವಿದಿದ್ದೆ
ರಾತ್ರಿ ಹಗಲೊಳ್ಲು ಮಡಿಲಲ್ಲಿ ಸವಿನಿದ್ದೆ
ತಿಂದುಂಡು ಮಲಗಿದ್ದೆ ರಾಗಿಯ ಸಿಹಿ ಮುದ್ದೆ
ದೂರದಿ ಕಂಡಿದ್ದ ಹಕ್ಕಿಯ ಪಡೆಯಲು
ಆಗಸದಿ ಹೊಳೆದಿದ್ದ ಚಂದಿರನ ಹಿಡಿಯಲು
ಹಠವನ್ನು ಮಾಡುತ್ತಲೀ..ಅಮ್ಮನ ಬೈಯುತಲಿ
ಕೋಪದಿ ಅಡಗಿದ್ದೆ ಮನೆಬದಿ ಪೊದೆಯಲ್ಲಿ
ಮರುದಿನ ಬೆಳಗೆದ್ದು ಅಮ್ಮಾ..ಎನ್ನುತ್ತಲೀ
ಜಿಂಕೆಯ ಮರಿಯಂತೆ ಚಂಗನೆ ಜಿಗಿದಿದ್ದೆ
ಅಮ್ಮನ ಎದೆಯೊಳಗೆ ಸಂತಸದಿ ಹುದುಗಿರಲಿ
ಎದೆ ತುಂಬಿ ಹಾಡೀತು ಲಾಲಿ..
ಅಮ್ಮಾ..ಅಮ್ಮಾ ಎನ್ನುತ್ತಲೀ ಮನವು
ಬಾಲ್ಯದ ನೆನಪಲ್ಲಿ ಸವೆಯುವ ಎದೆಯು
ಅಮ್ಮ ಹೇಳಿದ ಬದುಕಿನ ವ್ಯಥೆಯು
ಕಲಿಸಿತು ಎನಗೆ ಭವಿಷ್ಯದ ಕಥೆಯು
ಅಮ್ಮನ ಮಡಿಲಲ್ಲಿ ಹೂವಾದೆ ನಾನು
ಬದುಕಿಗೆ ಬೆಳಕಾದೆ ನೀನು
ಏಳೇಳು ಜನ್ಮವು ಭುವಿ ಮೇಲಿರಲು
ಮಗಳಾಗಿ ತುಂಬುವೆ ನಿನ್ನಯ ಒಡಲು
Friday, January 2, 2009
Subscribe to:
Post Comments (Atom)
10 comments:
nice one about mother
ಅಮ್ಮನ ಪ್ರೀತಿ ಪವಿತ್ರ ಮತ್ತು ಅತೀತ.
ಚೆನ್ನಾಗಿದೆ. ಕಾವ್ಯ ರಸಧಾರೆ ಮು೦ದುವರೆಯಲಿ.
ಪರಾ೦ಜಪೆ.
ಅಮ್ಮನ ಬಗೆಗೆ ಮಗುವಿಗಿರುವ ವಿವಿಧ ಭಾವಗಳು ಕವನದಲ್ಲಿ ಸುಂದರವಾಗಿ ಮೂಡಿ ಬಂದಿವೆ.
ಚಿತ್ರಾ,
ಅಮ್ಮನ ಬಗ್ಗೆ ಏನು ಬರೆದರು ಚಂದವೇ ಅಲ್ವ. ಕವನ ಚೆನ್ನಾಗಿದೆ.
-ರಾಜೇಶ್ ಮಂಜುನಾಥ್
adbhutavaada kavana!
ಏನು ಚಿತ್ರಾ ಅವರೇ! "ಅಮ್ಮನೂರು ಕರಾವಳಿ ಮಡಿಲು" ಅಂದಿದ್ದೀರಲ್ಲಾ. ಆದ್ರೆ, ನಮ್ಮ ಕರಾವಳಿ ಕಡೆ ರಾಗಿ ಮುದ್ದೆ ಬಹಳ ಅಪರೂಪವಲ್ಲಾ! ಚೆನ್ನಾಗಿ ಬರೆದಿದ್ದೀರಿ :-)
@ಸುನಾಥ್ ಸರ್, ವೀರೇಶ್, ಪರಾಂಜಪೆ, ಜಯಶಂಕರ್..ಧನ್ಯವಾದಗಳು.
@ರಾಜೇಶ್..ಹೌದು, ಅಮ್ಮನ ಬಗ್ಗೆ ಏನು ಬರೆದರೂ ಚೆಂದಾನೇ.
@ಪ್ರದೀಪ್..ಹೌದು, ಕರಾವಳಿಯಲ್ಲಿ ರಾಗಿಮುದ್ದೇನೇ ಸಿಗಲ್ಲ..ಆದ್ರೆ ಕವನದಲ್ಲಿ ಹಾಗ್ ಬರೆದಿದ್ದೆ ಅಷ್ಟೇ. ಥ್ಯಾಂಕ್ಯೂ..
-ತುಂಬುಪ್ರೀತಿ,
ಚಿತ್ರಾ
ರೀ ಮೆಡಮ್ ಪದ್ಯ ತುಂಬಾ ಚನ್ನಾಗಿದೆ. ನನ್ನ ಮೇಲೊಂದು ಪದ್ಯ ಬರೆಯಿರಿ.
ಗೆಳೆಯ
ರಾಜೇಶ್
ಚಿತ್ರಾ ರವರೇ
ನಿಮ್ಮ 'ಅಮ್ಮನಿಗೊಂದು ಕವನ' ಕವನದಲ್ಲಿ ಮಗಳು-ತಾಯಿಯಲ್ಲಿಟ್ಟ ಪ್ರೀತಿಯ ಭಾವನೆ ಶರಧಿಯಂತೆ ಕಾಡುತ್ತದೆ. ಅನಂತವಾಗಿದೆ. ತುಂಬಾ ಚೆನ್ನಾಗಿದೆ. ಇನ್ನೂ ಚೆನ್ನಾಗಿ ಕವಿತೆಗಳು ಮೂಡಿ ಬರಲಿ ಎಂಬ ಆಶಯದೊಂದಿಗೆ., ನಿಮ್ಮ ಸ್ನೇಹಿತ
Raghavendra R
http://www.chitharadurga.com
(A first Kannada website of chitradurga distritct)
http://banadahoogalu.blogspot.com
http://durgasahityasammelana.blogspot.com
http://chitharaarticls.blogspot.com
http://nannedepreethi.blogspot.com
@ರಾಜೇಶ್..ನೀವೇ ಕವಿಗಳಾಗಿರುವಾಗ ನಾನೇನು ಬರೆಯೋದು..?
@ರಾಘವೇಂದ್ರ..ಧನ್ಯವಾದಗಳು.
-ಚಿತ್ರಾ
Post a Comment