ಕನ್ನಡ ರಾಜ್ಯೋತ್ಸವ ಬರುತ್ತಿದ್ದಂತೆ ನಗರದ ಸಮಾಜ ಸೇವಕರ ಸಮಿತಿಯ ಯುವಕರು ಸಿದ್ಧಪಡಿಸಿದ ಡಿ.ವಿ. ಜಿ. ಅವರ ಕಗ್ಗ ಮತ್ತು ಜಿ. ಪಿ. ರಾಜರತ್ನಂ ಅವರ ನುಡಿಗಳನ್ನು ಒಳಗೊಂಡ ಸುಂದರ ಟಿ-ಶರ್ಟ್ ಗಳ ಭರಾಟೆ ಆರಂಭವಾದಂತಿದೆ. ನಿನ್ನೆ 200 ರೂ. ಕೊಟ್ಟು ನಾನೂ ಒಂದು ಕೊಂಡುಕೊಂಡೆ. ಈ ಸಮಾಜ ಸೇವಕರ ಸಮಿತಿ ವರ್ಷವಿಡೀ ಈ ಟಿ-ಶರ್ಟ್ಗಗಳನ್ನು ಸಿದ್ಧಪಡಿಸಿ, ಮಾರಾಟ ಮಾಡುತ್ತಿದ್ದರೂ ನಮ್ಮಲ್ಲಿ ಅದು ಸುದ್ದಿಯಾಗುವುದು ಕೇವಲ ರಾಜ್ಯೋತ್ಸವ ಬಂದಾಗ,...ಮಾತ್ರ! ಅದೇ ತಾಂಜಾನೀಯಾ, ಇಂಗ್ಲೇಡ್, ಫ್ರಾನ್ಸ್, ಸಿಂಗಾಪುರ ಸೇರಿದಂತೆ ಹೊರರಾಷ್ಟ್ರಗಳಲ್ಲಿ ಕನ್ನಡಿಗರನ್ನು ಆಕರ್ಷಿಸುತ್ತಿದ್ದರೂ, ನಮ್ಮಲ್ಲಿ ಮಾತ್ರ ಅಯ್ಯೋ ಮಾರಾಯ, ಇದ್ಯಾಕೆ..ಹೀಗೆಲ್ಲ ಬರೆದ ಟಿ-ಶರ್ಟ್ಗಳನ್ನು ಹಾಕೋಲ್ಲ. ಇನ್ನು ಸ್ಪಲ್ಪ ಹಣ ಕೊಟ್ಟರೆ ಜಾಕಿ ಟಿ-ಶರ್ಟ್ ಸಿಗುತ್ತೆ ಅನ್ನೋರೇ ಜಾಸ್ತಿ. ಏನೇ ಇರ್ಲಿ ಪ್ರತಿ ವರ್ಷದ ರಾಜ್ಯೋತ್ಸವ ದಿನದಂದು ಪ್ರೀತಿಯೋ, ಕನ್ನಡದ ಬಗೆಗಿನ ಅಭಿಮಾನವೋ ಅಕ್ಕರೆಯೋ ಅಥವಾ ಫ್ಯಾಶನ್ನೋ ಅದೇನೋ ಈ ಕನ್ನಡ ಟಿ-ಶರ್ಟ್ಗಳು ಕನ್ನಡಿಗರ ಮನಸ್ಸು ಆಕರ್ಷಿಸುತ್ತವೆ ಅನ್ನೋದು ಸುಳ್ಲಲ್ಲ. ಏನೇ ಆಗಲಿ, ಈ ಟಿ-ಶರ್ಟ್ಗಳ ಮಾರಾಟದಿಂದ ಬಂದ ಹಣವನ್ನುಸಮಾಜ ಸೇವಕರ ಸಮಿತಿ ತಮ್ಮ ಸಂಘದ ವತಿಯಿಂದ ಬಡಮಕ್ಕಳಿಗಾಗಿ ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ವಿನಿಯೋಗಿಸುತ್ತಿದೆ.
ನಿಮಗೂ ಬೇಕನಿಸಿದ್ದಲ್ಲಿ..
ಅಥವಾ 9448171069, 9886683008 ಸಂಪರ್ಕಿಸಿ.
7 comments:
ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ಈ ಸಮಾಜ ಸೇವಕರ ಸಮಿತಿಯವರ ಸ್ಟಾಲ್ ನೋಡಿದ್ದೆ, ಒಂದು ಟೀ-ಶರ್ಟ್ ಕೂಡಾ ಕೊಂಡಿದ್ದೆ...ಚೆನ್ನಾಗಿದೆ ಅವರ ಪ್ರಯತ್ನ
ಒಳ್ಳೆಯ ಕೆಲ್ಸ ಮಾಡುತ್ತಿದ್ದಾರೆ!
ಶಿವು.ಕೆ
ನಮಗೂ ಒಂದು ಟೀ ಮತ್ತು ಶರ್ಟು ಬೇಕಾಗಿದೆ....
ಅಂತ ನಾವು ಫೋನು ಮಾಡಿದಾಗ ದಬಾಯ್ಸಿದ್ರು... ರಾಂಗ್ ನಂಬರ್ ಇರ್ಬೇಕೂಂತ ಇಟ್ಬಿಟ್ಟೆ.
ನಾವು ತಿಳ್ಕೊಂಡಿದ್ದು ಟೀ ತಗೊಂಡ್ರೆ ಶರ್ಟು ಫ್ರೀ ಅಂತ... :)
ದೀಪಾವಳಿ ಶುಭಾಶಯಗಳು
neevu kodisuvudadare nannadenu abyantharavilla
regards
rajesh
neevu kodisuvudadare nannadenu abyantharavilla
regards
rajesh
ನೀವು ಕೊಟ್ಟಿರುವ ಲಿಂಕ್ ತಪ್ಪಿದೆ.. .org ಬಿಟ್ಟು ಹೋಗಿದೆ.. ಸರಿಪಡಿಸಿ
chennagide :)
Post a Comment