ನಿನ್ನೆ ಅಮ್ಮ ಫೋನ್ ಮಾಡಿ, ಯಾವಾಗ ಬರ್ತೀಯಾ? ಸ್ವಲ್ಪ ಹಣ ಕಳಿಸಿಕೊಡು ಅಂದ್ರು. ಜಮೀನಿಗೆ ಸಂಬಂಧಿಸಿದಂತೆ ಯಾವುದೋ ವಿಷಯಕ್ಕೆ ಅಮ್ಮನಿಗೆ ಅರ್ಜೆಂಟಾಗಿ ಹಣ ಬೇಕಿತ್ತು. ಅಮ್ಮ ಯಾವತ್ತೂ ಹಾಗೇ ನೇರವಾಗಿ ಕೇಳಿದವರಲ್ಲ. ಆದರೆ, ನಿನ್ನೆ ಇದ್ದಕ್ಕಿದ್ದಂತೆ ಹಾಗೇ ಕೇಳಿದಾಗ ಮೊದಲೇ ಮುಂಗೋಪಿಯಾಗಿರುವ ನಾ ಬೈದುಬಿಟ್ಟೆ. 'ನಾನು ಹೇಗಿದ್ದೀನಿ..ಸತ್ತಿದ್ದೀನಾ? ಬದುಕಿದ್ದೀನಾ ಅಂತ 'ಕೇಳಲ್ಲ ಅಂತ ಬೈದೆ. ಅದಕ್ಕೆ ಕಾರಣನೂ ಇತ್ತು. ಮೂರು ದಿನದಿಂದ ಆಫೀಸಿಗೆ ರಜೆ. ನನ್ನ ಪಾಲಿನ ಕೆಲಸ ಬಾಕಿಯಿತ್ತು. ಆರೋಗ್ಯ ಸರಿಯಿರಲಿಲ್ಲ. ಆಸ್ಪತ್ರೆ, ಡಾಕ್ಟರ್ ಅಂತ ಅಲೆದಾಡಿದ್ದೆ. ಆವಾಗ ಯಾರೊಬ್ಬರೂ ಮನೆಯಿಂದ ಫೋನ್ ಕೂಡ ಮಾಡಿರಲಿಲ್ಲ. ತಮ್ಮನೂ ಫೋನ್ ಮಾಡುವಾಗ ರಿಸೀವ್ ಮಾಡಿರಲಿಲ್ಲ. ಆ ಸಿಟ್ಟು ಹಾಗೇ ಉಳಿದಿತ್ತು. ಅಮ್ಮ ಪೋನ್ ಮಾಡುವಾಗ..ಸಿಕ್ಕಿದ್ದೇ ಚಾನ್ಸ್ ಅಂತ ಬೈದೇ ಬಿಟ್ಟೆ! ಆದರೆ, ಅಮ್ಮ ಟೆನ್ಷನ್ ಮಾಡಿಕೊಳ್ಳೋದು ಬೇಡ ಅಂತ ಹುಷಾರಿಲ್ಲ ಅನ್ನೋ ಶಬ್ದವನ್ನೇ ಅಮ್ಮನತ್ರ ಮಾತನಾಡುವಾಗ ಹೊರಕ್ಕೆಸೆದು ಬಿಡ್ತೀನಿ. ಹಾಗಾಗಿ ಆರೋಗ್ಯ ಸರಿ ಇಲ್ಲ ಅಂತ ಹೇಳಲಿಲ್ಲ.
ಆದರೆ, ಬೈದಾಗ ಅಮ್ಮನಿಗೆ ಒಂಚೂರು ಕೋಪ ಬರಲಿಲ್ಲ. ನನ್ನ ಸಿಡುಕನ್ನು ಸಾವರಿಸಿಕೊಂಡು ಹೇಳಿದ್ರು.."ನೋಡಮ್ಮಾ..ನೀನು ಯಾವತ್ತೂ ಚೆನ್ನಾಗಿರ್ತೀಯಾ ಅಂತ ನನ್ನ ಮನಸ್ಸು ಹೇಳುತ್ತೆ. ಬೈದ್ರೆ, ಸಿಟ್ಟು ಮಾಡಿಕೊಂಡ್ತೆ ಸಮಸ್ಯೆ ಬಗೆಹರಿಯಲ್ಲ" ಅಂದ್ರು. ಅಮ್ಮನ ದೊಡ್ಡ ಮಾತಿನೆದುರು ಬಹಳ ಮುಜುಗರಪಟ್ಟೆ. ಆಯ್ತಮ್ಮ..ಎಷ್ಟು ಹಣ ಬೇಕು..ನಾ ಕಳಿಸ್ತೀನಿ ಅಂದು ಫೋನಿಟ್ಟೆ.
ಆದ್ರೆ ಅಮ್ಮನಿಗೆ ಬೈದ ವಿಚಾರ..ರಾತ್ರಿಯಿಡೀ ನನ್ನ ತಲೆಯನ್ನು ಕೆಡಿಸಿಬಿಡ್ತು. ಅಮ್ಮನಿಗೆ ಮುಖಕ್ಕೆ ಹೊಡೆದ ಹಾಗೆ ಬೈದೆನಲ್ಲ..ಎಂಥ ಮಾಡೋದು? ಕ್ಷಮೆ ಕೇಳಿದ್ರೂ ತಪ್ಪೇ..ಯಾಕಂದ್ರೆ ಬೈದಿದ್ದು ಅಮ್ಮನಿಗೆ..ಬೇರೆ ಯಾರಿಗಾದ್ರೂ 'ಸಾರಿ' ಅಂತ ಮೆಸೇಜ್ ಮಾಡಬಹುದಿತ್ತು. ರಾತ್ರಿ ಮಲಗಿದವಳಿಗೆ ಅದೇ ಗುಂಗು..ಬೆಳಿಗೆದ್ದು ತಿಂಡಿ ತಿನ್ನಕ್ಕೆ ಕೂತಾಗಲೂ ಅದೇ ಜ್ಞಾನ..ತಮ್ಮ ಬೇರೇ ಅಮ್ಮನಿಗೆ ಬೈದಿದ್ದಕ್ಕೆ ಕಪ್ಪೆ ಥರ ವಟವಟ ಅನ್ತಾನೆ ಇದ್ದ. ಆಫೀಸ್ಗೆ ಬಂದು ಐಪಾಡ್ ಕಿವಿಗೆ ಹಾಕೊಂಡು ಭಾವಗೀತೆಗಳನ್ನು ಕೇಳಿ ಸಮಾಧಾನ ಮಾಡಿಕೊಳ್ಳೋಣ ಅಂದ್ರೂ...ಮನಸ್ಸು ಸಮಾಧಾನ ಆಗ್ತಿಲ್ಲ. ..ಹಾಗೇ ಚಡಪಡಿಸ್ತಾನೇ ಇದ್ದೆ.
11 ಗಂಟೆಗೆ ಮೊಬೈಲ್ ರಿಂಗುಣಿಸಿತು. ಅಮ್ಮನ ಫೋನು. "ಎಲ್ಲಿದ್ದಿಮ್ಮ? ಹೇಗಿದ್ದಿ?ನಿನ್ನೆ ಏನದು ಬಡಬಡಾಂತ ಮಾತಾಡಿದ್ಯಲ್ಲ..ಅದ್ಕೆ ತಲೆಬಿಸಿ ಮಾಡಿಕೊಳ್ಳೋದು ಬೇಡಾಂತ ಫೋನ್ ಮಾಡಿದೆ.." ಅಂದ್ರು. ಒಂದೇ ಉಸಿರಿಗೆ ಅಮ್ಮ ಅಷ್ಟು ಹೇಳಿದಾಗ ಅಬ್ಬಾ! ಮನಸ್ಸು ಒಂದೇ ಕ್ಷಣ ಖುಷಿಯ ನಿಟ್ಟುಸಿರು ಚೆಲ್ತು. ಅಮ್ಮ ಅನ್ನೋ 'ಸತ್ಯ'ವೇ ಹಾಗೇ ಅಲ್ಲವೇ..ನಾವು ಬೈದ್ರೂ, ಮುನಿಸ್ಕೊಂಡ್ರೂ ಅದನ್ನು ನೋವುಂತ ಕಾಣಲ್ಲ. ಅದೇ ಗುಂಗಿನಲ್ಲಿ ಇದೀಗ ಬ್ಲಾಗ್ ಬರೀತಾ ಇದ್ದೀನಿ...ಖುಷಿ ಖುಷಿಯಾಗಿ!
ತವರಿನಿಂದ ದೂರದಲ್ಲಿದ್ರೆ..ಈ ಕೆಲಸ, ಈ ಒತ್ತಡ, ಜಂಜಾಟ..ನಮ್ಮ ಮನಸ್ಸನ್ನು ಎಷ್ಟು ಕೆಡಿಸಿಬಿಡುತ್ತೆ. ಬೆಂಗಳೂರಿಗೆ ಬಂದು ಎರಡೂವರೆ ವರ್ಷ ಆದ್ರೂ ಅಮ್ಮನಿಗೆ ಈ ರೀತಿ ಸಿಡಸಿಡ ಅನ್ನದ ಹುಡುಗಿ ಮೊನ್ನೆ ಇದ್ದಕಿದ್ದಂತೆ ಬೆಂಕಿಯಂತೆ ಧಗಧಗಿಸಿದ್ದೆ. ಮತ್ತೆ ಅಮ್ಮನತ್ರ ಹೇಳಿದೆ, ಅಮ್ಮ ಏನೋ ಆಫೀಸ್ ತಲೆಬಿಸಿಯಲ್ಲಿದ್ದೆ.,ನೀನೇನೂ ಟೆನ್ಷನ್ ಮಾಡಿಕೋಬೇಡ ಅಂತ. ಆದ್ರೆ, ಅಮ್ಮ ನಾವೇನು ಅಂದ್ರೂ, ಟೆನ್ಷನ್ ಮಾಡಿಕೊಳ್ಳಲ್ಲ..ನನ್ ಜೊತೆ 'ಟೂ' . ಅನ್ನಲ್ಲ. ಅಮ್ಮನೇ ಹಾಗೇ ಅಲ್ಲವೇ? " ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು..ಮಿಡುಕಾಡುತ್ತಿರುವೆ ನಾನು..ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ..." ಹೀಗೆ ಮನ ಖುಷಿಯಿಂದ ಹಾಡುತ್ತಿದೆ.
ಕೊನೆಗೆ ಒಂದಿಷ್ಟು ನೆನಪಾಗಿದ್ದು: ಮೊನ್ನೆ ನಮ್ ಮನೆ ಓನರ್ ಮಗ ಮನೀಷ್ ಜೊತೆ ನಿನ್ನಮ್ಮ ನಿಂಗೆ ಯಾಕೆ ಇಷ್ಟ? ಅಂತ ನಿನ್ನೆ ಸುಮ್ ಸುಮ್ನೆ ಕೇಳಿದ್ದೆ..ಅವನಿನ್ನೂ ಚಿಕ್ಕವನು. ಅವನು ಹೇಳುತ್ತಿದ್ದ: "ಅಮ್ಮ ನಂಗೆ ಬೈಯಲ್ಲ, ಅಮ್ಮ ಕೆಲಸ ಮಾಡುತ್ತೆ, ಅಮ್ಮ ಸ್ನಾನ ಮಾಡಿಸುತ್ತೆ, ಮನೆ ಗುಡಿಸುತ್ತೆ, ನಂಗೆ ಜೋಜೋ ಮಾಡುತ್ತೆ. ಅಮ್ಮನಿಗೆ ಸುಸ್ತಾಗುತ್ತೆ. ನಂಗೆ ತುಂಬಾ ಪಪ್ಪಿ ಕೊಡುತ್ತೆ"!
Thursday, February 19, 2009
Subscribe to:
Post Comments (Atom)
32 comments:
ಕೆಟ್ಟ ಮಕ್ಕಳು ಇರ್ತಾರೆ, ಆದ್ರೆ ಕೆಟ್ಟ ತಾಯಿ ಇರೋಲ್ಲ ಅಂತಾರಲ್ಲ, ಇದೆ ಅಲ್ವೇ?
ನನಗೂ ಇದೆ ರೀತಿ ಆಗಿದೆ ಬಿಡಿ. ಅಮ್ಮನ ಮೇಲೆ ಸುಮ್ನೆ ಕೂಗಾಡೋದು, ಆಮೇಲೆ ನಾನು ಬೇಜಾರ್ ಮಾಡ್ಕೊಂಡು ಫೋನ್ ಮಾಡೋದು. ಅದಕ್ಕೆ ಅಮ್ಮ, ಪರವಾಗಿಲ್ಲ ಬಿಡು ಅನ್ನೋದು.
ಇದೆ ಸರ್ಕಲ್ ಆಗೋಗಿದೆ.
ಕಟ್ಟೆ ಶಂಕ್ರ
ಲೇಖನ ಚೆನ್ನಾಗಿದೆ..ಆದ್ರೆ ಸ್ವಲ್ಪ ಖಾಸಗಿ ಆಯಿತಾ ಅ೦ತಾ ಹೇಳಿ..
@ಶಂಕ್ರಣ್ಣ..ಹುಂ..ಹೌದೌದು..ಏನ್ ಮಾಡೋದು...ಆದ್ರೆ ಎಷ್ಟೇ ಜಗಳ ಆಡಿದ್ರೂ..ಪ್ರೀತಿ ಕಡಿಮೆಯಾಗಲ್ಲ. ಅಮ್ಮನ ಪ್ರೀತಿಯೇ ಬತ್ತದ ತೊರೆ. ಅದೇ ಖುಷಿ, ಅದೇ ಸುಖ, ಅದೇ ಜೀವನ.
@ಪ್ರಮೋದ್..ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಖಾಸಗಿ ಆದ್ರೂ..ಹೇಳಿಕೊಳ್ಳೋದು ತಪ್ಪು ಅಂತ ನಂಗೆ ಅನಿಸಿಲ್ಲ. ಅಮ್ಮನತ್ರ ಜಗಳ ಆಡಿ..ಮತ್ತೆ ಅಮ್ಮ ಮಾತನಾಡಿಸಿದ ಖುಷಿಯಲ್ಲಿ ಅದನ್ನು ಬ್ಲಾಗಿಗಿಳಿಸಿದ್ದೀನಿ. ಖಾಸಗಿಯಾದ್ರೂ ಹೇಳಿಕೊಳ್ಳುವಂಥ ವಿಚಾರಗಳನ್ನು 'ನಮ್ಮ-ನಮ್ಮ' ಬ್ಲಾಗ್ ಗಳಲ್ಲಿ ಹೇಳಿಕೊಳ್ಳುವುದರಲ್ಲಿ ಯಾವ ತಪ್ಪುನೂ ಇಲ್ಲ ಅಂತ ನನ್ನ 'ವೈಯಕ್ತಿಕ 'ಅಭಿಪ್ರಾಯ. ಮತ್ತೆ ಬನ್ನಿ..
-ಪ್ರೀತಿಯಿಂದ,
ಚಿತ್ರಾ
ಗೂಡಲ್ಲಿ ಬೆಚ್ಚಗೆ
ಚೆನ್ನಾಗಿದೆ..!
ಹಾಯ್ ಚಿತ್ರಾ
ಪುಟ್ಟಿ
ನಿನ್ನ ಶರಧಿ ನೋಡಿದೆ.
ಎಷ್ಟೋಂದು ಚೆಂದಾಗಿ ಮಾಡಿದ್ದಿಯಾ..!
ನಾನಂತು ಅದನ್ನು ನೊಡಿ ಕ್ಲೀನ್ ಬೋಲ್ಡ್ ಆದೆ..!
ನನ್ನ ` ಜೀವಾ` ಹತ್ತಿರ ಬನ್ನಿ ಬಿಡಿವಿದ್ದರೆ
-ವಿಶಾಲ
ಸವದತ್ತಿ
ಹಾಯ್ ಚಿತ್ರಾ
ಪುಟ್ಟಿ
ನಿನ್ನ ಶರಧಿ ನೋಡಿದೆ.
ಎಷ್ಟೋಂದು ಚೆಂದಾಗಿ ಮಾಡಿದ್ದಿಯಾ..!
ನಾನಂತು ಅದನ್ನು ನೊಡಿ ಕ್ಲೀನ್ ಬೋಲ್ಡ್ ಆದೆ..!
ನನ್ನ ` ಜೀವಾ` ಹತ್ತಿರ ಬನ್ನಿ ಬಿಡಿವಿದ್ದರೆ
-ವಿಶಾಲ
ಸವದತ್ತಿ
ಚಿತ್ರ ಅವರೇ,
ತಾಯಿಯ ಋಣ,ಮಣ್ಣಿನ ಋಣ ತೀರಿಸೋಕೆ ಆಗೋಲ್ಲ ..
ಹಾಗೆಲ್ಲ ಇನ್ನೊಂದು ಸರಿ ತಪ್ಪು ಮಾಡಬೇಡಿ.... :)
ಧನ್ಯವಾದಗಳು....
ಚಿತ್ರಾ...
ಬರಹವೇನೋ ಚೆನ್ನಾಗಿದೆ... ಅಮ್ಮನ ಪ್ರೀತಿಯ ನವಿರತೆಯ ನಿರೂಪಣೆ ತುಂಬಾನೇ ಆಪ್ತವೆನಿಸಿತ್ತು. ಸ್ವಲ್ಪ ಮುಂಗೋಪ ಕಡಿಮೆಯಾದರೆ ಅಮ್ಮನಿಗೂ ಖುಷಿಯಾಗ ಬಹುದೇನೋ ಅನ್ನೋ ಅನಿಸಿಕೆ ನನ್ನದು, ನೋಡಿ ಮತ್ತೆ ಹೀಗೆ ಬರೆದೆ ಅಂತ ಸಿಟ್ಟಾಗಬಾರದು.
ಮೇಲಿಂದ ಬೀಳುವಾಗ ಎಲ್ಲರೂ ಗಾಭರಿ, ಭಯ, ಆತಂಕ ಪಡುತ್ತಾರೆ - ಮಗುವನ್ನು ಬಿಟ್ಟು.. ಏಕೆಂದರೆ ಮಗುವಿಗೆ ತನ್ನ ತಾಯಿ ಹಿಡಿವಳೆಂಬ ನಂಬಿಕೆ. ತೆಲುಗು ಚಿತ್ರ "ಕೊತ್ತಬಂಗಾರುಲೋಕಂ" ಮೊದಲಾಗುವುದೇ ಈ ಸಾಲಿನಿಂದ.
ಜಗಳವಾಡಲು, ಮುನಿಸಿಕೊಳ್ಳಲು, ಸಾರಿಕೇಳಲು, ರಾಜಿಯಾಗಲು ನಿಮಗೆ ಅಮ್ಮನಿದ್ದಾರಲ್ಲ, ಅದೃಷ್ಟವಂತರು.
ಚಿತ್ರಾ...
ಭಾವುಕ ವಿಷಯ ಬಂದಾಗ ನೀವೊಂದು ಮಗು ಥರ..
ಅಮ್ಮ ನೋಡಿದಷ್ಟು "ಬದುಕು" ನಾವು ನೋಡಿಲ್ಲ...
ಅವರು ಅನುಭವಿಸಿದ ಕಷ್ಟ, ಒಂಟಿತನ..ನೋವು
ಎಲ್ಲ ಇದ್ದರೂ ಅವರು ತಾಳ್ಮೆಯಿಂದ ಇರುತ್ತಾರೆ..
ಅದು ಹೇಗೆಂದು ನನಗೆ ಇನ್ನೂ ಅರ್ಥವೇ ಆಗಿಲ್ಲ...
ನಿಮ್ಮ ಲೇಖನ ಓದಿ ನನ್ನಮ್ಮನ ನೆನಪು ಆಯಿತು..
ನನಗೆ ತಿಳುವಳಿಕೆ ಬಂದಾಗಿನಿಂದ ನಾನು ಅಮ್ಮನೊಡನೆ "ಜಗಳ", ಕೋಪ" ಮಾಡಿಲ್ಲ..
ಅದೊಂದು ಸಮಾಧಾನ ನನಗಿದೆ..
ಯಾಕೆಂದರೆ ಅದೊಂದೇ ದೇವರು ನನಗಿರುವದು..
ಚಂದದ ಲೇಖನಕ್ಕೆ
ಅಭಿನಂದನೆಗಳು..
ಚಿತ್ರಕ್ಕ
ನೀವು ಬರೆದ ರೀತಿ ಇಷ್ಟವಾಯಿತಕ್ಕ ನಿಜಾಕ್ಕ ಅಮ್ಮನ ಬಿಟ್ಟು ದೂರ ಇರೋದೇ ಕಷ್ಟ. ಅದರಲ್ಲೂ ನಾವೇನಾದರೂ ತೊಂದರೆಲಿದ್ದು ಆಗ ಯಾರು ನಮ್ಮನ್ನ ವಿಚಾರಿಸದೆ ಇದ್ದು. ನಂತರ ತಮ್ಮ ಅಗತ್ಯಕ್ಕೊಸ್ಕರ ಏನಾದ್ರು ಕೇಳೋಕೆ ಮಾತಾಡಿಸಿದರೆ ಕೋಪ ತುಂಬಾನೇ ಬರುತ್ತೆ ಅದ್ರೂ ಅಮ್ಮನ ಮೇಲೆ ಕೋಪ ಮಾಡ್ಕೋ ಬಾರದಿತ್ತು ಅಲ್ವಾ. ಅದ್ರೂ ನೋಡಿ ಪಾಪ ಅಮ್ಮ ಸಮಾಧಾನ ಮಾಡಲು ಎಷ್ಟು ಬೇಗ ಫೋನ್ ಮಾಡಿದ್ರು. ಅದೇ ತಾನೆ ತಾಯಿ ಪ್ರೀತಿ.
ಎಂದಿನಂತೆ ನಿಮ್ಮದೇ ಶೈಲಿ .. ಬರಹದಲ್ಲಿ ಮುಗ್ದತೆ ಕಾಣ್ತಾ ಇದೆ.
ಧನ್ಯವಾದಗಳು
ಸಂತೋಷ್ ಚಿದಂಬರ್
ಚಿತ್ರ ಕಣ್ಣಲ್ಲಿ ನೀರು ತುಂಬಿದೆ...ನಾನು ಸ್ವಲ್ಪ ಹೀಗೆ ಆವಾಗ ಆವಾಗ ಅಮ್ಮನ ಮೇಲೆ ಏಗರಾಡುತ್ತಾ ಇರ್ತೇನೆ...ಯಾಕೋ ಸ್ವಲ್ಪ ಫ್ರೀಕ್ವೆನ್ಸೀ ಜಾಸ್ತಿ ಆಗಿದೆ ಅನ್ನೋ ಭಾವನೆ...ಹೋಗಿ ಅವರ ಮುಂದೆ ಕುಳಿತು ಕ್ಷಮೆ ಕೇಳುವ ಅಂದರೆ ಏನೋ ಒಂಥರ ಫೀಲಿಂಗ್ (ಅದು ಈಗೊಅಥ್ವಾ ನಾಚಿಕೆನ? ಅಂತ ಗೊತ್ತಾಗುತ್ತಾ ಇಲ್ಲ).. ಜೊತೆಗೆ ನನಗೆ ಕಂಡಿತಾ ಅಳು ಬರುತ್ತೆ ಅದನ್ನ ನೋಡಿ ತಡ್‌ಕೋಳೋ ಶಕ್ತಿ ನನ್ನ ಅಮ್ಮನಿಗೆ ಇಲ್ಲ ಅನ್ಸಿತ್ಟೇ.
ಓಕೇ ಓಕೇ ಸಾರೀ ಫಾರ್ ಡ್ರೂಲಿಂಗ್ ಅಪಾನ್ ಹಿಯರ್... ಥ್ಯಾಂಕ್ಸ್ ಫಾರ್ ಡಿ ಅವಕೆನಿಂಗ್
ನಾವು ಯಾರನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತೇವೋ ಅವರು ಚಿಕ್ಕ ಪುಟ್ಟ ತಪ್ಪು ಮಾಡಿದರೂ ಅವರನ್ನು ಬೈಯುತ್ತೇವೆ. ಯಾರು ನಮ್ಮನ್ನು ಬೈಯುತ್ತಾರೋ ಅವರು ನಮ್ಮನ್ನು ಪ್ರೀತಿಸುತ್ತಾರೆ ಎಂದು ತಿಳಿಯಿರಿ. ನಾವು ಮಾಡಿದ ತಪ್ಪಿಗೆ ಅವರು ನಮ್ಮನ್ನು ಬೈದಿರುತ್ತಾರೆ. ನಮ್ಮ ತಪ್ಪನ್ನು ತಿದ್ದೋಣ. ನಾವು ತಪ್ಪು ಮಾಡದೇ ಯಾರಾದರೂ ಬೈಯ್ತಾರಾ ಆಗ ಅವರು ಅರಿತವರಲ್ಲ, ಅಜ್ಞಾನಿಗಳು ಎಂದು ತಿಳಿದು ಅವರ ಬೈಗಳನ್ನು ಮನಸ್ಸಿಗೆ ಹಚ್ಚಬೇಡಿ. ಈ ತತ್ವವನ್ನು ಅನುಸರಿಸಿದರೆ ಯಾರಾದರೂ ಬೈದರೆ ಕೋಪ ಬರಲಾರದು.
ಒಲವಿನಿಂದ
ಬಾನಾಡಿ
@ಹರೀಶ್ ಸರ್..ನಮಸ್ಕಾರ. ವಂದನೆಗಳು
@ಶಿವಪ್ರಕಾಶ್..ಶರಧಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಅಮ್ಮನ ಬಗ್ಗೆ ಎಷ್ಟು ಹೇಳಿದ್ರೂ ಸಾಲದು. ನಿಮ್ಮ ಸಲಹೆಯನ್ನು ಆದಷ್ಟು ಪಾಲಿಸಕೆ ಪ್ರಯತ್ನ ಮಾಡ್ತೀನಿ.
@ರಾಜೇಶ್..ಖಂಡಿತವಾಗಿಯೂ ಮುಂಗೋಪ ಹಂತಹಂತವಾಗಿ ಬಿಟ್ಟುಬಿಡ್ತೀನಿ. ಶರಧಿಗೆ ಭೇಟಿ ಕೊಟ್ಟಿದ್ದಕ್ಕೆ ವಂದನೆಗಳು.
@ಸಂತೋಷ್ ಧನ್ಯವಾದಗಳು.
-ಚಿತ್ರಾ
@ಮಲ್ಲಿಯಣ್ಣ..ನೀವು ಪ್ರತಿ ಕಮೆಂಟಿನಲ್ಲೂ ಯಾವುದಾದ್ರೂ ಫಿಲಂ ಕುರಿತು ಹೇಳುತ್ತೀರಿ..ಥ್ಯಾಂಕ್ಸ್ ಅಣ್ಣ. ಆಗಾಗ ಬರುತ್ತೀರಿ.
@ಪ್ರಕಾಶ್ ಸರ್..ಹೌದು ಸರ್..ಅಮ್ಮನ ವಿಷಯ ಬಂದಾಗ ಯಾರಾದ್ರೂ ಅಷ್ಟೇ ಮಗು ಆಗಿಬಿಡ್ತಾರೆ. ನನ್ನ ಪ್ರತಿ ಬರಹಕ್ಕೆ ನೀವೆಲ್ಲ ನೀಡುವ ಪ್ರೋತ್ಸಾಹ ನನ್ನನ್ನು ಇನ್ನಷ್ಟು ಬರೆಯುವಂತೆ ಪ್ರೇರೆಪಿಸುತ್ತೆ. ನೀವು ಅಮ್ಮನ ಜೊತೆ ಜಗಳವಾಡಿಲ್ಲಾ? ನಿಜಕ್ಕೂ ಗ್ರೇಟ್. ನಾನು ಜಗಳ ಆಡಿದ್ದಕ್ಕೆ ಲೆಕ್ಕನೇ ಇಲ್ಲ. ಆದರೆ ಅಮ್ಮನ ಅಗಾಧ ಪ್ರೀತಿಗೆ ಸರಿಸಾಟಿ ಏನೂ ಇಲ್ಲ ಅಲ್ವಾ?
@ಭಾವಲಹರಿಯ ರೋಹಿಣಿ ಅಮ್ಮಣ್ಣೀ..ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಥ್ಯಾಂಕ್ಸ್ ಕಣಮ್ಮಿ..ಆಗಾಗ ಬರುತ್ತಿರು.
-ಚಿತ್ರಾ
ನಿಮ್ಮ ಬರಹ ಭಾವಗಳು ಹೊತ್ತೆಕಿಚ್ಚಾಗುವಷ್ಟು ಚಂದ ಇದೆ ಅಂದ್ರೆ ಸಾಕಲ್ಲಾ
ಅಂದ ಹಾಗೆ ಚಿತ್ರಾ ನಾವು ನಡೆಸುವ ಅಮ್ಮನ ಹಬ್ಬಕ್ಕೆ ಆಮಂತ್ರಣ ಕಳಿಸ್ತೇನೆ. ಬರದಿದ್ರೆ ಟೂ ಟೂ ...
ವಿಶಾಲ..ನಮಸ್ಕಾರ. 'ಶರಧಿ'ಗೆ ಸ್ವಾಗತ. ನಿಮ್ಮ ಪ್ರೀತಿಯ ಪುಟ್ಟೀ ಕರೆಗೆ ನಾ ಋಣಿ. ನನ್ನ ಬ್ಲಾಗ್ ಮೆಚ್ಚಿದ್ದೀರಿ..ಜೊತೆಗೆ ಸರಿ/ತಪ್ಪುಗಳು ಕಂಡರೂ ಹೇಳ್ತಾ ಇರಿ..ಪುಟ್ಟಿ ಅಂತ ಕರೆಯುತ್ತಿದ್ದವರು ಶಿವಣ್ಣ ಮಾತ್ರ..ಈವಾಗ ನೀವೂ ಕರೆದಿರಿ. ನನಗೆ ಖುಷಿಯಾಗಿದೆ. ಪ್ರೀತಿ ಇರಲಿ, ನಿಮ್ಮ ಬ್ಲಾಗನ್ನು ನೋಡಿ ಪ್ರತಿಕ್ರಿಯೆ ಮಾಡಿದ್ದೇನೆ.
@ಗುರುಗಂಟಲ್..ನಿಮಗೂ 'ಶರಧಿ'ಗೆ ಸ್ವಾಗತ. ಹೌದು..ಅಮ್ಮ ಎಂದರೆ ಬದುಕು, ಅಮ್ಮ ಎಂದರೆ ಸತ್ಯ. ಅಮ್ಮನ ನಾವು ಪ್ರೀತಿಸುವಷ್ಟು ಬೇರೆ ಯಾರನ್ನೂ ನಾವು ಪ್ರೀತಿಸಲ್ಲ ಅಲ್ವಾ? ಅದಕ್ಕೆ ಅಮ್ಮನಿಗೆ ನೋವು ಕೊಟ್ಟ ಯಾವುದೇ ವಿಚಾರ ಆಗಲಿ ಕಂಗಳು ತುಂಬಿಬಿಡುತ್ತೆ. ಹೌದು..ಬರಹದಲ್ಲಿ ಫ್ರೀಕ್ವೆನ್ಸಿ ಜಾಸ್ತಿಯಾಗಿದೆ ..ನಿಜವಾಗಿ ಹೇಳಿದ್ದೀರಿ. ನಿಮ್ಮ ಸಲಹೆಯನ್ನು ಮುಂದೆ ಪಾಲಿಸುತ್ತೇನೆ.
@ಬಾನಾಡಿ ಸರ್..ತುಂಬಾ ಒಳ್ಳೆಯ ಹಿತವಚನ ನೀಡಿದ್ದೀರಿ. ನಮ್ಮನ್ನು ಪ್ರೀತಿಸುವವರು ಬೈತಾರೆ..ನಾವು ಪ್ರೀತಿಸುವವರಿಗೂ ನಾವು ಬೈಯುತ್ತೇವೆ... ನಾವು ತಪ್ಪು ಮಾಡದೆ ಇದ್ದಾಗ ಬೈಯುವವರು ಅರಿತವರಲ್ಲ..!
-ಬ್ಲಾಗಿಗೆ ಭೇಟಿ ನೀಡಿದ ಎಲ್ಲರಿಗೂ ನನ್ನ ಪ್ರೀತಿಯ ನೆನೆಕೆಗಳು..
-ಚಿತ್ರಾ
@ಮಿಂಚುಳ್ಳಿ..ಹೊಟ್ಟೆಗಿಚ್ಚಾ?!! ಹಿಹಿಹಿ...ನಿಮ್ಮ ಹೊಟ್ಟೆಗಿಚ್ಚಿಗೆ ನನ್ನ ನಗು ಅರ್ಪಣೆ..(:)(:):(:)
ಅಮ್ಮನ ಹುಟ್ಟುಹಬ್ಬ ಆಹ್ವಾನ ಕಳಿಸಿ..ಆದಷ್ಟು ಬೇಗ ಕಳಿಸಿ. ಎಲ್ಲಿ? ಏನು? ಎತ್ತ?...ನಾ ಬರ್ತೀನಿ..ನೀವು ಟೂ ಟೂ ಬೇಡ..ನಂಗೆ ಬೇಜಾರಾಗುತ್ತೆ..ನೀವು ಟೂಟೂ ಮಾಡಿದ್ರೆ..(:)
-ಚಿತ್ರಾ
ಚಿತ್ರಾ ಪುಟ್ಟಿ,
ನೀನು ನಿಜಕ್ಕೂ ಖತರ್‍ನಾಕ್ ಪುಟ್ಟಿನೇ...ಅಮ್ಮನ ಬಗ್ಗೆ ಅದೆಷ್ಟು ಬರೀತೀಯೇ...ಅಮ್ಮಣ್ಣಿ...ನನಗೆ ತುಂಬಾ ಹೊಟ್ಟೆಕಿಚ್ಚು ಬರುತ್ತೆ...
ಆದ ಅನುಭವಗಳನ್ನು ಹಾಗೆ ನೇರವಾಗಿ ಬರೆದುಬಿಡುವ ದೈರ್ಯಗಾತಿ ನೀನು...ಕೋಪದಲ್ಲೂ ಸಹಾ !
ನಿನ್ನಮ್ಮನಿಗಾದ ಅನುಭವ ನನಗೂ ತುಂಬಾ ಸಲ ಆಗಿದೆ ! ಕರೆಕ್ಟ್ ಅಲ್ವಾ! ಮತ್ತೆ ಹಾಗೆ ರಿಯಲೈಸು ಆಗಿದೆ...ಇದು ಇನ್ನೂ ಕರೆಕ್ಟು ಅಲ್ವಾ....ಅದ್ರೆ ನಾನು ರಾಜೇಶ್ ತರ ಕೋಪ ಕಡಿಮೆ ಮಾಡಿಕೊ ಅಂತ ಹೇಳಲ್ಲ..ಸ್ವಲ್ಪ ಸಮಯದ ನಂತರ ನಿನಗೆ ಗೊತ್ತಾಗಿ ತಿದ್ದಿಕೊಳ್ಳುವುದು ನಿನಗೆ ಗೊತ್ತು...
"ಮನುಷ್ಯರು ಇರೋದೆ ತಪ್ಪು ಮಾಡೋದಿಕ್ಕೆ" ಮಾಡಿದ ಮೇಲೆ ಅಯ್ಯೋ ಅಂತ ಪಶ್ಚತಾಪ ಪಡೋದು ಕೂಡ ಮನುಷ್ಯನೇ ಅಲ್ಲವಾ!
ಇಷ್ಟೆಲ್ಲಾ ಹೇಳಿದ್ದೀನಿ ಅಂತ ಫೋನ್ ಮಾಡಿ ಕ್ಲಾಸ್ ತೊಗೊಂಡುಬಿಡಬೇಡವೇ ಮಹರಾಣಿ.!!
ಶಿವಣ್ಣ...ಲೇಟಾಗಿ ಬ್ಲಾಗಿಗೆ ಬಂದಿದ್ದಕ್ಕೆ ತುಸುಕೋಪ ಇದೆ..ಆದ್ರೂ ಧನ್ಯವಾದಗಳನ್ನು ಹೇಳ್ತಾ ಇದ್ದೀನಿ. ಅದ್ಸರಿ..ಖತರ್ ನಾಕ್ ಅಂದ್ರೆ ಏನಣ್ಣ? ನಿಜವಾಗಲೂ ನಂಗೆ ಗೊತ್ತಿಲ್ಲ ಅದಕ್ಕೆ ಕೇಳ್ತಾ ಇದ್ದೀನಿ..
ಹೌದು..ಕೋಪ ಬರಬೇಕಾಗಿರೋದು ಮನುಷ್ಯನಿಗೇ..!! ಇರಲಿ ಬಿಡಿ...ನೀವು ಹೇಳಿದ್ದು ನಂಗೆನೂ ಬೇಜಾರಾಗಿಲ್ಲ..ಹೇಳಿರೋದು ಪ್ರೀತಿಯಿಂದ ಅಲ್ಲವೇ?! ಪ್ರೀತಿಯಿಂದ ಹೇಳೋ ಒಂದು ಮಾತು..ಎಂಥ ಕೋಪ, ಅಸಹನೆಯನ್ನೂ ಕರಗಿಸುತ್ತೆ ಅಂತೆ..ಅಮ್ಮನ ಮಾತೂ ಹಾಗೇ ಅಲ್ಲವೇ?
ಇನ್ನು ಸ್ಪಷಲ್ ಕ್ಲಾಸು ...?! ಅಗತ್ಯಬಿದ್ರೆ ತಕೋತೀನಿ...(:)
-ಪ್ರೀತಿಯಿಂದ,
ಚಿತ್ರಾ ಪುಟ್ಟಿ
ನಿಮ್ಮ ಲೇಖನ ನನಗೆ ನನ್ನ ಅಮ್ಮನ ನೆನಪು ಮಾಡಿಕೊಟ್ಟಿತು. ಬಹುಶಃ ಅಮ್ಮ ಅಂದರೆ ಅಷ್ಟೇ: ಸಿಟ್ಟು ಮಾಡಿಕೊಳ್ಳದೇ ನಮ್ಮ ಬಯಕೆಗಳನ್ನು ಪೂರೈಸುವವಳು.
ಅಮ್ಮನ್ನನ್ನೇ ಬೈತೀರಾ?....
ಚಿತ್ರಾ,
ಸ್ವಲ್ಪ ತಡವಾಗಿ ಬ್ಲಾಗಿನೆಡೆ ಬ೦ದಿದ್ದೇನೆ. ಚೆನ್ನಾಗಿದೆ. "ಅಮ್ಮ" ಎ೦ಬ ಎರಡಕ್ಷರದ ಪದವೇ ಅತ್ಯ೦ತ ಮಹತ್ವದ್ದು. ನಿಮ್ಮ ಅಮ್ಮ ಮರುದಿನ ಫೋನ್ ಮಾಡಿ "ತಲೆಬಿಸಿ ಮಾಡ್ಕೋಬೇಡ" ಎ೦ದರಲ್ಲ. ಅದು ಅಮ್ಮನ ಮನಸ್ಸು. ಮಕ್ಕಳು ಎಷ್ಟೇ ದೊಡ್ಡವರಾದರೂ, ಅವರ ಮನಸಿನಾಳವನ್ನು ಅರಿಯುವ ಶಕ್ತಿ ಅಮ್ಮನಿಗೆ ದೇವರು ಕೊಟ್ಟಿದ್ದಾನೆನಿಸುತ್ತದೆ. ಅಮ್ಮನೆಡೆಗಿರುವ ನಿಮ್ಮ
ಪ್ರೀತಿ ಇಷ್ಟವಾಯ್ತು. ಇಷ್ಟೊ೦ದು ಭಾವುಕತೆಯನ್ನು ತು೦ಬಿಕೊ೦ಡಿರುವ ನಿಮ್ಮ ಬಾಲ್ಯಕಾಲ ಹೇಗಿತ್ತು ? ಆಗಿನ ಯಾವುದಾದರೂ ಘಟನೆಯ ಕುರಿತು ಬರೆಯಿರಿ. ಉತ್ಸುಕನಾಗಿ ಕಾಯುತ್ತೇನೆ. ನನ್ನ ಬ್ಲಾಗಿಗೆ ನೀವು ಇತ್ತೀಚಿಗೆ ಬ೦ದಿಲ್ಲೆ೦ದು ಕಾಣುತ್ತೆ. ಒ೦ದು ಸಣ್ಣ ವಿಷಯ ಇದೆ.ನೋಡಿ.
madam...frequency jaasti aaytu andre...naaanu nanna ammana mele egarado frequency...nimmadenu tappilla..sorry for the misunderstanding
@ಜಯಶಂಕರ್...
ನಾವು ತುಂಬಾ ಹಚ್ಚಿಕೊಂಡಿರುವ, ನಾವು ಪ್ರೀತಿಸುವವರೊಂದಿಗೆ ಜಗಳ ಸಹಜವಲ್ಲವೇ?
@ಸುನಾಥ್ ಸರ್..ನೀವಂದಿದ್ದು ನಿಜ. ಪ್ರತಿಕ್ರಿಯೆಗೆ ಧನ್ಯವಾದಗಳು.
@ಪರಾಂಜಪೆ ಸರ್..ನಿಮ್ಮ ನಿರೀಕ್ಷೆ ಸುಳ್ಳಾಗದು. ಎಂದಾದರೂ ಬರೇತೀನಿ. ತಡವಾಗಿ ಬಂದರೂ ಪರವಾಗಿಲ್ಲ..ಬಂದಿದ್ದೀರಿ ಅಲ್ವಾ? ಅದೇ ಖುಷಿ ನನಗೆ
@ಗುರುಗಂಟಲ್..ಅರ್ಥಮಾಡಿಕೊಂಡಿರುವುದು ತಪ್ಪಾಗಿತ್ತು..ಪರ್ವಾಗಿಲ್ಲ ಮತ್ತೆ ಬಂದು ಸರಿಪಡಿಸಿದ್ದೀರಲ್ಲ. ಖುಷಿಗೊಂಡೆ. ಹೀಗೇ ಬರುತ್ತಿರಿ.
-ಚಿತ್ರಾ
@
ಚಿತ್ರಾ,
ನನ್ನ ಥರಾನೇ ಆಯ್ತಲ್ಲ ನಿಮ್ಮ ಕಥೇನೂ !
ನಾನೂ ಹೀಗೇ, ಅಮ್ಮ-ಅಪ್ಪ ಹುಷಾರಿಲ್ಲದೇ ಇದ್ದಾಗ ," ಮನೆ ಔಷಧಿನೇ ಮಾಡ್ಕೋತಿದೀವಿ ಕಮ್ಮಿ ಆಗತ್ತೆ ಬಿಡೇ ,ಅಂತಾನೋ ,ಜ್ವರ ಸಣ್ಣಕ್ಕಿದೆ ಬಿಡು , ಅವರ ಮನೆಗೆ ತುಂಬಾ ಕರೆದಿದಾರೆ , ಹೋಗಿಲ್ಲಾ ಅಂದ್ರೆ ಬೇಜಾರು ಮಾಡ್ಕೋತಾರೆ ... " ಅಂತೆಲ್ಲ ಅನ್ನೋವಾಗ ಸಿಟ್ಟು ಬಂದುಬಿಡತ್ತೆ ! ನಿಮ್ಮ ಆರೋಗ್ಯದ ಬಗ್ಗೆ ಚೂರೂ ಲಕ್ಷ್ಯ ಕೊಡ್ಬೇಡಿ .. ಅಂತ ಏನೇನೋ ಅಂದು ಬಿಡ್ತೀನಿ ಆಮೇಲೆ ಬೇಜಾರು ಮಾಡ್ಕೋತಾ ಇರ್ತೀನಿ.
@ಪ್ರೀತಿಯ ಚಿತ್ರಾ...
ಪ್ರತಿಕ್ರಿಯೆಗೆ ಧನ್ಯವಾದಗಳು. ಏನು ಮಾಡೋದು? ಆದರೆ ನಾವೆಷ್ಟು ಸಿಟ್ಟುಮಾಡಿಕೊಂಡರೂ ಅಮ್ಮ ಸಿಟ್ಟುಮಾಡಲ್ಲ ಅಲ್ವಾ? ಅದೇ ಅಮ್ಮನ ಶ್ರೇಷ್ಟತೆ.
-ಚಿತ್ರಾ
ಚಿತ್ರಾಜಿ,
ಹೌದು ನೀವು ಹೇಳಿದಂತೆ ನನ್ನಗು ಹಲವು ಬಾರಿ ಆ ಅನುಭವವಾಗಿದೆ. ಉದ್ಯೋಗ ನಿಮಿತ್ತ ಹೊರಗಿದ್ದು ಅಪರೂಪಕ್ಕೆ ಮನೆಗೋ, ಸಂಭಂದಿಗಳ ಮನೆಗೋ ಹೋದಾಗ (ಅಮ್ಮನ ಜೊತೇನೆ) ಅಮ್ಮನ ಸಂಭ್ರಮ ಬೇರೇನೆ. ಅಲ್ಲಿ ಕೆಲ ಸಣ್ಣ ವಿಚಾರಕ್ಕೂ ನಾ ರೇಗಿದರೆ ಅಮ್ಮ ಸಮಾದಾನದಿಂದ ಉತ್ತರಿಸುವಾಗ ನಾ ನನ್ನ ಮೇಲೆಯೇ ಬೇಸರದಿಂದ, ಪಶ್ಚಾತ್ತಾಪದಲ್ಲಿ ಬೆಂದು ಹೋದ ಸಂದರ್ಬಗಳಿವೆ. ಅಪ್ಪನ ಜೋತೆನು ಹಾಗೆ, ಮತ್ತೆ ಛೆ ಹಾಗೆ ಮಾಡಬಾರದಿತ್ತು, ಮಾತಾಡಬಾರದಿತ್ತು ಎಂದು ದುಖಿಸಿದ್ದು ಇದೆ, ಕಾರಣ ನಿಮ್ಮ ಹಾಗೆ ಸ್ವಲ್ಪ ಮುಂಗೋಪ.
ಬಪ್ಪುದಾ,
@ಮೋಹನ್ ಹೆಗ್ಡೆ ಸರ್..ಶರಧಿಗೆ ಸ್ವಾಗತ. ಹೇಗೇ ಇದ್ರೂ ನಮ್ಮನ್ನು ಅರ್ಥಮಾಡಿಕೊಳ್ಳುವುದು ಅಮ್ಮ ಮಾತ್ರ ಅಲ್ಕವೇ?
-ಚಿತ್ರಾ
ಚಿತ್ರಾಜಿ,
ಉತ್ತರಿಸದ್ದಕ್ಕೆ ದನ್ಯವಾದ.
ಒಂದು ಸಣ್ಣ ವಿವರಣೆ,
ಹೆಗಡೆ - ಹವ್ಯಕ
ಹೆಗ್ಡೆ - ಬಂಟ್ಸ್, ಕೊಂಕಣಿ
ಹೆಗ್ಗಡೆ - ಜೈನ್
ನನ್ನದು ಮೊದಲಿನದು.
ಹೆಗ್ದೆಕಿಂತ ಹೆಗಡೆ ಹೇಳಿದರೆ ಸ್ವಲ್ಪ ಖುಸಿ ಜಾಸ್ತಿ. ಬೇಸರಿಸಬೇಡಿ.
ಬರಲಾ,
Post a Comment