ಆಂಟಿ...ಕರೆದರೂ ಕೇಳದೇ..!
ಮೊನ್ನೆ ನಮ್ಮನೆ ಹತ್ತಿರದ ಅಂಚೆಕಛೇರಿಗೆ ಹೋಗಿದ್ದೆ. ಕಚೇರಿಯಲ್ಲಿ ಒಬ್ರು ಆಂಟಿ ಇದ್ರು. ನಾನು ಅಲ್ಲೇ ನಿಂತಿದ್ದೆ. ಆವಾಗ ಒಂದು ಬೇರೆ ಆಂಟಿ ಬಂದು..ಕಚೇರಿಯಲ್ಲಿದ್ದ ಆಂಟಿ ಬಳಿ.."ಆಂಟಿ, ಇದನ್ನು ಸ್ಪೀಡ್ ಪೋಸ್ಟ್ ಮಾಡಬೇಕಾದ್ರೆ ದುಡ್ಡೆಷ್ಟು ಆಗುತ್ತೆ?" ಎಂದರು. ಎದುರಿಗಿದ್ದ ಆಂಟಿ ಕೇಳಿಸಿದರೂ, ಸುಮ್ಮನಾದರು. ನಿಂತಿರುವ ಆಂಟಿ..ಮತ್ತೊಂದು ಸಲ ಕೇಳಿದರು...ಆವಾಗ.. ಯಪ್ಪಾ..ಕುಳಿತಿದ್ದ ಕನ್ನಡಕದ ಆಂಟಿ.."ಏನಮ್ಮಾ..ನಿಮಗೆ ನಾನು ಆಂಟಿನಾ? ನಾ ಆಂಟಿ ತರ ಕಾಣ್ತೀನಾ..ಮೇಡಂ ಅನ್ನಬೇಕು ಕಣ್ರೀ..ಅನ್ನಬೇಕೇ!! ನಿಂತಿದ್ದ ಆಂಟಿ ಇರಿಸುಮುರಿಸು.."ಇಲ್ಲಾರೀ ಮೇಡಂ, ಆಂಟಿ, ಅಕ್ಕ ಅಂದ್ರೆ ಒಂದೇ ತಾನೇ? ಆಂಟಿಂತ ಕರೆದ್ರೇನಾಗುತ್ತೆ?" ಎಂದಾಗ ಕನ್ನಡಕದ ಆಂಟಿ, "ರೀ, ಡಿಫರೆನ್ಸು ಇದೆ ಕಣ್ರೀ. ಅಕ್ಕಾ ಅನ್ನದಿದ್ರೂ ಪರ್ವಾಗಿಲ್ಲ..ಮೇಡಂ ಅನ್ರೀ" ಅಂತ ತಮ್ಮ ಕೆಲಸ ಮುಂದಿವರೆಸಿದರು!! ಕನ್ನಡದ ಆಂಟಿಗೆ ಅಂದಾಜು 45 ವರ್ಷ ವಯಸ್ಸಾಗಿರಬಹುದು. ನಂಗೆ ಆವಾಗ ನೆನಪಾಗಿದ್ದು ..ಹಿರಿಯ ಸಾಹಿತಿಯೊಬ್ಬರು ಬರೆದ 'ಪ್ರತಿ ಮಾನವನೂ ಎದೆಯಾಳದಲ್ಲಿ ಯಯಾತಿಯೇ ಆಗಿರುತ್ತಾನೆ" ಎಂಬ ತೂಕದ ಮಾತು.
ಶ್ ..ಹಣದ ವಿಚಾರ!
"ರೀ ಹಣದ ವಿಚಾರವನ್ನೆಲ್ಲ ಫೋನಲ್ಲಿ ಮಾತನಾಡಬಾರದು ಕಣ್ರೀ..ಏನಿದ್ರೂ ಡೈರೆಕ್ಟ್ ಆಗಿ ಆಫೀಸ್ ಗೆ ಬನ್ನಿ. ಎಷ್ಟೊತ್ತಿಗೆ ಬರ್ತೀರಾ ತಿಳಿಸಿ..ನಾ ಆಫೀಸ್ ಗೆ ಬರ್ತೀನಿ. ಅಲ್ಲಿ ಬಂದು ನನ್ನತ್ರ ಮಾತನಾಡೋದೇನೂ ಬೇಡ..ಹಣ ತಂದು ನನ್ನ ಟೇಬಲ್ ನಲ್ಲಿರುವ ಫೈಲ್ ನಲ್ಲಿಟ್ಟುಕೊಂಡು ಹೋಗೋದೇ..ಹಿಂದೆ ತಿರುಗಿ ನೋಡಂಗಿಲ್ಲ. ಮರುದಿನ ಡೈರೆಕ್ಟಾಗಿ ಕೆಲಸಕ್ಕೆ ಹಾಜರಾದ್ರೆ ಸಾಕು" ..ಇದು ಹೇಳಿದ್ದು ಯಾರು?..ನಾ..ನ..ಲ್ಲ! ನಮ್ಮ ರಾಜ್ಯದ ಶಿಕ್ಷಣ ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಯಂತೆ. ಅವನ ಸೈನ್ ಬಿದ್ರೆ, ನಮಗೆ ಕೆಲಸ ಸಿಗುತ್ತೆ..ಆದರೆ ಅವನಿಗೆ ಲಕ್ಷ ಲಕ್ಷ ನೀಡಬೇಕು. ಅಷ್ಟೇ. ಇತ್ತೀಚೆಗೆ ನನ್ನ ಆಪ್ತರೊಬ್ಬರ ಅಣ್ನನಿಗೆ ಉಪನ್ಯಾಸಕ ಕೆಲಸ ಸಿಕ್ತು..ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಯ ಸಹಿ ಬೇಕಿತ್ತು..ಆವಾಗ ಆತನಿಗೆ ಫೋನಲ್ಲಿ ಹೇಳಿದ್ದು ಹೀಗಂತ ನನಗೆ ಹೇಳಿದ್ರು. ಲೋಕಾಯುಕ್ತರಿಗೆ ತಿಳಿಸಿಬಿಟ್ಟು, ಹಣ ಕೊಡಕ್ಕೆ ಹೋಗು ಅಂದ್ರೆ..ಪಾಪ, ಅವ್ರು..ಬೇಡ ನಂಗೆ ಜಾಬ್ ಸಿಗುತ್ತಾ..ಜಾಬ್ ಸಿಗಲಿ ಹಣ ಹೋದ್ರು ಪರ್ವಾಗಿಲ್ಲ ಅನ್ನಬೇಕೆ!! ಹಾಗೇ ಹಣ ಕೊಟ್ಟು ಕೆಲಸ ಗಿಟ್ಟಿಸಿಕೊಂಡಿದ್ದಾರೆ ಅವ್ರು.
ಓನರ್ ಕಾಟ...!
ಇದು ನನ್ನ ಸಹದ್ಯೋಗಿ ಮನೆಯ ಕಥೆ. ಪಾಪ, ಮೂರು ಜನ ಹುಡುಗ್ರು ವಿಜಯನಗರದಲ್ಲಿ ಡಬಲ್ ಬೆಡ್ ರೂಂ ಇರುವ ಒಳ್ಳೆ ಮನೆ ಬಾಡಿಗೆ ತೆಗೆದುಕೊಂಡಿದ್ದಾರೆ. ಅಲ್ಲಿ ಮನೆ ಮಾಲೀಕನ ಕಾಟ..ಥೇಟ್ ಮಳೆಹನಿ ಬ್ಲಾಗ್ ಮಾಲೀಕ ಜೋಮನ್ ಗೆ ಹುಂಜಕೋಳಿ ಕೊಟ್ಟಹಾಗೆ. ಮಲೆನಾಡಿನ ಈ ಮೂರೂ ಜನ ಹುಡುಗ್ರಿಗೆ ದೇವ್ರ ಮೇಲೆ ಭಕ್ತಿ ಜಾಸ್ತಿ. ಹಾಗಾಗಿ ಊರಿಂದ ಬರುವಾಗಲೇ ತಮ್ಮ ಬ್ಯಾಗ್ ನಲ್ಲಿ ದೇವ್ರ ಫೋಟೋಸ್ (ಕ್ಯಾಲೆಂಡರ್) ತೆಗೆದುಕೊಂಡು ಬಂದಿದ್ರು. ಅದನ್ನು ರೂಮ್ ನಲ್ಲಿಟ್ಟು ಪೂಜೆ ಮಾಡಬೇಕು...ಏನ್ ಮಾಡೋದು? ಮನೆ ಓನರ್ರು ಗುರ್ ಅಂದು ಬೇಡಪ್ಪಾ..ಮೊಳೆ ಹೊಡಿಬೇಡಿ ಅನ್ನಬೇಕೆ? ಅದಕ್ಕೆ ಈಗ ಪಾಪ ಹುಡುಗ್ರು ದಿನಾ ಬೆಳಿಗೆದ್ದು ಸ್ನಾನ ಮಾಡಿ, ಆ ದೇವ್ರ ಕ್ಯಾಲೆಂಡರನ್ನು ಗೋದ್ರೆಜ್ ನಿಂದ ತೆಗೆದು, ಲಾಕರ್ ಗೆ ನೇತಾಡಿಸಿ..ಅದಕ್ಕೆ ನಮಸ್ಕಾರ ಹೊಡೆದು ಮತ್ತೆ. ಮಡಿಚಿ ಹಾಗೇ ಬೆಚ್ಚಗೆ ಗೋದ್ರೇಜ್ ನೊಳಗೆ ಇಡ್ತಾರಂತೆ. ಅದಕ್ಕೆ ನಮ್ ಕೊಲೀಗ್ ಅನ್ತಾ ಇದ್ದ, ನಮ್ ಮನೆ ನೋಡಿದ್ರೆ ಮಠಕ್ಕೆ ಹೋದಂಗೆ ಆಗುತ್ತೆ. ಗೋಡೆಗೆ ಮೊಳೆ ಹೊಡೆಯೋಕೆ ಬಿಡಲ್ಲ..ನಾವು ಹುಡುಗ್ರು ಜೋರಾಗಿ ನಕ್ರು, ಮೊಬೈಲ್ ಜೊತೆ ಮಾತನಾಡಿದ್ರೂ..ಕೆಳಗೆ ಕೆಳಮಹಡಿಯಲ್ಲಿ ಮಾಲೀಕ ಗಂಡ-ಹೆಂಡತಿ ಇಬ್ರು ಸುಮ್ನಿರ್ರೋ ಅಂತ ಬೊಬ್ಬೆ ಹಾಕ್ತಾರೆ..! ಅಂತ. ಎಂಥ ಓನರ್ರೋ..?!
Friday, February 6, 2009
Subscribe to:
Post Comments (Atom)
11 comments:
ಚಿತ್ರಾ,
ತಮಾಷೆಯಾಗಿದೆ. ಆ೦ಟಿ, ಅ೦ಕಲ ಅನ್ನೋದು ಸಾಮಾನ್ಯವಾಗಿದೆ. ನನಗೂ ಒ೦ದೊನ್ದು ಸಲ
ಯುವತಿಯರು ಅ೦ಕಲ ಅ೦ದಾಗ ಬೇಸರವಾಗುತ್ತೆ. ತಪ್ಪು ತಿಳಿಬೇಡಿ, ಲಕ್ಷಣವಾಗಿ ಅಚ್ಚ ಕನ್ನಡದಲ್ಲಿ ಅಣ್ಣಾ ಅ೦ದ್ರೆ ಬೇಜಾರಾಗಲ್ಲ.Aunty, uncle ಅ೦ತ ಕರೆಸಿಕೊಳ್ಳುವ ವ್ಯಕ್ತಿಗೆ "ತನಗೆ ವಯಸ್ಸಾಯ್ತು" ಎ೦ಬ ಭಾವನೆಯನ್ನು ಈ ಸ೦ಬೋಧನೆಗಳು ಮೂಡಿಸುತ್ತವೆ, ಅನ್ನೋ ಕಾರಣಕ್ಕಿರಬಹುದು..
ಇನ್ನು ಲ೦ಚದ ವಿಚಾರಕ್ಕೆ ಬ೦ದರೆ ಲ೦ಚ ಪದೆಯುವವ ರಷ್ಟೇ, ಕೊಡುವವರು ಕೂಡಾ ಈ ಅನಿಷ್ಟಪರ೦ಪರೆಯ ಬೆಳವಣಿಗೆಗೆ ಬಾಧ್ಯಸ್ಥರು ಎ೦ದೆನಿಸುತ್ತದೆ.
ನಿಮ್ಮ ಸಹೋದ್ಯೋಗಿ ಹುಡುಗರು ಅರಾಧಿಸುತ್ತಿರುವ ಮತ್ತು ಕಪಾಟಿನೊಳಗೆ ಬೀಗದಲ್ಲಿ ಇರಬೇಕಾದ ದೇವರುಗಳಿಗೆ ""ದೇವ್ರೇ ಗತಿ""
ರೀ ಚಿತ್ರಾ
ಆಂಟಿ : ಒಂದ್ಸರಿ ನಾನು ಬಾಯಿತಪ್ಪಿ ನನ್ನ ವಯಸ್ಸಿನ ಹುಡುಗಿಗೆ ಆಂಟಿ ಅಂದುಬಿಟ್ಟೆ. ಆಗ ಅವಳ ಮುಖ ನೋಡಬಾರದು. ಫುಲ್ ಕೊಪದಲ್ಲಿದ್ಲು.
ಹಣ : ಯಾವುದೇ ಕ್ಷೇತ್ರದಲ್ಲಿ ಹಣವಿಲ್ಲದೆ ಕೆಲಸ ಆಗೋದು ಬಹಳ ಕಷ್ಟ.
ಓನರ್ರು : ಎಲ್ಲ ಮನೆಯ ಮಾಲಿಕರು ಹಾಗೆ ಇರ್ತಾರೆ. ನಾವು ಎಷ್ಟು ಲೂಸ್ ಕೊಡುತಿವೋ ಅಸ್ಟು ಜಾಸ್ತಿ ಮಾಡ್ತಾರೆ.
@ಪರಾಂಜಪೆ ಸರ್..ಅಂಕಲ್ ಅಂತ ಕರೆದ್ರೆ ಬೇಜಾರಾಗುತ್ತಾ? ಆಯಿತು ನಾನಂತೂ ಬಾಯಿತಪ್ಪಿನೂ ಕರೆಯಲ್ಲ ಬಿಡಿ.
@ಶಿವಪ್ರಕಾಶ್..ಧನ್ಯವಾದಗಳು. ಇನ್ನು ಹಾಗೆಲ್ಲ ನಿಮ್ ಹುಡುಗಿಯರಿಗೆ ಆಂಟಿ ಅನ್ನಬೇಡಿ...(:)
-ಚಿತ್ರಾ
>>ಆಂಟಿ...ಕರೆದರೂ ಕೇಳದೇ..!
ನಂಗೂ ದಾರೀಲಿ ಹೋಗ್ತಾ ಇರ್ಬೇಕಾದ್ರೆ ಚಿಕ್ ಹುಡುಗ್ರು ಅಂಕಲ್ ಅಂತ ಕರೆದ್ರೆ ಬೇಜಾರಾಗುತ್ತೆ :)
>>ಓನರ್ ಕಾಟ...!
ಎಲ್ಲಾ ಓನರ್ ಹಾಗಿರೋಲ್ಲ, ನಮ್ಮನೆ ಒಂದು ಊರಲ್ಲಿ ಬಾಡಿಗೆಗೆ ಕೊಟ್ಟಿದ್ವಿ, ಅವ್ರು ಖಾಲಿ ಮಾಡಿದ್ಮೇಲೆ ನೋಡ್ತೀವಿ ೮೩ ಮೊಳೆಗಳು ಗೋಡೇಲಿ! ಅವ್ರ ಕಷ್ಟ ಈಗ ನಂಗೂ ಅರ್ಥ ಆಗಿ, ಬೆಂಗ್ಳುರಿನ ನಂ ಬಾಡ್ಗೆ ಮನೆ ದೇವ್ರ ಕೋಣೇಲಿ ಒಂದು ದೇವ್ರ ಫೋಟೋನೂ ಇಟ್ಟಿಲ್ಲ. ಬರೀ ಪುಸ್ತಕಗಳೇ, ಸರಸ್ವತಿ ಆರಾಧನೆ!
--
ಪಾಲ
ಚಿತ್ರಾ...
ನನಗೆ ಆಗತಾನೇ.. ಮದುವೆಯಾಗಿತ್ತು..
ನನ್ನ ಬಾವನ ಮನೆಗೆ ಬಂದಿದ್ವಿ.. ಆಮನೆಯ ಓನರ್..
ನನಗೂ ನನ್ನ ಮಡದಿಗೂ "ಅಂಕಲ್. ಆಂಟಿ" ಅಂತ ಮಾತಾಡಿಸಿದ್ರು..
ಅವರಿಗೆ ೫೦ ವರ್ಷ ಆಗಿತ್ತು..!
ಚಂದದ ಲೇಖನ.. ಬರವಣಿಗೆ..
ಹೀಗೆ ಹಾಸ್ಯ ಬರೆಯಿರಿ...
ನಗುವ ಖುಷಿಯ ವಿಚಾರ ಬರೆಯಿರಿ..
ಅಭಿನಂದನೆಗಳು...
ಚಿತ್ರಾ,
ಕೆಲವರು ಇರುತ್ತಾರೆ.. "ಕುಮಾರಿ" ಅಂತ ಮರ್ಯಾದೆ ಕೊಟ್ಟರೆ ನಮಗೆ ಬೈತಾರೆ. ಒದಿತೀನಿ ಅಂತರೆ.. ಅಂತವರಿಗೆ ಆಂಟಿ ಅಂದರೆ ಏನಾಗ ಬೇಕು..?
ಮೂರು ಸನ್ನಿವೇಶಗಳು ಸೂಪರ್. ನಮ್ಮ ಮನೆ ಹತ್ತಿರ ಒಬ್ಬರು ಅಜ್ಜಿ (೬೦+) ನನ್ನ ಅಜ್ಜಿನ "ಅಜ್ಜಿ" ಅಂತಲೆ ಕರೀತಾರೆ. ಏನು ಮಾಡೋದು?
ಚಿತ್ರಾ,
ಮೂರು ವಿಭಿನ್ನ ಘಟನೆಗಳು ಮನಮುಟ್ಟುವಂತೆ ಮೂಡಿ ಬಂದಿವೆ.
ಈಗ ಎಲ್ಲೆಲ್ಲೂ ಅಂಟಿ, ಅಂಕಲ್ ಸಾಮಾನ್ಯವಾಗಿವೆ. ಒಪ್ಪಿಕೊಂಡು ಬಿಡೋದು ಒಳ್ಳೇದೆ; ಆದರೆ ನಾನಂತೂ ಕಾಕಾ ಎನ್ನಿಸಿಕೊಳ್ಳಲಿಕ್ಕೆ ಇಷ್ಟ ಪಡ್ತೇನೆ!
ಚಿತ್ರಾ ಮರಿ...
ಆಂಟಿ ಕತೆ ಚೆನ್ನಾಗಿದೆ...ಎಲ್ಲರೂ ಬಾಹ್ಯ ಲೋಕದಲ್ಲಿ ಬದುಕುತ್ತಿರುವುದರ ಪರಿಣಾಮವಿದು....
ನಿಮ್ಮ ಆಪ್ತರು ಲಂಚದ ವಿಚಾರದಲ್ಲಿ ಪಾಪ ಅನ್ನಿಸುತ್ತೆ.... ಆವರಿಗೆ ಇಕ್ಕಳ ಸಿಕ್ಕಿಕೊಂಡ ಅನುಭವ !
ಚಳಿಗಾಲ, ಮಳೆಗಾಲದಲ್ಲಿ ಓಕೆ ಬೇಸಿಗೆ ಕಾಲದಲ್ಲಿ ದೇವರಿಗೆ ಸೆಕೆಯಾಗಲ್ವೆ ! ಪಾಪ ದೇವರು!!
ಅಂಟಿ ಅಂತನಿಸಿಕೊಳ್ಳಲು ಬಹಳ ಜನರಿಗೆ ಇಷ್ಟವಿರುವುದಿಲ್ಲ, ವಯಸ್ಸಾಯಿತೇನೊ ಅನ್ನೊ ಭಾವನೆ ಕಾಡುತಲ್ಲ ಅದಕ್ಕೆ. ನಮ್ಮ ಸಂಭಂದಿಕರೊಬ್ಬರಿಗೆ ಚಿಕ್ಕಂದಿನಿಂದ ಬೇಬಿ ಅಂತ ಕರಿಯೊದು, ನಮಗೀಗ ಅವರು ಬೇಬಿ ಅಂಟಿ, ಹಾಗೆ ಇನ್ನೊಬ್ಬರು ಪಾಪು ಮಾಮ. ಇವೊಂಥರ ರಿವರ್ಸ ಕೇಸುಗಳು, ವಯಸ್ಸಾದರೂ ಇನ್ನೂ ಪುಟಾಣಿ ಹೆಸರುಗಳು... ಹೆಸರುಗಳೇ ವಿಚಿತ್ರ...
ನನ್ನ ಅಂಗಡಿಗೆ ಬರುವ ಎಷ್ಟೋ ಜನ ಕಾಲೇಜ್ ಹುಡುಗೀರು ನನ್ನನ್ನು ಅಂಕಲ್ ಎಂದೇ ಕರೆಯೋದು. ಮೊದಮೊದಲು ನನ್ನ ಹೆಂಡತಿಗೆ ಹೇಳಿ ನಗುತ್ತಿದ್ದೆ. ಈಗ ಕಾಮನ್ ಆಗಿದೆ. ಮೊನ್ನೆ ಹಳ್ಳಿಯವನೊಬ್ಬ ನನಗಿಂತ ಹಿರಿಯನೇ ನನ್ನನ್ನು ಅಂಕಲ್ ಎಂದು ಕರೆದ. "ಅಯ್ಯಾ ಅಂಕಲ್ ಅಂದ್ರೆ ಚಿಕ್ಕಪ್ಪ ಕಣಯ್ಯ" ಎಂದು ತಿಳಿಹೇಳಬೇಕಾಯ್ತು!
****
ಈನ್ನು ಮನೆ ಓನರ್... ನಿಮಗೆ ಬರೀ ಪೂಜೆ ಮಾಡುವವರು ಗೊತ್ತಿರಬಹುದು. ನಾನು ಕಾಲೇಜಿನಲ್ಲಿ ಓದುವಾಗ, ಬಾಡಿಗೆಗಿದ್ದ ಹುಡುಗರು ಕುಡಿದು ಗೋಡೆಯನ್ನೆಲ್ಲಾ ಸುಟ್ಟಿದ್ದರು. ಆ ಓನರ್ ಪಾಪ ಹೆಂಗಸು. ತೋರಿಸಿ ಬೇಜಾರು ಮಾಡಿಕೊಂಡಿದ್ದರು.
@ಪಾಲಚಂದ್ರ ಸರ್..ಚಿಕ್ಕ ಮಕ್ಕಳು ಅಂಕಲ್ ಅನ್ನದೆ ಇನ್ನೇನು ಹೇಳಬೇಕು? ಪಾಪ..ಮಕ್ಕಳು ಕರೆದ್ರೆ ನಂಗಂತೂ ಭಾರೀ ಖುಷಿ...ಪ್ರತಿಕ್ರಿಯೆಗೆ ಧನ್ಯವಾದಗಳು
@ಪ್ರಕಾಶ್ ಸರ್..ಧನ್ಯವಾದಗಳು. ನಿಮ್ ಥರ ಬಾಂಬ್ ಹಾಕಿ ನಗಿಸಾಕೆ ಬರಲ್ಲ..ಆದರೂ ಪ್ರಯತ್ನವಿದೆ.
@ಜಯಶಂಕರ್...ಅಜ್ಜಿ-ಅಜ್ಜಿನ 'ಅಜ್ಜಿ' ಅಂತ ಕರೆದ್ರಾ? ಹಹಹ..
ಸುನಾಥ್ ಸರ್..ಹೌದು. ನಾ ಹೇಗೆ ಕರೆದ್ರೂ ತೀರ ತಲೆಕೆಡಿಸಿಕೊಳ್ಳಕ್ಕೆ ಹೋಗಲ್ಲ. ಕಾಕಾ? ಅಂದ್ರೆ ಏನು ಸರ್? ಎಲ್ರೂ ಹಾಗೇ ಕರೀತಾರಲ್ಲಾ..ನಂಗೂ ಹೆಸರಿನ ಗುಟ್ಟು ತಿಳಿಸ್ತೀರಾ?
@ಪ್ರಭುರಾಜ್ ನಂಗೂ ನಿಮ್ ಥರ ಅನಿಸ್ತಾ ಇತ್ತು..ಆದ್ರೆ ಹೆಸರಿಗೆ ವಯಸ್ಸಾಗಲ್ಲ...ವ್ಯಕ್ತಿಗಷ್ಟೇ. ಅಲ್ವಾ?
@ಶಿವಣ್ಣ...ಮನುಷ್ಯರ 'ಪಾಪ'ದ ಪಟ್ಟಿ ಮುಗಿದು..ದೇವ್ರರನ್ನೂ ಪಾಪ ಅಂದೀರಾ..(::::)
@ಮಲ್ಲಿಯಣ್ಣ...ಅಂಕಲ್ ಅಂದಿದ್ದಕ್ಕೆ ನಿಮ್ಮ ಉತ್ತರ
ಸೂಪರ್ರು....
-ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಪ್ರೀತಿಯ ನೆನೆಕೆಗಳು
-ಚಿತ್ರಾ
Post a Comment