Friday, June 20, 2008

ಜೀವ ಉಳಿಬೇಕಾದ್ರೂ Influence ಬೇಕು?!

ಅದು ನಗರದ ಪ್ರತಿಷ್ಠಿತ ಆಸ್ಪತ್ರೆ. ರಾಜ್ಯದ ವಿವಿಧ ಭಾಗಗಳ ರೋಗಿಗಳ ಕೇಂದ್ರ. ಯಾರೇ ಕೇಳಿ ಈ ಆಸ್ಪತ್ರೆ ಬಗ್ಗೆ ಗೊತ್ತು..ಜನತೆಗೆ ಒಳ್ಳೆ ಅಭಿಪ್ರಾಯನೂ ಇದೆ. ಅದರ ನಿರ್ದೇಶಕರಂತೂ ಪದೇ ಪದೇ ಈ ಆಸ್ಪತ್ರೆ ಬಡವರಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುತ್ತೇವೆ, ಅದು ನೀಡುತ್ತೇವೆ ಇದು ನೀಡುತ್ತವೆ ಅಂತ ಪತ್ರಿಕಾಗೋಷ್ಠಿಯಲ್ಲಿ ಪುಂಖಾನುಪುಂಖವಾಗಿ ಬೊಬ್ಬಿಟ್ಟದ್ದೇ ಬಂತು. ನಾನು ಎರಡು ಸಲ ಪತ್ರಿಕಾಗೋಷ್ಠಿಗೆ ಹೋಗಿದ್ದೆ. ಆಸ್ಪತ್ರೆಯ ಹೆಸರು ಕೇಳಿದ್ರೆ ಮಹಾನ್ ದಾನಿಗಳು ಹಣ ಸುರೀತಾರೆ,ಹೊಗಳುತ್ತಾರೆ. ಒಟ್ಟಿನಲ್ಲಿ ಆ ಆಸ್ಪತ್ರೆಯ ಬಗ್ಗೆ ಒಳ್ಳೆ ಹೆಸರಿದೆ..
ಆದ್ರೆ ಮೊನ್ನೆ ಮೊನ್ನೆ ನನ್ನ ಫ್ರೆಂಡು ಒಬ್ಬರು ತಮ್ಮ ಅತ್ತೆಯ ಚಿಕಿತ್ಸೆಗೆಂದು ಮೈಸೂರಿಂದ ಬಂದಿದ್ದರು. ನಾನು ಸಹಜವೆಂಬಂತೆ ಕೇಳಿದ್ದೆ; ಹೇಗೆ ಬಡವ್ರು ಹೋಗ್ಬಹುದಾ? ಖರ್ಚು ಹೆಚ್ಚಾ?.ಅದ್ಕೆ ಅವ್ರು ಹೇಳಿದ್ದ ಉತ್ತರ ಹೇಗಿತ್ತು ಗೊತ್ತಾ? "ನಾವು (ಜೆಡಿಎಸ್ ನ ಪ್ರಮುಖ ಮುಖಂಡರ ಹೆಸರು ಹೇಳಿ) ಕಡೆಯಿಂದ ಬಂದವರು. ಹೌದಾ? ಅದ್ಕೂ influence ಬೇಕಾ? ಅಂದಾಗ "ಹೂಂ ಮತ್ತೆ, ಅದಿಲ್ಲದೆ ಯಾವುದೂ ಆಗಲ್ಲಮ್ಮ." ಅಂದ್ರು. ಅವರು ಹೇಳಿದ್ದನ್ನು ಕೇಳಿ ನಾನು ಆಸ್ಪತ್ರೆಯ ಒಳಹೊಕ್ಕೆ. ಐದಾರು ರೋಗಿಗಳನ್ನು ಮಾತಾಡಿಸಿದ್ದೆ. ಅವರೇನೂ ಬಡವರಲ್ಲ, ದುಡ್ಡನ್ನೇ ಹಾಸಿಗೆ ಮಾಡ್ಕೊಂಡವರು. ಆದ್ರೂ ಅವರಿಗೆ influence! ಬಡವರಿಗೆ ಅಲ್ಲಿನ ಡಾಕ್ಟರ್ ಗಳು ಹೇಳಿದ್ದೇ ಮದ್ದು..ಕೊಟ್ಟಿದ್ದೇ injection, ಹೇಳಿದಷ್ಟು ದುಡ್ಡು ಎನೀಸಿಕೊಡಬೇಕು..ಹಾಗಾಗಿ ಬಡವರು ಬಂದ್ರು ಸಾಲ ಮಾಡಿ, ಏನೇನೋ ಮಾಡಿ ಬರಬೇಕು. ಹಣವಿಲ್ಲಾಂದ್ರೆ ಅಲ್ಲಿಗೆ ಬರುವಂತಿಲ್ಲ. ಸಾಯುತ್ತಿರುವ ಜೀವವನ್ನು ಉಳಿಸಿಕೊಳ್ಲಲೂ ಸಾಧ್ಯವಿಲ್ಲ.
ಇದ್ಯಾಕಪ್ಪಾ ಬ್ಲಾಗಲ್ಲಿ ಬರೆದ್ಳು? ಇದು ಎಲ್ಲಾ ಕಡೆ ಆಗುತ್ತೆ ಅನ್ನಬಹುದು..ಅದರೆ ನನಗೇಕೋ ಆ ಆಸ್ಪತ್ರೆ ಮೇಲ್ನೋಟಕ್ಕೆ ಕಾಣುವ ಹಾಗೆ ಇಲ್ಲ ಅನಿಸುತ್ತೆ..ಹೌದು! ಈಗಿನ ಕಾಲದಲ್ಲಿ ಮನುಷ್ಯನ ಬದುಕೇ influence ಮೇಲೆ ನಿಂತಿದೆ. ಅನಿಸಲ್ವಾ?

4 comments:

ಹೆಸರು ರಾಜೇಶ್, said...

Influence madi yaru kuda jeeva vulisalu sadyavilla. swalpa chikitseya hanavannu kadime madabahudu antha annisutte. evattu yava middle class family kuda dubari Hsopital bill pavatisuva sthitiyalli eruvudilla. adakke endina hecchutthiruva hospital veccha karana. e hanthadalli yaradru influence madi hana kadime madisidare rogiya maneyavara salavoo kuda kadime aguthade alva. any how i respect your opinion.
geleya
rajesh

ಬಾನಾಡಿ said...

ನಗರಗಳಲ್ಲಿ ನಾಯಿಕೊಡೆಗಳಂತೆ ಎದ್ದು ಬರುವ ಈ ಪ್ರತಿಷ್ಟಿತ ಆಸ್ಪತ್ರೆಗಳು ಪಂಚತಾರಾ ಹೋಟೆಲ್‍ಗಳಂತೆ ವರ್ತಿಸುತ್ತವೆ. ಜೇಬು ನೋಡಿ ಚಿಕಿತ್ಸೆ ಮಾಡುತ್ತವೆ. ನಿಮ್ಮಲ್ಲಿ ಹೆಲ್ತ್ ಇನ್ಸೂರೆನ್ಸ್ ಅಥವಾ ನಿಮ್ಮ ಕಂಪೆನಿ ಚಿಕಿತ್ಸೆಗೆ ಹಣ ನೀಡುವುದಾದರೆ ಬೇಡದ ಪರೀಕ್ಷೆಗಳನ್ನು ಮಾಡಿಸಿ ದರೋಡೆಮಾಡುವ ಇವರನ್ನು ಕಂಡಾಗ ರೋಗದಿಂದ ಸಾಯುವುದು ಮೇಲು ಎಂದನಿಸುತ್ತದೆ.
ಸರ್ಜನ್ ನ ಕತ್ತರಿ ನಿಮ್ಮ ಜೀವವನ್ನು ಉಳಿಸುತ್ತದಾ? ಕೊಯ್ಯುತ್ತದಾ? ಅಥವಾ ಜೇಬಿಗೂ ಕತ್ತರಿ ಹಾಕ್ತದಾ? ಅಂಥ ಪರಿಸ್ಥಿತಿಯಲ್ಲಿ ಇಂತಹ ಲೋಭಿಗಳ ಪರಿಚಯಸ್ಥರು ಸಿಕ್ಕಿ ಇನ್ಫ್ಲೂಯೆನ್ಸ್ ಮಾಡುವುದು ಅಗತ್ಯಬೀಳುತ್ತದೆ.
ಆರೋಗ್ಯ ಚೆನ್ನಾಗಿರಲಿ ಎಂದೇ ಆಶಿಸುವೆ.
ಒಲವಿನಿಂದ
ಬಾನಾಡಿ

ಸುಧೇಶ್ ಶೆಟ್ಟಿ said...

ಅ೦ತು ಪುನ: ಬ್ಲಾಗ್ ಬರೆಯಲು ಪ್ರಾರ೦ಭಿಸಿದ್ರಲ್ಲ. ನಾನು ಹಲವು ನಿಮ್ಮ ಬ್ಲಾಗ್ ಕಡೆ ಸುಳಿದಾಗ, ಅದು ಖಾಲಿಯಾಗಿದ್ದು ಕ೦ಡು ಹಿ೦ದೆ ಹೋಗಿದ್ದಿದೆ.
ನಿಮ್ಮ ಬರಹಗಳು ಚೆನ್ನಾಗಿವೆ.

Laxman (ಲಕ್ಷ್ಮಣ ಬಿರಾದಾರ) said...

Ninagu kuda istu tadavayta tilidukollalikke.
ok, nice one

laxman